Udayavni Special

ಭಾರತಕ್ಕೆ ತಾಲಿಬಾನ್‌ ಭೀತಿ

Team Udayavani, Aug 4, 2021, 7:40 AM IST

ಭಾರತಕ್ಕೆ ತಾಲಿಬಾನ್‌ ಭೀತಿ

ವಿಶ್ವಸಂಸ್ಥೆ: ಅಫ್ಘಾನಿಸ್ಥಾನದಲ್ಲಿ ತಾಲಿಬಾನ್‌ ಉಗ್ರರ ಮೇಲುಗೈ ಭಾರತಕ್ಕೆ ಕಳವಳಕಾರಿ ವಿಚಾರ. ಆ ದೇಶದಲ್ಲಿ ಉಗ್ರರ ಶಿಬಿರಗಳು ಹೆಚ್ಚಾಗುವುದೂ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ರಾಯಭಾರಿ ಟಿ.ಎಸ್‌. ತಿರುಮೂರ್ತಿ ಹೇಳಿದ್ದಾರೆ.

ಭಾರತವು ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಹಾಲಿ ತಿಂಗಳ ಅಧ್ಯಕ್ಷ ಸ್ಥಾನ ವಹಿಸಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯುದ್ಧಗ್ರಸ್ತ ರಾಷ್ಟ್ರದಲ್ಲಿ ಉಗ್ರರ ಶಿಬಿರಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಎಂದರು. ಅದರ ಪರಿಣಾಮ ನೇರವಾಗಿ ಭಾರತಕ್ಕೇ ತಟ್ಟಲಿದೆ. ಸ್ವತಂತ್ರ, ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ಅಫ್ಘಾನಿಸ್ಥಾನ ಸ್ಥಾಪನೆ ಭಾರತಕ್ಕೆ ಆದ್ಯತೆಯ ವಿಚಾರ ಎಂದಿದ್ದಾರೆ.

ಎಲ್ಲ ರೀತಿಯ ನಿಯಮಗಳ ಉಲ್ಲಂಘನೆ ಆ ದೇಶದಲ್ಲಿ ನಿಲ್ಲಬೇಕು ಎಂದು ಪ್ರತಿಪಾದಿಸಿದ ತಿರುಮೂರ್ತಿ, ಮಹಿಳೆಯರು, ಮಕ್ಕಳನ್ನು ಮತ್ತು ಅಲ್ಪಸಂಖ್ಯಾಕರನ್ನು ಗುರಿಯಾಗಿರಿಸಿಕೊಂಡು ಕೊಲ್ಲಲಾಗುತ್ತಿದೆ. ಇಂಥ ಹತ್ಯೆಗಳು ನಿಲ್ಲಬೇಕು ಎಂದು ಅಂತಾರಾಷ್ಟ್ರೀಯ ಸಮುದಾಯವನ್ನು ಆಗ್ರಹಿಸಿದ್ದಾರೆ. 20 ವರ್ಷಗಳಲ್ಲಿ ಅಫ್ಘಾನ್‌ ಸಾಧಿಸಿರುವುದನ್ನು ಈಗ ಕಳೆದುಕೊಳ್ಳುವಂತಾ ಗಬಾರದು ಎಂದೂ ಹೇಳಿದ್ದಾರೆ.

129 ತಾಲಿಬಾನಿಗಳ ಸಾವು: ಮತ್ತೂಂದೆಡೆ, ತಾಲಿಬಾನ್‌ ಉಗ್ರರು ಹಾಗೂ ಅಫ್ಘಾನ್‌ ಸೈನಿಕರ ನಡುವಿನ ಹೋರಾಟ ಮುಂದುವರಿದಿದೆ. ಆ ದೇಶದ ರಕ್ಷಣ ಸಚಿವಾಲಯದ ಸರಣಿ ಟ್ವೀಟ್‌ಗಳ ಪ್ರಕಾರ, ವಿವಿಧ ಭಾಗಗಳಲ್ಲಿ 129 ಉಗ್ರರನ್ನು ಅಫ್ಘಾನ್‌   ಪಡೆ ಸಂಹರಿಸಿದೆ.

