Udayavni Special

ಉಸ್ತುವಾರಿ ಸಚಿವರಿಗೆ ಮುಖ್ಯಮಂತ್ರಿ ಪಟ್ಟ ಉಡುಪಿ ಜಿಲ್ಲೆಗೆ ಜುಲೈ ತಿಂಗಳ ಜಾಕ್‌ಪಾಟ್‌!


Team Udayavani, Jul 28, 2021, 9:35 AM IST

ಉಸ್ತುವಾರಿ ಸಚಿವರಿಗೆ ಮುಖ್ಯಮಂತ್ರಿ ಪಟ್ಟ ಉಡುಪಿ ಜಿಲ್ಲೆಗೆ ಜುಲೈ ತಿಂಗಳ ಜಾಕ್‌ಪಾಟ್‌!

ಉಡುಪಿ: ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳಿಗೆ ಜುಲೈ ತಿಂಗಳಿನಲ್ಲಿ ಜಾಕ್‌ಪಾಟ್‌ ಲಭಿಸಿದೆ. ಈ ಮಾಸಾರಂಭದಲ್ಲಿ, ಅಂದರೆ ಜು. 7ರಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಸಚಿವರಾದರೆ, ಮಾಸಾಂತ್ಯದ ವೇಳೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಗಾದಿಗೇರಿದ್ದಾರೆ. ಮುಂದೆ ಜಿಲ್ಲೆಯ ಶಾಸಕರೊಬ್ಬರಿಗೂ ಸಚಿವ ಸ್ಥಾನ ಲಭಿಸುವ ಸಾಧ್ಯತೆ ಬಹುತೇಕ ನಿಚ್ಚಳವಾಗಿದೆ.

ಗೃಹಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಲಭಿಸಿದ ಬಳಿಕ ಜಿಲ್ಲೆಗೆ ಆಗಮಿಸುತ್ತಿಲ್ಲ ಎಂಬ ದೂರುಗಳಿದ್ದರೂ ಕೊರೊನಾ ನಿರ್ವಹಣೆ ಸಹಿತ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಅವರು ತೆಗೆದುಕೊಂಡು ನಿರ್ಧಾರಗಳು ಮಹತ್ತರವಾದ ಪಾತ್ರ ವಹಿಸಿವೆ.

ನಿರಂತರ ವೀಡಿಯೋ ಸಂವಾದ:

ಕೊರೊನಾ ನಿರ್ವಹಣೆ ಸಹಿತ ಜಿಲ್ಲೆಯ ಸ್ಥಿತಿಗತಿಗಳ ಬಗ್ಗೆ ಜಿಲ್ಲಾಡಳಿತದೊಂದಿಗೆ ಎರಡು ದಿನಕ್ಕೊಮ್ಮೆ ಅಥವಾ ವಾರಕ್ಕೊಂದು ಬಾರಿ ವೀಡಿಯೋ ಸಂವಾದ ನಡೆಸಿ ಸಲಹೆ-ಸೂಚನೆ ನೀಡುತ್ತಿದ್ದರು. ಜಿಲ್ಲೆಯ ಶಾಸಕರೊಂದಿಗೂ ಸಭೆ ನಡೆಸಿ ಬೇಡಿಕೆಗಳನ್ನು ಈಡೇರಿಸಲು ಸರ್ವರೀತಿಯಲ್ಲಿ ಸ್ಪಂದಿಸುತ್ತಿದ್ದರು. ಜಿಲ್ಲೆಯ ತ್ವರಿತಗತಿಯ ಕೆಲಸ ಕಾರ್ಯಗಳಲ್ಲಿ ಅವರ ನೇತೃತ್ವ ಅತ್ಯದ್ಭುತವಾದುದು ಎನ್ನುತ್ತಾರೆ ಜನಪ್ರತಿನಿಧಿಗಳು ಹಾಗೂ ಅಧಿಕಾರ ವೃಂದದವರು.

