ಪ್ರಸೂತಿ ಸಂದರ್ಭದಲ್ಲಿ ನೋವಿನಿಂದ ಉಪಶಮನ


Team Udayavani, Jan 5, 2020, 2:15 AM IST

42

ಯಾವುದೇ ದಂಪತಿಯ ಜೀವನದಲ್ಲಿ ತಮ್ಮ ಮಗುವಿನ ಜನನ ಅತ್ಯಂತ ಸ್ಮರಣಾರ್ಹವಾದ ಘಟನೆಯಾಗಿರುತ್ತದೆ. ಪ್ರಸೂತಿ (ಶಿಶು ಜನನ) ಒಂದು ಭಾವನಾತ್ಮಕ ಅನುಭವವಾಗಿದ್ದು, ದೈಹಿಕ ಮತ್ತು ಮನೋಶಾಸ್ತ್ರೀಯ ಅಂಶಗಳೆರಡನ್ನೂ ಒಳಗೊಂಡಿರುತ್ತದೆ. ಪ್ರತೀ ಮಹಿಳೆಯಲ್ಲೂ ಶಿಶು ಜನನ ವಿಭಿನ್ನ ಮತ್ತು ಅಪೂರ್ವವಾಗಿದ್ದು, ಆಕೆ ಅನುಭವಿಸುವ ಪ್ರಸವ ವೇದನೆ, ತೊಂದರೆ ಇತ್ಯಾದಿಗಳೂ ವಿಭಿನ್ನವಾಗಿರುತ್ತವೆ. ಮಗುವಿನ ಗಾತ್ರ ಮತ್ತು ಸ್ಥಾನ, ಪ್ರಸೂತಿ ಹೇಗೆ ಮುಂದುವರಿಯುತ್ತದೆ ಹಾಗೂ ಮಹಿಳೆಗೆ ನೋವನ್ನು ತಾಳಿಕೊಳ್ಳಲು ಇರುವ ಸಾಮರ್ಥ್ಯವನ್ನು ಆಧರಿಸಿ ಇದು ಬದಲಾಗುತ್ತದೆ. ಶಿಶು ಜನನದ ಬಗ್ಗೆ ವೈದ್ಯರು ಅಥವಾ ದಾದಿಯರು ಯಾ ಗೆಳತಿಯರಿಂದ ಪಡೆದ ಸಲಹೆಗಳ ಆಧಾರದಲ್ಲಿ ಕೆಲವು ಮಹಿಳೆಯರು ಉಸಿರಾಟ ಮತ್ತು ವಿಶ್ರಾಮಕ ತಂತ್ರಗಳಿಂದಲೇ ಪ್ರಸೂತಿಯ ನೋವನ್ನು ತಾಳಿಕೊಂಡರೆ, ಇನ್ನು ಕೆಲವರು ಈ ತಂತ್ರಗಳ ಜತೆಗೆ ನೋವು ಉಪಶಮಕಾರಿ ಔಷಧಗಳು ಮತ್ತು ಎಪಿಡ್ನೂರಲ್‌ ಅನಾಲೆಸಿಯಾಗಳ ಮೊರೆ ಹೊಗುತ್ತಾರೆ. ಪ್ರಸೂತಿ ನೋವನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದು ಮಹಿಳೆಯೊಬ್ಬಳು ಶಿಶುಜನನವನ್ನು ಹೇಗೆ ಅನುಭವಿಸುತ್ತಾಳೆ ಎಂಬುದರಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.

ಪ್ರಸೂತಿ (ಶಿಶುಜನನ) ಅಂದರೇನು?
ಪ್ರಸೂತಿ ಅಂದರೆ ಶಿಶುವಿಗೆ ಜನನ ನೀಡುವ ಸಕ್ರಿಯಾತ್ಮಕ ಪ್ರಕ್ರಿಯೆ. ಗರ್ಭಕೋಶದ ನಿಯಮಿತವಾದ ವೇದನೆಸಹಿತ ಸಂಕುಚನ – ವಿಕಸನಗಳು ಮತ್ತವುಗಳ ಆವರ್ತನೆಯೂ ತೀಕ್ಷ್ಣತೆಯೂ ಹೆಚ್ಚುತ್ತ ಹೋಗುವುದು ಈ ಪ್ರಕ್ರಿಯೆಯ ಲಕ್ಷಣಗಳು.

ಪ್ರಸವ ವೇದನೆಯು ಎರಡು ಭಾಗಗಳನ್ನು ಹೊಂದಿರುತ್ತದೆ. ಪ್ರಸೂತಿ ಮೊದಲ ಹಂತದಲ್ಲಿ ಕಾಣಿಸಿಕೊಳ್ಳುವ ವೈಸೆರಲ್‌ ನೋವು (ಗರ್ಭಕೋಶದ ಬಾಯಿ ಅಥವಾ ಗರ್ಭಕಂಠವು ನಿಧಾನವಾಗಿ ತೆರೆದುಕೊಳ್ಳುವ ಸಂದರ್ಭ) ಮೊದಲನೆಯದಾದರೆ, ಮೊದಲನೆಯ ಹಂತದ ಕೊನೆಯ ಭಾಗ ಮತ್ತು ಪ್ರಸೂತಿಯ ದ್ವಿತೀಯ ಹಂತ (ಶಿಶು ಜನನ) ದಲ್ಲಿ ಕಾಣಿಸಿಕೊಳ್ಳುವ ಸೊಮ್ಯಾಟಿಕ್‌ ನೋವು ಎರಡನೆಯದು.