ಪಿಒಕೆ ತೆರವುಗೊಳಿಸಿ: ಪಾಕ್‌ಗೆ ಭಾರತ :

ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಿಂದ ಪಾಕಿ ಸ್ಥಾನ ಕೂಡಲೇ ತನ್ನ ನಿಯಂತ್ರಣ ವಾಪಸ್‌ ಪಡೆದುಕೊಳ್ಳಬೇಕು ಎಂದು ತಿರುಮೂರ್ತಿ ಪಾಕಿಸ್ಥಾನ ಸರಕಾರಕ್ಕೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಮಾತುಕತೆ-ಸಂಧಾನಕ್ಕೆ ಸೂಕ್ತ ವಾತಾವರಣ ಸೃಷ್ಟಿಸುವುದು ಇಮ್ರಾನ್‌ ಖಾನ್‌ ಸರಕಾರದ ಆದ್ಯತೆಯಾಗಬೇಕಾಗಿದೆ ಎಂದೂ ಹೇಳಿದ್ದಾರೆ. ಪಾಕಿಸ್ಥಾನದ ಪತ್ರಕರ್ತನೊಬ್ಬನ ಕಿಡಿಗೇಡಿ ಪ್ರಶ್ನೆಗೆ ಉತ್ತರಿಸಿದ ಅವರು, ” ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ’ ಎಂಬುದನ್ನು ಪುನರುಚ್ಚರಿಸಿದ್ದಾರೆ.

ಟಾಪ್ ನ್ಯೂಸ್

ದಸರಾ ಬಳಿಕ ಸುಪ್ರೀಂನಲ್ಲಿ ಭೌತಿಕ ವಿಚಾರಣೆ?

ದಸರಾ ಬಳಿಕ ಸುಪ್ರೀಂನಲ್ಲಿ ಭೌತಿಕ ವಿಚಾರಣೆ?

ವಿಧಾನಸಭಾ ಕ್ಷೇತ್ರಗಳೇ ಗಡಿ; ಜಿ.ಪಂ., ತಾ.ಪಂ. ಕ್ಷೇತ್ರಗಳ ಮರುವಿಂಗಡಣೆಗೆ ಸರಕಾರದ ಚಿಂತನೆ

ವಿಧಾನಸಭಾ ಕ್ಷೇತ್ರಗಳೇ ಗಡಿ; ಜಿ.ಪಂ., ತಾ.ಪಂ. ಕ್ಷೇತ್ರಗಳ ಮರುವಿಂಗಡಣೆಗೆ ಸರಕಾರದ ಚಿಂತನೆ

ಇಂದು ಭಾರತ್‌ ಬಂದ್‌; ಕೇಂದ್ರ ಕೃಷಿ ಕಾಯ್ದೆ ಖಂಡಿಸಿ ಪ್ರತಿಭಟನೆ

ಇಂದು ಭಾರತ್‌ ಬಂದ್‌; ಕೇಂದ್ರ ಕೃಷಿ ಕಾಯ್ದೆ ಖಂಡಿಸಿ ಪ್ರತಿಭಟನೆ

ಡಿಜಿಟಲ್‌ ಆರೋಗ್ಯ ಇಂದು ಲೋಕಾರ್ಪಣೆ

ಡಿಜಿಟಲ್‌ ಆರೋಗ್ಯ ಇಂದು ಲೋಕಾರ್ಪಣೆ

ಇಂದು ವಿಶ್ವ ಪ್ರವಾಸೋದ್ಯಮ ದಿನ: ಪ್ರವಾಸಿ ತಾಣಗಳ ಆಗರ ಕರಾವಳಿ

ಇಂದು ವಿಶ್ವ ಪ್ರವಾಸೋದ್ಯಮ ದಿನ: ಪ್ರವಾಸಿ ತಾಣಗಳ ಆಗರ ಕರಾವಳಿ

ಯಶಸ್ಸು ಕಂಡ ಪ್ರಧಾನಿ ಮೋದಿ ಅಮೆರಿಕ ಪ್ರವಾಸ

ಯಶಸ್ಸು ಕಂಡ ಪ್ರಧಾನಿ ಮೋದಿ ಅಮೆರಿಕ ಪ್ರವಾಸ

ನನ್ನ ರಾಜೀನಾಮೆಗೆ ಮೋದಿಯೂ ಬೆರಗಾಗಿದ್ದರು: ಬಿಎಸ್‌ವೈ

ನನ್ನ ರಾಜೀನಾಮೆಗೆ ಮೋದಿಯೂ ಬೆರಗಾಗಿದ್ದರು: ಬಿಎಸ್‌ವೈ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಸರಾ ಬಳಿಕ ಸುಪ್ರೀಂನಲ್ಲಿ ಭೌತಿಕ ವಿಚಾರಣೆ?

ದಸರಾ ಬಳಿಕ ಸುಪ್ರೀಂನಲ್ಲಿ ಭೌತಿಕ ವಿಚಾರಣೆ?

