ಮನೆ ಮುಂದೆ ಸುಂದರ ಕೊಳ


Team Udayavani, May 18, 2019, 6:00 AM IST

23

ಬಿಸಿಲಿ ಝಳ ಹೆಚ್ಚಾಗುತ್ತಿದ್ದಂತೆ ಸೆಕೆಯೂ ಕಿರಿಕಿರಿ ಉಂಟು ಮಾಡುತ್ತಿದೆ. ಇದರಿಂದ ಎಷ್ಟೋ ಬಾರಿ ಮನೆಯಲ್ಲಿ ಒಂದು ಸ್ವಿಮಿಂಗ್‌ಪೂಲ್ ಇದ್ದರೆ ಒಳ್ಳೆಯದಿತ್ತು ಎಂದು ಎಲ್ಲರಿಗೂ ಅನಿಸುವುದುಂಟು. ಆದರೆ ಇದರ ನಿರ್ಮಾಣ ವೆಚ್ಚ ದುಬಾರಿಯಾಗಿರುವುದರಿಂದ ಮತ್ತು ಇದಕ್ಕಾಗಿ ಕೆಲವೊಂದು ನಿಯಮಗಳಿರುವುದರಿಂದ ಹೆಚ್ಚಿನವರು ಸ್ವಿಮ್ಮಿಂಗ್‌ ಪೂಲ್ ನಿರ್ಮಾಣಕ್ಕೆ ಹಿಂದೇಟು ಹಾಕುತ್ತಾರೆ. ಮನಸ್ಸು ಮಾಡಿದರೆ ಯಾವುದೂ ಕಷ್ಟವಲ್ಲ.

ಆದರೆ ಅದನ್ನು ಯಾವ ರೀತಿಯಲ್ಲಿ ಮಾಡಬೇಕು? ಹೇಗೆ ಮಾಡಿದರೆ ಉತ್ತಮ ಎಂಬ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಮೊದಲು ಮನೆಯಲ್ಲಿ ಕೊಳಗಳಿದ್ದರೆ ಅದು ಬಹಳ ದೊಡ್ಡ ಮನೆ ಎಂದೆ ಭಾವಿಸುವುದಿತ್ತು. ಆದರೆ ಇಂದು ಬಹುತೇಕ ಮನೆಗಳಲ್ಲಿ, ನಗರಗಳ ಫ್ಲ್ಯಾಟ್ಗಳಲ್ಲಿ ಈಜು ಕೊಳಗಳು ಸರ್ವೇ ಸಾಮಾನ್ಯ. ಇದರಲ್ಲಿ ಒಳಾಂಗಣ ಮತ್ತು ಹೊರಾಂಗಣ ಈಜು ಕೊಳಗಳೆಂಬ ಎರಡು ವಿಧಗಳಿವೆ. ಮನೆ ವಿಶಾಲವಾಗಿದ್ದವರು ದೊಡ್ಡ ದೊಡ್ಡ ಕೊಳಗಳನ್ನು ನಿರ್ಮಿಸಿಕೊಳ್ಳುತ್ತಾರೆ. ಇನ್ನು ಕೆಲವರು ಮಹಡಿಗಳಲ್ಲಿ ಅಥವಾ ಹಾಲ್ಗಳಲ್ಲಿ ಸಣ್ಣದಾಗಿ ನಿರ್ಮಿಸುತ್ತಾರೆ. ಇದು ಅವರವರ ಆಸಕ್ತಿಗೆ ಬಿಟ್ಟ ವಿಚಾರ.

ಕೆಲವು ಮನೆಗಳಲ್ಲಿ ನೀರಿನ ಸಮಸ್ಯೆಯಿದ್ದರೆ, ಇನ್ನು ಕೆಲವೆಡೆ ಚಿಕ್ಕ ಮಕ್ಕಳು ಸದಾ ನೀರಿನಲ್ಲಿ ಆಟವಾಡಲು ಇಚ್ಛಿಸುತ್ತಾರೆ. ಇಂತಹ ಸನ್ನಿವೇಶಗಳಲ್ಲಿ ನೀರಿನ ಬಳಕೆ ಸರಿಯಾದ ರೀತಿಯಲ್ಲಿ ಆಗಬೇಕಾಗುತ್ತದೆ. ಹಾಗಾಗಿ ಕೊಳಗಳ ನಿರ್ಮಾಣಕ್ಕೂ ಮುನ್ನ ಅವುಗಳ ನಿರ್ವಹಣೆಯ ಬಗ್ಗೆ ಮಾಹಿತಿ ಪಡೆದುಕೊಂಡೇ ನಿರ್ಮಿಸಿದರೆ ಉತ್ತಮ.

ನಿರ್ಮಾಣ ಹೇಗೆ?
ಈಜು ಕೊಳ ರಚನೆಗೆ ಸರಿಯಾದ ಜಾಗದ ಆಯ್ಕೆ ಬಹು ಮುಖ್ಯ. ಹೆಚ್ಚು ಗಾಳಿ ಮತ್ತು ತುಂಬಾ ಮರಗಳು ಇಲ್ಲದ ಪ್ರದೇಶ ಇವುಗಳ ರಚನೆಗೆ ಸೂಕ್ತ. ಸಂಪೂರ್ಣ ತೆರೆದ ಜಾಗದಲ್ಲಿ ಈಜುಕೊಳಗಳ ನಿರ್ಮಾಣ ಮಾಡಿದರೆ ನೀರು ಬೇಗ ಬಿಸಿಯಾಗುತ್ತದೆ. ಆದ್ದರಿಂದ ಬಿಸಿಲು ಮತ್ತು ತಂಪು ಮಿಶ್ರಿತ ಸ್ಥಳಗಳನ್ನು ಆಯ್ದುಕೊಂಡರೆ ಉತ್ತಮ. ಅದಲ್ಲದೆ ಕೊಳಗಳು ಟೆಲಿಫೋನ್‌ ಅಥವಾ ಎಲೆಕ್ಟ್ರಿಕಲ್ ತಂತಿಗಳ ಕೆಳಗೆ ಇರದ ಹಾಗೆ ಎಚ್ಚರ ವಹಿಸಿ.

ಚರಂಡಿಗಳಿಗೆ ಹತ್ತಿರವಾಗಿ ಕೊಳಗಳನ್ನು ನಿರ್ಮಾಣ ಮಾಡಬೇಡಿ. ಹೀಗಾದಲ್ಲಿ ಚರಂಡಿ ನೀರು ಇಂಗಿ ಈಜುಕೊಳದ ನೀರನ್ನೂ ಕಲುಷಿತಗೊಳಿಸುವ ಸಾಧ್ಯತೆಗಳಿರುತ್ತವೆ. ಒಳಾಂಗಣ ಕೊಳಗಳಲ್ಲಿ ಅತ್ಯಂತ ಜನಪ್ರಿಯತೆ ಹೊಂದಿರುವುದು ಕಾಂಕ್ರೀಟ್, ವಿನೈಲ್ಲೇನ್ಡ್ ಮತ್ತು ಫೈಬರ್‌ಗ್ಲಾಸ್‌ ಮಾದರಿಗಳು. ಇವುಗಳಲ್ಲಿ ಕಾಂಕ್ರೀಟ್ ಪೂಲ್ಗಳನ್ನು ಯಾವ ಆಕಾರದಲ್ಲಿ ಬೇಕಾದರೂ ನಿರ್ಮಿಸಬಹುದು. ಉಳಿದ ಮಾದರಿಯ ಈಜು ಕೊಳಗಳ ನಿರ್ಮಾಣಕ್ಕೆ ಹೋಲಿಸಿದರೆ ಇದರ ನಿರ್ಮಾಣಕ್ಕೆ ತಗಲುವ ಸಮಯ ಸ್ವಲ್ಪ ಜಾಸ್ತಿಯಾದರೂ ಬಾಳಿಕೆ ಹೆಚ್ಚು.

ನಿರ್ವಹಣೆಯ ದೃಷ್ಟಿಯಿಂದ ದೊಡ್ಡ ಕೊಳಗಳ ನಿರ್ಮಾಣಕ್ಕಿಂತ ಚಿಕ್ಕದಾಗಿ ನಿರ್ಮಿಸುವುದೇ ಉತ್ತಮ. ಆಕರ್ಷಕವಾಗಿ ಕಾಣಲೆಂದು ಹಲವಾರು ವಿವಿಧ ಬಗೆಯ ಡಿಸೈನ್‌ಗಳ ಮೊರೆ ಹೋಗುತ್ತಾರೆ. ಆದರೆ ಅವುಗಳ ಬಾಳಿಕೆ ಕಡಿಮೆ ಆಗಿರುವುದರಿಂದ ಆದಷ್ಟು ಸಿಂಪಲ್ಲಾಗಿ ನಿರ್ಮಿಸಲು ನೋಡಿ.

ಅನುಮತಿ ಅಗತ್ಯ

ಮನೆಯಲ್ಲಿ ಈಜು ಕೊಳವನ್ನು ಹೇಗೆ ನಿರ್ವಹಣೆ ಮಾಡುತ್ತೀರಿ ಎನ್ನುವುದಕ್ಕಿಂತ ಮೊದಲು ಅವುಗಳ ನಿರ್ಮಾಣಕ್ಕೆ ಕಡ್ಡಾಯವಾಗಿ ಪೌರ ಅಧಿಕಾರಿಗಳಿಂದ ಅನುಮತಿ ಪಡೆಯಬೇಕಾಗುತ್ತದೆ. ನೀವು ನಿರ್ಮಿಸಲು ಹೊರಟ ಈಜು ಕೊಳ ಖಾಸಗಿಯಾಗಿರಲಿ ಅಥವಾ ಸಾರ್ವಜನಿಕವಾಗಿರಲಿ ಅನುಮತಿ ಪಡೆಯುವುದು ಅತ್ಯಗತ್ಯ.

ಪೂಲ್ ಪಾರ್ಟಿ
ಬೇಸಗೆಯಲ್ಲಿ ಪಾರ್ಟಿಗಳನ್ನು ಕೊಳದಲ್ಲಿ ಮಾಡುವುದು ಇತ್ತೀಚೆಗೆ ಟ್ರೆಂಡ್‌ ಆಗಿ ಬೆಳೆಯುತ್ತಿದೆ. ಇದರಲ್ಲಿ ಕೊಳಗಳ ಬದಿಗಳಲ್ಲಿ ಅತಿಥಿಗಳಿಗೆ ಕುಳಿತುಕೊಳ್ಳಲು ಆಸನ, ತಿಂಡಿ ತಿನಸಿನ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಜತೆಗೆ ಮ್ಯೂಸಿಕ್‌, ವಿವಿಧ ಸ್ಪರ್ಧೆ, ನೃತ್ಯದಂಥ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಇಂಥ ಪಾರ್ಟಿಗಳನ್ನು ಮನೆಯಲ್ಲೇ ಮಾಡಬಹುದಾಗಿದೆ. ಅದಲ್ಲದೆ ಮನೆಯಲ್ಲಿ ಕೊಳವಿದ್ದರೆ ಈಜುವುದನ್ನು ಸುಲಭವಾಗಿ ಕಲಿಯಬಹುದು. ಇದು ಒತ್ತಡ ಜೀವನಕ್ಕೆ ಆರಾಮದಾಯಕವಾಗಿದ್ದು, ಕಡಿಮೆ ನಿದ್ರೆ ಮಾಡುವವರಿಗೆ ಸಹಾಯಕಾರಿ.

ನಿರ್ವಹಣೆ ಹೇಗಿರಬೇಕು?
ವಾರಕ್ಕೊಮ್ಮೆಯಾದರೂ ಈಜು ಕೊಳದ ನೀರನ್ನು ಖಾಲಿ ಮಾಡಿ ತಳದಲ್ಲಿದ್ದ ಸಂಗ್ರಹವಾದ ಮಣ್ಣನ್ನು ಸ್ವಚ್ಛ ಮಾಡಬೇಕು. ಗಾಳಿಗೆ ಮರದ ಎಲೆ, ಕಸ ಕಡ್ಡಿಗಳು ನೀರಿಗೆ ಬೀಳದಂತೆ ಎಚ್ಚರವಹಿಸಬೇಕು. ತಂಪು ವಾತಾವರಣವಿರುವಾಗ ಬೆಚ್ಚನೆಯ ನೀರು ಮತ್ತು ಬೆಚ್ಚನೆಯ ವಾತಾವರಣ ಇರುವಾಗ ತಂಪು ನೀರು ಬರುವ ಹಾಗೆ ಕೊಳದಲ್ಲಿ ವ್ಯವಸ್ಥೆ ಮಾಡಿಕೊಂಡರೆ ಉತ್ತಮ. ಚಿಕ್ಕ ಮಕ್ಕಳಿದ್ದಲ್ಲಿ ಅವರನ್ನು ಆಳದ ಕೊಳಗಳಿಗೆ ಇಳಿಯಲು ಬಿಡಬೇಡಿ. ಬದಲಾಗಿ ಅವರಿಗಾಗಿಯೇ ಚಿಕ್ಕದಾದ, ಕಡಿಮೆ ಅಳದ ಈಜುಕೊಳವೊಂದನ್ನು ನಿರ್ಮಿಸಿ. ಕೆಲವೊಮ್ಮೆ ಕೊಳಗಳ ನಿರ್ಮಾಣದ ಬಳಿಕ ನೀರಿನ ಸೋರಿಕೆ ಕಂಡುಬರುವುದುಂಟು. ಅಂಥವನ್ನು ನಿರ್ಲಕ್ಷಿಸದೇ ದುರಸ್ತಿಗೆ ಮುಂದಾಗಿ.

– ಪ್ರೀತಿ ಭಟ್ ಗುಣವಂತೆ

ಟಾಪ್ ನ್ಯೂಸ್

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.