ಹೆಣ್ಮಕ್ಲೂ ಸ್ಟ್ರಾಂಗು ಗುರು… : ನಾಯಕಿಯರ ದರ್ಬಾರ್‌

Team Udayavani, May 3, 2019, 6:00 AM IST

ಇಷ್ಟು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ನಾಯಕಿ ಪ್ರಧಾನ ಚಿತ್ರಗಳ ಸಂಖ್ಯೆ ಹೆಚ್ಚೇ ಇವೆ. ಈ ಮೂಲಕ ನಾಯಕಿ ನಟಿಯರು ಕೂಡಾ ತಾವು ನಾಯಕ ನಟರಿಗಿಂತ ಕಮ್ಮಿಯಿಲ್ಲ ಎಂದು ತೋರಿಸಲು ಹೊರಟಿದ್ದಾರೆ. ಹಾಗಂತ ನಾಯಕಿ ಪ್ರಧಾನ ಸಿನಿಮಾಗಳಲ್ಲಿ ನಾಯಕ ನಟರು ಇಲ್ಲವೇ ಇಲ್ಲ ಎಂದರ್ಥವಲ್ಲ, ಬದಲಾಗಿ ಇಡೀ ಕಥೆಯ ಕೇಂದ್ರಬಿಂದು ನಾಯಕಿಯಾಗಿರುತ್ತಾಳೆ, ಆಕೆಯ ನಟನೆ ಮೇಲೆ ಇಡೀ ಸಿನಿಮಾದ ಭವಿಷ್ಯ ನಿಂತಿರುತ್ತದೆ. ಇದೇ ಕಾರಣದಿಂದ ಅದೆಷ್ಟೋ ನಟಿಯರು ನಾಯಕಿ ಪ್ರಧಾನ ಸಿನಿಮಾ ಮಾಡಲು ಹಿಂದೇಟು ಹಾಕುತ್ತಾರೆ…

ಒಂದು ಕಡೆ ಹೊಸಬರ ಸಿನಿಮಾ, ಇನ್ನೊಂದು ಕಡೆ ಸ್ಟಾರ್‌ಗಳ ಸಿನಿಮಾ, ಮತ್ತೂಂದು ಕಡೆ ಹಾಫ್ಬೀಟ್‌ ಎನ್ನುವ ಹೊಸ ಪ್ರಯೋಗ, ಹಾರರ್‌, ಥ್ರಿಲ್ಲರ್‌, ಕಾಮಿಡಿ … ಹೀಗೆ ಬೇರೆ ಬೇರೆ ಜಾನರ್‌ಗಳ ಮಧ್ಯೆ ಈ ವರ್ಷ ಗಮನ ಸೆಳೆಯುತ್ತಿರುವ ಸಿನಿಮಾ ಕೆಟಗರಿಯಲ್ಲಿ ನಾಯಕಿ ಪ್ರಧಾನ ಚಿತ್ರಗಳು ಕೂಡಾ ಇವೆ. ಕನ್ನಡ ಚಿತ್ರರಂಗದಲ್ಲಿ ಅವತ್ತಿನಿಂದ ಇವತ್ತಿನವರೆಗೂ ಸಾಕಷ್ಟು ನಾಯಕಿ ಪ್ರಧಾನ ಚಿತ್ರಗಳು ಬಂದಿವೆ.

