Yearly Horoscope: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ

ರಾಜ್ಯದಲ್ಲೇನಾಗುತ್ತದೆ?

Team Udayavani, Jan 1, 2024, 9:49 AM IST

2–yearly-horoscope

ಲಗ್ನಾಧಿಪತಿಯಾದ ಶುಕ್ರನು ರೋಗಸ್ಥಾನ ಸ್ಥಿತ ಕಾರಣ ವರ್ಷದ ಪ್ರಾರಂಭದಲ್ಲಿ ದೇಶದ ನಾಗರಿಕರಿಗೆ ರೋಗಬಾಧೆ ಕಂಡುಬಂದರೂ ಅನಂತರದಲ್ಲಿ ಶೀಘ್ರ ಶಮನವಾಗುವುದು. ಬಾಧಕಾಧಿಪತಿಯಾದ ಶನಿ ಗ್ರಹ ತನ್ನ ಮೂಲ ತ್ರಿಕೋನದಲ್ಲಿ ಬಲಯುತನಾಗಿರುವ ಕಾರಣ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಉಂಟಾಗಿ, ಜನರಿಗೆ ಆರ್ಥಿಕ ನಷ್ಟ ತಲೆದೋರುವ ಸಾಧ್ಯತೆ ಇದೆ. ಪಾಶ್ಚಾತ್ಯ ದೇಶಗಳಿಂದ ನೆರವು ದೊರೆಯಲಿದೆ.

ಲಾಭದ ರಾಹುಗ್ರಹವಿನಿಂದಾಗಿ ರಫ್ತು ಮತ್ತು ಆಮದು ವ್ಯಾಪಾರದಲ್ಲಿ ಏಳಿಗೆ ಉಂಟಾಗಲಿದೆ. ಭಾರತದ ಶತ್ರು ರಾಷ್ಟ್ರಗಳಿಗೆ ಮಧ್ಯಪ್ರಾಚ್ಯ ರಾಷ್ಟ್ರಗಳ ಬೆಂಬಲ ಸಿಕ್ಕಿ ಭಾರತದ ಮೇಲೆ ಹಗೆ ಸಾಧಿಸುವ ಸೂಚನೆ ಇರುವುದು. ದೇಶದ ಗುಪ್ತಚರ ಇಲಾಖೆಗಳ ಕಾರ್ಯವೈಖರಿಯಲ್ಲಿ ಯಶಸ್ಸು, ಹೆಚ್ಚು ಮಾಹಿತಿ ಸಂಗ್ರಹ ಮತ್ತು ಬಹು ವರ್ಷಗಳ ಅಪರಾಧಿ ಕೃತ್ಯಕ್ಕೆ ಬೇಕಾದ ವ್ಯಕ್ತಿಗಳ ಮಾಹಿತಿ ಹಾಗೂ ಸಾಕ್ಷಿ ಸಂಗ್ರಹದಲ್ಲಿ ಮುನ್ನಡೆ ದೊರೆಯಲಿದೆ.

ಜಲರಾಶಿಯಲ್ಲಿ ಶತ್ರು ಸ್ಥಾನಾಧಿಪತಿ ಕುಜ ಇರುವುದರಿಂದ ಜಲಮಾರ್ಗಗಳಿಂದ ಶತ್ರು ಬಾಧೆ ಎದುರಾಗುವ ಸಾಧ್ಯತೆ ಇದೆ. ದೇಶದ ಶಸ್ತ್ರಾಗಾರಕ್ಕೆ ಹೊಸ ಆಯುಧಗಳ ಪರಿಚಯ, ಅದರಲ್ಲೂ ಜಲಾಂತರ್ಗಾಮಿ ನೌಕೆಗಳಿಗೆ ಬಳಸುವಂತಹ ಕ್ಷಿಪಣಿಗಳ ಆವಿಷ್ಕಾರಗಳಲ್ಲಿ ಪಾಶ್ಚಾತ್ಯ ದೇಶಗಳಿಂದ ಬೆಂಬಲ ದೊರೆಯಲಿದೆ ಹಾಗೂ ಪಾಲುದಾರಿಕೆಯಲ್ಲಿ ಭಾರತದ ಯಶಸ್ಸು ಕಂಡು ಬರುವುದು. ಭಾರತದ ಫಾರ್ಮಸಿ ಕಂಪೆನಿಗಳಿಗೆ ಹೆಚ್ಚಿನ ಲಾಭ.

ಬಾಹ್ಯಾಕಾಶ ಸಂಸ್ಥೆಗಳಿಂದ ಅನ್ಯಗ್ರಹದ ಸಂಶೋಧನೆಗೆ ಸಂಬಂಧಪಟ್ಟಂತೆ ಅಪರೂಪದ ಮಾಹಿತಿ ಹಾಗೂ ಉಪಗ್ರಹ ಉಡಾವಣೆಯಲ್ಲಿ ಮೈಲಿಗಲ್ಲು ಸಾಧನೆಯಾಗಲಿದೆ. ಭಾರತ ಮತ್ತು ಇಸ್ರೇಲ್‌ ದೇಶಗಳ ಸಂಬಂಧದಲ್ಲಿ ಕೊಂಚ ಬಿರುಕು ಕಾಣುವ ಸಾಧ್ಯತೆ ಈ ವರ್ಷ ಕಂಡು ಬರುವುದು.

