ಭಾವನೆಗಳನ್ನು ಅರ್ಥೈಸಿಕೊಳ್ಳುವುದೆ ಭಾವನಾತ್ಮಕ ಬುದ್ಧಿವಂತಿಕೆ

Team Udayavani, Jul 30, 2019, 5:00 AM IST

ಕೆಲಸದ ಜೀವನ ಹಾಗೂ ವೈಯಕ್ತಿಕ ಜೀವನದ ಮೇಲೆ ಸಮಾನವಾಗಿ ಪರಿಣಾಮ ಬೀರುವುದು ಭಾವನಾತ್ಮಕ ಬುದ್ಧಿವಂತಿಕೆ (ಎಮೋಷನಲ್‌ ಇಂಟೆಲಿಜೆನ್ಸ್‌, ಇಕ್ಯೂ ಅಥವಾ ಇಐ). ಸ್ವಂತ ಭಾವನೆಗಳು, ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಿಕೆ, ನಿರ್ವಹಿಸುವಿಕೆ ಹಾಗೂ ವ್ಯಕ್ತಪಡಿಸುವ ಸಾಮರ್ಥ್ಯವನ್ನು ಭಾವನಾತ್ಮಕ ಬುದ್ಧಿವಂತಿಕೆ ಎನ್ನುತ್ತಾರೆ. ಬೇರೆಯವ ರೊಂದಿಗಿನ ಸಂವಹನಕ್ಕೆ ಇದು ಪರಿಣಾಮ ಬೀರುತ್ತದೆ.

ಭಾವನೆಗಳನ್ನು ವ್ಯಕ್ತಪಡಿಸಲು, ಇತರರ ಭಾವನೆಗಳನ್ನು ಅರ್ಥೈಸಿಕೊಳ್ಳುವ ಗುಣವನ್ನು ಹೊಂದಿರುವ ವ್ಯಕ್ತಿಯು ಭಾವನಾತ್ಮಕ ಬುದ್ಧಿವಂತಿಕೆಯಿಂದ ಕೂಡಿರುತ್ತಾನೆ. ವ್ಯಕ್ತಿಯು ಭಾವನೆಗಳನ್ನು ನಿರ್ವಹಿಸುವ ಸಾಮರ್ಥ್ಯ, ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ, ಭಾವನೆಗಳನ್ನು ಗ್ರಹಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೋ ಅವರ ಬುದ್ಧಿವಂತಿಕೆ ಮತ್ತು ಗ್ರಹಿಸುವ ಸಾಮರ್ಥ್ಯ ಉತ್ತಮವಾಗಿದೆ ಎಂದು ಹೇಳಲು ಸಾಧ್ಯ.

ಇಂದಿನ ದಿನಗಳಲ್ಲಿ ವ್ಯಕ್ತಿಗೆ ಭಾವನಾತ್ಮಕ ಬುದ್ಧಿವಂತಿಕೆಯು ಅಥವಾ ಭಾವನಾತ್ಮಕ ಅಂಶ ತುಂಬಾ ಮುಖ್ಯ. ಭಾವನಾತ್ಮಕ ಬುದ್ಧಿವಂತಿಕೆ ಇರುವ ಹೆಚ್ಚಿನ ಮಂದಿ ಪರಸ್ಪರ ವೈಯುಕ್ತಿಕ ಸಂಬಂಧಗಳನ್ನು ಜೋಡಿಸುವಲ್ಲಿ, ನಿಭಾಯಿಸುವ ನಿಟ್ಟಿನಲ್ಲಿ ಯಶಸ್ವಿಯಾಗುತ್ತಾರೆ. ತಾವು ಯಾವುದೇ ಗುಂಪಿನಲ್ಲಿ ಸೇರಿಕೊಂಡರೂ ಅಲ್ಲಿ ಸರಿಯಾದ ರೀತಿಯಲ್ಲಿ ಬೆರೆಯುವಲ್ಲಿ ಯಶಸ್ವಿಯಾಗುತ್ತಾರೆ.

