ದಂತಕ್ಷಯದ ಚಿಕಿತ್ಸಾ ವಿಧಾನಗಳು


Team Udayavani, Jan 5, 2020, 1:59 AM IST

39

“ದಂತಕ್ಷಯ’ ಅಥವಾ “ಕ್ಯಾವಿಟೀಸ್‌’ ಪ್ರಮುಖವಾಗಿ ಕಂಡುಬರುವಂತಹ ಬಾಯಿಯ ಆರೋಗ್ಯ ಸಮಸ್ಯೆಯಾಗಿದೆ. ಇದಕ್ಕೆ ವಯೋಮಿತಿ ಇಲ್ಲ. ಮಕ್ಕಳಿಂದ ದೊಡ್ಡವರ ತನಕ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತದೆ.

ದಂತಕ್ಷಯ ಹೇಗೆ ಉಂಟಾಗುತ್ತದೆ?
ನಾವು ತಿಂದ ಆಹಾರದಲ್ಲಿರುವ ಸಕ್ಕರೆಯ ಅಂಶವು ಹಲ್ಲಿನ ಪದರದಲ್ಲಿ ಶೇಖರಗೊಂಡಿರುತ್ತದೆ. ಬಾಯಿಯ ಬ್ಯಾಕ್ಟೀರಿಯಾಗಳಿಗೆ ಸಕ್ಕರೆಯೇ ಪ್ರಮುಖ ಆಹಾರ. ಬ್ಯಾಕ್ಟೀರಿಯಾ ಮತ್ತು ಆಹಾರ ಅವಶೇಷಗಳನ್ನು ಒಳಗೊಂಡಿರುವ ಹಲ್ಲಿನ ಮೇಲ್ಮೆಯ ಪದರವನ್ನು “ಪ್ಲಾಕ್‌’ ಎನ್ನುತ್ತೇವೆ. ನಿಯಮಿತವಾಗಿ ಬ್ರಷ್‌ ಮಾಡದಿದ್ದಾಗ ಈ ಪದರದಲ್ಲಿ ಬ್ಯಾಕ್ಟೀರಿಯಾಗಳು ಆಮ್ಲವನ್ನು ಉತ್ಪತ್ತಿ ಮಾಡಿ ಹಲ್ಲಿನ ಖನಿಜಾಂಶವನ್ನು ನಿರ್ನಾಮ ಮಾಡುತ್ತದೆ. ಇದರಿಂದ ದಂತ ಕ್ಷಯ ಅಥವಾ ದಂತಕುಳಿ ಉಂಟಾಗುತ್ತದೆ.

ದಂತಕ್ಷಯದ 4 ಹಂತಗಳು
1. ಹಲ್ಲಿನ ಮೊದಲ ಪದರ Enamel (ಎನಾಮಲ್‌) ಮೇಲೆ ದಾಳಿಯಿಂದ ಖನಿಜಾಂಶಗಳ ನಿರ್ನಾಮವಾಗುತ್ತದೆ.
2. ಎರಡನೆ ಪದರ Dentin (ಡೆಂಟಿನ್‌)ಗೆ ದಂತಕ್ಷಯ ಹರಡಿದಾಗ ಬಿಸಿ, ತಂಪು ಪಾನಿಯ, ಸಿಹಿ ತಿನಿಸುಗಳನ್ನು ತಿಂದಾಗ ಹಲ್ಲುಗಳು “”ಜುಂ” ಎನ್ನಲು ಶುರುವಾಗುತ್ತವೆ.
3. ಮೂರನೇ ಪದರ pulpಗೆ (ಹಲ್ಲಿನ ನರತಂತುಗಳು) ದಂತಕ್ಷಯ ಹರಡಿದಾಗ ಹಲ್ಲು ನೋವು ಉಂಟಾಗುತ್ತದೆ.
4. ಕೊನೆಯ ಹಂತದಲ್ಲಿ ದಂತಕ್ಷಯ ಹಲ್ಲಿನ ಬೇರುಗಳನ್ನು ತಲುಪಿ ಕೀವು ಉಂಟಾಗುತ್ತದೆ. ಹಾಗೂ ಹಲ್ಲಿನ ಬೇರಿನ ಭಾಗದಲ್ಲಿ ಊತ ಹಾಗೂ ಸಹಿಸಲಾಗದಷ್ಟು ವಿಪರೀತ ನೋವು ಉಂಟಾಗುತ್ತದೆ.

