ಸ್ವರ್ಣ ಕಾರ್ಕಳದ ಸಾರ್ಥಕ ಹಾದಿಗೆ ಮತ್ತೊಮ್ಮೆ ಅವಕಾಶ ನೀಡಿ; ವಿ.ಸುನಿಲ್‌ಮಾರ್‌


Team Udayavani, May 9, 2023, 3:04 PM IST

ಸ್ವರ್ಣ ಕಾರ್ಕಳದ ಸಾರ್ಥಕ ಹಾದಿಗೆ ಮತ್ತೊಮ್ಮೆ ಅವಕಾಶ ನೀಡಿ; ವಿ.ಸುನಿಲ್‌ಮಾರ್‌

ಕಾರ್ಕಳ:ಶಾಸಕ, ಸಚಿವನಾಗಿ ಆ ಸ್ಥಾನವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ್ದೇನೆ ಎಂಬ ವಿಶ್ವಾಸವಿದೆ. ಸಾಮಾನ್ಯರ ಸಂಕಷ್ಟಗಳಿಗೆ ಸಂವೇದನಾಶೀಲನಾಗಿ ಸ್ಪಂದಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಕಾರ್ಕಳದ ಅಭಿವೃದ್ಧಿಯ ಕನಸು ಹೊತ್ತು ಕೆಲಸ ಮಾಡುತ್ತಿರುವ ನನಗೆ ಸ್ವರ್ಣ ಕಾರ್ಕಳದ ನಿರ್ಮಾಣಕ್ಕಾಗಿ ಮತ್ತೊಮ್ಮೆ ಅವಕಾಶ ನೀಡುವಂತೆ ಕಾರ್ಕಳ ಬಿಜೆಪಿ ಅಭ್ಯರ್ಥಿ ವಿ.ಸುನಿಲ್‌ಮಾರ್‌ ಮನವಿ ಮಾಡಿದರು.

ಬೆಳ್ಮಣ್‌ ಪರಿಸರದಲ್ಲಿ ಮತಯಾಚಿಸಿ ಮಾತನಾಡಿದರು.ಅನೇಕ ಅಭಿವೃದ್ಧಿ ಕಾರ್ಯಗಳು ಕ್ಷೇತ್ರದಲ್ಲಿ ಸಾಕಾರವಾಗಿದೆ. ಅಂತರ್ಜಲ ವೃದ್ಧಿಗೆ ದಾಖಲೆ ಕಿಂಡಿ ಅಣೆಕಟ್ಟುಗಳು, ಕೆರೆಗಳ ಅಭಿವೃದ್ಧಿ, ಸರಕಾರಿ, ಆಸ್ಪತ್ರೆ, ಕಟ್ಟಡಗಳ ಆಧುನೀಕರಣ, ಶಿಕ್ಷಣದ ಕ್ಷೇತ್ರದ ಉನ್ನತೀಕರಣ, ಸೇತುವೆಗಳು, ದ್ವಿಪಥ-ಚತುಷ್ಪಥ ರಸೆೆ¤ಗಳು, ಕಾರ್ಕಳ ಉತ್ಸವದಂತಹ ಅಭೂತಪೂರ್ವ ಕಾರ್ಯಕ್ರಮ, ದೇಶದ ಗಮನ ಸೆಳೆದ ಕರಾವಳಿಯ ಸೃಷ್ಟಿಕರ್ತ ಪರಶುರಾಮನ ಥೀಂ ಪಾರ್ಕ್‌ ನಿರ್ಮಾಣ, ಕಾರ್ಕಳದ ಜನತೆಗೆ ಉದ್ಯೋಗ ಕಲ್ಲಿಸಿಕೊಡಲಿರುವ ಜವಳಿ ಪಾರ್ಕ್‌ ಸೇರಿದಂತೆ ಅನೇಕ ಜನಹಿತ ಕಾರ್ಯಗಳು ಸಾಕಾರಗೊಂಡಿವೆ ಎಂದರು.

