ಮುಂದಿನ ತಿಂಗಳು “ಜಬರ್ದಸ್ತ್ ಶಂಕರ’ನ ಎಂಟ್ರಿ

Team Udayavani, Sep 19, 2019, 5:00 AM IST

q-11

ಕೋಸ್ಟಲ್‌ವುಡ್‌ನ‌ಲ್ಲಿ ಗಿರಿಗಿಟ್‌ ಮೂಡಿಸಿದ ಹವಾ ತುಳುನಾಡಿನ ಚಿತ್ರಲೋಕದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ತುಳುನಾಡಿನ ಮನೆಮಂದಿಯೆಲ್ಲ ಸಿನೆಮಾ ನೋಡುವಂತೆ ಮಾಡಿದ ಗಿರಿಗಿಟ್‌ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಮಯದಲ್ಲಿಯೇ ಕೋಸ್ಟಲ್‌ವುಡ್‌ನ‌ ಎವರ್‌ಗ್ರೀನ್‌ ದೇವದಾಸ್‌ ಕಾಪಿಕಾಡ್‌ ನಿರ್ದೇಶನದ “ಜಬರ್ದಸ್ತ್ ಶಂಕರ’ ಸಿನೆಮಾ ರಿಲೀಸ್‌ಗೆ ಎಲ್ಲಾ ಸಿದ್ಧತೆ ನಡೆಯುತ್ತಿದೆ. ಚಿತ್ರತಂಡದ ಪ್ರಕಾರ ಮುಂದಿನ ತಿಂಗಳು ಶಂಕರನ ಎಂಟ್ರಿ ಆಗುವುದು ಪಕ್ಕಾ.

ಈಗಾಗಲೇ ಸಿನೆಮಾದ ಎಲ್ಲ ಹಂತಗಳನ್ನು ಮುಗಿಸಿರುವ ಚಿತ್ರತಂಡ ಹಾಡಿನ ಕೊನೆಯ ದೃಶ್ಯಗಳ ಶೂಟಿಂಗ್‌ಗೆ ಪ್ಲ್ಯಾನ್‌ ಹಾಕಿಕೊಂಡಿದೆ. ಹೆಚ್ಚಾ ಕಡಿಮೆ ಒಂದೆರಡು ದಿನದೊಳಗೆ ಹಾಡಿನ ಚಿತ್ರೀಕರಣ ಪೂರ್ಣಗೊಳ್ಳಲಿದೆ. ವಿಶೇಷವೆಂದರೆ ತುಳು ಸಿನೆಮಾದಲ್ಲಿಯೇ ವಿಭಿನ್ನ ರೀತಿಯಲ್ಲಿ ಹಾಡಿನ ಚಿತ್ರೀಕರಣ ನಡೆಸಲಾಗುತ್ತಿದೆ.

ಕೋಸ್ಟಲ್‌ವುಡ್‌ನ‌ಲ್ಲಿ ಡೈನಾಮಿಕ್‌ ಹೀರೋ ಆಗಿ ಗುರುತಿಸಿಕೊಂಡಿರುವ ಅರ್ಜುನ್‌ ಕಾಪಿಕಾಡ್‌ ಜಬರ್ದಸ್ತ್ ಶಂಕರನಾಗಿ ವಿಭಿನ್ನ ಲುಕ್‌ನಲ್ಲಿ ಸಿನಿ ಪ್ರಿಯರ ಮುಂದೆ ಎಂಟ್ರಿಯಾಗಲಿದ್ದಾರೆ. ತುಳು ಮತ್ತು ಕನ್ನಡದ ಸುಮಾರು 15ರಷ್ಟು ಸಿನೆಮಾಗಳಲ್ಲಿ ನಟಿಸಿರುವ ಅರ್ಜುನ್‌ಗೆ ಈ ಸಿನೆಮಾ ವಿಭಿನ್ನ ಹಾಗೂ ಬಹುನಿರೀಕ್ಷಿತ.

ತೆಲಿಕೆದ ಬೊಳ್ಳಿ, ರಂಗ್‌, ಚಾಲಿಪೋಲಿಲು, ಒರಿಯನ್‌ ತೂಂಡ ಒರಿಯಗಾಪುಜಿ, ಮಧುರ ಸ್ವಪ್ನ (ಕನ್ನಡ), ದಂಡ್‌, ಚಂಡಿಕೋರಿ, ಬರ್ಸ, ಯೋಗರಾಜ್‌ ಭಟ್‌ ಅವರ ಮುಗುಳು ನಗೆ (ಕನ್ನಡ), ಅರೆ ಮರ್ಲೆರ್‌, ಏರಾ ಉಲ್ಲೆರ್‌ಗೆ, ಕರ್ಣೆ ಮುಂತಾದ ಸಿನೆಮಾಗಳ ಮೂಲಕ ಅರ್ಜುನ್‌ ಈಗಾಗಲೇ ಮನೆಮಾತಾಗಿದ್ದಾರೆ. ಕನ್ನಡದಲ್ಲಿ ತೆರೆಕಾಣಲಿರುವ “ಮಾಲ್ಗುಡಿ ಕಾ ಡೇಸ್‌’, ತುಳುವಿನ “ರಾಹುಕಾಲ ಗುಳಿಗ ಕಾಲ’ ಚಿತ್ರದಲ್ಲಿಯೂ ನಟಿಸಿದ್ದಾರೆ.