ಈ ವರ್ಷ ಲೋಕಸಭಾ ಚುನಾವಣೆ ನಡೆಯುವುದರಿಂದ ಸಹಜವಾಗಿಯೇ ಹಲವು ಬದಲಾವಣೆಗಳು ನಿರೀಕ್ಷಿತ. ಪ್ರಧಾನಿ ನರೇಂದ್ರ ಮೋದಿ ಅವರ ಜಾತಕದ ಬುಧಭುಕ್ತಿಯಲ್ಲಿ ರಾಜಯೋಗದ ಸೂಚನೆ ಕಾಣಿಸುತ್ತಿರುವುದು ಹಾಗೂ ಎಪ್ರಿಲ್‌ ಅನಂತರದಲ್ಲಿನ ಗುರುಬಲ ಯಶಸ್ಸಿನ ಸೂಚನೆ ಎಂದೇ ಹೇಳಬಹುದು.”ಇಂಡಿಯಾ’ ಸಂಘಟಿತ ಪಕ್ಷಗಳು ಚುನಾವಣೆ ಅನಂತರದಲ್ಲಿ ಪರಸ್ಪರ ಮತ್ತೂಂದು ಹೋರಾಟಕ್ಕೆ ಸಜ್ಜಾಗುವ ಸಾಧ್ಯತೆ ಇದೆ.

ಆರ್ಥಿಕ ಸ್ಥಿತಿ

ದೇಶದ ಸಾಫ್ಟ್ವೇರ್‌ ಉದ್ಯಮದಲ್ಲಿ ಅತ್ಯಲ್ಪ ಆರ್ಥಿಕ ಅಭಿವೃದ್ಧಿಯನ್ನು ನಿರೀಕ್ಷಿಸಬಹುದು. ಆದರೆ ಉದ್ಯೋಗಿಗಳಲ್ಲಿ ಆತಂಕ ಈ ವರ್ಷವೂ ಮುಂದುವರಿಯಲಿದೆ. ಮೇ ತಿಂಗಳಲ್ಲಿ ಬರುವ ಗುರು ಬಲದ ಕರ್ಕಾಟಕ ರಾಶಿಯು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮೊದಲನೇ ತ್ತೈಮಾಸಿಕದ ಅನಂತರ ಭಾರತವು ಹೆಚ್ಚು ಸಾಧನೆ ತೋರಲಿದೆ. ಆರ್ಥಿಕ ನೀತಿಯಲ್ಲಿ ಮಹತ್ತರ ಬದಲಾವಣೆ ಆಗುವುದರಿಂದ ವಾಣಿಜ್ಯ ವ್ಯವಹಾರ ಕುದುರಲಿದ್ದು, ಜನರಿಗೆ ಹೆಚ್ಚಿನ ಅನುಕೂಲ ಉಂಟಾಗಲಿದೆ. ನ್ಯಾಯಾಂಗದ ಕಾರ್ಯವೈಖರಿಯಲ್ಲಿ ಮತ್ತಷ್ಟು ಬದಲಾವಣೆಯನ್ನು ನಿರೀಕ್ಷಿಸಬಹುದಾಗಿದೆ.

ಈ ವರ್ಷದ ಕಾಲಮಾನದಲ್ಲಿ ಕೈ ತಪ್ಪಿ ಹೋಗಿದ್ದ ಎಷ್ಟೋ ಹಲವು ಪುರಾತನ ದೇವಾಲಯಗಳಲ್ಲಿ ಪುನರ್‌ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾಗುವ ಸಾಧ್ಯತೆ ಇದೆ. ಈ ವರ್ಷದ ಕ್ರೀಡೆಯಲ್ಲಿ ಕ್ರೀಡಾಪಟುಗಳ ಉನ್ನತ ಸಾಧನೆ ಖಚಿತ. ಪಂಜಾಬ್‌, ರಾಜಸ್ಥಾನ ರಾಜ್ಯಗಳಲ್ಲಿ ಕೋಮುವಾದ, ಅಫೀಮು, ಗಾಂಜಾದಂತಹ ನಿರ್ಬಂಧಿತ ವಸ್ತುಗಳ ಸಂಬಂಧಿಸಿದಂತೆ ಬಹುದೊಡ್ಡ ಜಾಲವನ್ನು ಭೇದಿಸಿದ ವಿಚಾರ ಈ ವರ್ಷದ ಪ್ರಮುಖ ಸುದ್ದಿಯಾಗಬಹುದು.

ರಾಜ್ಯದಲ್ಲೇನಾಗುತ್ತದೆ?

ಇನ್ನು ರಾಜ್ಯದ ವಿಚಾರಕ್ಕೆ ಬಂದರೆ ಎಪ್ರಿಲ್‌ ಅನಂತರ ಹಣಕಾಸಿನ ಅವ್ಯವಹಾರಗಳು ಬೆಳಕಿಗೆ ಬರುವ ಸಾಧ್ಯತೆ. ಭಾಗ್ಯಾಧಿಪತಿ ಶನಿ ರಾಜ್ಯದ ರೈತರಿಗೆ ಸಿಹಿ ಸುದ್ದಿ ನೀಡುತ್ತಾನೆ. ಮತ್ತಷ್ಟು ಭೂ ಹಗರಣಗಳು ಹೆಚ್ಚಾಗಿ, ಭೂ ಸಂಬಂಧ ಇಲಾಖೆಗಳಲ್ಲಿ ಅವ್ಯವಹಾರ ಬಹಿರಂಗವಾಗುವ ಸಾಧ್ಯತೆ ಇದೆ. ರಾಜಕಾರಣಿಗಳಿಗೆ ಮಿತ್ರರೇ ಶತ್ರುವಾಗುವ ಸಮಯ.

ರಾಜನಿಗೆ ರೋಗ ಭಯ, ಮಕ್ಕಳಿಂದ ಅವಮಾನ, ಮಹಿಳಾ ರಾಜಕಾರಣಿಗಳಿಗೆ ವಿರೋಧ ಮತ್ತು ಶತ್ರು ಕಾಟ ಉಂಟಾಗಬಹುದು. ಇದೇ ಸಂದರ್ಭದಲ್ಲಿ ರಾಜ್ಯದ ಕೈಗಾರಿಕ ವಲಯದಲ್ಲಿ ಹಿನ್ನಡೆ ಉಂಟಾಗಲಿದೆ.