ಸ್ವರ್ಣ ಕಾರ್ಕಳದ ಸಾರ್ಥಕ ಹಾದಿ
ರೈತರ, ಕುಡಿಯುವ ನೀರಿನ ಸಮಸ್ಯೆ ಪರಿಹಾರ, 108 ಕೋ.ರೂ ವೆಚ್ಚದಲ್ಲಿ ಎಣ್ಣೆಹೊಳೆ ನೀರಾವರಿ ಯೋಜನೆ ಅನುಷ್ಠಾನ, ಮುಖ್ಯ ರಸ್ತೆ, ಗ್ರಾಮೀಣ ರಸೆೆ¤ಗಳ ಅಭಿವೃದ್ಧಿ, ಹೆಬ್ರಿ ತಾಲೂಕಿಗೆ ಸಂಪೂರ್ಣ ಆಡಳಿತ, ಆಡಳಿತ ಸೌಧ, ಪ್ರವಾಸಿ ಮಂದಿರ, ಪೊಲೀಸ್‌ ಠಾಣೆ, ತಾ.ಪಂ ಕಚೇರಿ, ನೂತನ ಬಸ್‌ ನಿಲ್ದಾಣ ಕಾಮಗಾರಿ ಆರಂಭ, ಸುಸಜ್ಜಿತ ತಾಲೂಕು ಆಸ್ಪತ್ರೆ, ಡಯಾಲಿಸಿಸ್‌ ಕೇಂದ್ರ, ಆಮ್ಲಜನಕ ಉತ್ಪಾದನಾ ಘಟಕ, ಮಕ್ಕಳ ತೀವೃ ನಿಗಾ ಘಟಕ ಸ್ಥಾಪನೆ, 25 ವರ್ಷಗಳ ಹಳೆಯ ಚರಂಡಿ ವ್ಯವಸ್ಥೆ ಮರುನಿರ್ಮಾಣ, ವೈಜ್ಞಾಾನಿಕ, ಆಧುನಿಕ ತಂತ್ರಜ್ಞಾಾನ ಬಳಕೆ, ನಿಟ್ಟೆ ಎಂಆ‌ರ್ ಎಫ್ ಘಟಕ, ಹೆಬ್ರಿಯಲ್ಲಿ ಮಿನಿ ಎಂಆ‌ರ್ .ಎಫ್ ಘಟಕ ಸ್ಥಾಪನೆ ಮೂಲಕ ತ್ಯಾಜ್ಯ ಮುಕ್ತಿ, ಸ್ವಚ್ಛತೆಗೆ ಆದ್ಯತೆ, ಪೇಟೆಗಳ ಸಮಗ್ರ ಅಭಿವೃದ್ಧಿ ಜೋಡುರಸ್ತೆ, ಬಜಗೋಳಿ, ಮುನಿಯಾಲು, ಬೈಲೂರು 4 ಪಥದ ರಸ್ತೆಗಳಾಗಿ ಪರಿವರ್ತನೆ, ಹೆಬ್ರಿ ಮತ್ತು ನಲ್ಲೂರಿನಲ್ಲಿ ಹರಿಯಪ್ಪನ ಕೆರೆ ಬಳಿ ಆಕರ್ಷಕ ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್‌ ನಿರ್ಮಾಣ, ತಾಲೂಕು ಕಚೇರಿ ಬಳಿ ಅತ್ಯಾಕರ್ಷಕ ವಾಜಪೇಯಿ ಉದ್ಯಾನವನ, ಪ್ರವಾಸಿಗರ ಆಕರ್ಷನೆಯ ಕೇಂದ್ರವಾಗಿ ನವರೂಪ ಪಡೆಯುತ್ತಿರುವ ಕೋಟಿ ಚೆನ್ನಯ ಥೀಂ ಪಾರ್ಕ್, ಆರನೇ ಯಕ್ಷರಂಗಾಯಣ ಕೇಂದ್ರ ಕಾರ್ಕಳದಲ್ಲಿ ನಿರ್ಮಾಣ, ಬಿ.ಎಸ್ಸಿ ನರ್ಸಿಂಗ್‌ ಕಾಲೇಜು, ಜರ್ಮನ್‌ ತಂತ್ರಜ್ಞಾಾನದೊಂದಿಗೆ ಯುವಕರಿಗೆ ಉದ್ಯೋಗ ಭದ್ರತೆ ನೀಡುವ ಕೆಜಿಟಿಟಿಐ, ಟಾಟಾ ಟೆಕ್ನಾಲಜೀಸ್‌ ಸಹಭಾಗಿತ್ವದ ಐಟಿಐ ಕಾಲೇಜು, ಕರ್ನಾಟಕ ಪಬ್ಲಿಕ್‌ ಸ್ಕೂಲ್‌ , ಹಾಸ್ಟೇಲ್‌ ಹಾಗೂ ಶಾಲಾ ಕಾಲೇಜು ಕಟ್ಟಡಗಳ ನಿರ್ಮಾಣ. ಸಾಣೂರು ಮಠದ ಕೆರೆ ಅಭಿವೃದ್ಧಿ ಮೂಲಕ ಕೃಷಿ ಭೂಮಿಗಳಿಗೆ ನೀರಧಾರೆ, ಪಳ್ಳಿ ಖೈರು ಕೆರೆ ಮುದ್ರಾಡಿ ಮದಗ ಕೆರೆ, ಹರಿಯಪ್ಪನ ಕೆರೆ, ಎಳ್ಳಾರೆ ಹೊನ್ನೆಜೆಡ್ಡು ಕೆರೆ, ಬೇಳಂಜೆ ಮಲ್ಲಿಕಾರ್ಜುನ ದೇವಸ್ಥಾನ ಕೆರೆ ಅಭಿವೃದ್ಧಿಗೊಳಿಸಲಾಗಿದೆ ಎಂದರು.