“ನಕ್ಸಲರಿಗೆ ಹಣದ ಹರಿವು ತಪ್ಪಿಸಿ’

“ನಕ್ಸಲರಿಗೆ ಹಣದ ಹರಿವು ತಪ್ಪಿಸಿ’

ಇಂದು ಭಾರತ್‌ ಬಂದ್‌; ಕೇಂದ್ರ ಕೃಷಿ ಕಾಯ್ದೆ ಖಂಡಿಸಿ ಪ್ರತಿಭಟನೆ

ಇಂದು ಭಾರತ್‌ ಬಂದ್‌; ಕೇಂದ್ರ ಕೃಷಿ ಕಾಯ್ದೆ ಖಂಡಿಸಿ ಪ್ರತಿಭಟನೆ

ಎಲ್ಲ ಇವಿಗಳಿಗೆ ಸಬ್ಸಿಡಿ?

ಎಲ್ಲ ಇವಿಗಳಿಗೆ ಸಬ್ಸಿಡಿ?

ಡಿಜಿಟಲ್‌ ಆರೋಗ್ಯ ಇಂದು ಲೋಕಾರ್ಪಣೆ

ಡಿಜಿಟಲ್‌ ಆರೋಗ್ಯ ಇಂದು ಲೋಕಾರ್ಪಣೆ

MUST WATCH

udayavani youtube

ಶ್ರೀ ಕ್ಷೇತ್ರ ಕಮಲಶಿಲೆಗೆ ಸಚಿವ ಅಶ್ವಥ್ ನಾರಾಯಣ್ ದಂಪತಿ ಭೇಟಿ, ವಿಶೇಷ ಪೂಜೆ

udayavani youtube

ರೈತರಿಗೆ ನಿರಂತರ ಆದಾಯ ಕೊಡುವ ಲಿಂಬೆ ಬೆಳೆಯ ಬಗ್ಗೆ ಮಾಹಿತಿ

udayavani youtube

ರೈತಸಂಘ ಹೋರಾಟದ ಹೆಸರಲ್ಲಿ ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಮಾಡುವ ಅಗತ್ಯವಿಲ್ಲ : ಪುಟ್ಟರಾಜು

udayavani youtube

ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ಸಮಾಜಕ್ಕೆ ಬಹಳಷ್ಟು ಅವಶ್ಯಕತೆ : ಡಾ| ಅಶ್ವತ್ಥನಾರಾಯಣ

udayavani youtube

ಕೋವಿಡ್ ಆತಂಕದ ನಡುವೆ ಜಾನಪದ ಸಮ್ಮೇಳನದಲ್ಲಿ ಶಾಲಾ ಮಕ್ಕಳು ಭಾಗಿ

ಹೊಸ ಸೇರ್ಪಡೆ

ದಸರಾ ಬಳಿಕ ಸುಪ್ರೀಂನಲ್ಲಿ ಭೌತಿಕ ವಿಚಾರಣೆ?

ದಸರಾ ಬಳಿಕ ಸುಪ್ರೀಂನಲ್ಲಿ ಭೌತಿಕ ವಿಚಾರಣೆ?

“ನಕ್ಸಲರಿಗೆ ಹಣದ ಹರಿವು ತಪ್ಪಿಸಿ’

“ನಕ್ಸಲರಿಗೆ ಹಣದ ಹರಿವು ತಪ್ಪಿಸಿ’

ಇಂದು ಪ್ರವಾಸೋದ್ಯಮ ದಿನ: ಕಡತದಲ್ಲೇ ಬಾಕಿಯಾದ ಪ್ರವಾಸೋದ್ಯಮ ಯೋಜನೆ

ಇಂದು ಪ್ರವಾಸೋದ್ಯಮ ದಿನ: ಕಡತದಲ್ಲೇ ಬಾಕಿಯಾದ ಪ್ರವಾಸೋದ್ಯಮ ಯೋಜನೆ

ವಿಧಾನಸಭಾ ಕ್ಷೇತ್ರಗಳೇ ಗಡಿ; ಜಿ.ಪಂ., ತಾ.ಪಂ. ಕ್ಷೇತ್ರಗಳ ಮರುವಿಂಗಡಣೆಗೆ ಸರಕಾರದ ಚಿಂತನೆ

ವಿಧಾನಸಭಾ ಕ್ಷೇತ್ರಗಳೇ ಗಡಿ; ಜಿ.ಪಂ., ತಾ.ಪಂ. ಕ್ಷೇತ್ರಗಳ ಮರುವಿಂಗಡಣೆಗೆ ಸರಕಾರದ ಚಿಂತನೆ

ಇಂದು ಭಾರತ್‌ ಬಂದ್‌; ಕೇಂದ್ರ ಕೃಷಿ ಕಾಯ್ದೆ ಖಂಡಿಸಿ ಪ್ರತಿಭಟನೆ

ಇಂದು ಭಾರತ್‌ ಬಂದ್‌; ಕೇಂದ್ರ ಕೃಷಿ ಕಾಯ್ದೆ ಖಂಡಿಸಿ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.