ಚಿಕಿತ್ಸಾ ವಿಧಾನಗಳು
1. ಮೊದಲೆರಡು ಹಂತಗಳಲ್ಲಿ ದಂತ ವೈದ್ಯರು ದಂತಕ್ಷಯ ಉಂಟಾದ ಭಾಗವನ್ನು ಸ್ವತ್ಛಗೊಳಿಸಿ ಹಲ್ಲಿಗೆ ಬೆಳ್ಳಿ (Silver Amalgam) ಅಥವಾ ಹಲ್ಲಿನ ಬಣ್ಣದ ಸಿಮೆಂಟ್‌ ತುಂಬಿ ಫಿಲ್ಲಿಂಗ್‌ ಮಾಡುತ್ತಾರೆ.
2. ದಂತಕ್ಷಯ ನರತಂತುಗಳು ಹಾಗೂ ಬೇರುಗಳಿಗೆ ಹರಡಿದಾಗ (ಹಂತ 3 ಮತ್ತು 4) ದಂತ ವೈದ್ಯರು ಹಲ್ಲಿನ ಬೇರುಗಳನ್ನು ರೂಟ್‌ ಕೆನಾಲ್‌ ಚಿಕಿತ್ಸೆ (Root Canal treatment) ಮೂಲಕ ಶುಚಿಗೊಳಿಸುತ್ತಾರೆ.
3. ಕೆಲವೊಮ್ಮೆ ದಂತಕ್ಷಯ ತೀವ್ರವಾಗಿ ಆಳವಾದ
ಕುಳಿಯಾದಾಗ
ಹಲ್ಲನ್ನು ಕೀಳಿಸ
ಬೇಕಾಗುತ್ತದೆ.

ದಂತಕ್ಷಯಕ್ಕೆ ಮೂಲಗಳು
1. ಐಸ್‌ಕ್ರೀಮ್‌, ಚಿಪ್ಸ್‌, ಬ್ರೆಡ್‌, ಕ್ಯಾಂಡಿಯಂತಹ ಸಿಹಿ ಹಾಗೂ ಜಿಗುಟು ಪದಾರ್ಥಗಳು.
2. ಅನುವಂಶಿಕ ಮತ್ತು ವಂಶಪಾರಂಪರ್ಯ ಕಾರಣಗಳು.
3. ಹಲ್ಲಿನ ಮೇಲ್ಮೆಯ ಪದರದಲ್ಲಿ ಆಳವಾದ ಚಡಿ ಹಾಗೂ ಗೀರುಗಳು (Pits and fissures)
4. ವಕ್ರದಂತತೆ
5. ಜೊಲ್ಲು ರಸ ಕಡಿಮೆಯಾಗಿ: ಮದ್ಯಪಾನ, ಧೂಮಪಾನದಿಂದ, ಹಾಗೂ ಕ್ಯಾನ್ಸರ್‌ ರೋಗಕ್ಕೆ ನೀಡುವ ಕ್ಷಕಿರಣ ಚಿಕಿತ್ಸೆಯಿಂದ “”ವಿಕಿರಣ ದಂತ ಕ್ಷಯ” ಉಂಟಾಗಬಹುದು.
6. ಎದೆಹಾಲಿನ ಬದಲಾಗಿ ಮಕ್ಕಳಿಗೆ ಸಕ್ಕರೆಯುಕ್ತ ಹಾಲನ್ನು ನೀಡಿದಾಗ ಹಲ್ಲಿನ ಸಂದಿಯಲ್ಲಿ ಸಕ್ಕರೆಯ ಅಂಶ ಸೇರಿಕೊಂಡು ದಂತಕ್ಷಯ ಉಂಟಾಗುತ್ತದೆ.