ಬಡವರ ಕಣ್ಣೀರೊರೆಸುವ ಕಾರ್ಯ
ದಾಖಲೆಯಲ್ಲಿ 94ಸಿ, 94 ಸಿಸಿ ಹಕ್ಕುಪತ್ರಗಳ ವಿತರಣೆ, 6 ಕೋ.ರೂ ವೆಚ್ಚದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣ, ಮಾಳದಲ್ಲಿ ಮಲೆಕುಡಿಯ ಸಭಾಭವನ ನಿರ್ಮಾಣ, ಗ್ರಾಮಗಳಲ್ಲಿ ಸಮುದಾಯ ಭವನ ನಿರ್ಮಾಣ., ದೇವಸ್ಥಾನ, ದೈವಸ್ಥಾನಗಳ ಅಭಿವೃದ್ದಿಗೆ ನೆರವು, ಮೆಸ್ಕಾಂ ವಿಭಾಗೀಯ ಕಚೇರಿ, ನಿಟ್ಟೆ ಉಪವಿಭಾಗ ಕಚೇರಿ, ಶಾಖಾ ಕಚೇರಿಗಳ ಸಾಾ§ಪನೆ, ಬೆಳ್ಮಣ್‌ , ಅಜೆಕಾರು, ಬಜಗೋಳಿ ಹಾಗೂ ಬೈಲೂರಿನಲ್ಲಿ ವಿದ್ಯುತ್‌ ಉಪಕೇಂದ್ರಗಳ ನಿರ್ಮಾಣ ಹೆಚ್ಚುವರಿ ಟಿ.ಸಿಗಳ ಅಳವಡಿಕೆ, ಬಡ ಜನರಿಗೆ ಬೆಳಕು ಯೋಜನೆಯಲ್ಲಿ ಉಚಿತ ವಿದ್ಯುತ್‌ , ಕಾರ್ಕಳ ಕೋರ್ಟ್‌ , ತಾ ಪಂ, ಪೊಲೀಸ್‌ ಅತಿಥಿಗೃಹ, ದೇವರಾಜು ಅರಸು ಭವನ, ಅಕ್ಷರ ಭವನ ಸೇರಿ ಸರಕಾರಿ ಕಟ್ಟಡಗಳ ನವೀಕರಣ, ಕೋವಿಡ್‌ ಸಂದರ್ಭ ಮುಂಬಯಿ, ಪುಣೆ, ಬೆಂಗಳೂರಿನ ಬಂಧುಗಳಿಗೆ ಕ್ವಾರಂಟೈನ್‌ ಕ್ಷೇತ್ರದ ಜನತೆಯ ಸಂಕಷ್ಟಗಳಿಗೆ ವಿವಿಧ ಆಯಾಮದಲ್ಲಿ ಸ್ಪಂದನೆ, ಸ್ಥಳಿಯ ಉತ್ಪನ್ನ ಕಾರ್ಲಕಜೆ, ಬಿಳಿಬೆಂಡೆಗೆ ಬ್ರ್ಯಾಂಡ್‌ ಬೆಳೆಯನ್ನಾಗಿಸಿ ಉತ್ತೇಜನ, ವಾತ್ಸಲ್ಯ ಆರೋಗ್ಯ ತಪಾಸಣೆ ಮೂಲಕ 40 ಸಾವಿರ ಮಕ್ಕಳ ಆರೋಗ್ಯ ತಪಾಸಣೆ, ಭಾಷೆ, ಸಂಸ್ಕೃತಿ, ಕಲೆಯ ಸಂಭೃಮ ಕಾರ್ಕಳ ಉತ್ಸವ-2022. ಸ್ವರ್ಣ ಕಾರ್ಕಳದ ಮುಕುಟ ಪ್ರಾಯವಾದ ಪರಶುರಾಮ ಥೀಂ ಪಾರ್ಕ್‌ ನಿರ್ಮಾಣ ಮೊದಲಾದ ಕಾರ್ಯಗಳ ಮೂಲಕ ಅಮೂಲಾಗ್ರ ಬದಲಾವಣೆ ತರಲಾಗಿದೆ ಎಂದರು.

ಮತದಾನಕ್ಕೂ ಮೊದಲು ಅಭಿವೃದ್ದಿ ಕೆಲಸವನ್ನೊಮ್ಮೆ ನೆನಪಿಕೊಳ್ಳಿ
5 ವರುಷ ಅವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಸಾಧಿಸಲಾಗಿದೆ.ಮುಂದೆಯೂ ಮತ್ತಷ್ಟೂ ಅಭಿವೃದ್ಧಿ ಚಿಂತನೆ, ಯೋಚನೆ ಜತೆಗೆ ಸಾಧಿಸುವ ಹಂಬಲ ನನ್ನಲ್ಲಿದೆ. ಇದುವರೆಗೆ ಆಗಿರುವ ಅಭಿವೃದ್ದಿಯನ್ನು ನೆನಪಿಸಿಕೊಳ್ಳುತ್ತಲೆ ಮುಂದೆ ಆಗಬೇಕಾದ ಕಾರ್ಯಗಳ ಕಡೆ ಗಮನಹರಿಸಬೇಕಿದೆ. ಹೀಗಾಗಿ ಕಾರ್ಕಳದ ಜನತೆ ಮತ್ತೂಮ್ಮೆ ನನ್ನನ್ನು ಬೆಂಬಲಿಸಿ ಅವಕಾಶ ನೀಡುವಂತೆ ಅವರು ಮತದಾರರಲ್ಲಿ ಮನವಿ ಮಾಡಿಕೊಂಡರು.

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.