ಸಾಮಾನ್ಯವಾಗಿ ಮನುಷ್ಯನ ಊಹನೆಗೆ ಸಂಬಂಧಿಸಿದಂತೆ ಭಾವನಾತ್ಮಕ ಬುದ್ಧಿವಂತಿಕೆ ಗುರುತಿಸುತ್ತದೆ. ಇಂದಿನ ಉದ್ಯೋಗ ಕ್ಷೇತ್ರದಲ್ಲಿಯೂ ಭಾವನಾತ್ಮಕ ಬುದ್ಧಿವಂತಿಕೆಯು ಮಹತ್ತರ ಪಾತ್ರ ವಹಿಸುತ್ತದೆ. ಉದ್ಯೋಗ ನೇಮಕಾತಿ ಸಮಯದಲ್ಲಿ ವ್ಯಕ್ತಿಯ ಭಾವನಾತ್ಮಕ ಬುದ್ಧಿವಂತಿಕೆ (ಇಕ್ಯೂ)ಯನ್ನು ಹೆಚ್ಚಾಗಿ ಗಮನಿಸಲಾಗುತ್ತದೆ. ನೇಮಕಾತಿ ವೇಳೆ ಉದ್ಯೋಗಿಗೆ ಒಟ್ಟಾರೆಯಾಗಿ ಭಾವನಾತ್ಮಕ ಬುದ್ಧಿವಂತಿಕೆ ಎಷ್ಟಿದೆ ಎಂಬುದನ್ನು ಗಮನಿಸುತ್ತಾರೆ. ಈ ನಿಟ್ಟಿನಲ್ಲಿ ಉದ್ಯೋಗ ಅರಸುವ ಮಂದಿ ಇಕ್ಯೂ ವಿಚಾರದ ಬಗ್ಗೆ ಗಮನಹರಿಸಬೇಕು.

ಉದ್ಯೋಗಿಗಳಿಗೆ ಒಂದು ತಂಡವಾಗಿ ಕಾರ್ಯನಿರ್ವಹಿಸು ವಾಗ ಆಯಾ ಸಂಸ್ಥೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮತ್ತುಸಮರ್ಥ ತಂಡವನ್ನು ಅಭಿವೃದ್ಧಿಪಡಿಸಲು ಭಾವನಾತ್ಮಕ ಬುದ್ಧಿವಂತಿಕೆಯು ಪ್ರಮುಖ ಪಾತ್ರ ವಹಿಸುತ್ತದೆ. ಭಾವನಾತ್ಮಕ ಬುದ್ಧಿವಂತಿಕೆಯು ಇರುವ ವ್ಯಕ್ತಿಯು ಉತ್ತಮ ನಾಯಕತ್ವ ಗುಣವನ್ನು ಹೊಂದಲು ಸಾಧ್ಯವಿದೆ.

ಉದ್ಯೋಗಕ್ಕೆ ಅಗತ್ಯ
ಯಾವುದೇ ಕಂಪೆನಿಗಳಿಗೆ ನೇಮಕಾತಿ ಸಮಯದಲ್ಲಿ ನಮ್ಮ ಬೌದ್ಧಿಕ ಸಾಮರ್ಥ್ಯವು ಪ್ರಮುಖವಾಗಿರುತ್ತದೆ. ವಿವಿಧ ಪರೀಕ್ಷೆಗಳನ್ನು ನಡೆಸಿದರೂ ಅದು ಶೇ.30ರಷ್ಟು ಮಾತ್ರ ಪರಿಣಾಮ ಬೀರುತ್ತದೆ. ಬದಲಾಗಿ ನಮ್ಮಲ್ಲಿನ ಕೌಶಲಗಳೇ ಪ್ರಮುಖವಾಗುತ್ತವೆೆ. ಭಾವನಾತ್ಮಕ ಬುದ್ಧಿವಂತಿಕೆಯು ವಿಭಿನ್ನ ವ್ಯಾಯಾಮ ಮತ್ತು ಆಚರಣೆಯ ಮುಖೇನ ವಿಕಸನಗೊಳ್ಳಬಹುದು. ಭಾವನಾತ್ಮಕ ಬುದ್ಧಿವಂತಿಕೆಯು ವಿವಿಧ ಕೌಶಲಗಳಿಂದ ಕೂಡಿರುತ್ತದೆ. ಮುಖ್ಯವಾಗಿ, ನಮ್ಮ ಭಾವನೆಗಳು, ಮೌಲ್ಯಗಳನ್ನು ಗುರುತಿಸಿ ನಮ್ಮ ಬಗ್ಗೆ ಸ್ವಯಂ ಜ್ಞಾನವನ್ನು ಪಡೆದುಕೊಳ್ಳಬಹುದಾಗಿದೆ. ಜತೆಗೆ ಸ್ವಯಂ ನಿಯಂತ್ರಣದಿಂದ ಕೂಡಿರುತ್ತದೆ. ಇತರರೊಂದಿಗೆ ಸಂವಹನ ಮಾಡುವ ನಮ್ಮ ಸಾಮರ್ಥ್ಯವನ್ನು ಭಾವನಾತ್ಮಕ ಬುದ್ಧಿವಂತಿಕೆಯು ನಿರ್ಣಯಿಸುತ್ತದೆ.