ವೈಸೆರಲ್‌ ನೋವು ಹೊಟ್ಟೆಯ ಕೆಳಭಾಗ, ಬೆನ್ನು ಮತ್ತು ತೊಡೆಯ ಮೇಲ್ಭಾಗಗಳಲ್ಲಿ ಅನುಭವಕ್ಕೆ ಬರುತ್ತದೆ, ಲಘುವಾಗಿರುತ್ತದೆ. ಸೊಮ್ಯಾಟಿಕ್‌ ನೋವು ಪ್ರಸವ ಸಮಯಕ್ಕೆ ನಿಕಟವಾಗಿ ಉಂಟಾಗುತ್ತಿದ್ದು, ತೀಕ್ಷ್ಣವಾಗಿರುತ್ತದೆ, ಜನನಾಂಗ, ಗುದದ್ವಾದ ಮತ್ತು ತೊಡೆಗಳು ಸೊಂಟಕ್ಕೆ ಕೂಡುವ ಪ್ರದೇಶದಲ್ಲಿ ಕೇಂದ್ರೀಕೃತವಾಗಿರುತ್ತದೆ.

ಪ್ರಸೂತಿ ನೋವಿನ ಮನೋಶಾಸ್ತ್ರ
ಪ್ರಸೂತಿಯ ನೋವು ಒಂದು ಭಾವನಾತ್ಮಕ ಅನುಭವವಾಗಿದ್ದು, ಅನೇಕ ಮಹಿಳೆಯರಿಗೆ ಶಿಶು ಜನನ ಸಂದರ್ಭದಲ್ಲಿ ಮನೋಶಾಸ್ತ್ರೀಯ ಸವಾಲಾಗಿ ಎದುರಾಗುತ್ತದೆ. ಪ್ರಸೂತಿ ಸಂದರ್ಭದಲ್ಲಿ ಸತತವಾದ ನೆರವು ಮತ್ತು ಬೆಂಬಲವನ್ನು ಪಡೆಯುವ ಗರ್ಭಿಣಿಯರಿಗೆ ನೋವು ನಿವಾರಕ ಔಷಧಗಳು ಅಗತ್ಯ ಬೀಳುವುದು ಕಡಿಮೆ ಮತ್ತು ಅಂಥವರು ಪ್ರಸೂತಿ ಒಂದು ಅಸಂತೋಷದ ಅನುಭವ ಎಂಬುದಾಗಿ ಪರಿಗಣಿಸುವುದು ಕಡಿಮೆ ಎಂಬುದಾಗಿ ಶಿಶುಜನನ ಮೇಲೆ ಪರಿಣಾಮ ಬೀರುವ ಅಂಶಗಳ ಬಗೆಗೆ ಇತ್ತೀಚೆಗೆ ನಡೆದಿರುವ ಅಧ್ಯಯನಗಳು ನಿರ್ಣಯಕ್ಕೆ ಬಂದಿವೆ. ಪ್ರಸವದ ಬಗ್ಗೆ ಆತಂಕ ಮತ್ತು ಅಂಜಿಕೆಯನ್ನು ಹೊಂದಿರುವುದು ಕೂಡ ಹೆಚ್ಚು ಡೋಸ್‌ ನೋವು ನಿವಾರಕ ಔಷಧ ಅಗತ್ಯ ಬೀಳುವುದಕ್ಕೆ ಮತ್ತು ಶಿಶು ಜನನ ಹೆಚ್ಚು ದೀರ್ಘ‌ವಾಗಲು ಕಾರಣವಾಗುತ್ತವೆ ಎಂಬುದಾಗಿಯೂ ಹೇಳಲಾಗಿದೆ.

ಪ್ರಸೂತಿಪೂರ್ವ ಶಿಕ್ಷಣವು ಏಕೆ ಪ್ರಾಮುಖ್ಯ?
ಶಿಶುಜನನದ ಬಗ್ಗೆ ತಿಳಿವಳಿಕೆ, ಶಿಕ್ಷಣವನ್ನು ಒದಗಿಸುವ ತರಗತಿಗಳಿಗೆ ಹಾಜರಾಗುವುದು ಮಹಿಳೆಯ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆಯಲ್ಲದೆ, ಶಿಶುವಿಗೆ ಜನ್ಮ ನೀಡುವ ಸಾಮರ್ಥ್ಯ ಹೆಚ್ಚುತ್ತದೆ. ಶಿಶು ಜನನದ ಬಗ್ಗೆ ಇರಬಹುದಾದ ಭಯವನ್ನು ಪರಿಹರಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ. ಶಿಶುವಿಗೆ ಜನನ ನೀಡಲು ಇರುವ ಆಯ್ಕೆಗಳ ಬಗ್ಗೆ ಮಾಹಿತಿಯುಕ್ತ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಕೂಡ ಇವು ಸಹಾಯ ಮಾಡುತ್ತವೆ. ಗರ್ಭಧಾರಣೆಯ ಅವಧಿ ಹಿತಕರವಾಗಿರುವಂತೆ ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳುವುಕ್ಕೆ ಹಾಗೂ ಶಿಶುವಿಗೆ ಜನ್ಮ ನೀಡಿದ ಬಳಿಕ ಸುಗಮವಾಗಿ ಚೇತರಿಸಿಕೊಳ್ಳುವುದಕ್ಕೆ ಕೂಡ ಈ ತರಗತಿಗಳು ನೆರವಾಗುತ್ತವೆ. ಶಿಶು ಜನನಕ್ಕೆ ಪೂರ್ವದಲ್ಲಿ ಮಾಡಿಕೊಳ್ಳುವ ಮಾನಸಿಕ ತಯಾರಿಯು ತಾಯ್ತನದ ಅನುಭವ ಸಂತೃಪ್ತಿದಾಯಕವಾಗುವಂತೆ ಮಾಡುತ್ತದೆ ಹಾಗೂ ನೋವಿನ ಅನುಭವವನ್ನು ಕೂಡ ಕಡಿಮೆ ಮಾಡಬಲ್ಲುದಾಗಿದೆ.

