ಸಾರ್ಥಕ ಬದುಕಿಗೆ ಸಾಧಕರಾಗಬೇಕು- ರಾಬಿನ್‌ ಶರ್ಮಾ

Team Udayavani, Jul 9, 2018, 3:35 PM IST

9-july-14.jpg

ಸಾರ್ಥಕ ಬದುಕಿಗೆ ಏನಾದರೊಂದು ಸಾಧನೆ ಮಾಡಲೇಬೇಕು. ಸಾಧನೆಯ ಹಾದಿಯಲ್ಲಿ ಸೋಲುಗಳು ಎದುರಾಗುವುದು ಸಾಮಾನ್ಯ. ಕೋಪತಾಪ ಬಿಟ್ಟು ತಾಳ್ಮೆಯಿಂದಿದ್ದರಷ್ಟೇ ನಾವು ಸಾಧಕರಾಗಲು ಸಾಧ್ಯ ಎನ್ನುವುದು ಲೇಖಕ, ವಾಗ್ಮಿ ರಾಬಿನ್‌ ಶರ್ಮಾ ಅವರ ಅನುಭವದ ಮಾತು.ಜಗತ್ತಿನ ಉದ್ದಗಲಕ್ಕೂ ತಮ್ಮ ವಿಚಾರಧಾರೆಯನ್ನು ಹಂಚುತ್ತಿರುವ ಇವರ ಮಾತುಗಳಲ್ಲಿ ನಮ್ಮ ಬದುಕಿಗೂ ಬೇಕಾಗುವಷ್ಟು ಮಾಹಿತಿಯಿದೆ. ಅವುಗಳಲ್ಲಿ ಆಯ್ದ ಕೆಲವೊಂದು ವಿಷಯಗಳು ಇಲ್ಲಿವೆ.

ನೀನು ಹುಟ್ಟಿದಾಗ ಇಡೀ ಜಗತ್ತು ನಗುತ್ತಿತ್ತು, ಆದರೆ ನೀನು ಅಳುತ್ತಿದ್ದೆ. ನೀನು ಸತ್ತಾಗ? ಇಡೀ ಜಗತ್ತು ಅಳುತ್ತಿರಬೇಕು, ನೀನು ನಗುತ್ತಾ ದೇಹತ್ಯಾಗ ಮಾಡಬೇಕು. ಅಂತಹ ಒಂದು ಸಂದರ್ಭವನ್ನು ಸೃಷ್ಟಿಸಿಕೊಳ್ಳುವುದೇ ಬದುಕಿನ ನಿಜವಾದ ಸಾಧನೆ ಎನ್ನುತ್ತಾರೆ ಲೇಖಕ, ವಾಗ್ಮಿ ರಾಬಿನ್‌ ಶರ್ಮಾ. 

ವ್ಯಕ್ತಿತ್ವ ವಿಕಸನ, ನಾಯಕತ್ವ ಕುರಿತ ಉಪನ್ಯಾಸ ಹಾಗೂ ಬರಹಗಳ ಮೂಲಕ ಜಗತ್ತಿನಾದ್ಯಂತ ಚಿರಪರಿಚಿತರಾಗಿರುವ ಇವರ ಜೀವನ ಸಾಧನೆ, ನಾಯಕತ್ವ, ವ್ಯಕ್ತಿತ್ವ ವಿಕಸನ ಕುರಿತಾದ ಅನೇಕ ಪುಸ್ತಕಗಳು ಕನ್ನಡ, ತೆಲುಗು ಹಾಗೂ ಹಿಂದಿ ಸಹಿತ ಹಲವು ಭಾಷೆಗಳಿಗೆ ಅನುವಾದಗೊಂಡಿವೆ.