ಜಬರ್ದಸ್ತ್ ಶಂಕರನ ಬಗ್ಗೆ ಅರ್ಜುನ್‌ ಹೇಳುವ ಪ್ರಕಾರ “ಇದೊಂದು ವಿಭಿನ್ನ ಕಥೆಯ ಸಿನೆಮಾ. ಹೊಸ ಪರಿಕಲ್ಪನೆಯಲ್ಲಿ ಮೇಕಿಂಗ್‌ ಮಾಡಲಾಗಿದೆ. ಕಥೆ, ಚಿತ್ರಕಥೆ, ಸಾಹಿತ್ಯ, ನಿರ್ದೇಶನ ಎಲ್ಲವೂ ದೇವದಾಸ್‌ ಕಾಪಿ ಕಾಡ್‌ ಅವ ರದ್ದು. ನಾನು ನಟ ಹಾಗೂ ಸಹ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದೇನೆ. ಸುಜೀತ್‌ ನಾಯಕ್‌ ಅವರ ಸಂಕಲನ, ಮಣಿಕಾಂತ್‌ ಕದ್ರಿ ಅವರ ಸಂಗೀತ ಈ ಚಿತ್ರಕ್ಕಿದೆ. ಜಲನಿಧಿ ಫಿಲ್ಮ್ನಡಿ ಅನಿಲ್‌ ಕುಮಾರ್‌, ಲೋಕೇಶ್‌ ಕೋಟ್ಯಾನ್‌ ಹಾಗೂ ರಾಜೇಶ್‌ ಕುಡ್ಲ ಈ ಸಿನೆಮಾ ನಿರ್ಮಾಣ ಮಾಡಿದ್ದಾರೆ.

ಸಿದ್ದು ಹಾಗೂ ಉದಯ ಬಲ್ಲಾಳ್‌ ಛಾಯಾಗ್ರಹಣ ಮಾಡಿದ್ದಾರೆ. ಮಾಸ್‌ ಮಾದ ಅವರ ಸಾಹಸ ಹಾಗೂ ಸ್ಟಾರ್‌ ಗಿರಿ, ವಿನಾಯಕ್‌ ಪಿಳ್ಳೆ ನೃತ್ಯ ನಿರ್ದೇಶನವಿದೆ ಎನ್ನುತ್ತಾರೆ.
ನಿರ್ಮಾಪಕ ರಾಜೇಶ್‌ ಕುಡ್ಲ ಅವರು ಮಾತನಾಡಿ, ಸಿನೆಮಾದ ತಾರಾಗಣದಲ್ಲಿ ಅರ್ಜುನ್‌ ಕಾಪಿಕಾಡ್‌, ನೀತಾ ಅಶೋಕ್‌, ರಾಶಿ, ತೆಲಿಕೆದ ಬೊಳ್ಳಿ ದೇವದಾಸ್‌ ಕಾಪಿಕಾಡ್‌, ಸಾಯಿಕೃಷ್ಣ ಕುಡ್ಲ, ಗೋಪಿನಾಥ್‌ ಭಟ್‌, ಚೇತನ್‌ ರೈ, ಸಿನೀಲ್‌ ನೆಲ್ಲಿಗುಡ್ಡೆ, ಲಕ್ಷ್ಮಣ್‌ ಮಲ್ಲೂರು, ಅರುಣ್‌ ಬಿ.ಸಿ.ರೋಡ್‌, ಮಿಮಿಕ್ರಿ ಶರಣ್‌, ತಿಮ್ಮಪ್ಪ ಕುಲಾಲ್‌, ಸುರೇಶ್‌ ಕುಲಾಲ್‌, ಚಂದ್ರಹಾಸ್‌ ಮಾಣಿ, ಹರೀಶ್‌ ಆಲದಪದವು, ಗಾಳಿಪಟ ಹರೀಶ್‌ ಮುಂತಾದವರು ಸಿನೆಮಾದಲ್ಲಿದ್ದಾರೆ. ವಿಭಿನ್ನ ಮ್ಯಾನರಿಸಂನಲ್ಲಿ ಸಿನೆಮಾ ರೆಡಿ ಮಾಡಲಾಗಿದೆ. ಕಥೆ ಹಾಗೂ ಕಾಮಿಡಿ ಎರಡನ್ನೂ ಜತೆಯಾಗಿ ಇದರಲ್ಲಿ ಹೆಣೆಯಲಾಗಿದ್ದು, ಕೋಸ್ಟಲ್‌ವುಡ್‌ನ‌ಲ್ಲಿ ಇದೊಂದು ವಿನೂತನ ಪ್ರಯೋಗ ಎಂದೆನಿಸಲಿದೆ’ ಎನ್ನುತ್ತಾರೆ.

-  ದಿನೇಶ್‌ ಇರಾ

ಟಾಪ್ ನ್ಯೂಸ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.