ದ್ವಾದಶ ರಾಶಿಗಳ ಫ‌ಲಾಫ‌ಲ

ಮೇಷ:

ವರ್ಷದ ಆರಂಭದಿಂದ ಎಪ್ರಿಲ್‌ ಕೊನೆಯವರೆಗೂ ಗುರುಬಲ ಇಲ್ಲದ ಕಾರಣ ಆರೋಗ್ಯದ ಬಗ್ಗೆ ಕಾಳಜಿ, ಎಚ್ಚರಿಕೆ ಅಗತ್ಯ. ಯುಗಾದಿ ಹಬ್ಬದ ಅನಂತರ ಗುರುಬಲ ಇರುವ ಕಾರಣ ಕುಟುಂಬದಲ್ಲಿ ಕ್ಷೇಮ ವುಂಟಾಗುತ್ತದೆ. ಮೇಷ ರಾಶಿಯ ಅಧಿಪತಿಯಾದ ಕುಜನ ಮಿತ್ರ ರಾಶಿ-ಮಿತ್ರ ಗ್ರಹ ಯುತಿ ಇರುವ ಕಾರಣ ದೇಹದಲ್ಲಿ ಶಕ್ತಿ ಹಾಗೂ ಚೈತನ್ಯ ಹೆಚ್ಚುವುದು. ಧನಾಧಿಪತಿ ಶುಕ್ರನ ದೃಷ್ಟಿಯ ಕಾರಣ ಆರ್ಥಿಕ ಲಾಭ ಇರುವುದು. ಪಂಚಮಾಧಿಪತಿ ರವಿ ಭಾಗ್ಯ ಸ್ಥಿತ ಕಾರಣ ಮಕ್ಕಳಿಂದ ಸಂತೃಪ್ತಿ. ವ್ಯಯಸ್ಥಾನದ ರಾಹು ಗ್ರಹದ ನೆರವಿನಿಂದ ಹೊರದೇಶ ಪ್ರಯಾಣದಲ್ಲಿ ಸುಖ, ಅದರಲ್ಲೂ ಹೊರದೇಶಕ್ಕೆ ಹೋಗುವ ವಿದ್ಯಾರ್ಥಿಗಳಿಗೆ ಉನ್ನತಾವಕಾಶ ಲಭ್ಯವಾಗುತ್ತದೆ. ಬಾಧಕಾಧಿಪತಿ ಶನಿ ಲಗ್ನದ ಮೇಲೆ ದೃಷ್ಟಿ ಇರುವ ಕಾರಣ, ದೇಹದಲ್ಲಿ ದೈಹಿಕ ಆಲಸ್ಯ, ವಾಯು ಪ್ರಕೃತಿಯ ಗುಣ. ದಶಮಾಧಿಪತಿ ಶನಿ ಗ್ರಹ ಲಾಭಸ್ಥಾನ ಸ್ಥಿತನಾಗುವ ಕಾರಣ ವೃತ್ತಿ ಜೀವನದಲ್ಲಿ ಶ್ರಮ, ನಿದ್ರಾಹೀನತೆ ಉಂಟಾಗುವ ಸಾಧ್ಯತೆಯಿದೆ. ಆರನೇ ಮನೆಯಲ್ಲಿ ಕೇತು ಶತ್ರುಗಳನ್ನು ಪರಾಭವಗೊಳಿಸುವನು. ಲಕ್ಷ್ಮೀ ನರಸಿಂಹರ ಆರಾಧನೆ ಅಗತ್ಯ.

ಶುಭವರ್ಣ-ಕೆಂಪು, ಕೇಸರಿ, ಹಳದಿ

ಶುಭಸಂಖ್ಯೆ-1, 9, 3

ಶುಭ ದಿಕ್ಕು-ಪೂರ್ವ

ವೃಷಭ:

ದೈಹಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯವಿದೆ. ರಾಷ್ಟ್ರೀಯ ಅಧಿಪತಿಯಾದ ಶುಕ್ರನು ಮಿತ್ರ ಬೋಧನ ಜತೆ ಸೇರಿ ಲಕ್ಷ್ಮೀ ನಾರಾಯಣ ಯೋಗವನ್ನು ನೀಡುವುದರಿಂದ, ದಾಂಪತ್ಯದಲ್ಲಿ ಸುಖ, ಅವಿವಾಹಿತರಿಗೆ ವಿವಾಹಯೋಗ ಉಂಟಾ ಗುತ್ತದೆ. ಮಕ್ಕಳ ವಿಷಯದಲ್ಲಿ ಆತಂಕವಿದೆ, ಅವರ ಚಟುವಟಿಕೆಗಳನ್ನು ಗಮನಿಸುವುದು ಮುಖ್ಯ. ಭೂಮಿ ಕ್ರಯವಿಕ್ರಯದಲ್ಲಿ ಸೋಲಾಗುವ ಸಾಧ್ಯತೆಯಿದೆ. ಎಚ್ಚರಿಕೆಯಿಂದ ವ್ಯವಹರಿಸುವುದು ಉತ್ತಮ. ಸಾಧ್ಯವಾದಷ್ಟು ಈ ವರ್ಷ ಭೂವ್ಯವಹಾರ ದಿಂದ ದೂರ ಉಳಿಯುವುದು ಒಳಿತು. ವಾಹನ ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಧನಸ್ಥಾನಾಧಿಪತಿ ಬುಧನ ದೃಷ್ಟಿಯಿಂದ ವೈವಾಹಿಕ ಸಂಗಾತಿಗಳಿಗೆ ಧನಲಾಭ, ಇದರಿಂದ ನೀವು ಆರ್ಥಿಕ ಮುಗ್ಗಟ್ಟಿ ನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಅಪರಿಚಿತರಿಂದ ಧನ ಲಾಭ ಒದಗಿಬರುವ ಸಾಧ್ಯತೆಯಿದೆ. ಬೆನ್ನು ನೋವು ಕಾಡಬಹುದು. ದಶಮ ಶನಿಯು ತನ್ನ ತ್ರಿಕೋನ ಸ್ಥಾನದಲ್ಲಿ ಇರುವ ಕಾರಣ ವೃತ್ತಿ ಜೀವನದಲ್ಲಿ ಹೆಚ್ಚಿನ ಶ್ರಮ ವಹಿಸಬೇ ಕಾಗುತ್ತದೆ. ಗುರು ಪಾದುಕಾ ಪೂಜೆ ಅಗತ್ಯ.

