ಕೋವಿಡ್ ಕೊಟ್ಟ ಏಟಿಗೆ ಅಮೆರಿಕಾ ತತ್ತರ ; ಮೂರು ವಾರಗಳಲ್ಲಿ ಭಾರಿ ಉದ್ಯೋಗ ನಷ್ಟ

ಈ ತಿಂಗಳಲ್ಲೇ 2 ಕೋಟಿ ಉದ್ಯೋಗ ನಷ್ಟ? ; 1948ರ ಬಳಿಕ ಭಾರೀ ಆಘಾತ

Team Udayavani, Apr 10, 2020, 7:49 AM IST

US-Unemployment

ಅಮೆರಿಕದಲ್ಲಿ ನಿರುದ್ಯೋಗ ಭತ್ಯೆಗಾಗಿ ಅರ್ಜಿಗಳನ್ನು ವಿತರಿಸುತ್ತಿರುವುದು.

ವಾಷಿಂಗ್ಟನ್‌: ಕೋವಿಡ್ ಮಹಾಮಾರಿಯ ಕಾಟಕ್ಕೆ ವಿಶ್ವದ ದೊಡ್ಡಣ್ಣ ಅಮೆರಿಕ ತತ್ತರಿಸಿದೆ. ಅದರಿಂದಾಗಿ ಅಲ್ಲಿನ ಉದ್ಯೋಗ ಕ್ಷೇತ್ರದಲ್ಲಿ ವ್ಯಾಪಕ ಹಾನಿ ಉಂಟಾಗಿದೆ. ಮೂರು ವಾರಗಳ ಅವಧಿಯಲ್ಲಿ ಒಟ್ಟು 1.68 ಕೋಟಿ ಉದ್ಯೋಗಗಳು ನಷ್ಟವಾಗಿವೆ. ಹೀಗಾಗಿ ವಿಶ್ವದ ದೊಡ್ಡಣ್ಣನ ಅರ್ಥ ವ್ಯವಸ್ಥೆ ಮತ್ತೆ ಹಳಿತಪ್ಪುವಂತೆ ಮಾಡಲಿದೆ ಎಂಬ ಭೀತಿ ವ್ಯಕ್ತವಾಗಿದೆ. ಅಮೆರಿಕದ ಕಾರ್ಮಿಕ ಸಚಿವಾಲಯ ಗುರುವಾರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಕಳೆದ ವಾರದಲ್ಲಿಯೇ ಸುಮಾರು 6.6 ಮಿಲಿಯ ಮಂದಿ ನಿರುದ್ಯೋಗ ಭತ್ಯೆಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಮಾರ್ಚ್‌ ತಿಂಗಳ ಕೊನೆಯ ಎರಡು ವಾರಗಳಲ್ಲಿ 1 ಕೋಟಿ ಮಂದಿ ನಿರುದ್ಯೋಗ ಭತ್ಯೆಗೆ ಅರ್ಜಿ ಹಾಕಿದ್ದಾರೆ. ಈ ಪೈಕಿ ಮೊದಲ ಬಾರಿಗೆ ಉದ್ಯೋಗಾಕಾಂಕ್ಷಿಗಳೇ ಹೆಚ್ಚಾಗಿದ್ದಾರೆ. ಆದರೆ ಅಮೆರಿಕದ ಇತರ ಪ್ರಾಂತ್ಯಗಳಲ್ಲಿನ ಸಾಂಖ್ಯಿಕ ಮಾಹಿತಿ ತೆಗೆದುಕೊಂಡರೆ ಹೆಚ್ಚಾಗಬಹುದು. ಏಕೆಂದರೆ ಅಲ್ಲಿ ಈಗಾಗಲೇ ಸಲ್ಲಿಕೆಯಾಗಿರುವ ಕೋರಿಕೆಗಳ ವಿಲೇವಾರಿ ಮಾಡಲಾಗುತ್ತಿದೆ. ಈ ಅಂಶ 1948ರ ಬಳಿಕದ ಅತ್ಯಂತ ದೊಡ್ಡ ಪ್ರಮಾಣದ್ದಾಗಿದೆ.