ಆಯಾಯ ಕಾಲಘಟ್ಟಕ್ಕೆ ತಕ್ಕಂತೆ ಆ ಸಿನಿಮಾಗಳು ಪ್ರೇಕ್ಷಕರನ್ನು ಸೆಳೆದಿವೆ. ಈ ವರ್ಷ ಕೂಡಾ ಒಂದಷ್ಟು ನಾಯಕಿ ಪ್ರಧಾನ ಚಿತ್ರಗಳು ಬಿಡುಗಡೆಯ ಹಾದಿಯಲ್ಲಿವೆ. ಇಷ್ಟು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ನಾಯಕಿ ಪ್ರಧಾನ ಚಿತ್ರಗಳ ಸಂಖ್ಯೆ ಹೆಚ್ಚೇ ಇವೆ. ಈ ಮೂಲಕ ನಾಯಕಿ ನಟಿಯರು ಕೂಡಾ ತಾವು ನಾಯಕ ನಟರಿಗಿಂತ ಕಮ್ಮಿಯಿಲ್ಲ ಎಂದು ತೋರಿಸಲು ಹೊರಟಿದ್ದಾರೆ. ಹಾಗಂತ ನಾಯಕಿ ಪ್ರಧಾನ ಸಿನಿಮಾಗಳಲ್ಲಿ ನಾಯಕ ನಟರು ಇಲ್ಲವೇ ಇಲ್ಲ ಎಂದರ್ಥವಲ್ಲ, ಬದಲಾಗಿ ಇಡೀ ಕಥೆಯ ಕೇಂದ್ರಬಿಂದು ನಾಯಕಿಯಾಗಿರುತ್ತಾಳೆ, ಆಕೆಯ ನಟನೆ ಮೇಲೆ ಇಡೀ ಸಿನಿಮಾದ ಭವಿಷ್ಯ ನಿಂತಿರುತ್ತದೆ.

ಇದೇ ಕಾರಣದಿಂದ ಅದೆಷ್ಟೋ ನಟಿಯರು ನಾಯಕಿ ಪ್ರಧಾನ ಸಿನಿಮಾ ಮಾಡಲು ಹಿಂದೇಟು ಹಾಕುತ್ತಾರೆ. ಅದೇನೇ ಆದರೂ ಈ ವರ್ಷ ಸಾಕಷ್ಟು ನಾಯಕಿ ಪ್ರಧಾನ ಚಿತ್ರಗಳು ಸರತಿಯಲ್ಲಿರುವುದು ಸುಳ್ಳಲ್ಲ. “ಸೂಜಿದಾರ’, “ಡಾಟರ್‌ ಆಫ್ ಪಾರ್ವತಮ್ಮ’, “ದೇವಕಿ’, “ಭೈರಾದೇವಿ’, “ದಮಯಂತಿ’, “ರಂಗನಾಯಕಿ’, “ವಜ್ರಮುಖೀ’, “ಅನುಷ್ಕ’, “ವೃತ್ರ’, “ಆದಿ ಲಕ್ಷ್ಮೀ’, “ಸಾಗುತ ದೂರ ದೂರ’, “ಶಾಲಿನಿ ಐಪಿಎಸ್‌’, “ಡಾ.56′, “ಪುಣ್ಯಾತಿಗಿತ್ತೀರು, “ಕನ್ನಡ್‌ ಗೊತ್ತಿಲ್ಲ’… ಹೀಗೆ ಲೆಕ್ಕ ಹಾಕುತ್ತಾ ಹೋದರೆ ಈ ಸಾಕಷ್ಟು ನಾಯಕಿ ಪ್ರಧಾನ ಚಿತ್ರಗಳು ಸಿಗುತ್ತವೆ.

ಇದರಲ್ಲಿ ಬಹುತೇಕ ಚಿತ್ರಗಳು ತಮ್ಮ ಚಿತ್ರೀಕರಣ ಮುಗಿಸಿ ಬಿಡುಗಡೆಯ ಹಾದಿಯಲ್ಲಿವೆ. ಇನ್ನೊಂದಿಷ್ಟು ಚಿತ್ರಗಳು ಚಿತ್ರೀಕರಣದಲ್ಲಿದ್ದು, ಈ ವರ್ಷವೇ ಚಿತ್ರಮಂದಿರದ ಬಾಗಿಲು ಬಡಿಯಲಿವೆ. ಇಲ್ಲಿ ಗಮನಿಸಬೇಕಾದ ಮತ್ತೂಂದು ಅಂಶವೆಂದರೆ ಈ ವರ್ಷ ಬರಲಿರುವ ನಾಯಕಿ ಪ್ರಧಾನ ಚಿತ್ರಗಳು ಬೇರೆ ಬೇರೆ ಜಾನರ್‌ಗೆ ಸೇರಿವೆ. ಹಾರರ್‌, ಥ್ರಿಲ್ಲರ್‌, ಫ್ಯಾಮಿಲಿ ಡ್ರಾಮಾ … ಹೀಗೆ ವಿಭಿನ್ನ ಅಂಶಗಳನ್ನು ಸ್ಪರ್ಶಿಸಿವೆ.