ರಾಬಿನ್‌ ಶರ್ಮಾ ಅವರು ಭಾರತ ಮೂಲದ ಅಮೆರಿಕ ಪ್ರಜೆ. ಇವರ ತಮ್ಮ 25ನೇ ವಯಸ್ಸಿನವರೆಗೆ ವಕೀಲ ವೃತ್ತಿಯಲ್ಲಿದ್ದರು. ಆನಂತರ ‘ಸ್ಟ್ರೆಸ್‌ ಮ್ಯಾನೇಜ್‌ಮೆಂಟ್‌ ಆ್ಯಂಡ್‌ ಸ್ಪಿರಿಚ್ವ್ಯಾಲಿಟಿ’ ಎಂಬ ಪುಸ್ತಕದ ಮೂಲಕ ಜಗತ್ಪ್ರಸಿದ್ಧರಾದರು, ಮಾರ್ಗದರ್ಶಕರಾದರು. ಫೆರಾರಿ ಮಾರಿದ ಫ‌ಕೀರ, ನೀನು ಸತ್ತರೆ ಅಳುವವರು ಯಾರು?, ಕುಟುಂಬ ವಿವೇಕ, ನಾಯಕತ್ವದ ಪರಿಜ್ಞಾನ, ನಿಮ್ಮ ಭಾಗ್ಯವನ್ನು ಅನ್ವೇಷಿಸಿ, ಮಹಾನ್‌ ಮಾರ್ಗದರ್ಶಿ ಇವು ರಾಬಿನ್‌ಶರ್ಮಾ ಅವರು ಬರೆದಿರುವ ಕನ್ನಡ ಆವೃತ್ತಿಯ ಪುಸ್ತಕಗಳು.

ಸಾಧನೆಯ ತುಡಿತ ಹೆಚ್ಚಿಸುವ ಉಪನ್ಯಾಸ
ರಾಬಿನ್‌ ಶರ್ಮಾ ಅವರು ಅಂತಾರಾಷ್ಟ್ರೀಯ ಪ್ರಸಿದ್ಧ ಐದು ಉಪನ್ಯಾಸಕರಲ್ಲಿ ಒಬ್ಬರು. ಇವರ ಉಪನ್ಯಾಸ ಹಾಗೂ ಬರಹಗಳಲ್ಲಿ ಬದುಕಿನ ಕುರಿತಾದ ಅನೇಕ ರೀತಿಯ‌ ಒಳಹೊರಹುಗಳನ್ನು ಕಾಣಬಹುದು. ಇವರ ಬಹುತೇಕ ಉಪನ್ಯಾಸಗಳಲ್ಲಿ ಅನುಭವ, ಅಧ್ಯಯನ, ಚಿಂತನೆ ಇದೆ. ಕೇಳುಗರಲ್ಲಿ ಸಾಧನೆಯ ತುಡಿತವನ್ನು ಹೆಚ್ಚಿಸುವಂತೆ ಮಾಡುತ್ತದೆ. ಅವರ ಅನ್ವೇಷಣೆಯಲ್ಲಿ ಜೀವನ ಪ್ರೀತಿ ಮುಖ್ಯವಾದುದು. ಪ್ರತಿಯೊಬ್ಬರಲ್ಲೂ ಸಾಧನೆಯ ತುಡಿತ ಇದ್ದೇ ಇರುತ್ತದೆ. ಹಾಗಂತ ಅದಕ್ಕಾಗಿ ಮಾಡಬೇಕಾದ ಪರಿಶ್ರಮವೇನು, ಯಾವ ಹಾದಿಯಲ್ಲಿ ನಡೆಯಬೇಕು ಎಂಬೆಲ್ಲ ಪ್ರಶ್ನೆಗಳಿಗೆ ಮಾರ್ಗದರ್ಶನ ನೀಡುತ್ತಾರೆ ರಾಬಿನ್‌ ಶರ್ಮಾ.