ಅಮೆರಿಕದಲ್ಲಿರುವ ಅರ್ಥ ಶಾಸ್ತ್ರಜ್ಞರು ನಿರೀಕ್ಷೆ ಮಾಡಿರುವಂತೆ ಈ ತಿಂಗಳಲ್ಲಿಯೇ 2 ಕೋಟಿ ಉದ್ಯೋಗ ನಷ್ಟವಾಗುವ ಸಾಧ್ಯತೆ ಇದೆ. ಮುಂದಿನ ತಿಂಗಳ ಮೊದಲ ವಾರದಲ್ಲಿ ಕಾರ್ಮಿಕ ಸಚಿವಾಲಯ ಈ ತಿಂಗಳ ಉದ್ಯೋಗ ಮಾಹಿತಿ ಬಿಡುಗಡೆ ಮಾಡಿದಾಗ ನಿರುದ್ಯೋಗ ಪ್ರಮಾಣ ಜಿಗಿತ ಕಾಣಲಿದೆ. ಅದು ಶೇ.15ಕ್ಕೆ ಏರಿಕೆಯಾಗಲಿದೆ ಎಂದು ಆತಂಕಪಡಲಾಗಿದೆ.

ಅಮೆರಿಕದ 50 ಪ್ರಾಂತ್ಯಗಳ ಪೈಕಿ 48ರಲ್ಲಿ ಲಾಕ್‌ಡೌನ್‌ ಇದೆ. ರೆಸ್ಟಾರೆಂಟ್‌ಗಳು, ಹೊಟೇಲ್‌ಗ‌ಳು, ಸಣ್ಣ ಪ್ರಮಾಣದ ಉದ್ದಿಮೆಗಳು, ಡಿಪಾರ್ಟ್‌ಮೆಂಟಲ್‌ ಸ್ಟೋರ್‌ಗಳ ಮಾಲೀಕರು ಮತ್ತು ಆಡಳಿತ ವರ್ಗ ಈಗಾಗಲೇ ಉದ್ಯೋಗಿಗಳನ್ನು ಕರ್ತವ್ಯದಿಂದ ಬಿಡುಗಡೆ ಮಾಡಿವೆ. ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್‌, ಮಿಚಿಗನ್‌, ಫ್ಲೋರಿಡಾ, ಜಾರ್ಜಿಯಾ, ಟೆಕ್ಸಸ್‌, ನ್ಯೂಜರ್ಸಿಗಳಲ್ಲಿ ಕಳೆದ ವಾರದವರೆಗೆ ನಿರುದ್ಯೋಗಿಗಳ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ.

16 ಭಾರತೀಯರಿಗೆ ಸೋಂಕು
ಅಮೆರಿಕದಲ್ಲಿ ಕನಿಷ್ಠ 11 ಮಂದಿ ಭಾರತೀಯರು ಸಾವನ್ನಪ್ಪಿದ್ದಾರೆ. ಕರ್ನಾಟಕದ ವ್ಯಕ್ತಿ ಸೇರಿದಂತೆ ಇನ್ನೂ 16 ಮಂದಿಗೆ ಸೋಂಕು ದೃಢಪಟ್ಟಿದೆ. ಈಗಾಗಲೇ ಅಮೆರಿಕದಾದ್ಯಂತ 14 ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. 5 ಲಕ್ಷ ಅಧಿಕ ಜನರು ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಈ ಮಹಾಮಾರಿಗೆ ಬಲಿಯಾದವರೆಲ್ಲರೂ ಎಲ್ಲ ಭಾರತೀಯರೂ ಪುರುಷರೇ ಆಗಿದ್ದು, ಈ ಪೈಕಿ 10 ಮಂದಿ ನ್ಯೂಯಾರ್ಕ್‌ ಮತ್ತು ನ್ಯೂಜೆರ್ಸಿ ಪ್ರದೇಶದವರು.

