ನಟಿ ರಾಧಿಕಾ ಕುಮಾರಸ್ವಾಮಿ ಬ್ಯೂಟಿಫುಲ್ Photo gallery
10
2002 ರಲ್ಲಿ ತೆರೆಕಂಡ ನಿನಗಾಗಿ ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿದವರು ರಾಧಿಕಾ. ನಂತರ ತವರಿಗೆ ಬಾ ತಂಗಿ, ರಿಷಿ, ಮಂಡ್ಯ, ಅಟೋ ಶಂಕರ್ ,ಅಣ್ಣ ತಂಗಿ ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದರು.
2007 ರಿಂದ ಚಿತ್ರರಂಗದ ಕೆಲಕಾಲ ಗ್ಯಾಪ್ ಪಡೆದ ಅವರು 2013 ರಲ್ಲಿ ತೆರೆಕಂಡ `ಸ್ವೀಟಿ ನನ್ನ ಜೋಡಿ’ ಚಿತ್ರದಿಂದ ನಟಿಯಾಗಿ ಕಮ್ ಬ್ಯಾಕ್ ಮಾಡಿದರು. ಇದಕ್ಕೂ ಮುಂಚೆ ಯಶ್ ಮತ್ತು ರಮ್ಯಾ ಅಭಿನಯದ ಲಕ್ಕಿ ಚಿತ್ರವನ್ನು ನಿರ್ಮಾಣ ಮಾಡಿದ್ದ ರಾಧಿಕಾ ಈ ಚಿತ್ರವನ್ನು ಕೂಡ ಅವರೇ ನಿರ್ಮಾಣ ಮಾಡಿದರು.
ಪ್ರಸ್ತುತ ನಟಿಯಾಗಿ , ನಿರ್ಮಾಪಕಿಯಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.