ವಾಕ್‌ ವಿತ್‌ ಮಟನ್‌ ಚಾಪ್ಸ್‌ ಆದ್ರೂ ಸುಸ್ತಾಗೋದ್ರಾ ಹುಲಿಯಾ….


Team Udayavani, Jan 16, 2022, 8:13 AM IST

ವಾಕ್‌ ವಿತ್‌ ಮಟನ್‌ ಚಾಪ್ಸ್‌ ಆದ್ರೂ ಸುಸ್ತಾಗೋದ್ರಾ ಹುಲಿಯಾ….

ಅಮಾಸೆ: ನಮ್‌ಸ್ಕಾರ ಸಾ….

ಚೇರ್ಮನ್ರು: ಏನ್ಲಾ ಅಮಾಸೆ ಆಳೆ ಕಾಣೆ

ಅಮಾಸೆ: ಸಿವ್‌ ಕುಮಾರ್‌ ಅಣ್ಣೋರ್‌ ಜತ್ಗೆ ವಾಕಿಂಗ್‌ ಮಾಡೂಮಾ ಅಂತಾ ಒಂಟೋಗಿದ್ನಿ ಸಾ…

ಚೇರ್ಮನ್ರು: ಅದ್ಯಾಕ್ಲಾ ಕೊರೊನಾ ಅಮರ್‌ ಕೊಂಡಿರೋ ಟೇಂನಾಗೆ ಇವ್ರ್ ಇವೆಲ್ಲಾ ಇಟ್‌ ಕೊಂಡ್ರು

ಅಮಾಸೆ: ಸಿವ್‌ ಕುಮಾರಣ್ಣೋರ್‌ ಒಂದಪಾ ಕಮಿಟ್‌ ಆದ್ರೆ ನನ್‌ ಮಾತ್‌ ನಾನೇ ಕೇಳಾಕಿಲ್ಲಾ ಅಂತಾ ಹೊಡೀರಿ ಹಲಗಿ, ನಡೀರಿ ನೋಡೋಬಿಡೋವಾ ಅಂತಾ ಫ‌ರ್ಮಾನ್‌ ಕೊಟ್‌ಬಿಟ್ರಂತೆ. ಅದ್ಕೆ ಸಿದ್ರಾಮಣ್ಣೋರು ಆಯ್ತು ನಡಿಯಪ್ಪಾ ಅಂತಾ ಸುಮ್ಕಾದ್ರಂತೆ

ಚೇರ್ಮನ್ರು: ಎಲ್ಡ್‌ ಕಿತಾ ಸಿದ್ರಾಮಣ್ಣೋರು ನನ್‌ ಕೈಲಿ ಆಗಾಕಿಲ್ಲಾ ಅಂತಾ ವಾಪಿಸ್‌ ಬಂದ್ರಂತೆ ಹೌದೇನ್ಲಾ

ಅಮಾಸೆ: ಹೌದೇಳಿ, ಮೊದ್ಲನೇ ಕಿತಾ ಸಂಗ್ಮ ಬುಟ್ಟು ವಸಿ ದೂರು ಬಂದೇಟ್ಗೆ ಸಿವ್‌ಕುಮಾರ್‌ ಯಾಕೋ ಚಳ್‌ ಚಳಿಯಾಯ್ತದೆ ಕಣಪ್ಪಾ ಅಂದ್ರು. ಅದ್ಕೆ ವಸಿ ರೆಸ್ಟ್‌ ತಕ್ಕಳಿ ಆಮ್ಯಾಕೆ ಹೋಗುಮಾ ಅಂತಾ ಸಿವ್‌ ಕುಮಾರ್‌ ಹೇಳಿದ್ರು, ಬ್ಯಾಡಾ ಇವತ್‌ ಹೋಗ್‌ಬುಟ್ಟು ನಾಳೀಕ್‌ ಬತ್ತೀನಿ ಅಂತೇಳಿ ಹಟ್ಟಿಕಡೀಗ್‌ ಹೊಂಟ್ರಾ

ಚೇರ್ಮನ್ರು: ಇನ್ನೊಂದಪಾ ಯಾಕ್ಲಾ ಹೋದ್ರು

ಅಮಾಸೆ: ಎಲ್ಡನೇ ಕಿತಾ ಬಂದ್‌ಬುಟ್ಟು ಟು ಡೇಸ್‌ ಜೋಸ್‌ನಾಗೆ ಸ್ಟೆಪ್‌ ಹಾಕಿದ್ರು ಆಮ್ಯಾಕೆ ಬ್ಯಾಕ್‌ಪೈನ್‌ ಸುರುವಾಗೈತೆ ವಸಿ ರೆಸ್ಟ್‌ ತಗಾತೀನಿ, ವತ್ತಾರೇನೆ ಬಂದು ಜಾಯಿನ್‌ ಆಯ್ತಿàನಪ್ಪಾ ಅಂತಾ ರೈಯ ರೈಯ..

