ಇಂಗ್ಲಿಷ್‌ ಪಾಠ ಶೀಘ್ರದಲ್ಲಿ ಆರಂಭ !


Team Udayavani, May 9, 2019, 6:00 AM IST

Naveen-D-Padil

ಕೋಸ್ಟಲ್‌ವುಡ್‌ ಸಿನೆಮಾದಲ್ಲಿ ಹೊಸ ಮನ್ವಂತರ ಸೃಷ್ಟಿಸಿದ ಖ್ಯಾತ ನಿರ್ದೇಶಕ ಸೂರಜ್‌ ಶೆಟ್ಟಿ ಅವರ “ಇಂಗ್ಲಿಷ್‌’ ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಕಾಮಿಡಿಯನ್ನೇ ಮುಖ್ಯ ನೆಲೆಯಲ್ಲಿಟ್ಟು ಮಾಡಿರುವ ಈ ಸಿನೆಮಾ ತುಳು ಸಿನೆಮಾಕ್ಕೆ ಹೊಸ ಭವಿಷ್ಯ ಒದಗಿಸಲಿದೆ ಎಂಬುದು ಕೋಸ್ಟಲ್‌ವುಡ್‌ ಅಭಿಪ್ರಾಯ.

ವಿಭಿನ್ನ ಟೈಟಲ್‌ಗ‌ಳ ಮೂಲಕವೇ ಕೋಸ್ಟಲ್‌ವುಡ್‌ನ‌ಲ್ಲಿ ಸಕ್ಸಸ್‌ ಸಿನೆಮಾಗಳನ್ನು ನೀಡಿದ ಸೂರಜ್‌ ಅವರ “ಎಕ್ಕಸಕ್ಕ’,”ಪಿಲಿಬೈಲ್‌ ಯಮುನಕ್ಕ’, “ಅಮ್ಮೆರ್‌ ಪೊಲೀಸಾ’ ಹಿಟ್‌ ಆದ ಬಳಿಕ ಈಗ ನಾಲ್ಕನೇ ಸಿನೆಮಾವಾಗಿ “ಇಂಗ್ಲಿಷ್‌’ ಮಾಡುತ್ತಿದ್ದಾರೆ. ಬಹುತೇಕ ಶೂಟಿಂಗ್‌ ಮುಗಿಸಿದ ಈ ಸಿನೆಮಾ ಕೊನೆಯ ಹಂತದ ಸಿದ್ಧತೆಯಲ್ಲಿದೆ. ಖ್ಯಾತ ಉದ್ಯಮಿ, “ಮಾರ್ಚ್‌ 22′, “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎಂಬ ಕನ್ನಡ ಸಿನೆಮಾ ನಿರ್ಮಿಸಿದ ಹರೀಶ್‌ ಶೇರಿಗಾರ್‌ ನಿರ್ಮಾಣದಲ್ಲಿ “ಇಂಗ್ಲಿಷ್‌’ ರೆಡಿಯಾಗುತ್ತಿದೆ.

ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು, ದೀಪಕ್‌ ರೈ ಪಾಣಾಜೆ, ವಿಸ್ಮಯ ವಿನಾಯಕ್‌, ಸಂದೀಪ್‌ ಶೆಟ್ಟಿ, ಪ್ರಸನ್ನ ಬೈಲೂರು ಸೇರಿದಂತೆ ತುಳುನಾಡಿನ ಸ್ಟಾರ್‌ ಕಲಾವಿದರನ್ನು ಇಟ್ಟುಕೊಂಡು ಮಾಡಿರುವ ಸಿನೆಮಾ ಇದಾಗಿರುವುದರಿಂದ ಇಲ್ಲಿ ನಿರೀಕ್ಷೆ ಬಹಳಷ್ಟಿದೆ. ಪೃಥ್ವಿ ಅಂಬರ್‌ ಹಾಗೂ ನವ್ಯಾ ಪೂಜಾರಿ ಮುಖ್ಯಭೂಮಿಕೆಯಲ್ಲಿದ್ದಾರೆ. ಮಣಿಕಾಂತ್‌ ಕದ್ರಿ ಸಂಗೀತ, ಶಶಿರಾಜ್‌ ಕಾವೂರು ಹಾಗೂ ಅರ್ಜುನ್‌ ಲೂಯಿಸ್‌ ಸಾಹಿತ್ಯ, ಕೆಮರಾ ಕೃಷ್ಣ ಸಾರಥಿ, ಸಂಕಲನವನ್ನು ಮನು ನಡೆಸುತ್ತಿದ್ದಾರೆ.

ಅಮ್ಮೆರ್‌ ಪೊಲೀಸಾ ಸಿನೆಮಾದ ಬಳಿಕ ಸೂರಜ್‌ ಏನು ಮಾಡುತ್ತಾರೆ? ಎಂಬ ಪ್ರಶ್ನೆ ಕೋಸ್ಟಲ್‌ವುಡ್‌ನ‌ಲ್ಲಿ ಕೇಳಿಬರುತ್ತಿತ್ತು. ಆ ವೇಳೆಗೆ ಇಂಗ್ಲೀಷ್‌ ಸಿನೆಮಾದ ಬಗ್ಗೆ ಗುಸುಗುಸು ಕೇಳಿಬರುತ್ತಿತ್ತು. ಅದಾಗಲೇ ಸೂರಜ್‌ “ಸನ್‌ ಆಫ್‌ ಬಿಸತ್ತಿಬಾಬು’ ಎಂಬ ಸಿನೆಮಾ ಮಾಡುತ್ತಾರೆ ಎಂಬ ಸುದ್ದಿಯೂ ಕೋಸ್ಟಲ್‌ವುಡ್‌ ಗಲ್ಲಿಯಲ್ಲಿ ಹರಿದಾಡಿತ್ತು. ಅಷ್ಟರಲ್ಲೇ “ನಾನ್‌ವೆಜ್‌’ ಎಂಬ ಕನ್ನಡ ಸಿನೆಮಾ ಮಾಡುತ್ತಾರೆ ಎಂಬ ಬಗ್ಗೆಯೂ ಕೆಲವರು ಮಾತನಾಡಿದರು. ಹೀಗಾಗಿ ಸೂರಜ್‌ ಅಧಿಕೃತವಾಗಿ ತತ್‌ಕ್ಷಣಕ್ಕೆ ಯಾವ ಸಿನೆಮಾ ಮಾಡುತ್ತಾರೆ ಎಂಬ ಬಗ್ಗೆ ಕೋಸ್ಟಲ್‌ವುಡ್‌ನ‌ಲ್ಲಿ ಸಹಜವಾಗಿ ಕುತೂಹಲ ಸೃಷ್ಟಿಯಾಗಿತ್ತು. ಈಗ ಈ ಕುತೂಹಲಕ್ಕೆ ಬ್ರೇಕ್‌ ಬಿದ್ದಿದ್ದು, ಸಿನೆಮಾ ರಿಲೀಸ್‌ನ ಹೊಸ್ತಿಲಲ್ಲಿದೆ.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.