ಮಕ್ಕಳ ಭವಿಷ್ಯ ಬಂಗಾರವಾಗಲಿ!


Team Udayavani, May 6, 2019, 6:12 AM IST

child1

ಮಕ್ಕಳ ಭವಿಷ್ಯಕ್ಕಾಗಿ ತಾವು ಯಾವಾಗ ಹೂಡಿಕೆ ಆರಂಭಿಸಬೇಕು ಎಂಬ ಗೊಂದಲದಲ್ಲೇ ಹಲವರು ಬದುಕುತ್ತಿರುತ್ತಾರೆ. ಇನ್ನು ಕೆಲವರು, ಹೂಡಿಕೆಯ ಆಲೋಚನೆಯಲ್ಲಿ ಕಾಲ ಕಳೆಯುತ್ತಿರುತ್ತಾರೆ. ಮತ್ತೂಂದಷ್ಟು ಜನ, ತಡವಾಗಿಯಾದರೂ ಆರಂಭಿಸಿಯೇ ತೀರೋಣ ಎಂಬ ನಿರ್ಧಾರಕ್ಕೆ ಸಾಕಷ್ಟು ನಿಧಾನವಾಗಿಯೇ ಬಂದಿರುತ್ತಾರೆ.

ಮಕ್ಕಳ ಭವಿಷ್ಯದ ಗುರಿಯನ್ನು ಸಾಧಿಸಲು ದೀರ್ಘಾವಧಿ ಹೂಡಿಕೆ ಅತ್ಯವಶ್ಯ. ಹಾಗಿದ್ದರೂ, ಶೇ. 35ರಷ್ಟು ಹೆತ್ತವರಿಗೆ ಯಾವ ಮಾಧ್ಯಮದಲ್ಲಿ ದೀರ್ಘಾವಧಿ ಹೂಡಿಕೆ ಮಾಡಬೇಕು ಎಂಬ ಬಗ್ಗೆ ಗೊಂದಲ ಅಥವಾ ತಿಳಿವಳಿಕೆಯ ಕೊರತೆ ಇರುತ್ತದೆ.

ತಮ್ಮ ಮಕ್ಕಳ ಭವಿಷ್ಯಕ್ಕಾಗಿ ತಾವು ಯಾವಾಗ ಹೂಡಿಕೆಯನ್ನು ಆರಂಭಿಸಬೇಕು ಎಂಬ ಗೊಂದಲದಲ್ಲೇ ಕೆಲವರು ಬದುಕುತ್ತಿರುತ್ತಾರೆ. ಇನ್ನು ಹಲವರು ಹೂಡಿಕೆಯ ಆಲೋಚನೆಯಲ್ಲಿ ಕಾಲ ಕಳೆಯುತ್ತಿರುತ್ತಾರೆ. ಮತ್ತೂಂದಷ್ಟು ಜನ, ತಡವಾಗಿಯಾದರೂ ಆರಂಭಿಸಿಯೇ ತೀರೋಣ ಎಂಬ ನಿರ್ಧಾರಕ್ಕೆ ಸಾಕಷ್ಟು ನಿಧಾನವಾಗಿಯೇ ಬಂದಿರುತ್ತಾರೆ.

ಹಾಗಾದರೆ ಇದಕ್ಕೆ ಈ ಯುಲಿಪ್‌ ಯೋಜನೆ ಒಳ್ಳೆಯದೇ, ಸುಕನ್ಯಾ ಸಮೃದ್ಧಿ ಯೋಜನೆ ಆದೀತೇ, ಪಿಪಿಎಫ್ ಆದೀತೇ, ಬ್ಯಾಂಕ್‌ ನಿರಖು ಠೇವಣಿ ಒಳ್ಳೆಯದೇ, ಚಿನ್ನ ಖರೀದಿಸಿಡುವುದು ಬುದ್ಧಿವಂತಿಕೆಯಾದೀತೇ, ರಿಯಲ್‌ ಎಸ್ಟೇಟ್‌ (ಭೂ ಹೂಡಿಕೆ) ಉತ್ತಮವಾದೀತೇ? ಎಂಬ ಪ್ರಶ್ನೆಗಳು ಕಾಡುತ್ತಿರುತ್ತವೆ. ಆದರೆ ಬಹಳಷ್ಟು ಮಂದಿ ತಪ್ಪು ಸಲಹೆಗಳಿಗೆ ಮಾರು ಹೋಗಿ ಕೈ ಸುಟ್ಟುಕೊಳ್ಳುತ್ತಾರೆ.

ಮಕ್ಕಳ ಭವಿಷ್ಯದ ಗುರಿ ಸಾಧನೆಗೆ ಹಣ ಹೂಡಿಕೆ ಆರಂಭಿಸುವ ಮೊದಲು ಸಾಧಿಸಬೇಕಾದ ಗುರಿಯ ಬಗ್ಗೆ ನಿಖರತೆ ಇರುವುದು ಒಳ್ಳೆಯದು. ಹೆತ್ತವರಲ್ಲಿ ಶೇ. 35 ಮಂದಿಗೆ ತಮ್ಮ ಮಕ್ಕಳ ಶಿಕ್ಷಣವೇ ತಮ್ಮ ಬದುಕಿನ ಬಲುದೊಡ್ಡ ಸವಾಲಿನ ಪ್ರಶ್ನೆಯಾಗಿರುತ್ತದೆಯಂತೆ. ಮ್ಯೂಚುವಲ್‌ ಫ‌ಂಡ್‌ನ‌ಲ್ಲಿ ಸಿಸ್ಟಮ್ಯಾಟಿಕ್‌ ಇನ್‌ವೆಸ್ಟ್‌ ಮೆಂಟ್‌ ಪ್ಲ್ರಾನ್‌ (ಸಿಪ್‌) ಮೂಲಕ ಆರಂಭಿಸಲಾಗುವ ಹೂಡಿಕೆ ನಿಯಮಿತವಾಗಿಏರುತ್ತದೆ ಎಂಬುದು ಖರೆ.