ಶುಭವರ್ಣ-ಬಿಳಿ, ಹಸುರು

ಶುಭಸಂಖ್ಯೆ- 6, 5, 7

ಶುಭ ದಿಕ್ಕು-ದಕ್ಷಿಣ

ಮಿಥುನ:

ವರ್ಷಾರಂಭದಲ್ಲಿ ಸುಖ, ಅನಂತರ ಸಪ್ತಮಾಧಿ ಪತಿ ಗುರು ಜಯ ಸ್ಥಾನಕ್ಕೆ ಬರುವ ಪರಿಸ್ಥಿತಿ ತ್ರಾಸದಾಯಕವಾಗುತ್ತದೆ. ಪತಿಪತ್ನಿಯರಲ್ಲಿ ಕಲಹ ಸಾಧ್ಯತೆ ಯಿದೆ, ಮನೆಯಲ್ಲಿ ಅಗೌರವ ಎದುರಾಗಬಹುದು. ಆರೋಗ್ಯದಲ್ಲಿ ಏರುಪೇರು, ಮರೆವಿನ ಲಕ್ಷಣ ಕಾಣಿಸಿಕೊಳ್ಳಬಹುದು. ಹೊಸವಾಹನ ಖರೀದಿ, ಮನೆ ಕಟ್ಟುವುದು, ನಿವೇಶನಕೊಳ್ಳುವುದು, ಇಂತಹ ನಿರ್ಧಾರಗಳನ್ನು ಮುಂದಿನ ವರ್ಷಕ್ಕೆ ಮುಂದೂಡುವುದು ಉತ್ತಮ. ವಾಹನ ಚಲಾವಣೆಯಲ್ಲಿ ಎಚ್ಚರಿಕೆ ಬೇಕು. ತಾಯಿಯ ಆರೋಗ್ಯ ಕ್ಷೀಣಿಸಬಹುದು. ತೀರ್ಥಯಾತ್ರೆಯಿಂದ ಪಾರಮಾರ್ಥಿಕ ಅನುಭವ ಆಗುತ್ತದೆ. ವೃತ್ತಿಜೀವನದಲ್ಲಿ ಆತಂಕ, ಕೆಲಸ ಕಳೆದುಕೊಳ್ಳುವ ಭಯ ಕಾಡುವುದು. ಕೆಲಸವನ್ನು ಬದಲಾಯಿಸದೆ ಇರುವುದು ಉತ್ತಮ. ಮಕ್ಕಳನ್ನು ಅತಿಯಾಗಿ ಪೋಷಿಸುವುದು ತಂದೆ ತಾಯಂದಿರಿಗೆ ಮುಳ್ಳಾಗಬಹುದು. ತಂದೆಯ ಆರೋಗ್ಯದಲ್ಲಿ ಚೇತರಿಕೆಯ ಲಕ್ಷಣಗಳು ಕಾಣುವುದು. ಬಂದ ಅವಕಾಶಗಳನ್ನು ವಿಪರೀತ ತುಲನ ಭಾವದಿಂದ ನೋಡುವುದು ಹಾನಿಯಾದೀತು ಜೋಕೆ. ವಿನಾಯಕನ ಉಪಾಸನೆ ಮಾಡಬೇಕು.

ಶುಭವರ್ಣ-ಹಸುರು, ಬಿಳಿ, ಗಂಧ, ನೀಲಿ

ಶುಭಸಂಖ್ಯೆ- 5,6,7

ಶುಭದಿಕ್ಕು-ಪಶ್ಚಿಮ

ಕರ್ಕಾಟಕ:

ವಾಚಾಳಿತನದಿಂದ ದೋಷ ಬರಬಹುದು. ಹೀಗಾಗಿ ಮಾತಿನ ಬಗ್ಗೆ ನಿಗಾ ಇರಲಿ. ಭಾಗ್ಯ ಸ್ಥಾನದ ಗುರುಬಲ ತಂದೆಯಿಂದ ಲಾಭ ನೀಡಿದರೂ, ಮೇ ತಿಂಗಳ ಬಳಿಕ ಎಚ್ಚರಿಕೆ ಅಗತ್ಯ. ರಾಜಕೀಯ ಹಾಗೂ ಸರಕಾರಿ ನೌಕರರಿಗೆ ಶತ್ರುಗಳಿಂದಲೂ ಮನ್ನಣೆ ಸಿಗುವ ಸಾಧ್ಯತೆ ಇದೆ. ಅಗ್ನಿಯಿಂದ, ವಿದ್ಯುತ್‌ ಉಪಕರಣಗಳಿಂದ ಹಾಗೂ ಕಟ್ಟಡ ಕಟ್ಟುವ ಸ್ಥಳಗಳಿಂದ ದೂರ ಇರಬೇಕು. ಮಕ್ಕಳಿಂದ ನೋವು, ವೈವಾಹಿಕ ಸಂಗಾತಿಗಳಿಂದ ಮಾನಸಿಕ ಕಿರಿಕಿರಿಯಾಗುತ್ತದೆ. ಅಷ್ಟಮ ಶನಿದೋಷದ ಬಾಧೆಯು ಈ ವರ್ಷವೂ ಇರುವುದರಿಂದ ವಾಹನ, ನದಿ ಹಾಗೂ ಸಮುದ್ರ ತೀರಗಳಿಂದ ದೂರ ಉಳಿಯಬೇಕು. ಪರ್ವತಾ ರೋಹಿಗಳಿಗೆ ಉತ್ತಮ ಕಾಲವಲ್ಲ. ಮಂಡಿ ನೋವು ಕಾಣಿಸಿಕೊಳ್ಳುವ ಅಪಾಯ ಇದೆ. ಅತಿಯಾದ ವೆಚ್ಚ ಮಾಡುವುದು ಅಪಾಯಕಾರಿ, ಅಪಾತ್ರರಿಗೆ ದಾನ ಮಾಡಿ, ನಷ್ಟವಾಗುವ ಸಾಧ್ಯತೆ ಹೆಚ್ಚಾಗಿ ಕಾಣಿಸುತ್ತದೆ. ಶನಿವಾರದಂದು ತಿಲದಾನ ಮಾಡಬೇಕು.

