ಪಂಜ್ ಶೀರ್ ನಲ್ಲಿ ತಾಲಿಬಾನ್ ಪಡೆಗಳ ಮೇಲೆ ಅಪರಿಚಿತ ಮಿಲಿಟರಿ ವಿಮಾನಗಳ ದಾಳಿ
Team Udayavani, Sep 7, 2021, 8:37 AM IST
ಕಾಬೂಲ್: ಅಫ್ಘಾನಿಸ್ತಾನದ ಪಂಜ್ ಶೀರ್ ಪ್ರಾಂತ್ಯದ ಮೇಲೆ ತಾಲಿಬಾನ್ ಸಂಪೂರ್ಣ ವಿಜಯ ಸಾಧಿಸಿದ ಒಂದು ದಿನದ ಬಳಿಕ ತಾಲಿಬಾನ್ ಪಡೆಗಳ ಮೇಲೆ ಅಪರಿಚಿತ ಮಿಲಿಟರಿ ವಿಮಾನಗಳು ದಾಳಿ ನಡೆಸಿದೆ ಎಂದು ಸ್ಥಳೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರೋಧಿ ಪಡೆಗಳ ಕೊನೆಯ ಭದ್ರಕೋಟೆಯಾದ ಪಂಜ್ಶೀರ್ ಪ್ರಾಂತ್ಯವನ್ನು “ಸಂಪೂರ್ಣವಾಗಿ ವಶಪಡಿಸಿಕೊಳ್ಳಲಾಗಿದೆ” ಎಂದು ಸೋಮವಾರ ತಾಲಿಬಾನ್ ಹೇಳಿಕೊಂಡಿದೆ. ಪಂಜಶೀರ್ ಗವರ್ನರ್ ಕಚೇರಿಯಲ್ಲಿ ಬಂದೂಕು ಹಿಡಿದ ತಾಲಿಬಾನ್ ಹೋರಾಟಗಾರರು ಧ್ವಜ ಹಾರಿಸಿದ ವಿಡಿಯೋಗಳು ಟ್ವಿಟರ್ ನಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ:24 ವರ್ಷಗಳ ಅನಂತರ ಓಪನ್ ಆದ ಲಿಫ್ಟ್ ನಲ್ಲಿ ಸಿಕ್ಕಿತು ಅಸ್ಥಿಪಂಜರ!
ಈ ಮೂಲಕ 40 ವರ್ಷಗಳಿಂದ ತಾಲಿಬಾನಿಗಳ ವಿರುದ್ಧದ ಪ್ರಬಲ ಹೋರಾಟವನ್ನು ಕುಂದಿಸಿದಂತೆ ಆಗಿದೆ. 1990ರಲ್ಲಿ ಪೂರ್ಣ ಪ್ರಮಾಣದಲ್ಲಿ ಅಫ್ಘಾನಿಸ್ತಾನ ಉಗ್ರರ ವಶವಾಗಿದ್ದರೂ, ಪಂಜ್ಶೀರ್ ಅಹ್ಮದ್ ಮಸೂದ್ನ ನಿಯಂತ್ರಣದಲ್ಲಿಯೇ ಇತ್ತು. ಉಗ್ರ ಸಂಘಟನೆಯನ್ನು ಖಂಡತುಂಡವಾಗಿ ವಿರೋಧಿಸುತ್ತಿದ್ದ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಮತ್ತು ರಾಷ್ಟ್ರೀಯ ಪ್ರತಿರೋಧ ಪಡೆಯ ಮುಖಂಡ ಅಹ್ಮದ್ ಮಸೂದ್ ತಜಿಕಿಸ್ತಾನಕ್ಕೆ ಪರಾರಿಯಾಗಿರುವ ಸಾಧ್ಯತೆ ಇದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