ಜಿಲ್ಲೆಗೆ ಬೊಮ್ಮಾಯಿ ಕೊಡುಗೆಗಳು:

ಕೊರೊನಾ ಸಂದಿಗ್ಧ ಸ್ಥಿತಿಯಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಸುಸಜ್ಜಿತ ಕೋವಿಡ್‌ ಟೆಸ್ಟಿಂಗ್‌ ಲ್ಯಾಬ್‌ ನಿರ್ಮಾಣ ಮಾಡಿ ದಿನವೊಂದಕ್ಕೆ 3 ಸಾವಿರಕ್ಕೂ ಅಧಿಕ ಪರೀಕ್ಷೆ ನಡೆಸುವಂತೆ ಕ್ರಮ ತೆಗೆದುಕೊಂಡಿದ್ದರು. ಜಿಲ್ಲೆಯ ಕಾರ್ಕಳ, ಕುಂದಾಪುರ, ಉಡುಪಿಯ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವಲ್ಲಿಯೂ ಇವರ ಪಾತ್ರ ಹೆಚ್ಚಿನದು. ದೇಶಾದ್ಯಂತ ವೈದ್ಯಕೀಯ ಆಮ್ಲಜನಕದ ಕೊರತೆ ಎದುರಾದಾಗ ರಾಜ್ಯ ಹಾಗೂ ಮುಖ್ಯವಾಗಿ ಉಡುಪಿ ಜಿಲ್ಲೆಗೆ ಯಾವುದೇ ಕೊರತೆಯಾಗದಂತೆ ಸಕಲ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡಿದ್ದರು. ಉಡುಪಿ, ಕಾರ್ಕಳ, ಕುಂದಾಪುರದಲ್ಲಿ ಲಿಕ್ವಿಡ್‌ ಆಕ್ಸಿಜನ್‌ ಘಟಕಗಳನ್ನು ನಿರ್ಮಿಸಿ ತೊಂದರೆಯಾಗದಂತೆ ನೋಡಿಕೊಂಡಿದ್ದರು.

ಹೆಜಮಾಡಿ ಬಂದರು, ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ:

ಉಡುಪಿ ಜಿಲ್ಲೆಯ ಬಹುಕಾಲದ ಕನಸಾಗಿದ್ದ ಹೆಜಮಾಡಿ ಬಂದರು ಅಭಿವೃದ್ಧಿಗೆ ಅನುದಾನ ಮೀಸಲು ಹಾಗೂ ಉಡುಪಿ ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು 180 ಕೋ.ರೂ.ಗಳನ್ನು ಮೀಸಲಿರಿಸಲಾಗಿದೆ. ಬೊಮ್ಮಾಯಿ ಅವರು ಖುದ್ದು ಭೇಟಿ ನೀಡಿ ರೂಪರೇಖೆ ಸಿದ್ಧªಪಡಿಸುವಲ್ಲಿ ಸಹಕರಿಸಿದ್ದರು. ಪಡುಬಿದ್ರಿಯ ಬೀಚ್‌ ಬ್ಲೂ$Âಫ್ಲಾ$Âಗ್‌ ಪ್ರಮಾಣ ಪತ್ರ ಪಡೆದು ಅಂತಾರಾಷ್ಟ್ರಿಯ ಮಾನ್ಯತೆ ಲಭಿಸಿದ್ದು, ಬೊಮ್ಮಾಯಿ ಅವರು ಉಸ್ತುವಾರಿ ವಹಿಸಿಕೊಂಡ ಬಳಿಕ ಎಂಬುದು ಗಮನಾರ್ಹ.

ಜಿಲ್ಲೆಯ ಕೆಲಸ ಕಾರ್ಯಗಳಿಗೆ ಮತ್ತಷ್ಟು ವೇಗ ನಿರೀಕ್ಷೆ :

ಉಡುಪಿ ಜಿಲ್ಲೆಯ ಉಸ್ತುವಾರಿಯಾಗಿದ್ದ ಸಂದರ್ಭದಲ್ಲಿಯೇ ಜಿಲ್ಲೆಯ ಕೆಲಸ ಕಾರ್ಯಗಳು ಉಸ್ತುವಾರಿ ಸಚಿವರ ಮುತುವರ್ಜಿಯಲ್ಲಿ ನಡೆಯುತ್ತಿದ್ದವು. ಉಸ್ತುವಾರಿ ಸಚಿವರಾಗಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯ ಸಮಗ್ರ ಮಾಹಿತಿಯನ್ನು ಬೊಮ್ಮಾಯಿ ಅವರು ಹೊಂದಿದ್ದಾರೆ. ಈಗ ಮುಖ್ಯಮಂತ್ರಿ ಸ್ಥಾನಕ್ಕೇರಿದ ಕಾರಣ ಜಿಲ್ಲೆಯ ಕೆಲಸಕಾರ್ಯಗಳು ಮತ್ತಷ್ಟು ಸುಲಲಿತವಾಗಿ ನಡೆಯಲು ಪೂರಕವಾದೀತು ಎಂಬುದು

ಜಿಲ್ಲೆಯ ಜನತೆಯ ಆಶಾವಾದ.