ತಿಂಗಳ ನಿರ್ದಿಷ್ಟ ಕಂತಿನ ಸಿಪ್‌ ಮೂಲಕ ಹಣ ಹೂಡುವ ಸೌಕರ್ಯ ಮ್ಯೂಚುವಲ್‌ ಫ‌ಂಡ್‌ ಹೂಡಿಕೆಯಲ್ಲಿ ಇರುತ್ತದೆ. ಆದರೆ ನಮ್ಮ ಗುರಿ ಕಿರು ಅವಧಿಯದ್ದೇ, ಮಧ್ಯಮಾವಧಿಯದ್ದೇ ಅಥವಾ ದೀರ್ಘಾವಧಿಯದ್ದೇ ಎಂಬುದನ್ನು ಮೊದಲು ತೀರ್ಮಾನಿಸಬೇಕಿರುತ್ತದೆ.

ಎಂಟರಿಂದ ಹತ್ತು ವರ್ಷಗಳ ದೀರ್ಘಾವಧಿಯ ಗುರಿ ಸಾಧನೆಯ ಉದ್ದೇಶವಿದ್ದರೆ ಈಕ್ವಿಟಿ ಫ‌ಂಡ್‌ ಅಥವಾ ಡೈವರ್ಸಿಫೈಡ್‌ ಈಕ್ವಿಟಿ ಫ‌ಂಡ್‌ಗಳಲ್ಲಿ ಹೂಡಿಕೆ ಆಕರ್ಷಕವಾಗಿರುತ್ತದೆ. ಏಕೆಂದರೆ ಇದರಲ್ಲಿ ಶೇ. 12ರ ಗರಿಷ್ಠ ಇಳುವರಿ, ಹೂಡಿಕೆ ರಿಸ್ಕ್ ಎಂಬುದು ನಗಣ್ಯವಾಗಿರುತ್ತದೆ. ಹಾಗಿದ್ದರೂ, ಹೂಡಿಕೆಯ ವಿಷಯದಲ್ಲಿ ಲಾರ್ಜ್‌ ಮತ್ತು ಮಿಡ್‌ ಕ್ಯಾಪ್‌ ಫ‌ಂಡ್‌ಗಳ ಮಿಶ್ರಣವನ್ನು ಆಯ್ಕೆ ಮಾಡುವುದೇ ಲೇಸು.

ಇ.ಎಲ್‌ಎಸ್‌.ಎಸ್‌. ಮೂಲಕದ ಹೂಡಿಕೆಯಲ್ಲಿ ಅಂದರೆ ಈಕ್ವಿಟಿ ಲಿಂಕ್  ಸೇವಿಂಗ್‌ ಸ್ಕೀಮ್‌ ಮೂಲಕದ ಹೂಡಿಕೆಯಲ್ಲಿ ಆದಾಯ ತೆರಿಗೆ ಕಾಯಿದೆಯ ಸೆ.80ಸಿ ಅಡಿ ತೆರಿಗೆ ವಿನಾಯಿತಿ ಇರುತ್ತದೆ ಮತ್ತು ಹೂಡಿಕೆಯ ಲಾಕ್‌ ಇನ್‌ ಪೀರಿಯಡ್‌ ಕೇವಲ ಮೂರು ವರ್ಷಗಳ ಅವಧಿಗಿರುತ್ತದೆ. ಮ್ಯೂಚುವಲ್‌ ಫ‌ಂಡ್‌ ಹೂಡಿಕೆಯ ಇಳುವರಿಯು ಮಾರುಕಟ್ಟೆಗೆ ಅನುಗುಣವಾಗಿ ಅತ್ಯುತ್ತಮ ಇಳುವರಿಯನ್ನು ಕೊಡುವುದರಿಂದ ಇವು ಆಕರ್ಷಕ ಹೂಡಿಕೆಯ ಮಾಧ್ಯಮಗಳಾಗಿರುತ್ತವೆ.ಸಾಮಾನ್ಯವಾಗಿ ಮ್ಯೂಚುವಲ್‌ ಫ‌ಂಡ್‌ಗಳಲ್ಲಿ ಮಕ್ಕಳ ಭವಿಷ್ಯದ ಗುರಿಯನ್ನು ನಿರ್ಧರಿಸಿ ಹೂಡಿಕೆಗೆ ತೊಡಗುವುದು ಸಮಂಜಸವಾಗಿರುತ್ತದೆ.

– ಸತೀಶ್‌ ಮಲ್ಯ

ಟಾಪ್ ನ್ಯೂಸ್

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.