ಪ್ರಸೂತಿ ಸಂದರ್ಭದಲ್ಲಿ ನೋವಿನ ನಿರ್ವಹಣೆ
ಮಹಿಳೆಯು ಶಿಶುವಿಗೆ ಜನನ ನೀಡುವ ಅನುಭವದಲ್ಲಿ ಭಾಗಿಯಾಗಲು ಸಾಮರ್ಥ್ಯ ಹೊಂದಿರುವಾಗಲೇ, ಪ್ರಸೂತಿಯನ್ನು ಅನುಭವಿಸುತ್ತಿರುವ ಆಕೆಗೆ ಆ ನೋವು ತುಲನಾತ್ಮಕವಾಗಿ ಕಡಿಮೆಯೆನಿಸುವಂತೆ ಮಾಡುವುದೇ ನೋವಿನ ಉಪಶಮನದ ಉದ್ದೇಶವಾಗಿದೆ. ತಾಯಿ ಮತ್ತು ಶಿಶು – ಇಬ್ಬರಿಗೂ ಸಂಬಂಧಿತ ಅಡ್ಡ ಪರಿಣಾಮಗಳು ಅಥವಾ ಅಪಾಯಗಳು ಉಂಟಾಗಬಾರದು
ಎಂಬುದು ಇಲ್ಲಿ ಆದರ್ಶ ಅಂಶವಾಗಿದೆ.

ಪ್ರಸವದ ನೋವನ್ನು ನಿಭಾಯಿಸಲು ಪೂರಕ ಮತ್ತು ಪರ್ಯಾಯ ಚಿಕಿತ್ಸೆಗಳು
1. ಬರ್ತಿಂಗ್‌ ಬಾಲ್‌, ಆವರ್ತಕ ಉಸಿರಾಟ ತಂತ್ರಗಳು, ಚಲನೆ ಮತ್ತು ಭಂಗಿ ಬದಲಾವಣೆ, ಕೆಳಬೆನ್ನು ಹಾಗೂ ತೊಡೆಗಳು-ಸೊಂಟ ಕೂಡುವ ಪ್ರದೇಶಕ್ಕೆ ಶಾಖ ಒದಗಿಸುವುದು, ಭುಜಗಳು, ಕುತ್ತಿಗೆ ಮತ್ತು ಕೊರಳಿಗೆ ಮಸಾಜ್‌, ಆ್ಯರೊಮಾ ಥೆರಪಿ, ಸಂಗೀತ, ಏಕಾಗ್ರತೆ ಮತ್ತು ಗಮನವನ್ನು ಬೇರೆಡೆಗೆ ತಿರುಗಿಸುವುದು ಹೆಚ್ಚುವ ನೋವು ಕಡಿಮೆ ಅನುಭವಕ್ಕೆ ಬರುವಂತೆ ಮಾಡುವ ನೈಸರ್ಗಿಕ ಶಿಶುಜನನ ತಂತ್ರಗಳಲ್ಲಿ ಕೆಲವು.

2. ಟೆನ್ಸ್‌ (ಟ್ರಾನ್ಸ್‌ಕಟೇನಸ್‌ ನರ್ವ್‌ ಸ್ಟಿಮ್ಯುಲೇಶನ್‌): ಅನೇಕ ಮಹಿಳೆಯರು ಕೆಳಬೆನ್ನಿನಲ್ಲಿ ನೋವು ಅನುಭವಿಸುವ ಆರಂಭಿಕ ಹಂತದಲ್ಲಿ ಇದು ಪರಿಣಾಮಕಾರಿಯಾಗಿದೆ.

ಟೆನ್ಸ್‌ ಹೇಗೆ ಕೆಲಸ ಮಾಡುತ್ತದೆ?
ಬೆನ್ನಿನ ಭಾಗಕ್ಕೆ ಎಲೆಕ್ಟ್ರೋಡ್‌ಗಳನ್ನು ಟೇಪ್‌ ಸಹಾಯದಿಂದ ಅಂಟಿಸುತ್ತಾರೆ, ಇವುಗಳಿಗೆ ಸಣ್ಣದಾದ ಬ್ಯಾಟರಿ ಚಾಲಿತ ಸ್ಟಿಮ್ಯುಲೇಟರ್‌ನ್ನು ವಯರ್‌ ಮೂಲಕ ಸಂಪರ್ಕಿಸಲಾಗುತ್ತದೆ. ಇದನ್ನು ಹಿಡಿದುಕೊಂಡು ಗರ್ಭಿಣಿ ತನಗೆ ತಾನೇ ಸುರಕ್ಷಿತ ಪ್ರಮಾಣದ ಲಘು ವಿದ್ಯುತ್‌ ತರಂಗಗಳನ್ನು ನೀಡಿಕೊಳ್ಳಬಹುದು, ಇದಾಗುತ್ತಿರುವಾಗ ಅತ್ತಿತ್ತ ಚಲನವಲನವೂ ಸಾಧ್ಯವಾಗುತ್ತದೆ. ಟೆನ್ಸ್‌ ದೇಹವು ತನ್ನದೇ ಆದ ಎಂಡೋರ್ಫಿನ್‌ ಎಂಬ ನೋವು ನಿವಾರಕವನ್ನು ಉತ್ಪಾದಿಸಲು ಪ್ರೇರೇಪಣೆ ಒದಗಿಸುತ್ತದೆ ಎನ್ನಲಾಗಿದೆ. ಬೆನ್ನುಹುರಿಯ ಮೂಲಕ ಮಿದುಳಿಗೆ ರವಾನೆಯಾಗುವ ನೋವಿನ ಸಂಕೇತಗಳನ್ನು ಕೂಡ ಅದು ಕಡಿಮೆ ಮಾಡುತ್ತದೆ. ಅಸಂಪೂರ್ಣ, ಅನಿರೀಕ್ಷಿತ ಮತ್ತು ಸತತವಲ್ಲದ ನೋವಿಗೆ ಟೆನ್ಸ್‌ ಉಪಶಮನ ಒದಗಿಸುತ್ತದೆ.

