ಬಿಡುಗಡೆಗೆ ರೆಡಿಯಾಗಿದೆ ‘ನಿರ್ಮಿಲ್ಲೆಂ ನಿರ್ಮೊಣೆಂ’

Team Udayavani, Aug 1, 2019, 5:00 AM IST

ಕೊಂಕಣಿ ಸಿನೆಮಾ ಕ್ಷೇತ್ರದಲ್ಲಿ ಬಹುನಿರೀಕ್ಷೆ ಮೂಡಿಸಿದ ‘ನಿರ್ಮಿಲ್ಲೆಂ ನಿರ್ಮೊಣೆಂ’ ಸಿನೆಮಾ ಸದ್ಯ ಹಾಡಿನ ಮೂಲಕ ಮೋಡಿ ಮಾಡುತ್ತಿದೆ. ಕೆಲವೇ ದಿನದಲ್ಲಿ ರಿಲೀಸ್‌ ಆಗಲಿರುವ ಈ ಸಿನೆಮಾದ ಆಡಿಯೋ ಹಾಗೂ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿತ್ತು.

ಹೆನ್ರಿ ಡಿ ಸಿಲ್ವ ನಿರ್ಮಾಪಕತ್ವದಲ್ಲಿ ಮೆಲ್ವಿನ್‌ ಎಲ್ಪೆಲ್ ಅವರ ನಿರ್ದೇಶನದಲ್ಲಿ ಈ ಸಿನೆಮಾ ರೆಡಿಯಾಗಿದೆ. ಹೆಚ್ಚು ಕಡಿಮೆ ಆಗಸ್ಟ್‌ ನಲ್ಲಿಯೇ ಈ ಸಿನೆಮಾ ತೆರೆಕಾಣಲಿದೆ ಎಂದು ಹೇಳಲಾಗುತ್ತಿದೆ.

ಸುಮಾರು 42 ದಿನಗಳ ಕಾಲ ಒಟ್ಟು ನಾಲ್ಕು ಹಂತಗಳಲ್ಲಿ ಈ ಸಿನೆಮಾವನ್ನು ಬೆಂಗಳೂರು, ಮಂಗಳೂರು, ಕುಂದಾಪುರ, ಕಾರ್ಕಳ ಮುಂತಾದೆಡೆ ಗಳಲ್ಲಿ ಚಿತ್ರೀಕರಿಸಲಾಗಿದೆ. ಸಿನೆಮಾದ ನಾಯಕರಾಗಿ ಪ್ರತಾಪ್‌ ಮಿನೇಜಸ್‌, ಗೋಡ್ವಿನ್‌, ನಾಯಕಿಯರಾಗಿ ಸೀಮಾ ಬೊತೇಲೊ, ವೀರಾ ಪಿಂಟೋ ಅವರು ನಟಿಸುತ್ತಿದ್ದಾರೆ. ಮೀನಾಕ್ಷಿ ಮಾರ್ಟಿನ್‌, ಹ್ಯಾಂಬರ್ಟ್‌ ಗೋವಾ, ರೋನಿ ಸುರತ್ಕಲ್, ಚಾಲ್ಸ್ ರ್ ಗೋಮ್ಸ್‌, ವಿನ್ನಿ ಫೆರ್ನಾಂಡಿಸ್‌, ನೋರ್ಬರ್ಟ್‌ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಸಂತೋಷ್‌, ಮಿಲನ್‌ ಮರ್ಕಂಜ, ಜೆರಾಲ್ಡ್ ಮತ್ತು ರಾಯನ್‌ ಅವರು ಸಹಾಯಕ ನಿರ್ದೇಶಕರಾಗಿ ದುಡಿದಿ ದ್ದಾರೆ. ಚಿತ್ರಕಥೆಯನ್ನು ನೋರ್ಬರ್ಟ್‌ ಜಾನ್‌ ಅವರು ಬರೆದಿದ್ದಾರೆ.

ಅವರು ಸಹ ನಿರ್ದೇಶಕರೂ ಆಗಿದ್ದಾರೆ. ಕೆಮರಾದಲ್ಲಿ ಮಂಜುನಾಥ್‌ ಅವರು ದುಡಿದಿದ್ದಾರೆ. ರೆಬಿಂಬಸ್‌ ಮತ್ತು ಆರ್‌. ಪಾಪನ್‌ ಜೋಸ್ವಿನ್‌ ಅವರ ಸಾಹಿತ್ಯ ಚಿತ್ರಕ್ಕಿದೆ. ಪ್ರೀತಿಸುವ ಹೃದಯಗಳ ತಳಮಳಗಳ ಕುರಿತಾಗಿ ಚಿತ್ರದ ಕಥೆ ಸಾಗುತ್ತಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಉತ್ತರ ಕೇರಳದ ಅತ್ಯಂತ ಸುಂದರ ಜಿಲ್ಲೆ ವಯನಾಡ್‌... ಈ ಸ್ಥಳ ತನ್ನ ಹಸುರು ಸೌಂದರ್ಯದ ಕಂಗೊಳಿಸುತ್ತಿರುವ ಈ ನಾಡು ಪ್ರಕೃತಿ ಸೌಂದರ್ಯದಿಂದ ಕಣ್ಣಕಟ್ಟುತ್ತದೆ. ತಿರುವು...

  • ಪೊಡಿ ದಾಮು ನಾಪತ್ತೆಯಾಗಿದ್ದಾರೆ. ಎಲ್ಲಾದರೂ ಇವರು ಸಿಕ್ಕರೆ ಹುಡುಕಿಕೊಡಿ ಅಂತ ಪೋಸ್ಟರ್‌ಗಳನ್ನು ಮಂಗಳೂರಿನೆಲ್ಲೆಡೆ ಹಾಕಲಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿಯೂ...

  • ಭೋಜರಾಜ್‌ ವಾಮಂಜೂರು ಮತ್ತೆ ಬ್ಯುಸಿಯಾಗಿದ್ದಾರೆ. ತನ್ನದೇ ಟೈಟಲ್‌ನಲ್ಲಿ ಸಿದ್ಧªಗೊಳ್ಳುತ್ತಿರುವ ಸಿನೆಮಾದಲ್ಲಿ ಭೋಜರಾಜ್‌ ತೊಡಗಿಸಿಕೊಂಡಿದ್ದಾರೆ. ವಿಶೇಷವೆಂದರೆ;...

  • ಕುಟುಂಬ ಪ್ರವಾಸದಿಂದ ಹತ್ತಾರು ಪ್ರಯೋಜನಗಳಿವೆ. ಸಂಬಂಧದ ಬಂಧ ಇನ್ನಷ್ಟು ಗಟ್ಟಿಗೊಳಿಸಲು ಇದೊಂದು ಒಳ್ಳೆಯ ಉಪಕ್ರಮ. ನಿತ್ಯವೂ ದಣಿದ ನಮಗೂ ಲಾಭ. ಇನ್ನೂ ಬದುಕಿನ...

  • ಸದ್ಯ ಒಂದೊಂದೇ ಹಾಡುಗಳ ಮೂಲಕ ಕೋಸ್ಟಲ್‌ವುಡ್‌ ಸುದ್ದಿಯಲ್ಲಿದೆ. ಭಿನ್ನ-ವಿಭಿನ್ನ ಸಾಹಿತ್ಯ ಹಾಗೂ ಸಂಗೀತದ ಮೂಲಕ ಕೆಲವು ಹಾಡುಗಳು ಚಿತ್ರಪ್ರೇಮಿಗಳ ಮನಸ್ಸು...

ಹೊಸ ಸೇರ್ಪಡೆ