ಒಂದು ಫೋನ್‌ ಕರೆಯ ʼಮಹಾಭಿಯೋಗʼ ಇಂಪೀಚ್‌ಮೆಂಟ್‌ ಪರೀಕ್ಷೆಯಲ್ಲಿ ಡೊನಾಲ್ಡ್‌ ಟ್ರಂಪ್‌


Team Udayavani, Dec 19, 2019, 8:45 PM IST

trump

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಕ್ರಿಯೆಗೆ (ಇಂಪೀಚ್‌ಮೆಂಟ್‌) ಚಾಲನೆ ದೊರೆತಿದೆ. ಮುಂಬರುವ ಅಧ್ಯಕ್ಷೀಯ ಚುನಾವಣೆಗಳಲ್ಲಿ ತಮ್ಮ ಎದುರಾಳಿಯಾಗಲಿರುವ ಜೋ ಬೈಡನ್‌ ಅವರ ವಿರುದ್ಧ ತನಿಖೆ ನಡೆಸುವಂತೆ ಉಕ್ರೇನ್‌ ಮೇಲೆ ಒತ್ತಡ ಹೇರಿರುವ ಟ್ರಂಪ್‌ ವಿರುದ್ಧ ಇಂಪೀಚ್‌ಮೆಂಟ್‌ ನಡೆಯುತ್ತಿದೆ. ಟ್ರಂಪ್‌ ಅಧ್ಯಕ್ಷಾವಧಿ ಮುಗಿದು ಹೊಸ ಚುನಾವಣೆ ನಡೆಯಲು ಇನ್ನು ತಿಂಗಳುಗಳು ಬಾಕಿ ಉಳಿದಿವೆ.

ಏನಿದು ಇಂಪೀಚ್‌ಮೆಂಟ್‌
ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಿರುದ್ಧ ದೋಷಾರೋಪ ಮಾಡಿ ವಿಚಾರಣೆ ನಡೆಸಿ, ಅದು ಸಾಭೀತಾದರೆ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಕ್ರಿಯೆಗೆ ಇಂಪೀಚ್‌ಮೆಂಟ್‌ ಎಂದು ಕರೆಯುತ್ತಾರೆ. ಇದನ್ನು ಕನ್ನಡದಲ್ಲಿ ಮಹಾಭಿಯೋಗ ಎಂದು ಹೇಳುತ್ತಾರೆ.

ಒಂದು ಫೋನ್‌ ಕರೆ ತಂದ ಆಪತ್ತು
ಟ್ರಂಪ್‌ ಅವರು ಜುಲೈ 25ರಂದು ಉಕ್ರೇನ್‌ ಅಧ್ಯಕ್ಷ ವೊಲೋಡಿರ್ಮಿ ಝೆಲೆನ್ಸಿಕಿ ( Volodymyr Zelensky ) ಅವರಿಗೆ ಮಾಡಿದ ದೂರವಾಣಿ ಕರೆಯೇ ಅವರ ಪದಚ್ಯುತಿಗೆ ಕಾರಣ. 2020ರಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್‌ ಅವರು ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ. ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಈಗಿನ ಅಧ್ಯಕ್ಷ ಟ್ರಂಪ್‌ ಪುನಃ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತ. ಹೀಗೆ ಆದಲ್ಲಿ ಟ್ರಂಪ್‌ ಅವರು ಜೋ ಬೈಡನ್‌ ಅವರನ್ನು ಎದುರಿಸಲಿದ್ದಾರೆ.