ಅವರಲ್ಲಿ ನಾಲ್ವರು ನ್ಯೂಯಾರ್ಕ್‌ ಸಿಟಿಯಲ್ಲಿ ಟ್ಯಾಕ್ಸಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇನ್ನು ಸೋಂಕು ದೃಢಪಟ್ಟ 16 ಭಾರ ತೀಯರ ಪೈಕಿ ನಾಲ್ವರು ಮಹಿಳೆಯರೂ ಇದ್ದು, ಸೋಂಕಿತರು ಉತ್ತರಾಖಂಡ, ಮಹಾ ರಾಷ್ಟ್ರ, ಕರ್ನಾಟಕ ಮತ್ತು ಉತ್ತರಪ್ರದೇಶದವರು. ಇವರೆಲ್ಲರಿಗೂ ನೆರವು ನೀಡುವ ಕುರಿತು ಭಾರತೀಯ ರಾಯಭಾರಿ ಕಚೇರಿಯು ಅಮೆ ರಿಕ ಸರಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದೆ.

ಇದೇ ವೇಳೆ, ನ್ಯೂಯಾರ್ಕ್‌ನಲ್ಲಿ ವೈರಸ್‌ ಕಾಡ್ಗಿಚ್ಚಿನಂತೆ ಹರಡಲು ಏಷ್ಯಾದವರು ಕಾರಣರಲ್ಲ, ಬದಲಿಗೆ ಐರೋಪ್ಯ ದೇಶ ಗಳಿಂದ ಆಗಮಿಸಿದವರೇ ಕಾರಣ. ಅಷ್ಟೇ ಅಲ್ಲ, ಮಾರ್ಚ್‌ ನಲ್ಲಿ ಮೊದಲ ಸೋಂಕು ಪತ್ತೆಯಾಗುವುದಕ್ಕೂ ಮುನ್ನವೇ ಅದು ಹಲವರಿಗೆ ಹರಡಿಯಾಗಿತ್ತು ಎಂದು ‘ದ ನ್ಯೂಯಾರ್ಕ್‌ ಟೈಮ್ಸ್’ ವರದಿ ಮಾಡಿದೆ.

ಮುಂದುವರಿದ ವಾಕ್ಸಮರ
ವಿಶ್ವ ಆರೋಗ್ಯ ಸಂಸ್ಥೆಯ ವಿರುದ್ಧ ವಾಗ್ಧಾಳಿ ಮುಂದುವರಿಸಿರುವ ಅಮೆ ರಿಕ ಅಧ್ಯಕ್ಷ ಟ್ರಂಪ್‌, ಕೋವಿಡ್ ಸಾಂಕ್ರಾಮಿಕಕ್ಕೆ ಡಬ್ಲ್ಯೂಎಚ್‌ಒ ಮುಖ್ಯಸ್ಥರು ರಾಜಕೀಯ ಬಣ್ಣ ನೀಡಿರುವುದಾಗಿ ಕಿಡಿಕಾರಿದ್ದಾರೆ. ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್‌ ಅಭಾನಮ್‌ ಅವರು ಚೀನದ ಜತೆ ಸೇರಿಕೊಂಡಿದ್ದಾರೆ ಎಂದೂ ಆರೋಪಿಸಿದ್ದಾರೆ. ಜತೆಗೆ, ಇದು ಹೀಗೇ ಮುಂದುವರಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಸಹ ಟ್ರಂಪ್‌ ರವಾನಿಸಿದ್ದಾರೆ.

