ಇಂದಿನಿಂದ ಅಯೋಗ್ಯನ ಆಟ


Team Udayavani, Aug 17, 2018, 6:00 AM IST

c-30.jpg

“ಸಿನಿಮಾ ಬಿಡುಗಡೆಯಾದ ನಂತರ ನಿರ್ಮಾಪಕರು ಖುಷಿಯಾಗಿರುತ್ತಾರೆ, ಆದರೆ, ನಾನು ಬಿಡುಗಡೆಗೆ ಮುನ್ನವೇ ಖುಷಿಯಾಗಿದ್ದೇನೆ’
– ಹೀಗೆ ಖುಷಿ ಖುಷಿಯಾಗಿ ಹೇಳಿಕೊಂಡರು ನಿರ್ಮಾಪಕ ಟಿ.ಆರ್‌.ಚಂದ್ರಶೇಖರ್‌. ಪಕ್ಕದಲ್ಲಿದ್ದ ನೀನಾಸಂ ಸತೀಶ್‌ ಮೊಗದಲ್ಲೂ ಹೆಮ್ಮೆ ಎದ್ದು ಕಾಣುತ್ತಿತ್ತು. ಚಂದ್ರಶೇಖರ್‌ ಖುಷಿಗೆ, ಸತೀಶ್‌ ಹೆಮ್ಮೆಗೆ ಕಾರಣವಾಗಿದ್ದು, “ಅಯೋಗ್ಯ’. 

ಆರಂಭದಿಂದಲೂ ನಾನಾ ವಿಷಯಗಳಿಂದ ಸೌಂಡ್‌ ಮಾಡುತ್ತಲೇ ಬಂದ “ಅಯೋಗ್ಯ’ ಚಿತ್ರ ಇಂದು ತೆರೆಕಾಣುತ್ತಿದೆ. ಸಿನಿಮಾ ಬಿಡುಗಡೆಗೆ ಮುನ್ನವೇ ಹಾಕಿದ ಬಂಡವಾಳದಲ್ಲಿ ಅರ್ಧ ಹಣ ವಾಪಾಸ್‌ ಬರುವ ಮೂಲಕ ನಿರ್ಮಾಪಕರು ಖುಷಿಯಾಗಿದ್ದಾರೆ. ಡಬ್ಬಿಂಗ್‌ ರೈಟ್ಸ್‌, ಆಡಿಯೋ ರೈಟ್ಸ್‌, ಏರಿಯಾ ಮಾರಾಟ … ಹೀಗೆ ನಿರ್ಮಾಪಕರ ಜೇಬಿಗೆ ಒಂದಷ್ಟು ಹಣ ಬಂದು ಬಿದ್ದಿದೆ. “ಈ ತರಹದ ಒಂದು ಸುಯೋಗ ಎಲ್ಲರಿಗೂ ಸಿಗೋದಿಲ್ಲ. ಸಿನಿಮಾ ಬಿಡುಗಡೆಯಾದ ಮೇಲೆ ಸಕ್ಸಸ್‌ ಮೀಟ್‌ ಮಾಡುತ್ತಾರೆ. ಆದರೆ, ನಾನು ಸಿನಿಮಾ ಬಿಡುಗಡೆಗೆ ಮುನ್ನವೇ ಖುಷಿಯಾಗಿದ್ದೇನೆ. ಒಳ್ಳೆಯ ಸಿನಿಮಾ ಮಾಡಿದ ಖುಷಿ ಇದೆ. ಎಲ್ಲಾ ಕಡೆಗಳಿಂದಲೂ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದೊಡ್ಡ ಹಿಟ್‌ ಆಗುವ ಸೂಚನೆ ಸಿಗುತ್ತಿದೆ. 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಾಣುತ್ತಿದೆ’ ಎಂದು ಹೇಳಿಕೊಂಡರು. ಅಗಸ್ಟ್‌ 17ಕ್ಕೆ ರಾಜ್ಯದಲ್ಲಿ ಚಿತ್ರ ತೆರೆಕಂಡರೆ ಆಗಸ್ಟ್‌ 24 ರಂದು ಚಿತ್ರ ಹೊರರಾಜ್ಯ ಹಾಗೂ ವಿದೇಶಗಳಲ್ಲಿ ತೆರೆಕಾಣಲಿದೆ.