ಕಾರಣ ಏನು?
ಜೋ ಬೈಡನ್‌ ಅವರ ಮಗ ಹಂಟರ್‌ ಬೈಡನ್‌ ಉಕ್ರೇನಿನಲ್ಲಿ ವ್ಯಾಪಾರಿಯಾಗಿದ್ದಾರೆ. ತಂದೆ ಮಗನ ವಿರುದ್ಧ ಉಕ್ರೇನಿನಲ್ಲಿ ಭ್ರಷ್ಟಾಚಾರದ ಆರೋಪಗಳ ಕುರಿತು ತನಿಖೆ ನಡೆಸಿ ಪ್ರಕರಣವೊಂದರಲ್ಲಿ ಗುರುತಿಸಿಕೊಳ್ಳುವಂತೆ ಮಾಡಬೇಕು ಎಂದು ಟ್ರಂಪ್‌ ಅವರು ಝೆಲೆನ್ಸಿಕಿ ಅವರನ್ನು ಕೋರಿದ್ದರು.

ಹೆಸರು ಕೆಡಿಸುವ ಆರೋಪ
ವಿದೇಶದಲ್ಲೂ ಭ್ರಷ್ಟಾಚಾರದ ಆರೋಪಗಳು ಮೊಕದ್ದಮೆಗಳನ್ನು ಹೂಡಿ ಬೈಡನ್‌ ಅವರ ಹೆಸರನ್ನು ಹಾಳು ಮಾಡಿದರೆ ಚುನಾವಣೆಯಲ್ಲಿ ಸುಲಭವಾಗಿ ಗೆಲುವಾಗುಬಹುದು ಎಂಬುದು ಟ್ರಂಪ್‌ ಲೆಕ್ಕಾಚಾರ. ಈ ಷಡ್ಯಂತ್ರದ ಮಾಹಿತಿ ದೊರೆತಿದ್ದು, ಈಗ ಮಾಹಾಭಿಯೋಗದತ್ತ ಬಂದಿದೆ. ಇದೀಗ ಈ ಸಂಗತಿಯನ್ನು ಡೆಮಕ್ರಾಟಿಕ್‌ ಪಕ್ಷ ಬಳಸಿಕೊಳ್ಳುತ್ತಿದೆ.

ಪ್ರಕ್ರಿಯೆ ಹೇಗೆ ನಡೆಯುತ್ತದೆ
ಅಮೆರಿಕೆಯ ಅಧ್ಯಕ್ಷರ ʼಇಂಪೀಚ್‌ಮೆಂಟ್‌’ ಮತ್ತು ಆನಂತರದ ಪದಚ್ಯುತಿಯು ಎರಡು ಹಂತದ ಪ್ರಕ್ರಿಯೆಯಾಗಿದೆ. ಅಧ್ಯಕ್ಷರ ವಿರುದ್ಧ ಆಪಾದನೆಗಳನ್ನು ಪ್ರಸ್ತಾಪಿಸುವ ಗೊತ್ತುವಳಿಯೊಂದನ್ನು ಸಂಸತ್ತಿನ ಕೆಳಮನೆಯಲ್ಲಿ ಮೊದಲು ಮಂಡಿಸಬೇಕು. ಈ ಗೊತ್ತುವಳಿಯ ಕುರಿತು ಸಂಸದರು ಚರ್ಚೆ ನಡೆಸಬೇಕು. ಗೊತ್ತುವಳಿ ಬಹುಮತದಿಂದ ಅಂಗೀಕಾರ ಆದರೆ ಅಧ್ಯಕ್ಷರು “ಇಂಪೀಚ್‌’ ಆದಂತೆ. ಆಗ ಆತ ಸೆನೆಟ್‌ ಸಭೆಯಲ್ಲಿ ವಿಚಾರಣೆ ಎದುರಿಸಬೇಕು.