ಚೇರ್ಮನ್ರು: ಬೆಂಗ್ಳೂರ್‌ಗಂಟಾ ನಿಲ್ಲಂಗಿಲ್ಲಾ ಅಂತಿದ್ರು ಅದ್ಯಾಕ್ಲಾ ಅನಿತಕ್ಕೋರ್‌ ರಾಮ್‌ನಗ್ರದಾಗೆ ಇಸ್ಟಾಪ್‌ ಮಾಡ್‌ಬುಟ್ರಾ

ಅಮಾಸೆ: ಹೈಕೋಲ್ಟಾ ಫ‌ುಲ್‌ ರಾಂಗ್‌ ಆಗೋಯ್ತು. ಗೌರ್ನ್ ಮೆಂಟ್‌ ಏನ್‌ ಮಾಡ್ತಾಯ್ತೆ, ಕೈ ಪಾಲ್ಟಿನೋರ್ಗೆ ಜನ್ರ ಹೆಲ್ತ್‌ ಬೇಕಿಲ್ವಾ ಅಂತಾ ಆವಾಜ್‌ ಹಾಕ್ತು. ಅದ್ಕೆ ಬುದ್ವಂತ ಬಸಣ್ಣೋರು ಯಾರೂ ಎಲ್ಲೂ ನಡೆಯಂಗಿಲ್ಲ, ಎಲ್ಲಾ ಬಂದ್‌ ಅಂತಾ ಆರ್ಡರ್‌ ಮಾಡ್ರು. ಅದ್ಕೆ ಇವಾಗ್‌ ಇಸ್ಟಾಪ್‌ ಮಾಡ್ತೀವಿ, ಕೊರೊನಾ ಹೋದ್‌ಮ್ಯಾಕೆ ಇಲ್ಲಿಂದ್ಲೆ ಸ್ಟಾರ್ಟ್‌ ಮಾಡ್ತೀವಿ ಅಂತಾ ಸಿವ್‌ಕುಮಾರಣ್ಣೋರು, ಸಿದ್ರಾಮಣ್ಣೋರು ಅನೌನ್ಸ್‌ ಮಾಡಿದ್ರು.

ಚೇರ್ಮನ್ರು: ಬುದ್ವಂತ ಬಸಣ್ಣೋರು ಯಾಕ್ಲಾ ಮೊದ್ಲೆ ಸ್ಟಾಪ್‌ ಮಾಡ್ಲಿಲ್ಲಾ

ಅಮಾಸೆ: ಸ್ಟಾಪ್‌ ಮಾಡಿದ್ರೆ ಕೈ ಪಾಲ್ಟಿಗೆ ಅಡ್ವಾಂಟೇಜ್‌ ಆಯ್ತದೆ ಅಂತಾ ಸುಮ್ಕಿದ್ರಂತೆ. ಬಸಣ್ಣೋರು ಬೇಕಂತ್ಲೇ ಬುಟ್‌ಬುಟ್ಟವ್ರೆ ಅಂತಾ ಆ್ಯಂಟಿ ಗ್ಯಾಂಗ್‌ ಪುಕಾರ್‌ ಎಬ್ಸಿದ್ರಂತೆ. ಅದ್ಕೆ ಮೇಲ್ನೋರು, ಯೇ ಕ್ಯಾ ಚಲ್‌ ರಹಾ ಹೈ ನಾಟಕ್‌ ಬಂದ್‌ ಕರಾದೋ ಅಂತಾ ಆವಾಜ್‌ ಹಾಕಿದ್ರಂತೆ. ಇತ್ಲಾಗೆ ಸೀನಿಯರ್ ರಾಂಗ್‌ ಆದ್ಮೇಕೆ, ಆಯ್ತು ಅಂತಾ ಆರ್ಡರ್‌ ಮಾಡ್ಸಿದ್ರಂತೆ.