3. ವಾಟರ್‌ಬರ್ತ್‌ ಅಥವಾ ಜಲಪ್ರಸೂತಿ: ಅಂದರೆ ಪ್ರಸೂತಿಯ ಒಂದು ಭಾಗ, ಪ್ರಸವ ಅಥವಾ ಎರಡೂ ಹದ ಬಿಸಿಯಾದ ನೀರು ತುಂಬಿದ ಕೃತಕ ಕೊಳದಲ್ಲಿ ನಡೆಯುವುದೇ ವಾಟರ್‌ ಬರ್ತ್‌ ಅಥವಾ ಜಲ ಪ್ರಸೂತಿ. ಕಿರಿದಾದ ಪ್ರಸೂತಿ ಅಥವಾ ಪ್ರಸೂತಿಯ ವೇಗವರ್ಧಿಸಲು ಬೇಕಾದ ಔಷಧಗಳನ್ನು ಕಡಿಮೆಗೊಳಿಸುವುದು ಜಲಪ್ರಸೂತಿಯ ಉದ್ದೇಶವಾಗಿರಬಹುದು. ನೀರಿನಲ್ಲಿ ಉಂಟಾಗುವ ತೂಕ ಕಡಿಮೆಯಾದ ಅನುಭವವು ವಿಶ್ರಾಮವನ್ನು ಒದಗಿಸುತ್ತದೆಯಲ್ಲದೆ ಪ್ರಸೂತಿ ಸಂದರ್ಭದಲ್ಲಿ ಭಂಗಿಗಳನ್ನು ಸುಲಭವಾಗಿ ಬದಲಾಯಿಸಿಕೊಳ್ಳಲು ಸಹಾಯ ಮಾಡುತ್ತದೆ. ಬಿಸಿಯಾದ ನೀರು ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ಆತಂಕ, ಉದ್ವಿಗ್ನತೆಗಳನ್ನು ಕಡಿಮೆ ಮಾಡುತ್ತದೆ. ಆದರೆ ಜಲಪ್ರಸೂತಿಯ ಪ್ರಯೋಜನಗಳ ಬಗ್ಗೆ ಸ್ಪಷ್ಟತೆ ಇನ್ನೂ ಕಂಡುಬಂದಿಲ್ಲ. ಜನ ಪ್ರಸೂತಿಯ ಸುರಕ್ಷತೆಯು ವೈಜ್ಞಾನಿಕವಾಗಿ ಇನ್ನೂ ದೃಢಪಟ್ಟಿಲ್ಲ, ಅಲ್ಲದೆ ತಾಯಿ ಮತ್ತು ಶಿಶು ಸೋಂಕಿಗೆ ಒಳಗಾಗುವ ಹಾಗೂ ಶಿಶು ನೀರಿನಲ್ಲಿ ಮುಳುಗುವ ಅಪಾಯ ಇದೆ ಎಂಬುದಾಗಿ ಈ ವಿಧಾನವನ್ನು ಟೀಕಿಸುವವರು ವಾದಿಸುತ್ತಾರೆ.

ಎಪಿಡ್ನೂರಲ್‌ ಕೆಲಸ
ಮಾಡುವುದು ಹೇಗೆ?
ಎಪಿಡ್ನೂರಲ್‌ ನೀಡುವುದಕ್ಕಾಗಿ: ಗರ್ಭಿಣಿಯ ತೋಳಿನ ರಕ್ತನಾಳಕ್ಕೆ ಡ್ರಿಪ್‌ ಹಾಕಲಾಗುತ್ತದೆ. ಗರ್ಭಿಣಿಯು ಅಡ್ಡಲಾಗಿ ಮಲಗಿದ ಅಥವಾ ಬೆನ್ನುಬಾಗಿಸಿ ಕುಳಿತ ಭಂಗಿಯಲ್ಲಿ ಅರಿವಳಿಕೆ ತಜ್ಞರು ಸೊಂಟದ ಸಣ್ಣ ಭಾಗವನ್ನು ಆ್ಯಂಟಿಸೆಪ್ಟಿಕ್‌ನಿಂದ ಶುಚಿಗೊಳಿಸಿ, ಸ್ಥಳೀಯ ಅರಿವಳಿಕೆಯ ಮೂಲಕ ಆ ಭಾಗವನ್ನು ಜೋಮುಗಟ್ಟಿಸುತ್ತಾರೆ. ಬಳಿಕ ಸೂಜಿಯನ್ನು ಚುಚ್ಚುತ್ತಾರೆ. ಗರ್ಭಕೋಶದಿಂದ ನೋವಿನ ಅನುಭವದ ಸಂದೇಶಗಳನ್ನು ರವಾನಿಸುವ ನರಗಳ ಬಳಿಗೆ ಸೂಜಿಯ ಮೂಲಕ ಕಿರಿದಾದ ನಳಿಕೆಯೊಂದನ್ನು ರವಾನಿಸಲಾಗುತ್ತದೆ. ಈ ನಳಿಕೆಯ ಮೂಲಕ ಔಷಧ (ಸಾಮಾನ್ಯವಾಗಿ ಸ್ಥಳೀಯ ಅರಿವಳಿಕೆ ಮತ್ತು ಓಪಿಯಡ್‌ಗಳ ಮಿಶ್ರಣ)ವನ್ನು ನೀಡಲಾಗುತ್ತದೆ. ಎಪಿಡ್ನೂರಲ್‌ ಸ್ಥಾಪನೆಗೆ 10 ನಿಮಿಷ ಮತ್ತು ಆ ಬಳಿಕ ಅದು ಕೆಲಸ ಮಾಡಲು 10ರಿಂದ 15 ನಿಮಿಷ ತಗಲುತ್ತದೆ. ಇದು ಯಾವಾಗಲೂ ಒಂದೇ ಪ್ರಯತ್ನದಲ್ಲಿ ಯಶಸ್ವಿಯಾಗುವುದಿಲ್ಲ, ಸರಿಹೊಂದಿಸುವ ಅಗತ್ಯ ಬೀಳುತ್ತದೆ. ತಾಯಿಯ ಗರ್ಭಕೋಶದ ಸಂಕುಚನ- ವಿಕಸನ ಮತ್ತು ಶಿಶುವಿನ ಹೃದಯ ಬಡಿತದ ಗತಿಯ ಮೇಲೆ ಸತತವಾಗಿ ನಿಗಾ ಇರಿಸಬೇಕಾಗುತ್ತದೆ.