ಶುಭವರ್ಣ- ಬಿಳಿ, ಕೆಂಪು, ಹಳದಿ

ಶುಭಸಂಖ್ಯೆ-2,9,3

ಶುಭ ದಿಕ್ಕು- ಉತ್ತರ

ಸಿಂಹ:

ವರ್ಷದ ಆರಂಭದಲ್ಲಿ ನಿಮಗೆ ಗುರುಬಲ ಇರಲಿದ್ದು, ಅನಂತರದಲ್ಲಿ ಇರುವುದಿಲ್ಲ ಆದರೂ ಉದ್ಯೋಗದಲ್ಲಿ ಉತ್ತಮ ಸಾಧನೆ ಮಾಡುವಿರಿ. ಗೃಹ ಕೃತ್ಯದಲ್ಲಿ ಮನ್ನಣೆ ಇರುತ್ತದೆ. ಈ ವರ್ಷ ನಿಮಗೆ ನಿವೇಶನ ಕೊಂಡುಕೊಳ್ಳಲು ಹಾಗೂ ಮನೆ ಕಟ್ಟಲು ಸುದಿನ ದೊರೆಯುತ್ತದೆ. ರೈತಾಪಿ ಜನರಿಗೆ ಉತ್ತಮ ಇಳುವರಿ. ನಿಷ್ಠುರ ಸ್ವಭಾವದ ನೀವು ಕುಟುಂಬದ ಕೆಲವರಿಂದ ದೂಷಣೆಗೊಳಗಾಗುವ ಸಂದರ್ಭ ಬರಬಹುದು. ನೂತನ ವಾಹನ ಖರೀದಿಗೆ ಉತ್ತಮ ಸಮಯ. ಮೂವತ್ತು ತುಂಬಿದ ಅವಿವಾಹಿತರಿಗೆ ವಿವಾಹ ಯೋಗ. ಮಕ್ಕಳಿಂದ ಗರ್ವಭಂಗ, ಮಕ್ಕಳನ್ನು ಆಶ್ರಯಿಸಿ ಬದುಕುವ ಮಾತಾ ಪಿತೃಗಳಿಗೆ ಅವಮಾನ ಆಗಬಹುದು. ಹೀಗಾಗಿ ನಿಮ್ಮ ಎಚ್ಚರಿಕೆ ಯಿಂದ ನೀವು ಇರುವುದು ಉತ್ತಮ. ಮುಚ್ಚಿಟ್ಟ ಧನ ಸಂಗ್ರಹ ಕರಗುವ ಆತಂಕವಿದೆ. ನಿಮಗೆ ಅಷ್ಟಮ ರಾಹು ಕಾಟ ಇರುವುದರಿಂದ ಪರಿಹರಿಸಿಕೊಳ್ಳಲು ದುರ್ಗಾದೇವಿ ಆರಾಧನೆ ಮಾಡುವುದು ಶ್ರೇಯಸ್ಕರ.

ಶುಭವರ್ಣ- ಕೇಸರಿ, ಹಳದಿ, ಕೆಂಪು

ಶುಭಸಂಖ್ಯೆ-1,3,9

ಶುಭದಿಕ್ಕು-ಪೂರ್ವ

ಕನ್ಯಾ:

ರಾಶಿ ಮತ್ತು ಸಪ್ತಮದಲ್ಲಿ ರಾಹುಕೇತು ಸ್ಥಿತನಾಗುವ ಕಾರಣ ವೈವಾಹಿಕ ಜೀವನದಲ್ಲಿ ಕಲಹ ಮತ್ತು ಭಿನ್ನಾ ಭಿಪ್ರಾಯಗಳು ಏರ್ಪಡಬಹುದು. ಗುರು ಬಲದ ಬಲದಿಂದ ಮೇ ತಿಂಗಳಿನಿಂದ ಕೊಂಚ ಸುಧಾ ರಣೆ ಯಾಗಬಹುದು. ತಂದೆಯ ಆರೋಗ್ಯದಲ್ಲಿ ಚೇತ ರಿಕೆ ಕಾಣಲಿದೆ. ಶತ್ರುಗಳು ಪರಾಭವ ಗೊಳ್ಳುತ್ತಾರೆ, ಆರ್ಥಿಕ ಲಾಭವಾದರೂ, ಭೂಮಿ ನಷ್ಟವಾಗಬಹುದು. ವಾಹನ ಅಪಘಾತದ ಸಾಧ್ಯತೆಯಿದೆ, ಎಚ್ಚರಿಕೆ. ಹೃದ್ರೋಗ ಬರದಂತೆ ಎಚ್ಚರಿಕೆ ವಹಿಸುವುದು ಅನಿವಾರ್ಯ. ಹೆಚ್ಚಿನ ದೈಹಿಕ ವ್ಯಾಯಾಮಕ್ಕೆ ತೊಡಗಿಸಿ ಕೊಳ್ಳುವುದು. ಬೆಚ್ಚಗಿನ ಮನೆ ಇದ್ದರೂ ವೃಥಾ ಚಿಂತೆ ಎದುರಾಗಬಹುದು. ಭ್ರಾತೃ ಭಗಿನಿ ವರ್ಗದವ ರಿಂದ ವಿಶೇಷ ಸಮ್ಮಾನಗಳು ಕಾದಿವೆ. ವಿವಾಹಿತರಲ್ಲಿ ಪರಸ್ಪರ ಶಂಕೆ ಉಂಟಾಗು ತ್ತವೆ. ದೂರ ಪ್ರಯಾಣ ಲಾಭಕರವಾಗಲಿದೆ. ಜಲಮಾರ್ಗದ ಆನಂದ ಸಿಗಲಿದೆ. ಉತ್ತಮ ಆಲೋಚನೆ ಗಳು ಬರಲಿವೆ, ಮಾನಸಿಕ ಧೈರ್ಯ ಹೆಚ್ಚುವುದು. ಲೆಕ್ಕಾಚಾರದ ಬದುಕು ಸಾಗಿಸಬೇಕಾಗುತ್ತದೆ. ಗಣೇಶ ದುರ್ಗಿಯರ ಪ್ರಾರ್ಥನೆ ಮಾಡಬೇಕು.

