ಕೋಸ್ಟಲ್ ವುಡ್ ನಾಯಕಿಗೆ ಸ್ಯಾಂಡಲ್‌ವುಡ್ ಆಫರ್
Team Udayavani, Sep 20, 2018, 1:22 PM IST
ಇನ್ನಷ್ಟೇ ತೆರೆ ಕಾಣಬೇಕಾಗಿರುವ ಬಲಿಪೆ ತುಳು ಚಿತ್ರದ ನಾಯಕಿಗೆ ಈ ಸ್ಯಾಂಡಲ್ ವುಡ್ ನಿಂದ ಆಫರ್ ಬಂದಿದೆ. ಅಮ್ಮೆರ್ ಪೊಲೀಸ್, ಅಪ್ಪೆ ಟೀಚರ್ ಚಲನಚಿತ್ರದ ಮೂಲಕ ಗುರುತಿಸಿಕೊಂಡ ಪುತ್ತೂರಿನ ಅಂಕಿತಾ ಪಟ್ಲ ಅವರು ಬಲಿಪೆ ಚಿತ್ರೀಕರಣವನ್ನು ಈಗಷ್ಟೇ ಮುಗಿಸಿದ್ದು, ಅಷ್ಟರಲ್ಲೇ ಸ್ಯಾಂಡಲ್‌ವುಡ್ ಕದ ತಟ್ಟಲು ಸಿದ್ಧರಾಗಿದ್ದಾರೆ.
ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಪದವಿ ವಿದ್ಯಾರ್ಥಿನಿ ಆಗಿದ್ದಾಗಲೇ ಲಾಸ್ಟ್ ಸೆಮಿಸ್ಟರ್ ಆಲ್ಬಂ ಸಾಂಗ್ ಒಂದಕ್ಕೆ ಹೆಜ್ಜೆ ಹಾಕಿದ್ದು,ಅವರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಯಿತು. ಬಳಿಕ ರೂಲ್ 129 ಎಂಬ ಸಾಕ್ಷ್ಯಚಿತ್ರದಲ್ಲಿ ಬಣ್ಣ ಹಚ್ಚಿದರು. ಸಾಕ್ಷ್ಯಚಿತ್ರಗಳಿಂದಾಗಿ ಸಿಕ್ಕಿದ ಮನ್ನಣೆ ಸಿನೆಮಾ ರಂಗಕ್ಕೆ ಪ್ರವೇಶಿಸುವಂತೆ ಮಾಡಿತು. ಅಮ್ಮೆರ್ ಪೊಲೀಸ್ ಸಿನೆಮಾದ ನಾಲ್ಕೇ ನಾಲ್ಕು ಸೀನ್ ಗಳಲ್ಲಿ ಕಾಣಿಸಿಕೊಂಡರು. ಇದರಿಂದಾಗಿ ಅಪ್ಪೆ ಟೀಚರ್ ಸಿನೆಮಾದಲ್ಲಿ ಅವಕಾಶ ಸಿಕ್ಕಿತು. ಅಷ್ಟರಲ್ಲೇ ಅದೃಷ್ಟ ಖುಲಾಯಿಸಿದ್ದು, ಬಲಿಪೆ ಸಿನೆಮಾದ ನಾಯಕಿ ನಟಿಯಾಗಿ ಆಯ್ಕೆಯಾದರು.
ವಿದ್ಯಾರ್ಥಿ ದೆಸೆಯಲ್ಲಿಯೇ ಸಿನೆಮಾ ರಂಗದ ಕದ ತಟ್ಟಿದವರು ಅಂಕಿತಾ. ಬಿ.ಎ. ಪತ್ರಿಕೋದ್ಯಮ ಪದವಿ ಮುಗಿಸುತ್ತಿದ್ದಂತೆ ಕಿರುತೆರೆಯೂ ಕೈಬೀಸಿ ಕರೆಯಿತು. ಎಂಸಿಜೆ ಮಾಡಬೇಕು ಎಂಬ ಅಪೇಕ್ಷೆ ಇದ್ದರೂ, ಸಿನೆಮಾ ರಂಗದ ಒಲವೇ ಹೆಚ್ಚಾಯಿತು. ಇದರ ನಡುವೆ ಶಾಂತಂ ಪಾಪಂನಲ್ಲೂ ಅಭಿನಯಿಸಿ ಬಂದರು. ಅಷ್ಟರಲ್ಲಿಯೇ ಕನ್ನಡ ಸಿನೆಮಾವೊಂದರ ನಾಯಕಿ ನಟಿಯಾಗಿ ಆಯ್ಕೆ ಆಗಿದ್ದಾರೆ. ಸಿನೆಮಾದ ಹೆಸರು, ನಾಯಕ ನಟ, ನಿರ್ದೇಶಕರ ಬಗ್ಗೆ ಯಾವುದೇ ಸುಳಿವು ಬಿಟ್ಟು ಕೊಟ್ಟಿಲ್ಲ. ಸ್ಯಾಂಡಲ್‌ವುಡ್ ಆಫರ್ ಬಂದಿದೆ. ಅಂತಿಮ ಹಂತದಲ್ಲಿದೆ ಎನ್ನುತ್ತಾರೆ ನಾಯಕಿ ಅಂಕಿತಾ.