ವಿಚಾರಣೆ ನಡೆಸುವುದು ಯಾರು?
ಒಂದು ವೇಳೆ ಟ್ರಂಪ್‌ ವಿರುದ್ಧದ ಕೇಸು ವಿಚಾರಣೆಯ ಹಂತ ತಲುಪಿದರೆ, ವಿಚಾರಣೆಯ ಅಧ್ಯಕ್ಷತೆಯನ್ನು ಅಮೆರಿಕದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಹಿಸುವರು. ಸೆನೆಟ್‌ ಮುಂದೆ ತಮ್ಮ ಪರ ವಾದ ಮಂಡಿಸಲು ನ್ಯಾಯವಾದಿಯೊಬ್ಬರನ್ನು ಟ್ರಂಪ್‌ ನೇಮಿಸಿಕೊಳ್ಳಬಹುದು. ವಿಚಾರಣೆಯ ಕೊನೆಯ ಹಂತದಲ್ಲಿ ಸೆನೆಟ್‌ ಸಭೆ ಮತ ಚಲಾಯಿಸುತ್ತದೆ. ಟ್ರಂಪ್‌ ಅವರಿಗೆ ಶಿಕ್ಷೆಯ ಪರವಾಗಿ ಸೆನೆಟ್‌ನ ಮೂರನೆಯ ಎರಡರಷ್ಟು ಸದಸ್ಯರು ಮತ ಚಲಾಯಿಸಿದರೆ ಟ್ರಂಪ್‌ ಅವರು ಅಧಿಕಾರ ಕಳೆದುಕೊಳ್ಳುತ್ತಾರೆ. ಇನ್ನುಳಿದ ಕೆಲವು ತಿಂಗಳುಗಳನ್ನು ಉಪಾಧ್ಯಕ್ಷರು ಅಮೆರಿಕದ ಅಧ್ಯಕ್ಷರಾಗಿರುತ್ತಾರೆ.

ಸಂವಿಧಾನ ಏನು ಹೇಳುತ್ತದೆ
ಅಮೆರಿಕದ ಸಂಸತ್ತಿನ ಕೆಳಮನೆಗೆ ಇಂಪೀಚ್‌ಮೆಂಟ್‌ ಅಧಿಕಾರವಿದ್ದರೆ ಎಲ್ಲ ಇಂಪೀಚ್‌ಮೆಂಟ್‌ಗಳ ವಿಚಾರಣೆ ನಡೆಸುವ ಅಧಿಕಾರವನ್ನು ಸೆನೆಟ್‌ (ಮೇಲ್ಮನೆ) ಹೊಂದಿರುತ್ತದೆ. ಸನೆಟ್‌ನಲ್ಲಿ ಜರುಗುವ ಇಂಪೀಚ್‌ಮೆಂಟ್‌ ವಿಚಾರಣೆಗಳ ಅಧ್ಯಕ್ಷತೆಯನ್ನು ಅಮೆರಿಕದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರು ವಹಿಸುತ್ತಾರೆ. ದೇಶದ್ರೋಹ, ಭ್ರಷ್ಟಾಚಾರ, ಇತರೆ ಉನ್ನತ ಹಂತದ ಅಪರಾಧಗಳು ಇಲ್ಲವೇ ದುರ್ವರ್ತನೆಗಳಿಗಾಗಿ ಶಿಕ್ಷೆಯಾದರೆ ಅಮೆರಿಕೆಯ ಅಧ್ಯಕ್ಷರನ್ನು ಇಂಪೀಚ್‌ಮೆಂಟ್‌ ಮೇರೆಗೆ ಹುದ್ದೆಯಿಂದ ಕೆಳಗಿಳಿಸಬಹುದು ಎಂದು ಅಮೆರಿಕ ಸಂವಿಧಾನ ಹೇಳುತ್ತದೆ.