ದಂತ ಪರೀಕ್ಷೆಯ ಮಹತ್ವ
ಕ್ರಮಬದ್ಧ ಹಾಗೂ ನಿಯಮಿತವಾಗಿ ದಂತ ವೈದ್ಯರಲ್ಲಿ ಹೋಗಿ ದಂತ ತಪಾಸಣೆ ಮಾಡಿಸಿಕೊಳ್ಳುವುದರಿಂದ ದಂತ ಕ್ಷಯವನ್ನು ತಡೆಗಟ್ಟಬಹುದು. ಇಂದಿನ ದಿನಗಳಲ್ಲಿ “ಬೈಟ್‌ ವಿಂಗ್‌’ x ray ಮೂಲಕ, “ಡಯಾಗ್ನೊಡೆಂಟ್‌ ಲೇಸರ್‌’ ಮತ್ತು ಹಲವಾರು ಹೊಸ ಆವಿಷ್ಕಾರಗಳಿಂದ ದಂತ ವೈದ್ಯರು ದಂತಕ್ಷಯವನ್ನು
ಆರಂಭಿಕ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ದಂತ ವಿಜ್ಞಾನದಲ್ಲಿ ಬಯೋಸಿರಾಮಿಕ್ಸ್‌
(Bioceramics) ನಂತಹ ಅದ್ಭುತ ಜೈವಿಕ ವಸ್ತುಗಳ ಬಳಕೆಯಿಂದ ಆಳವಾದ ಹುಳುಕಿನಿಂದ ಹಲ್ಲಿನ ನರತಂತು (Pulp) ಗಳನ್ನು ರಕ್ಷಿಸಬಹುದಾಗಿದೆ.

ದಂತಕ್ಷಯ ಹೇಗೆ ತಡೆಗಟ್ಟಬಹುದು?
1. ನಿಯಮಿತವಾಗಿ ಹಲ್ಲುಜ್ಜುವುದು ಹಾಗೂ ಆಹಾರ ಸೇವನೆಯ ಬಳಿಕ ಬಾಯಿ ಮುಕ್ಕಳಿಸುವುದು.
2. ಪ್ಲೋರೈಡ್‌ಯುಕ್ತ ಟೂತ್‌ಪೇಸ್ಟ್‌ ಬಳಕೆ.
3. ಹಲ್ಲಿನ ಸಂಧಿಗಳಲ್ಲಿ ಸಿಕ್ಕ ಆಹಾರವನ್ನು ಶುಚಿಗೊಳಿಸಲು ಪ್ಲೋಸ್‌ (Floss) ಅನ್ನು ಉಪಯೋಗಿಸುವುದು.
4. ವಿಟಮಿನ್‌, ಮಿನರಲ್‌ ಹಾಗೂ ಫೈಬರ್‌ಯುಕ್ತ ಸಮೃದ್ಧವಾದ ಸಮತೋಲನ ಆಹಾರ ಸೇವನೆ.
5. ನಿಯಮಿತ ಹಲ್ಲಿನ ತಪಾಸಣೆ.

ಡಾ| ನೀತಾ ಶೆಣೈ, MDS
ಕನ್ಸರ್ವೇಟಿವ್‌ ಡೆಂಟಿಸ್ಟ್ರಿ ಆ್ಯಂಡ್‌ ಎಂಡೊಡಾಂಟಿಕ್ಸ್‌, ಮಣಿಪಾಲ ದಂತ ವೈದ್ಯಕೀಯ ಕಾಲೇಜು,
ಮಣಿಪಾಲ.

ಟಾಪ್ ನ್ಯೂಸ್

Hubli; ದರ್ಶನ್ ಅವರನ್ನು ರಾಯಭಾರಿಯಾಗಿ ನೇಮಿಸಿದ್ದು ಸರ್ಕಾರದ ತಪ್ಪು: ಪ್ರಹ್ಲಾದ ಜೋಶಿ

Hubli; ದರ್ಶನ್ ಅವರನ್ನು ರಾಯಭಾರಿಯಾಗಿ ನೇಮಿಸಿದ್ದು ಸರ್ಕಾರದ ತಪ್ಪು: ಪ್ರಹ್ಲಾದ ಜೋಶಿ

Petrol Diesel Price Hike; What are the consequences?

Petrol Diesel Price Hike; ಚುನಾವಣೆ ಬೆನ್ನಲ್ಲೇ ತೈಲ ಬರೆ ಹಾಕಿದ ಸರ್ಕಾರ; ಪರಿಣಾಮಗಳೇನು?

Road Mishap ಈಚರ್ ವಾಹನ-ಬೈಕ್ ನಡುವೆ ಅಪಘಾತ: ಸವಾರ ಮೃತ್ಯು

Road Mishap ಈಚರ್ ವಾಹನ-ಬೈಕ್ ನಡುವೆ ಅಪಘಾತ: ಸವಾರ ಮೃತ್ಯು

Price Hike: ಪೆಟ್ರೋಲ್- ಡೀಸೆಲ್ ಮೇಲೆ ಸೆಸ್ ಹೆಚ್ಚಳ ಮಾಡಿ ರಾಜ್ಯ ಸರ್ಕಾರ!