ಪ್ರಸೂತಿ ಸಂದರ್ಭದಲ್ಲಿ ಎಪಿಡ್ನೂರಲ್‌ಗ‌ಳ ಅಡ್ಡ ಪರಿಣಾಮಗಳು
1. ಎಪಿಡ್ನೂರಲ್‌ನಿಂದ ಗರ್ಭಿಣಿಗೆ ಕಾಲುಗಳು ಭಾರವಾದಂತೆ ಅನ್ನಿಸಬಹುದು.
2. ರಕ್ತದೊತ್ತಡ ಇಳಿಯಬಹುದು (ಹೈಪೊಟೆನ್ಶನ್‌), ಆದರೆ ಇದು ಅಪರೂಪ. ಏಕೆಂದರೆ ಡ್ರಿಪ್‌ ಮೂಲಕ ನೀಡಲಾಗುವ ದ್ರಾವಣವು ರಕ್ತದೊತ್ತಡ ಕಾಯ್ದುಕೊಳ್ಳಲು ಸಹಕರಿಸುತ್ತದೆ.
3. ಎಪಿಡ್ನೂರಲ್‌ಗ‌ಳು ಪ್ರಸೂತಿಯ ದ್ವಿತೀಯ ಹಂತವನ್ನು ದೀರ್ಘ‌ಕಾಲಿಕಗೊಳಿಸಬಹುದು. ಎಪಿಡ್ನೂರಲ್‌ ಪ್ರಭಾವದಿಂದಾಗಿ ಗರ್ಭಕೋಶದ ಸಂಕುಚನ ಅನುಭವಕ್ಕೆ ಬಾರದೆ ಇರುವುದರಿಂದ ದಾದಿಯೇ ನಿಮಗೆ ಯಾವಾಗ ಶಿಶುವನ್ನು ಒತ್ತಡ ಹಾಕಿ ಹೊರನೂಕಬೇಕು ಎಂದು ಸೂಚಿಸಬೇಕಾಗುತ್ತದೆ. ಇದರಿಂದಾಗಿ ಕೆಲವೊಮ್ಮೆ ಶಿಶುವಿನ ತಲೆಯನ್ನು ಹೊರಹಾಕಲು ಫೋರ್ಸೆಪ್ಸ್‌ ಅಥವಾ ವೆಂಟೌಸ್‌ ನೆರವು ಅಗತ್ಯವಾಗಬಹುದು. ಕೆಲವೊಮ್ಮೆ ಎಪಿಡ್ನೂರಲ್‌ನ ಅಂತ್ಯ ಭಾಗದಲ್ಲಿ ಅರಿವಳಿಕೆಯ ಪ್ರಮಾಣವನ್ನು ತಗ್ಗಿಸಿ ಅದರ ಪರಿಣಾಮವು ಕಡಿಮೆಯಾಗುವಂತೆ ಮಾಡುವ ಮೂಲಕ ತಾಯಿ ನೈಸರ್ಗಿಕವಾಗಿ ಶಿಶುವನ್ನು ಹೊರಕ್ಕೆ ತಳ್ಳಲು ಅನುವು ಮಾಡಿಕೊಡಲಾಗುತ್ತದೆ. ನೂರರಲ್ಲಿ ಒಬ್ಬ ಮಹಿಳೆಗೆ ಎಪಿಡ್ನೂರಲ್‌ನ ಬಳಿಕ ತಲೆನೋವಿನ ಅನುಭವವಾಗುತ್ತದೆ. ಇದು ಉಂಟಾದರೆ ಅದಕ್ಕೆ ಚಿಕಿತ್ಸೆ ನೀಡಬಹುದಾಗಿದೆ. ಎಪಿಡ್ನೂರಲ್‌ಗ‌ಳಿಂದ ದೀರ್ಘ‌ಕಾಲಿಕ ಬೆನ್ನುನೋವು ಉಂಟಾಗುವುದಿಲ್ಲ. ಸುಮಾರು 2,000ದಲ್ಲಿ ಒಬ್ಬ ಮಹಿಳೆಗೆ ಶಿಶುಜನನದ ಬಳಿಕ ಒಂದು ಕಾಲಿ ನಲ್ಲಿ ಸೂಜಿಯಿಂದ ಚುಚ್ಚಿದ, ಇರುವೆ ಹರಿದಾಡಿದ ಅನುಭವ ಉಂಟಾಗುತ್ತದೆ. ಇದು ಶಿಶುವಿಗೆ ಜನ್ಮ ನೀಡಿದ್ದರಿಂದಲೇ ಆಗುವ ಅನುಭವ ವಾಗಿದ್ದು, ಎಪಿಡ್ನೂರಲ್‌ನ ಅಡ್ಡ ಪರಿಣಾಮವಾಗಿರುವ ಸಾಧ್ಯತೆ ಕಡಿಮೆ.

