ಕುಡ್ಲದಲ್ಲಿ “ಕಾರ್ನಿಕೊದ ಕಲ್ಲುರ್ಟಿ’

Team Udayavani, Oct 10, 2019, 5:28 AM IST

ಕೋಸ್ಟಲ್‌ವುಡ್‌ನ‌ಲ್ಲಿ ಸದ್ದಿಲ್ಲದೆ ಶೂಟಿಂಗ್‌ ಆದ ಸಿನೆಮಾ “ಕಾರ್ನಿಕೊದ ಕಲ್ಲುರ್ಟಿ’ ಸಿನೆಮಾ. ತುಳು ನಾಡಿನ ಕಾರಣಿಕದ ದೈವವಾದ ಕಲ್ಲುರ್ಟಿಯ ಕುರಿತಾಗಿ ಮೂಡಿಬಂದಿರುವ ಈ ಸಿನೆಮಾ ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. “ಕಾರ್ನಿಕೊದ ಕಲ್ಲುರ್ಟಿ’ ಸಿನೆಮಾದ ಎಲ್ಲ ಹಂತದ ಸಿದ್ಧತೆಗಳು ಪೂರ್ಣಗೊಂಡಿದ್ದು, ಶೀಘ್ರವೇ ತೆರೆಕಾಣುವ ನಿರೀಕ್ಷೆಯಲ್ಲಿದೆ.

ಚಿತ್ರತಂಡದ ಪ್ರಕಾರ ಈ ಸಿನೆಮಾ ಬಿಗ್‌ಬಜೆಟ್‌ನಲ್ಲಿ ಮೂಡಿಬಂದಿದೆ. ಸುಮಾರು 1.25 ಕೋಟಿ ರೂ. ವೆಚ್ಚವಾಗಿದ್ದು, ತುಳು ಚಿತ್ರರಂಗದಲ್ಲಿ ಇದೊಂದು ಹೊಸ ಮೈಲುಗಲ್ಲು ಎಂದೇ ಗುರುತಿಸಿದೆ.

ಅತ್ಯಂತ ದೊಡ್ಡ ಬಜೆಟ್‌ ಚಿತ್ರವಾಗಿರುತ್ತದೆ. ಚಿತ್ರವು ಅದ್ಭುತವಾಗಿ ಮೂಡಿಬಂದಿದ್ದು, ಕಥೆ, ಗ್ರಾಫಿಕ್‌, ಸಂಗೀತ ಮುಖ್ಯ ಪಾತ್ರ ವಹಿಸಲಿದೆ. ಕನ್ನಡ ಚಿತ್ರರಂಗದಲ್ಲಿ ತಮ್ಮ ಹೊಸ ಶೈಲಿ ಸಂಗೀತದಿಂದ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವ ಹೀತನ್‌ ಹಾಸನ್‌ರವರು ಮೊದಲ ಬಾರಿಗೆ ತುಳು ಚಿತ್ರರಂಗದಲ್ಲಿ 5 ಅದ್ಭುತ ಹಾಡುಗಳನ್ನು ನೀಡುವ ಮೂಲಕ ತುಳು ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ.

ಉದ್ಯಮಿ ಹಾಗೂ ಹಲವು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದ ಮಹೇಂದ್ರ ಕುಮಾರ್‌ ಅವರು ಕಲ್ಲುರ್ಟಿ ತಾಯಿಯ ಆರಾಧಕರು. ಹೀಗಾಗಿ ಇದೇ ಕಥೆಯ ಚಿತ್ರವನ್ನು ತುಳುವಿನಲ್ಲಿ ನಿರ್ಮಿಸಿ ನಿರ್ದೇಶನ ಮಾಡಬೇಕೆಂಬ ಒತ್ತಾಸೆಯಿಂದ ಮಾಡಿದ ಸಿನೆಮಾ ಇದು. ತುಳುನಾಡಿನ ಜನರಿಗೆ ಕಲ್ಲುರ್ಟಿ ತಾಯಿಯ ಜೀವನ ಚರಿತ್ರೆಯನ್ನು ವಿಶೇಷವಾಗಿ ನೀಡಬೇಕು ಎಂಬ ಆಶಯದಿಂದ ಈ ಸಿನೆಮಾ ಮಾಡಲಾಗಿದೆ. ಖ್ಯಾತ ನಟ ರಮೇಶ್‌ ಭಟ್‌, ಶೈಲೇಂದ್ರ, ಸುಪ್ರೀತಾ, ರಕ್ಷಿತಾ, ಪ್ರಶಾಂತ್‌, ಶಾಲಿನಿ, ಚಾಂದಿನಿ ತಾರಾಗಣದಲ್ಲಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚರ್ಯರ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