ಕೋವಿಡ್ ವಿಚಾರದಲ್ಲಿ ರಾಜಕೀಯ ಮಾಡುತ್ತಾ ಹೋದರೆ, ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ಬದಲು, ಇನ್ನಷ್ಟು ಶವ ಪೆಟ್ಟಿಗೆಗಳನ್ನು ನೋಡಬೇಕಾಗುತ್ತದೆ ಎಂದು ಪರೋಕ್ಷವಾಗಿ ಟ್ರಂಪ್‌ ರನ್ನು ಉಲ್ಲೇಖಿಸಿ ಟೆಡ್ರೋಸ್‌ ಮಾತನಾಡಿದ್ದರು. ಅಲ್ಲದೆ, ಕೋವಿಡ್ ವಿರುದ್ಧದ ಯುದ್ಧ ಗೆಲ್ಲಬೇಕೆಂದರೆ ನಮ್ಮೆಲ್ಲರಲ್ಲಿ ಒಗ್ಗಟ್ಟು ಅಗತ್ಯ ಎಂದೂ ಹೇಳಿದ್ದರು. ಇದರಿಂದ ಟ್ರಂಪ್‌ ಕೆಂಡಾಮಂಡಲರಾಗಿದ್ದಾರೆ.

ಸತತ 2ನೇ ದಿನವೂ 2 ಸಾವಿರ ಮಂದಿ ಸಾವು
ಸತತ ಎರಡನೇ ದಿನ 2 ಸಾವಿರ ಮಂದಿ ಬಲಿಯಾಗಿದ್ದಾರೆ. ಬುಧವಾರ 24 ಗಂಟೆಗಳ ಅವಧಿಯಲ್ಲಿ 2 ಸಾವಿರ ಮಂದಿ ಸಾವಿಗೀಡಾಗಿದ್ದು, ಗುರುವಾರವೂ 1,973 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 14,695 ಕ್ಕೇರಿದಂತಾಗಿದೆ.

ನ್ಯೂಯಾರ್ಕ್‌ ಒಂದರಲ್ಲಿಯೇ 24 ಗಂಟೆಗಳ ಅವಧಿಯಲ್ಲಿ 779 ಮಂದಿ ಅಸುನೀಗಿದ್ದಾರೆ. ಅದರಿಂದಾಗಿ ಅಲ್ಲಿಯೇ ಅಸುನೀಗಿದವರ ಸಂಖ್ಯೆ 6, 268ಕ್ಕೆ ಏರಿದಂತಾಗಿದೆ. ಸಾವಿನ ಅಮೆರಿಕ ಸ್ಪೇನ್‌ ಅನ್ನು ಹಿಂದಿಕ್ಕಿದೆ. ಸ್ಪೇನ್‌ ನಲ್ಲಿ ಒಟ್ಟು 14,555 ಮಂದಿ ಸಾವಿಗೀಡಾಗಿದ್ದಾರೆ. ಮೃತರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ಇಟಲಿಯಲ್ಲಿ 17,669 ಈಗಾಗಲೇ ಈ ಮಹಾಮಾರಿಗೆ ಬಲಿಯಾಗಿದ್ದಾರೆ.

15 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು
190ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿರುವ ಸೋಂಕು 15 ಲಕ್ಷಕ್ಕೂ ಅಧಿಕ ಮಂದಿಯನ್ನು ಬಾಧಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಗುರುವಾರದವರೆಗೆ ಒಟ್ಟು 14,02,478 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, 87,320ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಅನೇಕ ದೇಶಗಳು ಕೇವಲ ಗಂಭೀರ ರೋಗಲಕ್ಷಣ ಕಂಡುಬಂದವರನ್ನಷ್ಟೇ ಪರೀ ಕ್ಷೆಗೆ ಒಳಪಡಿಸುತ್ತಿರುವ ಕಾರಣ ಅದೆಷ್ಟೋ ಪ್ರಕರಣಗಳು ಇನ್ನೂ ಬೆಳಕಿಗೆ ಬಂದಿರಲಿಕ್ಕಿಲ್ಲ.

