QR ಕೋಡ್ ಬಗ್ಗೆ ನಿಮಗೆಷ್ಟು ಗೊತ್ತು ? ಅದನ್ನು ಹೇಗೆ ವಿನ್ಯಾಸಗೊಳಿಸಲಾಗಿದೆ …
ಅವು ಒದಗಿಸಿದ ನಿಖರತೆ ಮತ್ತು ಅವುಗಳ ಬಹು ಕ್ರಿಯಾತ್ಮಕತೆಯಿಂದಾಗಿ ಬಾರ್ಕೋಡ್ಗಳು ಬಹಳ ಜನಪ್ರಿಯವಾದವು.
Team Udayavani
ಕೆಳಗಿನ ಚಿತ್ರದಲ್ಲಿ ನೀವು ಕ್ಯೂಆರ್ ಕೋಡ್ ಸ್ವರೂಪವನ್ನು ಗಮನಿಸಬಹುದು. QR ಕೋಡ್ನಲ್ಲಿನ 3 ದೊಡ್ಡ ಬ್ಲಾಕ್ ಗಳು ಸಮಜೋಡಣೆಯನ್ನು ಸೂಚಿಸುತ್ತದೆ, ಇದರಿಂದ ಕೋಡ್ ಅನ್ನು ವಿಭಿನ್ನ ಕೋನಗಳೊಂದಿಗೆ ಸ್ಕ್ಯಾನ್ ಮಾಡಬಹುದು. ಚಿತ್ರದಲ್ಲಿ ನೀವು ನೋಡಬಹುದಾದ ಹಸಿರು ಪ್ರದೇಶವು ಯಾವಾಗಲೂ ಖಾಲಿ ಜಾಗವಾಗಿರುತ್ತದೆ. ಕೆಂಪು ಬಣ್ಣದ ಪ್ರದೇಶವು ದೋಷ ತಿದ್ದುಪಡಿ (Error Correctio) ಮಟ್ಟವಾಗಿದೆ, ಇದು QR ಕೋಡ್ ಹಾನಿಗೊಳಗಾಗಿದ್ದರೆ ಅಥವಾ QR ಕೋಡ್ನ ಒಂದು ಸಣ್ಣ ಭಾಗ ಕಳೆದುಹೋದರೆ ಡೇಟಾವನ್ನು ಮರುಪಡೆಯಲು ಸಹಾಯ ಮಾಡುತ್ತದೆ.