ಪ್ರಸೂತಿಯ ಸಂದರ್ಭದಲ್ಲಿ ನಡುಕ, ಹೊಟ್ಟೆ ತೊಳೆಸುವಿಕೆ ಮತ್ತು ವಾಂತಿಯೂ ಉಂಟಾಬಹುದಾಗಿದ್ದು, ಸಮಸ್ಯೆಯಾಗಿ ಪರಿಣಮಿಸಿದರೆ ಚಿಕಿತ್ಸೆಗೆ ಒಳಪಡಿಸಬಹುದಾಗಿದೆ. ಪ್ರಾಣಾಪಾಯಕಾರಿಯಾದ ಅಥವಾ ಗಂಭೀರ ಸಂಕೀರ್ಣ ಸಮಸ್ಯೆಗಳು (ಅಸಾಮಾನ್ಯವಾದ ಔಷಧ ಪ್ರತಿರೋಧ ಪರಿಣಾಮಗಳು ಅಥವಾ ರಕ್ತಸ್ರಾವದಿಂದ ನರಗಳಿಗೆ ಹಾನಿಯಾಗುವುದು ಅಥವಾ ಬೆನ್ನುಹುರಿಯ ಬಳಿ ಸೋಂಕು) ತೀರಾ ಅಪರೂಪದ್ದಾಗಿವೆ.

ಉಪಸಂಹಾರ
ಪ್ರಸೂತಿ ಸಂದರ್ಭದಲ್ಲಿ ಲಭ್ಯವಿರುವ ನೋವು ಉಪಶಮನದ ವಿವಿಧ ಆಯ್ಕೆಗಳ ಬಗ್ಗೆ ಮಹಿಳೆಯರು ಸಾಕಷ್ಟು ಮುಂಚಿತವಾಗಿಯೇ ಮಾಹಿತಿ ಹೊಂದಿರಬೇಕು. ಇದರಿಂದಾಗಿ ತಮ್ಮ ಮೌಲ್ಯ, ನಂಬಿಕೆಗಳು, ನಿರೀಕ್ಷೆಗಳು ಮತ್ತು ಆದ್ಯತೆಗಳಿಗೆ ಅನುಸಾರವಾಗಿ ಅವರಿಗೆ ಮಾಹಿತಿಪೂರ್ಣವಾದ ಉತ್ತಮ ಆಯ್ಕೆಗಳನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಪ್ರಸೂತಿಯಂತಹ ಅನಿರೀಕ್ಷಿತ ಸನ್ನಿವೇಶಗಳಲ್ಲಿ ಅವಸರದ ಮತ್ತು ಬೇರೆಯವರು ತೆಗೆದುಕೊಂಡ ನಿರ್ಣಯಗಳಿಗೆ ಒಳಗಾಗುವುದಕ್ಕಿಂತ ಪ್ರಸೂತಿ ಸಂದರ್ಭದ ನೋವು ಉಪಶಮನದ ಆಯ್ಕೆಗಳ ಬಗ್ಗೆ ಮುಂಚಿತವಾಗಿ ಅರಿವು ಹೊಂದಿರುವುದು ಸೂಕ್ತ.