ಶುಭವರ್ಣ-ಹಸುರು, ನೀಲಿ, ಶ್ವೇತ ವರ್ಣ

ಶುಭಸಂಖ್ಯೆ-5,7,6

ಶುಭದಿಕ್ಕು -ದಕ್ಷಿಣ

ತುಲಾ:

ಧನಲಾಭ, ಶತ್ರು ಪರಾಭವ ಯೋಗವಿದೆ. ಮಕ್ಕಳ ಚಿಂತೆಯಲ್ಲಿ ಸುಖಕ್ಕೆ ಭಂಗವಾಗುತ್ತದೆ. ವರ್ಷದ ಆರಂಭದ ಗುರುಬಲ ಅನಂತರದಲ್ಲಿ ಇರುವುದಿಲ್ಲ. ಮಿತ್ರರಿಂದ ಧೈರ್ಯ ಮತ್ತು ಲಾಭವುಂಟಾಗಲಿದೆ. ವಿದ್ಯಾರ್ಥಿಗಳಿಗೆ ಆಲಸ್ಯ ಉಂಟಾಗುವ ಕಾರಣ ವಿದ್ಯಾಭಂಗವಾಗುತ್ತದೆ. ವೃತ್ತಿ ಬದುಕಿನಲ್ಲಿ ಉತ್ತಮ ಸಾಧನೆಯ ಯೋಗವಿದೆ. ಭ್ರಾತೃ ವರ್ಗದವರಿಂದ ಆರ್ಥಿಕ ಲಾಭ ಹಾಗೂ ಕೊಟ್ಟ ಹಳೆಯ ಸಾಲಗಳನ್ನು ಮರಳಿ ಪಡೆಯುವ ಸಮಯವಿದು. ಕುಟುಂಬದಲ್ಲಿ ಆರ್ಥಿಕ ಲಾಭ, ಕುಟುಂಬದವರೆಲ್ಲ ಒಟ್ಟುಗೂಡಿ ದೇವಾಲಯ ದರ್ಶನ ಇತ್ಯಾದಿಗಳನ್ನು ಪಡೆಯುವ ಸುಯೋಗವಿದೆ. ಆದರೂ ವಿಪರೀತ ಖರ್ಚು. ಕವಿತೆ-ಕಾವ್ಯಗಳಲ್ಲಿ ಆಸಕ್ತಿ, ಹೊಸ ಪುಸ್ತಕ ಕೊಳ್ಳುವುದು, ಹೊಸ ಕವಿಗಳ ಪರಿಚಯ ಮಾಡಿಕೊಳ್ಳುವ ಹೊತ್ತಿದು. ಹೊಸ ಭಾಷೆಗಳನ್ನು ಕಲಿಯಲು ಉತ್ತಮ ಸಮಯ. ಹನುಮಂತನ ಲಕ್ಷ್ಮೀ ನಾರಾಯಣರ ಆರಾಧನೆ ಮಾಡಬೇಕು.

ಶುಭವರ್ಣ-ಗಂಧ, ಬಿಳಿ, ತಿಳಿಗೆಂಪು, ನೀಲಿ

ಶುಭಸಂಖ್ಯೆ-6,7,5

ಶುಭ ದಿಕ್ಕು- ಪಶ್ಚಿಮ

ವೃಶ್ಚಿಕ:

ಧನ ಸಂಗ್ರಹಣೆಯಲ್ಲಿ ಯಶಸ್ಸು ಸಿಗುತ್ತದೆ. ವೃತ್ತಿಯಲ್ಲಿ ಮುಂಭಡ್ತಿಯೋಗವಿದೆ. ಸುಖಕರ ವೈವಾಹಿಕ ಜೀವನ, ಅವಿವಾಹಿತರಿಗೆ ವಿವಾಹಯೋಗ ಪ್ರಾಪ್ತಿಯಿದೆ. ವಿವಾಹಿತರಿಗೆ ಈ ವರ್ಷ ಹಳೆಯ ವೈಮನಸ್ಸುಗಳನ್ನು ಪರಿಹರಿಸಿ, ಅಸಂತುಷ್ಟ ಭಾವನೆಗಳನ್ನು ನಿವಾರಿಸಿಕೊಳ್ಳುವ ವರ್ಷ. ಮಕ್ಕಳಿಂದ ಚಿಂತೆ ಇದ್ದರೂ, ಅಭಿವೃದ್ಧಿ ಖಚಿತ. ಮಕ್ಕಳನ್ನು ವಿದೇಶ ಯಾತ್ರೆಗೆ ಅಥವಾ ವಿದ್ಯಾಭ್ಯಾಸಕ್ಕೆ ಕಳುಹಿಸಬೇಕೆಂಬ ಪೋಷಕರಿಗೆ ದೈವೀಕ ನೆರವು ಸಿಗಲಿದೆ. ಸಂತಾನಾಪೇಕ್ಷಿ ದಂಪತಿಗಳಿಗೂ ಉತ್ತಮ ಸಮಯವಿದು. ಬ್ಯಾಂಕ್‌ ವ್ಯವಹಾರ, ಜವುಳಿ ಉದ್ಯಮದವರಿಗೂ, ಸಿನೆಮಾ ರಂಗದವರಿಗೆ ಉತ್ತಮ ಸಾಧನಾ ಸಮಯ. ಕೃಷಿಯಲ್ಲಿ ಆಸಕ್ತಿ ಬರುತ್ತದೆ, ಲಾಭವೂ ಇದೆ. ವೃತ್ತಿಬದುಕಿನಲ್ಲಿ ಉತ್ತಮ ಸಾಧನೆ ಮತ್ತು ಮನ್ನಣೆ ಸಿಗಲಿದೆ. ಸರ್ಪ ಶಾಂತಿ ಮಾಡಿಸಬೇಕು.