ಸಾಧಕರಾಗಬೇಕು
ಹುಟ್ಟು ಮತ್ತು ಸಾವು ಇವು ನೈಸರ್ಗಿಕವಾದ ಕ್ರಿಯೆ. ಪ್ರಾಣಿ, ಪಕ್ಷಿಗಳಂತೆ ಮಾನವನಿಗೆ ಕೂಡ ಒಂದು ದಿನ ಸಾವು ಬರುತ್ತದೆ. ಇಂದು ಹುಟ್ಟಿ, ನಾಳೆ ಸಾಯುವುದು ಅಂದರೆ ಅರ್ಥವಿಲ್ಲ. ಇರುವವರೆಗೂ, ಇರುವುದರಲ್ಲಿಯೇ ಏನಾದರೂ ಸಾಧಿಸಬೇಕು. ನಮ್ಮವರೆನಿಸಿಕೊಂಡವರು ಕೊನೆಗೆ ನಮ್ಮನ್ನು ನೆನಪಿಸಿಕೊಳ್ಳುವಂತೆ ಮಾಡಬೇಕು. ಆ ತುಡಿತ ನಮ್ಮಲ್ಲಿ ಹುಟ್ಟಬೇಕು. ಈ ಕುರಿತಂತೆ, ರಾಬಿನ್‌ ಶರ್ಮಾ ಹೇಳುವುದು ಹೀಗೆ… ಇಂದು ಹುಟ್ಟಿ, ನಾಳೆ ಸತ್ತರೆ ಬದುಕಿಗೊಂದು ಅರ್ಥ ಸಿಗುವುದಿಲ್ಲ. ಕಡಿಮೆ ಅವಧಿಯ ಈ ಜೀವನದಲ್ಲಿ ಏನಾದರೂ ದೊಡ್ಡದಾದ ಸಾಧನೆ ಮಾಡಿದಾಗ ಮಾತ್ರ ಜೀವನ ಸಾರ್ಥಕ. ಜೀವನ ಮುಗಿಸಿ ನೀನು ಹೊರಡುವಾಗ ಬೀಳ್ಕೊಡಲು ಕೂಡ ಜನರು ಇರಬೇಕು (ಸತ್ತಾಗ ಅಳುವವರೂ ಇರಬೇಕೆಂದರೆ, ಸಾಧಕನಾಗಿರಬೇಕು) ಎನ್ನುತ್ತಾರೆ.

ಉತ್ಸಾಹಿ ನಾಯಕರಾಗಿ
ನಾಯಕತ್ವದ ಬಗ್ಗೆ ಅನೇಕ ಉಪನ್ಯಾಸಗಳನ್ನು ನೀಡಿರುವ ರಾಬಿನ್‌ ಶರ್ಮಾ, ನಾಯಕತ್ವ ಎನ್ನುವುದು ಪದವಿಯಲ್ಲ, ಹುದ್ದೆಯೂ ಅಲ್ಲ. ಬದಲಾಗಿ ನಮ್ಮ ಕಾರ್ಯಗಳು, ಪರಿಶ್ರಮದ, ಪ್ರಭಾವದಿಂದ ಒದಗಿ ಬಂದ ಅತ್ಯುನ್ನತ ಗೌರವ. ಆ ಗೌರವಕ್ಕೆ ಸದಾ ಬದ್ಧವಾಗಿರಬೇಕು. ಮುಖ್ಯವಾಗಿ ತಂಡದ ಸದಸ್ಯರನ್ನು ಸದಾ ಉತ್ಸಾಹಿಯಾಗಿರುವಂತೆ ನೋಡಿಕೊಳ್ಳಬೇಕು. ಇದು ಯಶಸ್ವಿ ನಾಯಕನ ಮೊದಲ ಹಂತ ಎನ್ನುತ್ತಾರೆ. ರಾಬಿನ್‌ ಶರ್ಮಾ ಅವರ ಮಾತುಗಳಲ್ಲಿ ಜೀವನೋತ್ಸಾಹ ತುಂಬುವ ಚೈತನ್ಯವಿದೆ. ಅವರ ಮಾತಿನ ಒಂದಷ್ಟು ಅಂಶಗಳು ನಮ್ಮ ಬದುಕಿಗೂ ಹೊಸ ಚೈತನ್ಯ, ಸ್ಫೂರ್ತಿ ತುಂಬಬಲ್ಲವು.

 ಶಿವ ಸ್ಥಾವರಮಠ

ಟಾಪ್ ನ್ಯೂಸ್

Raichur: ಬಸ್ ನಲ್ಲಿ ಮರೆತು ಹೋಗಿದ್ದ 2.50 ಲಕ್ಷ ಮರಳಿಸಿದ KSRTC ಚಾಲಕ, ನಿರ್ವಾಹಕ

Raichur: ಬಸ್ ನಲ್ಲಿ ಮರೆತು ಹೋಗಿದ್ದ 2.50 ಲಕ್ಷ ಮರಳಿಸಿದ KSRTC ಚಾಲಕ, ನಿರ್ವಾಹಕ

Viral Video: ಆಸ್ಪತ್ರೆಯಲ್ಲೇ ನರ್ಸ್‌ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಡಾಕ್ಟರ್

Viral Video: ಆಸ್ಪತ್ರೆಯಲ್ಲೇ ನರ್ಸ್‌ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಡಾಕ್ಟರ್