ಪ್ರಸವ‌ ವೇದನೆ ಸಂದರ್ಭದಲ್ಲಿ ಫಾರ್ಮಕಾಲಾಜಿಕಲ್‌ ವಿಧಾನಗಳು
1. ಎಂಟೊನೋಕ್ಸ್‌: ಇದು ಆಮ್ಲಜನಕ ಮತ್ತು ನೈಟ್ರಸ್‌ ಆಕ್ಸೆ„ಡ್‌ ಅನಿಲಗಳ 50:50 ಮಿಶ್ರಣವಾಗಿದೆ. ಇದು ನೋವನ್ನು ಸಂಪೂರ್ಣ ನಿವಾರಣೆ ಮಾಡುವುದಿಲ್ಲ, ಆದರೆ ಅದನ್ನು ಕಡಿಮೆ ಮಾಡುವ ಮೂಲಕ ಸಹಿಸಲು ಸಾಧ್ಯವಾಗುವಂತೆ ಮಾಡುತ್ತದೆ. ಇದನ್ನು ಉಪಯೋಗಿಸಲು ಸುಲಭ ಮತ್ತು ಸ್ವತಃ ನಿಯಂತ್ರಿಸಿಕೊಳ್ಳಬಹುದಾದ್ದರಿಂದ ಅನೇಕ ಗರ್ಭಿಣಿಯರು ಇದನ್ನು ಇಷ್ಟಪಡುತ್ತಾರೆ. ಇದರಿಂದ ತಾಯಿ ಅಥವಾ ಮಗುವಿಗೆ ಯಾವುದೇ ಅಪಾಯಕಾರಿ ಅಡ್ಡ ಪರಿಣಾಮಗಳು ಇರುವುದಿಲ್ಲ. ಕೆಲವೇ ಮಹಿಳೆಯರಲ್ಲಿ ಇದರಿಂದ ತಲೆ ಹಗುರಾದ ಅನುಭವ ಉಂಟಾಗಬಹುದು.
2. ಪೆಥಾಡೈನ್‌: ಇದು ಓಪಿಯಡ್‌ ಇಂಜೆಕ್ಷನ್‌ ಆಗಿದ್ದು, ನೋವನ್ನು ಕಡಿಮೆ ಮಾಡುವುದಕ್ಕಾಗಿ ಸೊಂಟದ ಭಾಗಕ್ಕೆ ನೀಡಲಾಗುತ್ತದೆ. ಇದು ಅನಾಲೆjಸಿಕ್‌ನಂತಲ್ಲ, ಸೆಡೆಟಿವ್‌ನಂತೆ (ನಿದ್ದೆ ಬರಿಸುತ್ತದೆ ಮತ್ತು ಪ್ರಶಾಂತತೆಯನ್ನು ಉಂಟು ಮಾಡುತ್ತದೆ. ಇದರ ಪರಿಣಾಮವು 2ರಿಂದ 4 ತಾಸು ಇರುತ್ತಿದ್ದು, ಪ್ರಸೂತಿಯ ಆರಂಭಿಕ ಹಂತದಲ್ಲಿ ನೀಡಲಾಗುತ್ತದೆ. ಕೆಲವು ಅಡ್ಡ ಪರಿಣಾಮಗಳ ಬಗ್ಗೆ ಎಚ್ಚರದಿಂದ ಇರಬೇಕಾಗುತ್ತದೆ‌: ಕೆಲವು ಮಹಿಳೆಯರಿಗೆ ನಿದ್ದೆಯ ಅಮಲು ಮತ್ತು ಅಸೌಖ್ಯದ ಭಾವನೆ ಉಂಟಾಗಬಹುದು. ಪ್ರಸವಕ್ಕೆ ಸನಿಹದ ಸಮಯದಲ್ಲಿ ಇದನ್ನು ನೀಡಿದರೆ ಶಿಶುವಿನ ಉಸಿರಾಟದ ಮೇಲೆ ಪರಿಣಾಮ ಉಂಟಾಗಬಹುದು.
3. ಎಪಿಡ್ನೂರಲ್‌: ಪ್ರಸೂತಿಯ ಸಂದರ್ಭದಲ್ಲಿ ನೋವಿನಿಂದ ಉಪಶಮನ ಒದಗಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿ ಎಪಿಡ್ನೂರಲ್‌ ಅನಲೆjಸಿಯಾ ಪರಿಗಣಿತವಾಗಿದೆ. ಇದರಲ್ಲಿ ನೋವನ್ನು ಪ್ರೇಷಿಸುವ ಬೆನ್ನಿನ ನರಗಳಿಗೆ ಸನಿಹ ಸ್ಥಳೀಯ ಅರಿವಳಿಕೆಯನ್ನು ಚುಚ್ಚಲಾಗುತ್ತದೆ. ದೀರ್ಘ‌ಕಾಲದ ಪ್ರಸೂತಿ ಅಥವಾ ನಿರ್ದಿಷ್ಟವಾಗಿ ತುಂಬಾ ನೋವನಿಂದ ಕೂಡಿದ ಪ್ರಸೂತಿಯನ್ನು ಅನುಭವಿಸುವ ಗರ್ಭಿಣಿಯರಿಗೆ ಈ ವಿಧಾನವು ಸಹಾಯಕವಾಗಿದೆ. ಪ್ರಸೂತಿಯನ್ನು ಅನುಭವಿಸುತ್ತಿರುವ ಮಹಿಳೆಗೆ ಫೋರ್ಸೆಪ್ಸ್‌ ಪ್ರಸವ ಅಥವಾ ಸಿಸೇರಿಯನ್‌ ಶಸ್ತ್ರಚಿಕಿತ್ಸೆ ನಡೆಸಬೇಕಾಗಿದ್ದರೂ ಇದು ಪ್ರಯೋಜನಕ್ಕೆ ಬರುತ್ತದೆ. ಅರಿವಳಿಕೆ ತಜ್ಞರು ಎಪಿಡ್ನೂರಲ್‌ ನೀಡುತ್ತಾರೆ. ಎಪಿಡ್ನೂರಲ್‌ ನೋವಿನಿಂದ ಅತ್ಯುತ್ತಮವಾದ ಉಪಶಮನವನ್ನು ಒದಗಿಸುತ್ತದೆಯಾದರೂ ಪ್ರಸೂತಿಯ ಸಂದರ್ಭದಲ್ಲಿ ಇದು ಶತಪ್ರತಿಶತ ಪರಿಣಾಮಕಾರಿಯಲ್ಲ. ಪ್ರಸೂತಿ ಅರಿವಳಿಕೆ ತಜ್ಞರ ಅಸೋಸಿಯೇಶನ್‌ ಪ್ರಕಾರ, ಪ್ರಸೂತಿ ಸಂದರ್ಭದಲ್ಲಿ ಎಪಿಡ್ನೂರಲ್‌ ನೀಡಲ್ಪಟ್ಟಿರುವ ಪ್ರತೀ ಎಂಟು ಮಹಿಳೆಯರಲ್ಲಿ ಓರ್ವರಿಗೆ ಇನ್ನಿತರ ನೋವು ನಿವಾರಕ ಮಾರ್ಗೋಪಾಯ ಅನುಸರಿಸಬೇಕಾದ ಅಗತ್ಯ ಬೀಳುತ್ತದೆ.

“ಮಗುವಿಗೆ ಜನ್ಮ ನೀಡುವುದು ನಿಮ್ಮ ಅತ್ಯುನ್ನತ ಸಾಧನೆಯಾಗಿರಬೇಕು, ಅತಿದೊಡ್ಡ ಭಯವಲ್ಲ’
– ಜೇನ್‌ ವೀಡ್‌ಮನ್‌

ಡಾ| ವಿದ್ಯಾಶ್ರೀ ಕಾಮತ್‌ ಸಿ.,
ಕನ್ಸಲ್ಟಂಟ್‌ ಒಬ್‌ಸ್ಟ್ರೆಟಿಕ್ಸ್‌ ಮತ್ತು ಗೈನಕಾಲಜಿ, ಕೆಎಂಸಿ ಆಸ್ಪತ್ರೆ, ಮಂಗಳೂರು.