ಶುಭವರ್ಣ- ಕೆಂಪು, ಹಳದಿ, ಬಿಳಿ

ಶುಭಸಂಖ್ಯೆ-9,3,2

ಶುಭದಿಕ್ಕು- ಉತ್ತರ

ಧನುಸ್ಸು:

ವರ್ಷದ ಆರಂಭದಿಂದ ಮೇ ತಿಂಗಳವರೆಗೂ ಗುರುಬಲವಿದ್ದು, ಅನಂತರದ ತಿಂಗಳಿಂದ ಶತ್ರುಗಳೊಂದಿಗೆ ಹೊಂದಾಣಿಕೆ, ರಾಜಿ ಸಂಧಾನದಂತಹ ಶತ್ರುಶಮನ ಕಾರ್ಯಗಳಲ್ಲಿ ನಿರತರಾಗಬೇಕಾಗುತ್ತದೆ. ಧನಪ್ರಾಪ್ತಿ, ಕೌಟುಂಬಿಕ ಸೌಖ್ಯ, ಮಕ್ಕಳಿಂದ ಮನ್ನಣೆ ಸಿಗಲಿದೆ. ವಾಹನ ಕಳುವಾಗುವ ಅವಯೋಗವಿದೆ. ಭೂಮಿ, ವಾಹನ ಕೊಳ್ಳುವುದಿರುವುದು ಉತ್ತಮ. ತಾಯಿಯ ಆರೋಗ್ಯ ಏರು ಪೇರಾಗ ಬಹುದು. ವೃತ್ತಿ ಬದುಕಿನಲ್ಲಿ ಬದಲಾವಣೆಯಿದೆ. ದೈವೀಕ ಕಾರ್ಯಕ್ರಮಗಳಲ್ಲಿ ಯಶಸ್ಸು, ತಂದೆಯ ಆರೋಗ್ಯದಲ್ಲಿ ಚೇತರಿಕೆಯಿದೆ. ವಾಹನ ಖರೀದಿ, ಮನೆ, ನಿವೇಶನ ಕ್ರಯ ವಿಚಾರವನ್ನು ಕೈಬಿಡುವುದು ಲೇಸು. ವಿದೇಶ ಪ್ರಯಾಣದ ಸುಖವಿದೆ. ವೃತ್ತಿ ಸ್ಥಳಗಳಲ್ಲಿ ಅವಮಾನ, ಸಹೋದ್ಯೋಗಿಗಳಿಂದ ಉನ್ನತ ಅಧಿಕಾರಿಗಳಿಗೆ ಅಸಮಾಧಾನ ಎದುರಾಗಬಹುದು. ಕುಲದೇವತಾರಾಧನೆ ಮತ್ತು ದರ್ಶನ ಅಗತ್ಯವಿದೆ.

ಶುಭವರ್ಣ- ಹಳದಿ, ಕೆಂಪು, ಕೇಸರಿ

ಶುಭಸಂಖ್ಯೆ-3,9,1

ಶುಭದಿಕ್ಕು- ಪೂರ್ವ

ಮಕರ:

ಧನಸ್ಥಾನದ ಶನಿ ವಾಕ್‌ ದೋಷ ನೀಡಿದರೂ, ಧನ ಲಾಭವಿದೆ. ಅತೀ ಮಾತು ಬೇಡ, ಮೌನಕ್ಕೆ ಶರಣಾಗುವುದು ಉತ್ತಮ. ಭ್ರಾತೃವಿಗೆ ವಿದೇಶ ಸಂಚಾರ ಯೋಗವಿದೆ. ಪಂಚಮ ಸ್ಥಾನಾಧಿಪತಿ ಶುಕ್ರ ಮತ್ತು ಬುಧನ ಯುತಿಯಿಂದ ಮಕ್ಕಳಲ್ಲಿ ವಿದ್ಯಾರ್ಜನೆಗೆ ಹೆಚ್ಚಿನ ಆಸಕ್ತಿ ಉಂಟಾಗುತ್ತದೆ. ಮಕ್ಕಳಿಂದ ಸುಖ, ಗೌರವವಿದೆ. ತಂದೆಯ ಆರೋಗ್ಯದಲ್ಲಿ ಅಸ್ಥಿರತೆ ಕಾಣಿಸಿಕೊಳ್ಳಬಹುದು, ವಿದ್ಯಾರ್ಥಿಗಳಿಗೆ ಉತ್ತಮ. ಮಿತ್ರರಿಂದ ವಂಚನೆಯಾಗುತ್ತದೆ, ಮಾನಸಿಕ ಅಸಮತೋಲನೆಯಿಂದ ದುಡುಕು ನಿರ್ಧಾರ ಮಾಡಬಹುದು. ಅನವಶ್ಯಕ ಚಿಂತೆಗಳು ಬರುತ್ತವೆ. ಪರಿಸ್ಥಿತಿಯಿಂದ ಸಮಾಧಾನದಲ್ಲಿ ನಿಭಾಯಿಸಲು ಕಲಿಯಿರಿ. ಆರೋಗ್ಯದಲ್ಲಿ ಚೇತರಿಕೆಯಿದೆ. ಭ್ರಾತೃ ವರ್ಗದವರಿಂದ ವಂಚನೆ, ನಿದ್ರಾ ಹೀನತೆ, ಕಣ್ಣು ಅಥವಾ ತಲೆ ಶೂಲೆ ಬಾಧೆ ಕಾಡುವುದು. ಶಿವನಿಗೆ ರುದ್ರಾಭಿಷೇಕ ಮಾಡಿಸಬೇಕು.