ಪರೀಕ್ಷೆಗೆ ಒಳಪಡುವವರ ಸಂಖ್ಯೆ ಹೆಚ್ಚಾದರೆ, ಸೋಂಕಿತರ ಸಂಖ್ಯೆಯಲ್ಲೂ ಗಣನೀಯ ಏರಿಕೆ ದಾಖಲಾಗಬಹುದು ಎಂಬ ಭೀತಿಯನ್ನೂ ಡಬ್ಲ್ಯೂಎಚ್‌ಒ ವ್ಯಕ್ತಪಡಿಸಿದೆ. ಐರೋಪ್ಯ ಒಕ್ಕೂಟ ಒಂದರಲ್ಲಿಯೇ 7,72,592 ಪ್ರಕರಣ ಪತ್ತೆಯಾಗಿದ್ದು, 61,118 ಸಾವು ಸಂಭವಿಸಿದೆ.

ಇಟಲಿಯಲ್ಲಿ 100 ವೈದ್ಯರ ಸಾವು
ಕೋವಿಡ್ ನಿಂದ ತತ್ತರಿಸಿ ಹೋಗಿರುವ ಇಟಲಿಯಲ್ಲಿ 100 ಮಂದಿ ವೈದ್ಯರು ಅಸುನೀಗಿದ್ದಾರೆ. ಫೆಬ್ರವರಿಯಿಂದ ಅಲ್ಲಿ ಸೋಂಕಿನ ಪ್ರಕರಣಗಳು ಜಾಸ್ತಿಯಾದ ಬಳಿಕ ಈ ಬೆಳವಣಿಗೆ ನಡೆದಿದೆ ಎಂದು ಆ ದೇಶದ ಆರೋಗ್ಯ ಸಂಸ್ಥೆ ಎಫ್ಎನ್‌ಒಎಂಸಿಇಒ (FNOMCEO) ಗುರುವಾರ ಹೇಳಿದೆ. ಇದೇ ವೇಳೆ ಸದ್ಯದ ಸ್ಥಿತಿಯಿಂದಾಗಿ ದೇಶದ ಅರ್ಥ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಪ್ರಧಾನಿ ಗಿಸೊಪ್ಪೆ ಕಾಂಟೆ ಎಚ್ಚರಿಸಿದ್ದಾರೆ.

ಒಂದಾಗಿ ಗೆಲ್ಲೋಣ ಎಂದ ಮೋದಿ
ಸಮಯಕ್ಕೆ ಸರಿಯಾಗಿ ಅಮೆರಿಕಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್‌ ಔಷಧವನ್ನು ಪೂರೈಕೆ ಮಾಡಿದ ಭಾರತಕ್ಕೆ ಅಧ್ಯಕ್ಷ ಟ್ರಂಪ್‌ ಮತ್ತೂಮ್ಮೆ ಥ್ಯಾಂಕ್ಸ್‌ ಹೇಳಿದ್ದಾರೆ. ಜತೆಗೆ ನಿಮ್ಮ ಉಪಕಾರವನ್ನು ಎಂದಿಗೂ ಮರೆಯುವುದಿಲ್ಲ. ಪ್ರಧಾನಮಂತ್ರಿಗೂ ಧನ್ಯವಾದಗಳು. ನಿಮ್ಮ ಬಲಿಷ್ಠ ನಾಯಕತ್ವವು ಕೇವಲ ಭಾರತಕ್ಕೆ ಮಾತ್ರವಲ್ಲ, ಇಡೀ ಮಾನವತೆಗೇ ಸಹಾಯ ಮಾಡುತ್ತಿದೆ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಮಾನವತೆಗೆ ಸಹಾಯಹಸ್ತ ಚಾಚಲು ಭಾರತ ಏನು ಬೇಕಿದ್ದರೂ ಮಾಡಲು ಸಿದ್ಧ. ಇಂತಹ ಸಮಯದಲ್ಲೇ ಸ್ನೇಹಿತರು ಹತ್ತಿರವಾಗುತ್ತಾರೆ. ಭಾರತ – ಅಮೆರಿಕದ ಸ್ನೇಹವು ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ. ನಾವು ಒಂದಾಗಿ ಕೊರೊನಾ ವಿರುದ್ಧದ ಈ ಸಮರದಲ್ಲಿ ಗೆಲ್ಲೋಣ ಎಂದು ಟ್ವೀಟ್‌ ಮಾಡಿದ್ದಾರೆ.

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.