ನೀನಾಸಂ ಸತೀಶ್‌ ಕೂಡಾ ಚಿತ್ರಕ್ಕೆ ಬಿಡುಗಡೆಗೆ ಮುನ್ನವೇ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಖುಷಿಯಾಗಿದ್ದಾರೆ. ಸತೀಶ್‌ಗೆ “ಅಯೋಗ್ಯ’ ಎಂಬ ಟೈಟಲ್‌ ಕೇಳಿಯೇ ಇಷ್ಟವಾಯಿತಂತೆ. ಇನ್ನು, ಅಷ್ಟೊಂದು ಆಸಕ್ತಿ ಇಲ್ಲದೆ ಕಥೆ ಕೇಳಲು ಕುಳಿತ ಸತೀಶ್‌ಗೆ, ನಿರ್ದೇಶಕ ಮಹೇಶ್‌ ಕಥೆ ಹೇಳುತ್ತಿದ್ದಂತೆ ಖುಷಿಯಾಗಿ, ಈ ಸಿನಿಮಾವನ್ನು ಮಾಡಲೇಬೇಕೆಂದು ನಿರ್ಧರಿಸಿದರಂತೆ. “ಅಯೋಗ್ಯ’ ಆರಂಭವಾಗಿ ಆ ನಂತರ ಎದುರಿಸಿದ ಕಷ್ಟಗಳು, ನಿರ್ದೇಶಕ ಮಹೇಶ್‌ ಬೇಸರಗೊಂಡ ರೀತಿ, ಆ ನಂತರ ನಿರ್ಮಾಪಕ ಚಂದ್ರಶೇಖರ್‌ ಕೈ ಹಿಡಿದ ಪರಿ … ಹೀಗೆ ಎಲ್ಲವನ್ನು ಸತೀಶ್‌ ವಿವರಿಸುತ್ತಾ ಹೋದರು. ಈ ಚಿತ್ರದ ಮೂಲಕ ಸತೀಶ್‌ಗೆ ದೊಡ್ಡ ಬ್ರೇಕ್‌ ಸಿಗುವ ನಿರೀಕ್ಷೆ ಇದೆ. 

ಚಿತ್ರದಲ್ಲಿ ರಚಿತಾ ರಾಮ್‌ ನಾಯಕಿ. ನಿರ್ದೇಶಕ ಮಹೇಶ್‌ ತಮ್ಮಿಂದ ಕೆಲಸ ತೆಗೆಸುತ್ತಿದ್ದ ರೀತಿ, ಮೊದಲ ಬಾರಿಗೆ ಮಂಡ್ಯ ಭಾಷೆಯಲ್ಲಿ ಡಬ್ಬಿಂಗ್‌ ಮಾಡಿದ ಖುಷಿ, ವಿಭಿನ್ನ ಪಾತ್ರ … ಹೀಗೆ ಎಲ್ಲದರ ಬಗ್ಗೆ ರಚಿತಾ ಸಿಕ್ಕಾಪಟ್ಟೆ ಜೋಶ್‌ನಿಂದ ಮಾತನಾಡಿದರು. ಒಂದು ಹಂತದಲ್ಲಿ ಅವರಿಗೆ ತಾನು ಸಿಕ್ಕಾಪಟ್ಟೆ ಲೈವಿÉಯಾಗಿ ಮಾತನಾಡುತ್ತಿದ್ದೇನೆ ಎಂದನಿಸಿತಂತೆ. ಚಿತ್ರದಲ್ಲಿ ನಟಿಸಿದ ತಬಲಾ ನಾಣಿ ಕೂಡಾ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ನಿರ್ದೇಶಕ ಮಹೇಶ್‌ ಕುಮಾರ್‌ಗೆ ಇದು ಚೊಚ್ಚಲ ಚಿತ್ರ. ಸಿನಿಮಾ ಆರಂಭಿಸಿದ ಖುಷಿ, ಆ ನಂತರ ಎದುರಾದ ಸಂಕಷ್ಟ, ಧೈರ್ಯ ಕೊಟ್ಟ ಸತೀಶ್‌, ಬೆನ್ನು ತಟ್ಟಿ ಸಿನಿಮಾ ಮಾಡಿದ ನಿರ್ಮಾಪಕರು … ಎಲ್ಲರನ್ನು ನೆನಪಿಸಿಕೊಂಡು ಭಾವುಕರಾದರು ಮಹೇಶ್‌. 