ಚೇರ್ಮನ್ರು: ಕುಮಾರಣ್ಣೋರು ಯಾಕ್ಲಾ ಸಿವ್‌ಕುಮಾರ್‌ ಬುಟ್ಟು ಬುಟ್ಟು ಸಿದ್ರಾಮಣ್ಣೋರ್ಗೆ ತಗ್ಲಾಕ್ಕಂಡಿದ್ರು

ಅಮಾಸೆ: ಸಿವ್‌ಕುಮಾರ್‌ ಎಷ್ಟಾದ್ರೂ ಬ್ರದರ್‌ ಅಲ್ವೇ, ಅದ್ಕೆ ಸಿದ್ರಾಮಣ್ಣೋರ್ಗೆ ಅಟಕಾಯ್ಸಕೊಂಡ್ರು. ಸುಳ್ಳೇ ನಿಮ್‌ ಮನ್‌ದ್ಯಾವ್ರು ಪುಂಗೋಕ್‌ ಹೋಗ್‌ ಬ್ಯಾಡಿ ಅಂತಾನೂ ಟ್ವೀಟ್‌ ವಾರ್‌ ಮಾಡಿದ್ರು.

ಚೇರ್ಮನ್ರು: ರೇವಣ್ಣೋರು ಯಾಕ್ಲಾ ಸೈಲಂಟಾಗವ್ರೆ

ಅಮಾಸೆ: ವಾಲೆ ಮಂಜಣ್ಣೋರು ಸಿದ್ರಾ ಮಣ್ಣೋರ್ಗೆ ಕ್ಲೋಸ್‌ ಆಗ್ತಾವ್ರೆ, ಇದ್ರಿಂದಾ ಲವ್ಲಿ ಸನ್‌ ಪ್ರಜ್ವಲ್‌ ಫ್ಯೂಚರ್‌ ಗೇನಾದ್ರೂ ಪ್ರಾಬ್ಲಿಮ್ಮು ಐತಾ ಅಂತಾ ಜೋಯಿಸ್ರು ತಾವಾ ಹೋಗಿದ್ರಂತೆ. ಏಕಾದಸಿ ಆದ್ಮೇಕೆ ನಿಂಬೆಹಣ್‌ ತಕ್ಕಂಡ್‌ ಬನ್ನಿ ವಸಿ ಅಂಜ್ನಾ ಹಾಕ್‌ ನೋಡುಮಾ ಅಂತಾ ಹೇಳವ್ರಂತೆ. ಅದ್ಕೆ ಅವ್ರು ಸೈಲಂಡ್‌ ಮೋಡ್‌ನಾಗೇ ಅವ್ರಂತೆ

ಚೇರ್ಮನ್ರು: ಯಡ್ನೂರಪ್ನೊàರು ಏನ್ಮಾಡ್ತಾವ್ರೆ

ಅಮಾಸೆ: ಅವ್ರು ಸ್ಮಾಲ್‌ ಸನ್‌ ವಿಜಯೇಂದ್ರ ಬಾಹುಬಲಿ ಮಿನಿಸ್ಟ್ರೆ ಆಗೋಗಂಟಾ ನೋ ಕಾಮೆಂಟ್ಸ್‌ ಪಾರ್‌ ಯುವರ್‌ ಕಾಮೆಂಟ್ಸ್‌ ಅಂತಾ ಹೇಳವ್ರಂತೆ. ಶೆಟ್ರಾ ಸಾಹೇಬ್ರು ಐದಾರ್‌ ದಪಾ ಮೀಟ್‌ ಮಾಡ್ಕಂಡು

ಹೋಗವ್ರಂತೆ. ಏನೋ ಆಯ್ತದೆ ನೋಡ್ತಿರಿ ಅಂತಾ ಪಸರ್‌ ಐತೆ ನೋಡುಮಾ. ನನ್‌ ಹೆಂಡ್ರು ಬಂಗ್ಡೆ ಮೀನ್‌ ತತ್ತಾ ಅಂತಾ ಹೇಳವ್ರೆ, ಬತ್ತೀನಿ ಸಾ….

 ಎಸ್‌.ಲಕ್ಷ್ಮಿನಾರಾಯಣ

 

ಟಾಪ್ ನ್ಯೂಸ್

7gopalayya

ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಶೀಘ್ರ ಪರಿಹಾರ: ಸಚಿವ ಕೆ.ಗೋಪಾಲಯ್ಯ

Untitled-1

ವೇಣೂರು: ಮರಬಿದ್ದು ಅರ್ಧ ತಾಸು ಹೆದ್ದಾರಿ ಬಂದ್!