Price Hike: ಪೆಟ್ರೋಲ್- ಡೀಸೆಲ್ ಬೆಲೆ ಹೆಚ್ಚಳ ಮಾಡಿದ ರಾಜ್ಯ ಸರ್ಕಾರ!

Suresh gopi: ಇಂದಿರಾ ಗಾಂಧಿಯವರನ್ನು ‘ಭಾರತ ಮಾತೆ’ ಎಂದ ಬಿಜೆಪಿ ನಾಯಕ

Suresh gopi: ಇಂದಿರಾ ಗಾಂಧಿಯವರನ್ನು ‘ಭಾರತ ಮಾತೆ’ ಎಂದ ಬಿಜೆಪಿ ನಾಯಕ

7

Uttarakhand: ಕಮರಿಗೆ ಉರುಳಿದ ಟಿಟಿ ವಾಹನ; ಕನಿಷ್ಠ 10 ಮಂದಿ ದುರ್ಮರಣ

Father’s Day 2024: ಅಪ್ಪನಿಗೆ ಹೂ ನೀಡಿ, ನಗೆ ಬೀರಿ, ತಬ್ಬಿದರೆ ಸಾಕೇ…..?!

Father’s Day 2024: ಅಪ್ಪನಿಗೆ ಹೂ ನೀಡಿ, ನಗೆ ಬೀರಿ, ತಬ್ಬಿದರೆ ಸಾಕೇ…..?!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-head-ache

Headache: ದೀರ್ಘ‌ಕಾಲೀನ ತಲೆನೋವು; ನೇತ್ರ ಸಮಸ್ಯೆಯ ಸೂಚನೆಯೂ ಆಗಿರಲು ಸಾಧ್ಯ

12-

May-12; International Nurses Day: ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆ

7-hearing-test-1

Hearing Tests: ಅತ್ಯಾಧುನಿಕ ಸಮಗ್ರ ಶ್ರವಣ ಪರೀಕ್ಷೆಗಳು; ಇಲ್ಲಿದೆ ವಿವರವಾದ ಮಾಹಿತಿ

6-Rheumatology-and-rheumatic-diseases

Rheumatology and rheumatic diseases: ರುಮಟಾಲಜಿ ಮತ್ತು ರುಮಾಟಿಕ್‌ ಕಾಯಿಲೆಗಳು

5-health

Female health: ಸ್ತ್ರೀ ದೇಹ ಮತ್ತು ಆರೋಗ್ಯ

MUST WATCH

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

ಹೊಸ ಸೇರ್ಪಡೆ

Hubli; ದರ್ಶನ್ ಅವರನ್ನು ರಾಯಭಾರಿಯಾಗಿ ನೇಮಿಸಿದ್ದು ಸರ್ಕಾರದ ತಪ್ಪು: ಪ್ರಹ್ಲಾದ ಜೋಶಿ

Hubli; ದರ್ಶನ್ ಅವರನ್ನು ರಾಯಭಾರಿಯಾಗಿ ನೇಮಿಸಿದ್ದು ಸರ್ಕಾರದ ತಪ್ಪು: ಪ್ರಹ್ಲಾದ ಜೋಶಿ

Udayavani Campaign-ನಮಗೆ ಬಸ್‌ ಬೇಕೇ ಬೇಕು: ಹೇಳಿ, ನಮ್ಮೂರಿಗೆ ಬಸ್‌ ಯಾಕೆ ಬರುವುದಿಲ್ಲ?

Udayavani Campaign-ನಮಗೆ ಬಸ್‌ ಬೇಕೇ ಬೇಕು: ಹೇಳಿ, ನಮ್ಮೂರಿಗೆ ಬಸ್‌ ಯಾಕೆ ಬರುವುದಿಲ್ಲ?

Petrol Diesel Price Hike; What are the consequences?

Petrol Diesel Price Hike; ಚುನಾವಣೆ ಬೆನ್ನಲ್ಲೇ ತೈಲ ಬರೆ ಹಾಕಿದ ಸರ್ಕಾರ; ಪರಿಣಾಮಗಳೇನು?

Road Mishap ಈಚರ್ ವಾಹನ-ಬೈಕ್ ನಡುವೆ ಅಪಘಾತ: ಸವಾರ ಮೃತ್ಯು

Road Mishap ಈಚರ್ ವಾಹನ-ಬೈಕ್ ನಡುವೆ ಅಪಘಾತ: ಸವಾರ ಮೃತ್ಯು

9

Monsoon: ಕುರಿ, ಕೋಳಿ ಸಾಕಾಣಿಕೆ ಜೋರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.