ಆಗಸ್ಟ್‌ನಲ್ಲಿ ಬರಲಿದೆ 6 ಸಿನೆಮಾ !

Team Udayavani, May 23, 2019, 6:00 AM IST

ಈ ವರ್ಷ ಈಗಾಗಲೇ ಐದು ಸಿನೆಮಾಗಳು ತೆರೆಕಂಡಿವೆ. ಪುಂಡಿಪಣವು, ದೇಯಿಬೈದೆತಿ, ಕಂಬಳಬೆಟ್ಟು ಭಟ್ರೆನ ಮಗಲ್‌, ಕಟಪಾಡಿ ಕಟ್ಟಪ್ಪ ಹಾಗೂ ಗೋಲ್‌ಮಾಲ್‌. ಈ ಎಲ್ಲ ಸಿನೆಮಾಗಳ ಬಗ್ಗೆ ಸಾಕಷ್ಟು ನಿರೀಕ್ಷೆ ಇದ್ದರೂ ಅಷ್ಟರ ಮಟ್ಟಿಗೇನೂ ಅದು ಸದ್ದು ಮಾಡಿಲ್ಲ.ಈ ಪೈಕಿ ಒಂದೆರಡು ಸಿನೆಮಾ ಮಾತ್ರ ಈಗಲೂ ಚರ್ಚೆಯಲ್ಲಿದೆ ಹಾಗೂ ಶೋ ಕೂಡ ನಡೆಯುತ್ತಿದೆ ಎಂಬುದು ಸಮಾಧಾನದ ಸಂಗತಿ.

ಈಗ “ಆಯೆ ಏರ್‌’, “ಬೆಲ್ಚಪ್ಪ’ ಸಿನೆಮಾಗಳ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ. ಜೂನ್‌- ಜುಲೈ ಮಳೆಯ ಕಾರಣಕ್ಕಾಗಿ ರೆಸ್ಟ್‌ ಎಂಬುದು ಸದ್ಯದ ಮಾಹಿತಿ. ಆದರೆ, ಯಾವುದಾದರೂ ಸಿನೆಮಾ ಈ ಸಂದರ್ಭದಲ್ಲಿಯೂ ರಿಲೀಸ್‌ ಆಗುವುದಿಲ್ಲ ಎನ್ನಲಾಗದು.

ಇನ್ನು ಆಗಸ್ಟ್‌ನಲ್ಲಿ ವಿಶ್ವನಾಥ್‌ ಕೋಡಿಕಲ್‌ ಅವರ
“ಎನ್ನ’ ಸಿನೆಮಾ ರಿಲೀಸ್‌ ಗ್ಯಾರಂಟಿ. ಜತೆಗೆ, ದೇವದಾಸ್‌ ಕಾಪಿಕಾಡ್‌ ಅವರ “ಜಬರ್‌ದಸ್ತ್ ಶಂಕರ’, ಶೋಭರಾಜ್‌ ಅವರ “ಪೆಪ್ಪರೆ ಪೆರೆರೆ’, ರೂಪೇಶ್‌ ಶೆಟ್ಟಿ ಅವರ “ಗಿರಿಗಿಟ್‌’, ಸೂರಜ್‌ ಶೆಟ್ಟಿಯವರ “ಇಂಗ್ಲಿಷ್‌’, ವಿಸ್ಮಯ ವಿನಾಯಕ್‌ ಅವರ “ರಡ್ಡ್ ಎಕ್ರೆ’, ಸಿನೆಮಾ ತೆರೆಕಾಣುವುದು ಬಹುತೇಕ ಪಕ್ಕಾ ಆಗಿದೆ.

ಜತೆಗೆ ಇನ್ನೂ ಕೆಲವು ಸಿನೆಮಾಗಳು ಈಗಾಗಲೇ ಬಿಡುಗಡೆಯ ಮೂಡ್‌ನ‌ಲ್ಲಿರುವ ಹಿನ್ನೆಲೆಯಲ್ಲಿ ಅವರು ಕೂಡ ಆಗಸ್ಟ್‌ ತಿಂಗಳಿಗೆ ಕಾಯುತ್ತಿದ್ದಾರೆ. ಈ ಮೂಲಕ ಈ ಬಾರಿಯ ಆಗಸ್ಟ್‌ ಕೋಸ್ಟಲ್‌ವುಡ್‌ಗೆ ಹೊಸ ಕಳೆ ತರಲಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