ಭಾವನಾತ್ಮಕ ಬುದ್ಧಿವಂತಿಕೆಯನ್ನು ಮೂರು ಆಯಾಮಗಳಲ್ಲಿ ವ್ಯಾಖ್ಯಾನಿಸಬಹುದಾಗಿದೆ. ಸಾಮರ್ಥ್ಯದ ಮಾದರಿ, ಮಿಶ್ರ ಮಾದರಿಯ ಮತ್ತು ವಿಶೇಷ ಗುಣಗಳುಳ್ಳ ಮಾದರಿಗಳಲ್ಲಿ ವ್ಯಾಖ್ಯಾನ ಮಾಡಬಹುದಾಗಿದೆ.
“ಸ್ವಂತವಾಗಿ ತಾನೇ ಅರಿತು ಮಾಡುವುದು ಭಾವನಾತ್ಮಕಕ ಬುದ್ಧಿವಂತಿಕೆಯ ಪ್ರಮುಖ ವಿಚಾರವಾಗಿದೆ. ಸ್ವ ಜಾಗೃತಿ ಹೊಂದುವುದು, ಭಾವನೆಗಳನ್ನು ಗುರುತಿಸುವಂತಹ ಸಾಮರ್ಥ್ಯ ಇರುವುದನ್ನು ಭಾವನಾತ್ಮಕ ಬುದ್ಧಿವಂತಿಕೆ’ ಎಂದು ಮನಃಶಾಸ್ತ್ರಜ್ಞ ಹಾಗೂ ಲೇಖಕ ಡೇನಿಯಲ್‌ ಗೊಲೆಮನ್‌ ಅವರು ಹೇಳಿದ್ದಾರೆ.

ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಪರಿಣಾಮ
ಭಾವನಾತ್ಮಕ ಬುದ್ಧಿವಂತಿಕೆ ಮೇಲೆ ನಡೆದ ಸಂಶೋಧನೆಯಲ್ಲಿ ಇದು ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

1966ರಲ್ಲಿ ಬಳಕೆ
“ಭಾವನಾತ್ಮಕ ಬುದ್ಧಿವಂತಿಕೆ’ ಎಂಬ ಪದವು 1966ರಲ್ಲಿ ಲ್ಯೂನರ್‌ ಎಂಬಾತ ಬಳಸಿದ. ವೇನ್‌ ಪೇನ್‌ ಎಂಬಾತ 1985ರಲ್ಲಿ ತನ್ನ ಡಾಕ್ಟರೇಟ್‌ ಮಹಾಪ್ರಬಂಧವಾದ “ಭಾವಗಳ ಅಧ್ಯಯನ’ ಎಂಬ ಕೃತಿಯಲ್ಲಿ ಭಾವನಾತ್ಮಕ ಬುದ್ಧಿವಂತಿಕೆಯ ¸ಳವಣಿಗೆಗೆ ಸಂಬಂಧಿಸಿದಂತೆ ಬಳಸಿದ್ದಾರೆ. 1990ರಲ್ಲಿ ಸಲೋವೆ, 1995ರಲ್ಲಿ ಗೊಲೆಮನ್‌ ಬಳಿಕ ಗ್ರೀನ್‌ಸ್ಟಾನ್‌ ಕೂಡ ಇಕ್ಯೂ ಮಾದರಿಯನ್ನು ಮುಂದಿಟ್ಟಿದ್ದರು.