ಟಾಪ್ ನ್ಯೂಸ್

ಶಿರಸಿ: ಕಾಡುಕೋಣ ಮೃತದೇಹ ಪತ್ತೆ, ಅಧಿಕಾರಿಗಳಿಂದ ಪರಿಶೀಲನೆ

ಶಿರಸಿ: ಕಾಡುಕೋಣ ಮೃತದೇಹ ಪತ್ತೆ, ಅಧಿಕಾರಿಗಳಿಂದ ಪರಿಶೀಲನೆ

tdy-4

ಮೊದಲ ರಾತ್ರಿಯ ಫೋಟೋ, ವಿಡಿಯೋ ಅಪ್‌ ಲೋಡ್‌ ಮಾಡಿದ ಜೋಡಿಗೆ ನೆಟ್ಟಿಗರ ಶಾಸ್ತಿ

TDY-3

ದೆಹಲಿ ಅಬಕಾರಿ ನೀತಿ: ಮತ್ತೂಬ್ಬನ ಬಂಧನ

one plus 1

ಹೊರಬರಲಿದೆ ಒನ್‌ ಪ್ಲಸ್‌ ಕಂಪನಿಯ ಮೊದಲ ಟ್ಯಾಬ್‌.. ಏನಿದರ ವಿಶೇಷತೆ..?

Health Tips: ಜೇನು ತುಪ್ಪ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ…

Health Tips: ಜೇನು ತುಪ್ಪ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ…

ಲಂಚಕ್ಕೆ ಬೇಡಿಕೆ: ಕೇಂದ್ರ ಪುರಾತತ್ವ ಇಲಾಖೆಯ ಮೂವರು ಅಧಿಕಾರಿಗಳು ಸಿಬಿಐ ಬಲೆಗೆ

ಲಂಚಕ್ಕೆ ಬೇಡಿಕೆ: ಕೇಂದ್ರ ಪುರಾತತ್ವ ಇಲಾಖೆಯ ಮೂವರು ಅಧಿಕಾರಿಗಳು ಸಿಬಿಐ ಬಲೆಗೆ

ಆನೆಗೊಂದಿ-ಸಾಣಾಪೂರ ಭಾಗದ ಅನಧಿಕೃತ ಹೊಟೇಲ್‌ಗಳ ತೆರವಿಗೆ ಮುಂದಾದ ಅಧಿಕಾರಿಗಳು

ಆನೆಗೊಂದಿ-ಸಾಣಾಪೂರ ಭಾಗದ ಅನಧಿಕೃತ ಹೊಟೇಲ್‌ಗಳ ತೆರವಿಗೆ ಮುಂದಾದ ಅಧಿಕಾರಿಗಳುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DOCTOR

ಸ್ತನ ಕ್ಯಾನ್ಸರ್‌ ತಪಾಸಣೆ

5-breast-cancer

ಸ್ತನ ಕ್ಯಾನ್ಸರ್‌- ಮ್ಯಾಮೊಗ್ರಾಮ್‌

9–liver-problem

ಆರೋಗ್ಯಯುತ ಯಕೃತ್ತಿನ ಪ್ರಯೋಜನ

8–tooth-ache

ಹಲ್ಲಿನ ಸೋಂಕು; ಸಂಧಿ ನೋವಿಗೆ ಕಾರಣವಾದೀತೇ ?

10

ಋತುಮಾನೀಯ ಖಿನ್ನತೆ; ನೀವು ತಿಳಿದುಕೊಳ್ಳಬೇಕಾದ ಅಂಶಗಳು

MUST WATCH

udayavani youtube

ಪಾಂಗಳ: ಕೋಲದಲ್ಲಿ ಭಾಗಿಯಾಗಿದ್ದ ಯುವಕನನ್ನು ಕರೆಸಿ ಹತ್ಯೆಗೈದರೇ ಪರಿಚಿತರು?

udayavani youtube

ಮೀನುಗಾರಿಕಾ ಬೋಟ್ ನ ಒಳಗೆ ಹೇಗಿರುತ್ತೆ ನೋಡಿ|

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

ಹೊಸ ಸೇರ್ಪಡೆ

ಶಿರಸಿ: ಕಾಡುಕೋಣ ಮೃತದೇಹ ಪತ್ತೆ, ಅಧಿಕಾರಿಗಳಿಂದ ಪರಿಶೀಲನೆ

ಶಿರಸಿ: ಕಾಡುಕೋಣ ಮೃತದೇಹ ಪತ್ತೆ, ಅಧಿಕಾರಿಗಳಿಂದ ಪರಿಶೀಲನೆ

tdy-4

ಮೊದಲ ರಾತ್ರಿಯ ಫೋಟೋ, ವಿಡಿಯೋ ಅಪ್‌ ಲೋಡ್‌ ಮಾಡಿದ ಜೋಡಿಗೆ ನೆಟ್ಟಿಗರ ಶಾಸ್ತಿ

TDY-3

ದೆಹಲಿ ಅಬಕಾರಿ ನೀತಿ: ಮತ್ತೂಬ್ಬನ ಬಂಧನ

ಲೋಕಾಪುರ:ಹಿಂದೂ-ಮುಸ್ಲಿಂ ಭಾವೈಕ್ಯತೆ ಬೆಸೆವ ಜ್ಞಾನೇಶ್ವರ ಮಠ

ಲೋಕಾಪುರ:ಹಿಂದೂ-ಮುಸ್ಲಿಂ ಭಾವೈಕ್ಯತೆ ಬೆಸೆವ ಜ್ಞಾನೇಶ್ವರ ಮಠ

one plus 1

ಹೊರಬರಲಿದೆ ಒನ್‌ ಪ್ಲಸ್‌ ಕಂಪನಿಯ ಮೊದಲ ಟ್ಯಾಬ್‌.. ಏನಿದರ ವಿಶೇಷತೆ..?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.