ಉಡುಪಿಗೆ ಸಚಿವ ಸ್ಥಾನ ? :

ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳಾದವರ ಅದೃಷ್ಟ ಚೆನ್ನಾಗಿದೆ ಎಂದರೆ ತಪ್ಪಾಗದು. ಸಂಸದರಾಗಿದ್ದವರು ಕೇಂದ್ರ ಸಚಿವರಾದರು, ಉಸ್ತುವಾರಿ ಸಚಿವರಾಗಿದ್ದವರು ಮುಖ್ಯಮಂತ್ರಿ ಯಾದರು. ಆದರೆ ಜಿಲ್ಲೆಯಲ್ಲಿರುವ ಐವರು ಶಾಸಕರ ಪೈಕಿ ಯಾರೊಬ್ಬರಿಗೂ ಸಚಿವ ಸ್ಥಾನ ಸಿಗಲಿಲ್ಲ ಎಂಬ ಕೊರಗು ಇದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಶಾಸಕರೊಬ್ಬರಿಗೂ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ ಎನ್ನುತ್ತವೆ ಪಕ್ಷದ ಮೂಲಗಳು.

 

-ಪುನೀತ್‌ ಸಾಲ್ಯಾನ್‌

 

ಟಾಪ್ ನ್ಯೂಸ್

ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರ ಆತ್ಮಹತ್ಯೆ: ತಡವಾಗಿ ಬೆಳಕಿಗೆ ಬಂದ ಘಟನೆ

ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರ ಆತ್ಮಹತ್ಯೆ: ತಡವಾಗಿ ಬೆಳಕಿಗೆ ಬಂದ ಘಟನೆ

ಟಿ20 ತಂಡದ ಉಪ ನಾಯಕತ್ವಕ್ಕೆ ಮೂವರ ರೇಸ್: ಕನ್ನಡಿಗನೂ ಪ್ರಬಲ ಆಕಾಂಕ್ಷಿ

ಟಿ20 ತಂಡದ ಉಪ ನಾಯಕತ್ವಕ್ಕೆ ಮೂವರ ರೇಸ್: ಕನ್ನಡಿಗನೂ ಪ್ರಬಲ ಆಕಾಂಕ್ಷಿ

ಇಂದು ಸಾಹಸ ಸಿಂಹ ವಿಷ್ಣುವರ್ಧನ್‌ ಹುಟ್ಟುಹಬ್ಬ

ಇಂದು ಸಾಹಸ ಸಿಂಹ ವಿಷ್ಣುವರ್ಧನ್‌ ಹುಟ್ಟುಹಬ್ಬ

rwytju11111111111

ಶನಿವಾರದ ರಾಶಿಫಲ : ಇಲ್ಲಿದೆ ನಿಮ್ಮ ಗ್ರಹಬಲ

2.50 ಕೋಟಿ ಡೋಸ್‌ ಸಾಧನೆ : ಮೋದಿ ಜನ್ಮದಿನ ದಾಖಲೆ ನಿರ್ಮಾಣ

2.50 ಕೋಟಿ ಡೋಸ್‌ ಸಾಧನೆ : ಮೋದಿ ಜನ್ಮದಿನ ದಾಖಲೆ ನಿರ್ಮಾಣ

nirmala-sitaraman

ತೈಲ ಬೆಲೆ ಸದ್ಯ ಇಳಿಯದು!  ಜೀವ ಉಳಿಸುವ ಔಷಧಗಳಿಗೆ ಜಿಎಸ್‌ಟಿ ಕಡಿತ

ಸರಕಾರದಿಂದ ಕಾರ್ಯಪಡೆ ರಚನೆ : ಶಾಲಾಹಂತದಿಂದಲೇ ಎನ್‌ಇಪಿ ಅನುಷ್ಠಾನ

ಸರಕಾರದಿಂದ ಕಾರ್ಯಪಡೆ ರಚನೆ : ಶಾಲಾಹಂತದಿಂದಲೇ ಎನ್‌ಇಪಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಂಪರ್ಕ ರಸ್ತೆಯಿಲ್ಲದೆ ಬಳ‌ಕೆಯಾಗದ ಸೇತುವೆ