ಬುದ್ಧಿವಂತಿಕೆಗೆ ವಿವಿಧ ಆ್ಯಪ್‌
ಭಾವನಾತ್ಮಕ ಬುದ್ಧಿವಂತಿಕೆ ಹೆಚ್ಚಿಸಿಕೊಳ್ಳಲು ಮೊಬೈಲ್‌ನಲ್ಲಿಯೇ ಮಾಹಿತಿಯನ್ನು ಪಡೆಯಬಹುದಾಗಿದೆ. ಪ್ಲೇಸ್ಟೋರ್‌ನಲ್ಲಿ ಎಮೋಷನಲ್‌ ಇಂಟೆಲಿಜೆನ್ಸ್‌, ಎಮೋಷನಲ್‌ ಇಂಟಲಿಜೆನ್ಸ್‌ ಆ್ಯಂಡ್‌ ಲೀಡರ್‌ಶಿಪ್‌, ಎಮೋಷನಲ್‌ ಇಂಟಲಿಜೆನ್ಸ್‌ ಝೋನ್‌/ಎಟ್‌ ವರ್ಕ್‌ ಸೇರಿದಂತೆ ಹತ್ತಾರು ಆ್ಯಪ್‌ಗ್ಳಿವೆ.

ಗ್ರಹಿಕೆಗೆ ಮುಖ್ಯ
ಭಾವನಾತ್ಮಕ ಬುದ್ಧಿವಂತಿಕೆ ಅಂದರೆ ಸಂದರ್ಭಕ್ಕೆ ತಕ್ಕಂತೆ ಬರುವ ಪ್ರತಿಕ್ರಿಯೆಯಾಗಿದೆ. ಅಲ್ಲದೆ, ಸಮಯಕ್ಕೆ ಸರಿಯಾಗಿ ಉತ್ತರಿಸುವ ಸಂದರ್ಭವಾಗಿದೆ. ಇಕ್ಯೂನಲ್ಲಿ ನಮ್ಮ ಸುತ್ತಮುತ್ತಲಿನ ವಿಷಯ ಗ್ರಹಿಸುವುದು ಮುಖ್ಯವಾಗಿರುತ್ತದೆ.
– ಡಾ| ಹರಿಪ್ರಸಾದ್‌ ಸುವರ್ಣ, ವೈದ್ಯರು

-  ನವೀನ್‌ ಭಟ್‌ ಇಳಂತಿಲ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹವಾಮಾನ ಬದಲಾವಣೆಯಿಂದ ಆರೋಗ್ಯದಲ್ಲಾಗುವ ಏರುಪೇರಿನ ಜತೆಗೆ ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ಉತ್ತಮ ಆರೋಗ್ಯಕ್ಕೆ ಡ್ರ್ಯಾಗನ್‌...

  •   ಬಿಸಿಲಿನ ತಾಪಮಾನ ಏರಿಕೆಯಿಂದಾಗಿ ಸಾಮಾನ್ಯವಾಗಿ ಹಲವು ಚರ್ಮ ಸಂಬಂಧಿ ರೋಗಗಳು ಹುಟ್ಟಿಕೊಳ್ಳುತ್ತಿವೆ. ಚರ್ಮ ತುರಿಕೆ, ಹಿಮ್ಮಡಿ ಒಡೆಯುವುದು ಸಹಿತ ಹಲವು...

  • ಮದುವೆ ಒತ್ತಡದಲ್ಲಿ ವಧು ಸೌಂದರ್ಯದ ಕಡೆ ಗಮನ ಹರಿಸಲು ಮರೆತು ಬಿಡುತ್ತಾಳೆ. ಆದರೆ ಮದುವೆ ಇನ್ನೇನು ಬಂದೇ ಬಿಟ್ಟಿತು ಎನ್ನುವಷ್ಟರಲ್ಲಿ ನೀವು ಬ್ಯೂಟಿ ಪಾರ್ಲರಿಗೆ...

  • ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯಲ್ಲಿ ಅನೇಕ ಔಷಧ ಗುಣಗಳಿವೆ. ಬಿಲ್ವಪತ್ರೆ ಚರ್ಮರೋಗ, ಬಾಯಿಹುಣ್ಣು, ಕೂದಲು ಉದುರುವಿಕೆ ಮೊದಲಾದ ಅನೇಕ ಸಮಸ್ಯೆಗಳಿಗೆ ರಾಮಬಾಣ....

  • ನೀವು ಜಿಮ್‌ಗೆ ಹೋಗಬೇಕು ಅಂದುಕೊಂಡಿರುತ್ತೀರಿ. ನಾಳೆಯಿಂದ ಹೋಗೋಣ ಎಂದು ನಿರ್ಧರಿಸಿ ಮಲಗಿರುತ್ತೀರಿ. ಆದರೆ ಮಾರನೇ ದಿನವೇ ಎಚ್ಚರವಾದಾಗ ಇವತ್ತು ಬೇಡ ನಾಳೆ...

ಹೊಸ ಸೇರ್ಪಡೆ