ಟ್ರಂಪ್‌ ಬಚಾವ್‌
ಡೊನಾಲ್ಡ್‌ ಟ್ರಂಪ್‌ ಅವರ ಇಂಪೀಚ್‌ಮೆಂಟ್‌ ಪ್ರಕ್ರಿಯೆ ಆರಂಭವಾಗಿದ್ದರೂ ವಿಚಾರಣೆಯ ಹಂತ ತಲುಪುವ ಸಾಧ್ಯತೆ ವಿರಳ ಎನ್ನಲಾಗಿದೆ. ಸೆನೆಟ್‌ನಿಂದ ಶಿಕ್ಷೆಗೊಳಗಾಗುವ ಅವಕಾಶ ವಿರಳ. ಕೆಳಮನೆಯಲ್ಲಿ ಟ್ರಂಪ್‌ ಅವರ ರಿಪಬ್ಲಿಕನ್‌ ಪಕ್ಷಕ್ಕೆ ಬಹುಮತ ಇಲ್ಲ. ಡೆಮಾಕ್ರಟಿಕ್‌ ಪಕ್ಷ 235 ಸದಸ್ಯರನ್ನೂ, ರಿಪಬ್ಲಿಕನ್‌ ಪಕ್ಷ 199 ಸದಸ್ಯರನ್ನೂ ಹೊಂದಿದೆ. ಒಬ್ಬ ಪಕ್ಷೇತರ. ಮೇಲ್ಮನೆಯಲ್ಲಿ ಬಹುಮತ ರಿಪಬ್ಲಿಕನ್‌ ಪಕ್ಷದ್ದು. 53 ಮಂದಿ ರಿಪಬ್ಲಿಕನ್‌ ಪಕ್ಷದ ಸದಸ್ಯರಿದ್ದರೆ, ಡೆಮಕ್ರಾಟ್‌ಗಳ ಸಂಖ್ಯೆ 45. ಅಧ್ಯಕ್ಷನಿಗೆ ಶಿಕ್ಷೆ ವಿಧಿಸಲು ಅಗತ್ಯವಿರುವ ಮತಗಳ ಸಂಖ್ಯೆ 67.

ಇತಿಹಾಸವೇ ಇಲ್ಲ
ಈ ತನಕ ಅಮೆರಿಕದ ಯಾವುದೇ ಅಧ್ಯಕ್ಷರನ್ನು ಇಂಪೀಚ್‌ಮೆಂಟ್‌ ಅನ್ವಯ ಪದಚ್ಯುತಗೊಳಿಸಲಾಗಿಲ್ಲ. 1968ರಲ್ಲಿ ಆಯಂಡ್ರೂ ಜಾನ್ಸನ್‌ ಮತ್ತು 1998ರಲ್ಲಿ ಬಿಲ್‌ ಕ್ಲಿಂಟನ್‌ ಅವರು ಇಂಪೀಚ್‌ಮೆಂಟ್‌ ಎದುರಿಸಿದರು. ಆದರೆ ಸೆನೆಟ್‌ ಅವರಿಗೆ ಶಿಕ್ಷೆ ವಿಧಿಸಲಿಲ್ಲ. 1974ರಲ್ಲಿ ವಾಟರ್‌ ಗೇಟ್‌ ಹಗರಣದ ಆಪಾದನೆ ಎದುರಿಸಿದ ರಿಚರ್ಡ್‌ ನಿಕ್ಸನ್‌ ತಮ್ಮ ಪದಚ್ಯುತಿಗೆ ಮುನ್ನವೇ ರಾಜೀನಾಮೆ ನೀಡಿದ್ದರು.

ಈ ಹಿಂದೆ ಅಮೆರಿಕ ಸಂಸತ್ತಿನ ಕೆಳಮನೆಯು, ಅಧ್ಯಕ್ಷ ಆಯಂಡ್ರೂ ಜಾನ್ಸನ್‌ ಅವರ ವಿರುದ್ಧದ ಆಪಾದನೆಗಳ ಕುರಿತು ನಿರ್ಣಯ ಮಂಡಿಸಿ ಬಹುಮತದಿಂದ ಅಂಗೀಕರಿಸಿತ್ತು. ಸೆನೆಟ್‌ ಮುಂದೆ ನಡೆದ ವಿಚಾರಣೆಯ ನಂತರ ಜರುಗಿದ ಮತದಾನದಲ್ಲಿ ಜಾನ್ಸನ್‌ ಒಂದು ಮತದ ಅಂತರದಲ್ಲಿ ಪಾರಾಗಿದ್ದರು. ಅವರೂ ರಿಪಬ್ಲಿಕನ್‌ ಪಾರ್ಟಿಗೆ ಸೇರಿದವರಾಗಿದ್ದರು.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.