Hubballi:‌ ನೇಹಾ ತಂದೆ ನಿರಂಜನಯ್ಯ ಹಿರೇಮಠ ಆಪ್ತ ಸಹಾಯಕನ ಅಪಹರಣಕ್ಕೆ ಯತ್ನ… ದೂರು ದಾಖಲು

Hubballi:‌ ನೇಹಾ ತಂದೆ ನಿರಂಜನಯ್ಯ ಹಿರೇಮಠ ಆಪ್ತ ಸಹಾಯಕನ ಅಪಹರಣಕ್ಕೆ ಯತ್ನ… ದೂರು ದಾಖಲು

16

Kadaba: ಕಡಬ ಸರ್ವೆ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಮುಖಂಡ

Election: ಚನ್ನಪಟ್ಟಣದ ಜನ ಒಲವು ತೋರಿದರೆ ನನ್ನ ಸ್ಪರ್ಧೆ ಬಿಟ್ಟು ಬೇರೆ ವಿಧಿಯಿಲ್ಲ: ಡಿಕೆಶಿ

Election: ಚನ್ನಪಟ್ಟಣದ ಜನ ಒಲವು ತೋರಿದರೆ ನನ್ನ ಸ್ಪರ್ಧೆ ಬಿಟ್ಟು ಬೇರೆ ವಿಧಿಯಿಲ್ಲ: ಡಿಕೆಶಿ

15-paanji

Panaji: ಇಬ್ಬರು ಯುವಕರ ಮೇಲೆ ಕಬ್ಬಿಣದ ರಾಡ್‍ನಿಂದ ಮಾರಣಾಂತಿಕ ಹಲ್ಲೆ; ಓರ್ವ ಸಾವು

3 ಮಕ್ಕಳನ್ನು ಬಿಟ್ಟು 25 ವರ್ಷದ ಪ್ರಿಯಕರನ ಜತೆ ಓಡಿ ಹೋದ ಮಹಿಳೆ!

3 ಮಕ್ಕಳನ್ನು ಬಿಟ್ಟು 25 ವರ್ಷದ ಪ್ರಿಯಕರನ ಜತೆ ಓಡಿ ಹೋದ ಮಹಿಳೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

Raichur: ಬಸ್ ನಲ್ಲಿ ಮರೆತು ಹೋಗಿದ್ದ 2.50 ಲಕ್ಷ ಮರಳಿಸಿದ KSRTC ಚಾಲಕ, ನಿರ್ವಾಹಕ

Raichur: ಬಸ್ ನಲ್ಲಿ ಮರೆತು ಹೋಗಿದ್ದ 2.50 ಲಕ್ಷ ಮರಳಿಸಿದ KSRTC ಚಾಲಕ, ನಿರ್ವಾಹಕ

Viral Video: ಆಸ್ಪತ್ರೆಯಲ್ಲೇ ನರ್ಸ್‌ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಡಾಕ್ಟರ್

Viral Video: ಆಸ್ಪತ್ರೆಯಲ್ಲೇ ನರ್ಸ್‌ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಡಾಕ್ಟರ್

Hubballi:‌ ನೇಹಾ ತಂದೆ ನಿರಂಜನಯ್ಯ ಹಿರೇಮಠ ಆಪ್ತ ಸಹಾಯಕನ ಅಪಹರಣಕ್ಕೆ ಯತ್ನ… ದೂರು ದಾಖಲು

Hubballi:‌ ನೇಹಾ ತಂದೆ ನಿರಂಜನಯ್ಯ ಹಿರೇಮಠ ಆಪ್ತ ಸಹಾಯಕನ ಅಪಹರಣಕ್ಕೆ ಯತ್ನ… ದೂರು ದಾಖಲು

16

Kadaba: ಕಡಬ ಸರ್ವೆ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಮುಖಂಡ

Election: ಚನ್ನಪಟ್ಟಣದ ಜನ ಒಲವು ತೋರಿದರೆ ನನ್ನ ಸ್ಪರ್ಧೆ ಬಿಟ್ಟು ಬೇರೆ ವಿಧಿಯಿಲ್ಲ: ಡಿಕೆಶಿ

Election: ಚನ್ನಪಟ್ಟಣದ ಜನ ಒಲವು ತೋರಿದರೆ ನನ್ನ ಸ್ಪರ್ಧೆ ಬಿಟ್ಟು ಬೇರೆ ವಿಧಿಯಿಲ್ಲ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.