ಸಂಪರ್ಕ ರಸ್ತೆಯಿಲ್ಲದೆ ಬಳ‌ಕೆಯಾಗದ ಸೇತುವೆ

ಪಾರಂಪರಿಕ ತಾಣ ಕಾಪು ಲೈಟ್‌ಹೌಸ್‌ಗೆ 120 ವರ್ಷ

ಪಾರಂಪರಿಕ ತಾಣ ಕಾಪು ಲೈಟ್‌ಹೌಸ್‌ಗೆ 120 ವರ್ಷ

ಭತ್ತ ಖರೀದಿ ಕೇಂದ್ರ ತೆರೆಯಲು ಸೂಚನೆ : ಉಡುಪಿಯಲ್ಲಿ ಸಚಿವೆ ಶೋಭಾ ಕರಂದ್ಲಾಜೆ

ಭತ್ತ ಖರೀದಿ ಕೇಂದ್ರ ತೆರೆಯಲು ಸೂಚನೆ : ಉಡುಪಿಯಲ್ಲಿ ಸಚಿವೆ ಶೋಭಾ ಕರಂದ್ಲಾಜೆ

ಹೊಂಡ ಗುಂಡಿಗಳದ್ದೇ ಕಾರುಬಾರು

ಹೊಂಡ ಗುಂಡಿಗಳದ್ದೇ ಕಾರುಬಾರು

Untitled-2

18ರ ಕೆಳಗಿನವರಿಗೆ 3 ಡೋಸ್‌ ಲಸಿಕೆ ನಿರೀಕ್ಷೆ 

MUST WATCH

udayavani youtube

ಆಡು ಸಾಕಾಣೆಯಿಂದ ಬದುಕು ಕಟ್ಟಿಕೊಂಡ ಪದವೀಧರೆ

udayavani youtube

ಆಟೋ ಚಾಲಕನಿಗೆ ಹುಡುಕಿ ಕಚ್ಚಿ ಗಾಯ ಮಾಡಿದ ಕೋತಿ

udayavani youtube

ಮದ್ಯ ಖರೀದಿಗೆ ಬರುವವರನ್ನು ಕೀಳಾಗಿ ಕಾಣದಿರಿ: ಹೈಕೋರ್ಟ್‌

udayavani youtube

ಸಿಸಿಟಿವಿಯಲ್ಲಿ‌ ಸೆರೆಯಾಯ್ತು ಭೀಕರ ಅಫಘಾತದ ದೃಶ್ಯ

udayavani youtube

ಹಿಮಾಲಯ ಮುಳುಗುತ್ತಾ ?

ಹೊಸ ಸೇರ್ಪಡೆ

ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರ ಆತ್ಮಹತ್ಯೆ: ತಡವಾಗಿ ಬೆಳಕಿಗೆ ಬಂದ ಘಟನೆ

ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರ ಆತ್ಮಹತ್ಯೆ: ತಡವಾಗಿ ಬೆಳಕಿಗೆ ಬಂದ ಘಟನೆ

ಟಿ20 ತಂಡದ ಉಪ ನಾಯಕತ್ವಕ್ಕೆ ಮೂವರ ರೇಸ್: ಕನ್ನಡಿಗನೂ ಪ್ರಬಲ ಆಕಾಂಕ್ಷಿ

ಟಿ20 ತಂಡದ ಉಪ ನಾಯಕತ್ವಕ್ಕೆ ಮೂವರ ರೇಸ್: ಕನ್ನಡಿಗನೂ ಪ್ರಬಲ ಆಕಾಂಕ್ಷಿ

ಇಂದು ಸಾಹಸ ಸಿಂಹ ವಿಷ್ಣುವರ್ಧನ್‌ ಹುಟ್ಟುಹಬ್ಬ

ಇಂದು ಸಾಹಸ ಸಿಂಹ ವಿಷ್ಣುವರ್ಧನ್‌ ಹುಟ್ಟುಹಬ್ಬ

rwytju11111111111

ಶನಿವಾರದ ರಾಶಿಫಲ : ಇಲ್ಲಿದೆ ನಿಮ್ಮ ಗ್ರಹಬಲ

2.50 ಕೋಟಿ ಡೋಸ್‌ ಸಾಧನೆ : ಮೋದಿ ಜನ್ಮದಿನ ದಾಖಲೆ ನಿರ್ಮಾಣ

2.50 ಕೋಟಿ ಡೋಸ್‌ ಸಾಧನೆ : ಮೋದಿ ಜನ್ಮದಿನ ದಾಖಲೆ ನಿರ್ಮಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.