6death

ವಿಟ್ಲ: ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿನಿ ಸಾವು

5DKShi

ಚುನಾವಣಾ ಆಯೋಗದ ಅಧಿಕಾರ ಕಸಿದುಕೊಂಡ ರಾಜ್ಯ ಸರ್ಕಾರ: ಡಿಕೆ ಶಿವಕುಮಾರ್

vittla-1

ವಿಟ್ಲ: ರಸ್ತೆಗೆ ಬಿದ್ದ ವಿದ್ಯುತ್ ಕಂಬ: ಸಂಚಾರ ಅಸ್ತವ್ಯಸ್ತ

4horatti

ಬೊಮ್ಮಾಯಿ ನಿವಾಸದಲ್ಲಿ ಬಿಜೆಪಿಗೆ ಸೇರ್ಪಡೆಯಾದ ಬಸವರಾಜ ಹೊರಟ್ಟಿ

3accident

ಕೊಪ್ಪಲಂಗಡಿ: ಚರಂಡಿಗೆ ಉರುಳಿದ ಪಿಕಪ್; ಇಬ್ಬರಿಗೆ ಗಾಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vijayendra

ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದ ವಿಜಯೇಂದ್ರ ಹೆಸರು; ವರಿಷ್ಠರತ್ತ ಎಲ್ಲರ ಚಿತ್ತ

ಏನ್ಲಾ ಅಮಾಸೆ.., ಸನ್‌ ಆಫ್ ರಾಜಾಹುಲಿ ಕ್ಯಾಬಿನೆಟ್‌ ಎಂಟ್ರಿ ಆಯ್ತಾರಾ….

ಏನ್ಲಾ ಅಮಾಸೆ.., ಸನ್‌ ಆಫ್ ರಾಜಾಹುಲಿ ಕ್ಯಾಬಿನೆಟ್‌ ಎಂಟ್ರಿ ಆಯ್ತಾರಾ….

1-as–asdsd

ಜನರನ್ನು ಧಾರ್ಮಿಕ ಮಟ್ಟದಲ್ಲಿ ವಿಭಜಿಸುವಲ್ಲಿ ಬಿಜೆಪಿ ವಿಫಲವಾಗಿದೆ : ಪಾಲೇಕರ್

1-dffdsfsf

ಬಿಜೆಪಿ ಚುನಾವಣಾ ರಣತಂತ್ರ: ತ್ರಿಪುರಾ ಸಿಎಂ ಬಿಪ್ಲಬ್ ದೇಬ್ ರಾಜೀನಾಮೆ

1-asdsasad

ಜನತಾ ಜಲಧಾರೆ ಸಮಾರೋಪ: ಜೆಡಿಎಸ್ ಶಾಸಕ ಶ್ರೀನಿವಾಸ್ ಗೈರು

MUST WATCH

udayavani youtube

ಹುಣಸೂರಿನಲ್ಲಿ ಭಾರೀ ಮಳೆಗೆ ಮನೆಗಳು ಜಲಾವೃತ

udayavani youtube

SSLC ನಂತ್ರ ನಿಮಗಿದೆ ಭರಪೂರ ಅವಕಾಶ !!

udayavani youtube

ಕಾರಿಂಜೇಶ್ವರ ದೇವಸ್ಥಾನದ ಬಳಿ ಬೃಹತ್ ಬಂಡೆಕಲ್ಲು ಕುಸಿತ

udayavani youtube

ವಿಧಾನಪರಿಷತ್ ಹಂಗಾಮಿ ಸಭಾಪತಿಯಾಗಿ ರಘುನಾಥ್ ಮಲ್ಕಾಪುರೆ ನೇಮಕ

udayavani youtube

ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!

ಹೊಸ ಸೇರ್ಪಡೆ

7gopalayya

ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಶೀಘ್ರ ಪರಿಹಾರ: ಸಚಿವ ಕೆ.ಗೋಪಾಲಯ್ಯ

nere

ಮೊದಲ ಮಳೆಗೆ ಕೆಂಚನಕೆರೆಯಲ್ಲಿ ಕೃತಕ ನೆರೆ

Untitled-1

ವೇಣೂರು: ಮರಬಿದ್ದು ಅರ್ಧ ತಾಸು ಹೆದ್ದಾರಿ ಬಂದ್!

heavy-rain

ಭಾರೀ ಗಾಳಿ-ಮಳೆ: ಲಕ್ಷಾಂತರ ರೂ. ನಷ್ಟ

6death

ವಿಟ್ಲ: ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿನಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.