ಕೋಸ್ಟಲ್‌ವುಡ್‌ನ ಬಲಿಪೆ ಈಗಾಗಲೇ ಶೂಟಿಂಗ್ ಮುಗಿಸಿದೆ. ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಬಿಡುಗಡೆ ಕಾಣುವ ನಿರೀಕ್ಷೆ ಇದೆ. ಇದರಲ್ಲಿ ಅಂಕಿತಾ ಅವರದ್ದು ವೈದ್ಯೆಯ ಪಾತ್ರ. ಆಸಕ್ತಿ ಇದ್ದರೂ, ಸ್ವಲ್ಪ ಕೀಳರಿಮೆ ಇತ್ತು. ಹೆತ್ತವರ ಪ್ರೋತ್ಸಾಹದಿಂದ ಇಲ್ಲಿವರೆಗೆ ತಲುಪಿದ್ದೇನೆ. ಒಂದು ವೇಳೆ ಸಿನೆಮಾದಲ್ಲಿ ಮುಂದುವರಿಯಲು ಸಾಧ್ಯವಾಗದಿದ್ದರೆ ಉಪನ್ಯಾಸಕಿ ಆಗಬೇಕೆಂಬ ಕನಸಿದೆ ಎನ್ನುತ್ತಾರೆ ಅಂಕಿತಾ ಪಟ್ಲ.
ಗಣೇಶ್ ಎನ್. ಕಲ್ಲರ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021
ಸಿದ್ದರಾಮಯ್ಯ ಬಳಿ ಏನೂ ಇಲ್ಲ ಬರೀ ಬೂಟಾಟಿಕೆ ಮಾಡ್ತಾರೆ: ಡಿ.ವಿ. ಸದಾನಂದ ಗೌಡ
ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರುಇನ್ನಿಲ್ಲ | Udayavani News Bulletin 6-3-21
ಮುಂಬೈನಲ್ಲೇನೂ ನಡೆದಿಲ್ಲ, ನಮ್ಮ ಕೈ, ಬಾಯಿ ಶುದ್ಧವಿದೆ: ಸಚಿವ ಭೈರತಿ ಬಸವರಾಜ್
ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ
ಹೊಸ ಸೇರ್ಪಡೆ
ನಿನಗೆ ಬೇರೆ ಹೆಸರು ಬೇಕೇ.. ಸ್ತ್ರೀ ಎಂದರೆ ಅಷ್ಟೇ ಸಾಕೆ..!
Live; ರಾಜ್ಯ ಬಜೆಟ್ ಮಂಡಿಸಿದ ಬಿಎಸ್ ವೈ; ಬಜೆಟ್ ಮಂಡನೆ ವಿರೋಧಿಸಿ ಕಾಂಗ್ರೆಸ್ ಸಭಾತ್ಯಾಗ
ಮೀಸಲಿಗಾಗಿ ಪಂಚಮಸಾಲಿ ಹೋರಾಟ : ಸ್ವಾಮೀಜಿ ಮನವೊಲಿಕೆಗೆ ತೆರೆಮರೆ ಯತ್ನ?
ಕೊಡಗಿನಲ್ಲಿ ವ್ಯಾಘ್ರ ಅಟ್ಟಹಾಸ: 8 ವರ್ಷದ ಬಾಲಕನನ್ನು ಕೊಂದು ಹಾಕಿದ ಹುಲಿ
ಸುದ್ದಿ ಸುತ್ತಾಟ : ಹನಿಟ್ರ್ಯಾಪ್ ಮಾಯಾಜಾಲದ ಹಿಂದೆ – ಮುಂದೆ