ಚಿತ್ರದ ನಾಲ್ಕು ಹಾಡುಗಳನ್ನು ಚೇತನ್‌ ಕುಮಾರ್‌ ಬರೆದಿದ್ದು, ಎಲ್ಲವೂ ಹಿಟ್‌ ಆದ ಖುಷಿ ಚೇತನ್‌ ಅವರದು. ಛಾಯಾಗ್ರಾಹಕ ಪ್ರೀತಮ್‌ ತೆಗ್ಗಿನಮನೆ ಕೂಡಾ ತಮ್ಮ ಅನುಭವ ಹಂಚಿಕೊಂಡರು.  

ಟಾಪ್ ನ್ಯೂಸ್

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Movies: ಹಿಟ್‌ ರೇಟ್‌ ಮೇಲೆ; ಸ್ಯಾಟಲೈಟ್‌, ಓಟಿಟಿಯ ಹೊಸ ಧೋರಣೆ

Kannada Movies: ಹಿಟ್‌ ಮೇಲೆ ರೇಟ್‌; ಸ್ಯಾಟಲೈಟ್‌, ಓಟಿಟಿಯ ಹೊಸ ಧೋರಣೆ

Sandalwood; ಕನ್ನಡದಲ್ಲಿ ಇಂದು ತೆರೆಗೆ ಬರುತ್ತಿದೆ ನಾಲ್ಕು ಚಿತ್ರಗಳು

Sandalwood; ಕನ್ನಡದಲ್ಲಿ ಇಂದು ತೆರೆಗೆ ಬರುತ್ತಿದೆ ನಾಲ್ಕು ಚಿತ್ರಗಳು

Raj B Shetty; ಚಂದನವನಕ್ಕೆ ರಾಜ್‌ ಶೆಟ್ಟಿ ‘ಪಂಚ ಮಂತ್ರ’

Raj B Shetty; ಚಂದನವನಕ್ಕೆ ರಾಜ್‌ ಶೆಟ್ಟಿ ‘ಪಂಚ ಮಂತ್ರ’

Kannada Movie: ಅಖಾಡಕ್ಕೆ ‘ಬ್ಯಾಕ್‌ ಬೆಂಚರ್ಸ್‌’: ನಗುವೇ ಪರಮ ಉದ್ದೇಶ

Kannada Movie: ಅಖಾಡಕ್ಕೆ ‘ಬ್ಯಾಕ್‌ ಬೆಂಚರ್ಸ್‌’: ನಗುವೇ ಪರಮ ಉದ್ದೇಶ

Hejjaru; ಕನ್ನಡದ ಮೊದಲ ಪ್ಯಾರಲಲ್‌ ಲೈಫ್ ಸಿನಿಮಾ ಹೆಜ್ಜಾರು ಇಂದು ತೆರೆಗೆ

Hejjaru; ಕನ್ನಡದ ಮೊದಲ ಪ್ಯಾರಲಲ್‌ ಲೈಫ್ ಸಿನಿಮಾ ಹೆಜ್ಜಾರು ಇಂದು ತೆರೆಗೆ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.