ಹೀರೋಗಳ ಸಿನಿಮಾವನ್ನು ಸುಲಭವಾಗಿ ಕಟ್ಟಿಕೊಡಬಹುದು. ಮಾಸ್‌ ಆಡಿಯನ್ಸ್‌ಗೆ ನಾಲ್ಕು ಫೈಟ್‌, ಫ್ಯಾಮಿಲಿಗೆ ಕಲರ್‌ಪುಲ್‌ ಸಾಂಗ್‌, ಒಂದಿಷ್ಟು ಕಾಮಿಡಿ … ಹೀಗೆ ಕಮರ್ಷಿಯಲ್‌ ಅಂಶಗಳೊಂದಿಗೆ ಕಟ್ಟಿಕೊಡಬಹುದು. ಆದರೆ, ನಾಯಕಿ ಪ್ರಧಾನ ಚಿತ್ರಗಳಿಗೆ ಇದು ಅನ್ವಯಿಸುವುದಿಲ್ಲ. ಅದರದ್ದೇ ಆದ ಒಂದು ಶೈಲಿ ಇರುತ್ತದೆ. ಅದು ಕಥೆಯಿಂದ ಹಿಡಿದು ಮೇಕಿಂಗ್‌ವರೆಗೂ ಅಷ್ಟೇ. ಸುಖಾಸುಮ್ಮನೆ ಏನೋ ಕಟ್ಟಿಕೊಡುತ್ತೇವೆ ಎಂದರೆ ಅದು ವರ್ಕೌಟ್‌ ಆಗೋದಿಲ್ಲ. ಹಾಗೆ ಮಾಡಿದ ಸಿನಿಮಾಗಳು ಬಂದ ದಾರಿಯಲ್ಲೇ ವಾಪಾಸ್‌ ಹೋದ ಉದಾಹರಣೆ ನಮ್ಮ ಕಣ್ಣ ಮುಂದಿದೆ.

ನಾಯಕಿ ಪ್ರಧಾನ ಸಿನಿಮಾಗಳು ಚಿತ್ರಮಂದಿರದಲ್ಲಿ ಗಟ್ಟಿನೆಲೆಯೂರಿ, ನಿರ್ಮಾಪಕರ ಜೇಬು ತುಂಬಬೇಕಾದರೆ ಅಲ್ಲೊಂದು ಗಟ್ಟಿಕಥಾಹಂದರವಿರಬೇಕು. ಆ ಅಂಶವೇ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರಬೇಕೇ ಹೊರತು, ಅದರಾಚೆಗಿನ ಅನಾವಶ್ಯಕ ಕಮರ್ಷಿಯಲ್‌ ಅಂಶಗಳಿಂದಲ್ಲ. ಸದ್ಯ ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾಗಳನ್ನು ಗಮನಿಸಿದರೆ “ಸೂಜಿದಾರ’ ಒಂದು ಸೂಕ್ಷ್ಮ ಕಥಾಹಂದರವಿರುವ ಚಿತ್ರವಾಗಿ ಗಮನಸೆಳೆದರೆ, “ಡಾಟರ್‌ ಆಫ್ ಪಾರ್ವತಮ್ಮ’ ಒಂದು ಖಡಕ್‌ ಹುಡುಗಿಯ ಪಾತ್ರದ ