ಅಲೈವ್‌,  ಇದು ಬದುಕಿನ ಹೋರಾಟ


Team Udayavani, Aug 20, 2018, 3:42 PM IST

20-agust-15.jpg

ಕೇರಳ, ಕೊಡಗಿನಲ್ಲಿ ಭಾರೀ ಮಳೆ, ಪ್ರವಾಹದಂತ ಪ್ರಕೃತಿಯ ಮುನಿಸು ಕಂಡಾಗ ಬದುಕಿನಲ್ಲಿ ಎಲ್ಲವೂ ಕಳೆದುಕೊಂಡವರನ್ನು ನೋಡಿದಾಗ ಹೃದಯ ಭಾರವಾಗುತ್ತದೆ. ಈ ಪರಿಸ್ಥಿತಿಯಲ್ಲೂ ನೆನಪಾಗುವುದು ಫ್ರಾಂಕ್‌ ಮಾರ್ಷಲ್‌ ನಿರ್ದೇ ಶದ 1993ರಲ್ಲಿ ತೆರೆಗೆ ಬಂದ ಹಾಲಿವುಡ್‌ ಚಿತ್ರ ‘ಅಲೈವ್‌. ಮನುಷ್ಯ ಬದುಕಲಿಕ್ಕಾಗಿ ಏನೆಲ್ಲ ಮಾಡಬಲ್ಲ ಎಂಬುದನ್ನು ತೋರಿಸಿರುವ ಚಿತ್ರವಿದು.

ಉರುಗ್ವೆಯ ಫ‌ುಟ್ಬಾಲ್‌ ತಂಡ ಬೇರೆ ದೇಶದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಂಭ್ರಮದಿಂದ ಹೊರಟಿರುತ್ತದೆ. ಆದರೆ ಇವರ ಈ ಸಂಭ್ರಮ ಕೆಲವೇ ಕೆಲವು ಕ್ಷಣಗಳು ಎಂಬ ಅರಿವು ಯಾರಿಗೂ ಇರುವುದಿಲ್ಲ. ಉರುಗ್ವೆ ಆಟಗಾರರು ಕುಳಿತಿದ್ದ ವಿಮಾನ, ಬ್ರಿಟಿಷ್‌ ಕೊಲಂಬಿಯಾದ ಪರ್ಸೆಲ್‌ ಮೌಂಟೆನ್ಸ್  ಎಂಬ ಹಿಮಪರ್ವತಗಳ ಸಾಲಿನಲ್ಲಿ ಅಪಘಾತಕ್ಕೀಡಾಗುತ್ತದೆ. ಈ ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲೇ ಸಾವಿಗೀಡಾದರೆ, ಇನ್ನು ಕೆಲವು ಮಂದಿ ಗಂಭೀರ ಗಾಯಗೊಳ್ಳುತ್ತಾರೆ. ಬದುಕಿರುವ ಮಂದಿ ತಮ್ಮ ಜೀವ ಉಳಿಸಿಕೊಳ್ಳಲು ನಡೆಸುವ ಹೋರಾಟವೇ ಈ ಚಿತ್ರದ ಸಂಪೂರ್ಣ ಕತೆ. 

ವಿಮಾನದಲ್ಲಿದ್ದ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು, ಗಾಯಗೊಂಡವರಿಗೆ ತಮ್ಮಲ್ಲಿದ್ದ ಪ್ರಥಮ ಚಿಕಿತ್ಸೆ ಕಿಟ್‌ಗಳಿಂದ ಉಪಚರಿಸುತ್ತಾರೆ. ಆದರೂ ಕೆಲವರ ಸಾವು ಇಡೀ ಉರುಗ್ವೆಯ ಫ‌ುಟ್ಬಾಲ್‌ ತಂಡವನ್ನು ಸಂಪೂರ್ಣವಾಗಿ ಧೃತಿಗೆಡಿಸುತ್ತದೆ. ಸಹ ಪ್ರಯಾಣಿಕರ ಅಳಿದುಳಿದ ಲಗೇಜುಗಳಲ್ಲಿದ್ದ ವೈನ್‌, ಚಾಕೋಲೆಟ್‌ ಗಳನ್ನು ತಿಂದು ಜೀವ ಉಳಿಸಿಕೊಳ್ಳಲು ಇವರು ಹೋರಾಟವನ್ನೇ ನಡೆಸುತ್ತಾರೆ. ಕೆಲವು ಹೊತ್ತಿನಲ್ಲಿ ಅವೆಲ್ಲವೂ ಖಾಲಿಯಾಗುತ್ತದೆ. ಮುಂದೆ ಎದುರಾಗುವುದು ಅಳಿವು- ಉಳಿವಿನ ಪ್ರಶ್ನೆ.

ಸಾಮಾಜಿಕ ಕಟ್ಟುಪಾಡುಗಳು, ನಿಯಮಗಳು ಎಲ್ಲವನ್ನೂ ಗಾಳಿಗೆ ತೂರಿ ಅಮಾನವೀಯರಂತೆ ಬದುಕುವ ಅನಿವಾರ್ಯತೆ ಎದುರಾದಾಗ ಜೀವ ಉಳಿಸಿಕೊಂಡವರು ತಮ್ಮ ಅಸ್ತಿತ್ವಕ್ಕಾಗಿ, ಬದುಕಲಿಕ್ಕಾಗಿ ಏನೇನು ಮಾಡಬೇಕಾಗುತ್ತೆ ಎಂಬುದನ್ನು ನಿರ್ಮಾಪಕರು ಚಿತ್ರ ದಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾರೆ. ನಿಸರ್ಗದ ದೈತ್ಯ ಶಕ್ತಿಯ ಮುಂದೆ ಮನುಷ್ಯ ಎಷ್ಟು ಅಸಹಾಯಕ ಎಂಬುದರ ಚಿತ್ರಣ ಇಲ್ಲಿದೆ.

ಚೇತನ್‌ ಓ.ಆರ್‌.

ಟಾಪ್ ನ್ಯೂಸ್

Kuwait ಅಗ್ನಿ ದುರಂತ: ತಾಯ್ನಾಡಿನತ್ತ ಹೊರಟ 45 ಭಾರತೀಯರ ಮೃತದೇಹ ಹೊತ್ತ ವಿಶೇಷ ವಿಮಾನ

Kuwait ಅಗ್ನಿ ದುರಂತ: 45 ಭಾರತೀಯರ ಮೃತದೇಹ ಹೊತ್ತು ಕೊಚ್ಚಿಗೆ ಹೊರಟ ವಿಶೇಷ ವಿಮಾನ

3-bhalki

Bhalki: ಸಿಡಿಲು ಬಡಿದು ಕುರಿ, ಆಡುಗಳ ಸಾವು

2-udupi

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

1-24-friday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಪ್ರಗತಿ ತೃಪ್ತಿಕರ

32

Actor Darshan: ರೇಣುಕಾಸ್ವಾಮಿ ಹತ್ಯೆ ಕೇಸ್‌; ದರ್ಶನ್‌ ರಕ್ಷಣೆಗೆ ಸದ್ದಿಲ್ಲದೇ ಕಸರತ್ತು?

36

ಫೇಸ್‌ಬುಕ್‌ನಲ್ಲಿ ಕೊರಗಜ್ಜ ಭಕ್ತರಿಂದ ದೇಣಿಗೆ ಸಂಗ್ರಹ: ಆಡಳಿತ ಮಂಡಳಿಯಿಂದ ದೂರು ದಾಖಲು

31

ರೇಣುಕಾಸ್ವಾಮಿ ದೇಹದ 15 ಕಡೆ ಗಂಭೀರ ಗಾಯ ಪೊಲೀಸರ ಕೈ ಸೇರಿದ ಮರಣೋತ್ತರ ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

udayavani youtube

ಲಾಭದಾಯಕ ಮಲ್ಲಿಗೆ ಕೃಷಿ ಮಾಡುವುದು ಹೇಗೆ? | ಶಂಕರಪುರ ಮಲ್ಲಿಗೆ

ಹೊಸ ಸೇರ್ಪಡೆ

Kuwait ಅಗ್ನಿ ದುರಂತ: ತಾಯ್ನಾಡಿನತ್ತ ಹೊರಟ 45 ಭಾರತೀಯರ ಮೃತದೇಹ ಹೊತ್ತ ವಿಶೇಷ ವಿಮಾನ

Kuwait ಅಗ್ನಿ ದುರಂತ: 45 ಭಾರತೀಯರ ಮೃತದೇಹ ಹೊತ್ತು ಕೊಚ್ಚಿಗೆ ಹೊರಟ ವಿಶೇಷ ವಿಮಾನ

3-bhalki

Bhalki: ಸಿಡಿಲು ಬಡಿದು ಕುರಿ, ಆಡುಗಳ ಸಾವು

2-udupi

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

1-24-friday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಪ್ರಗತಿ ತೃಪ್ತಿಕರ

32

Actor Darshan: ರೇಣುಕಾಸ್ವಾಮಿ ಹತ್ಯೆ ಕೇಸ್‌; ದರ್ಶನ್‌ ರಕ್ಷಣೆಗೆ ಸದ್ದಿಲ್ಲದೇ ಕಸರತ್ತು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.