ಶುಭವರ್ಣ- ನೀಲಿ, ಹಸುರು, ಬಿಳಿ

ಶುಭಸಂಖ್ಯೆ-7,6,5

ಶುಭದಿಕ್ಕು-ದಕ್ಷಿಣ

ಕುಂಭ:

ಜೀವನದಲ್ಲಿ ಮಂದಗತಿಯಿದೆ. ಆರ್ಥಿಕ ನಷ್ಟ, ಕುಟುಂಬದಲ್ಲಿ ವೃಥಾ ಚರ್ಚೆ, ಅವಿಶ್ವಾಸದ ಸ್ಥಿತಿಯಿರುತ್ತದೆ. ಮೇ ತಿಂಗಳ ಅನಂತರ ಗುರುಬಲ ಬರುತ್ತದೆ. ಮನೆಯಲ್ಲಿ ಸೌಖ್ಯ, ಹೊಸ ವಾಹನ, ಜಮೀನು, ನಿವೇಶನ ಖರೀದಿಸುವ ಯೋಗವಿದೆ. ಮನೆ ಕಟ್ಟಲು ಸುಸಮಯ. ತಾಯಿಯ ಆರೋಗ್ಯದಲ್ಲಿ ಸುಧಾರಣೆ, ವೃತ್ತಿ ಬದುಕಿನಲ್ಲಿ ಉತ್ತಮ ಸಾಧನೆಯನ್ನು ನಿರೀಕ್ಷಿಸಬಹುದು. ಸಾಧುಸಂತರ ದರ್ಶನ ಭಾಗ್ಯ ದೊರೆಯುವುದು. ಹಲ್ಲು ನೋವು, ನೇತ್ರದೋಷ. ಮೂಲವ್ಯಾಧಿಯಿಂದ ಆರೋಗ್ಯ ಕ್ಷೀಣಿಸುತ್ತದೆ. ಏಕಾಂಗಿತನ ಬಾಧಿಸುವುದು, ಹಣ ವಿನಿಮಯದಲ್ಲಿ ನಷ್ಟವಾಗುತ್ತದೆ. ದಂಪತಿಗಳಲ್ಲಿ ವಿಶ್ವಾಸ, ನೆರವು ಹೆಚ್ಚುತ್ತದೆ. ಹೊಟೇಲ್‌ ಉದ್ಯಮದವರಿಗೂ ಉತ್ತಮ ಸಮಯ ಇದು. ಸರಕಾರಿ ನೌಕರರಿಗೆ ಶುಭ ಸಮಯ. ಬಂಧುಮಿತ್ರರಿಂದ ಗೌರವ ಸಿಗುತ್ತದೆ. ವಾಯು ಸ್ತುತಿ ಮಾಡಬೇಕು.

ಶುಭವರ್ಣ- ನೀಲಿ, ಹಸುರು, ಬಿಳಿ

ಶುಭಸಂಖ್ಯೆ-7,5,6

ಶುಭದಿಕ್ಕು-ಪಶ್ಚಿಮ

ಮೀನ:

ರಾಹು ಹಾಗೂ ಸಪ್ತಮದಲ್ಲಿ ಕೇತು ಬರುವುದರಿಂದ ವಿವಾಹದಲ್ಲಿ ಅಸೌಖ್ಯ, ಘರ್ಷಣೆ ಮತ್ತು ಅಪನಂಬಿಕೆಗಳಿಗೆ ಕಾರಣವಾಗುವುದು. ವ್ಯಾವಹಾರಿಕ ಪಾಲುಗಾರಿಕೆಯಲ್ಲಿ ಅಪನಂಬಿಕೆ, ಅವಿಶ್ವಾಸ ಉಂಟಾಗುವ ಅಪಾಯ ಇದೆ. ಹೀಗಾಗಿ, ವ್ಯವಹಾರದಲ್ಲಿ ಭಾರಿ ಎಚ್ಚರಿಕೆ ವಹಿಸಬೇಕಾಗುತ್ತದೆ. ಆರೋಗ್ಯದಲ್ಲಿ ಏರುಪೇರು, ವಿದೇಶ ಪ್ರಯಾಣ ದಲ್ಲಿ ನಷ್ಟವಾಗುತ್ತದೆ. ಹಣಕಾಸಿನ ವಿಚಾರದಲ್ಲಿ ವಿಪರೀತ ಖರ್ಚು, ಗೃಹ ನಿರ್ಮಾಣದಿಂದ ಲಾಭ, ಉಂಟಾಗುತ್ತದೆ. ನೌಕರಿಯಲ್ಲಿ ಒತ್ತಡದ ನಡುವೆ ಕೆಲಸ ಮಾಡಬೇಕಾಗುತ್ತದೆ. ದೈಹಿಕ ಶ್ರಮದಿಂದ ಆರೋಗ್ಯಕ್ಕೆ ಹಾನಿಯಾಗುವ ಅಪಾಯವೂ ಇದ್ದು, ಈ ಬಗ್ಗೆ ಕಾಳಜಿ ವಹಿಸುವುದು ಸೂಕ್ತ. ವಾಗ್ಯುದ್ಧದಲ್ಲಿ ಸೋಲಾಗುತ್ತದೆ. ಶೀಘ್ರಕೋಪ, ರಕ್ತದೊತ್ತಡ, ಅತಿ ನಿದ್ರೆಯಂಥ ಆರೋಗ್ಯ ಚಿಂತೆ ಬಾಧಿಸಬಹುದು. ಹನುಮ ದೇವರಿಗೆ ಮೊರೆ ಹೋಗುವುದು ಉತ್ತಮ ಪರಿಹಾರ.

ಶುಭ ವರ್ಣ-ಹಳದಿ, ಬಿಳಿ,ಕೆಂಪು

ಶುಭಸಂಖ್ಯೆ-3,2,9

ಶುಭದಿಕ್ಕು-ಉತ್ತರ

ಟಾಪ್ ನ್ಯೂಸ್

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.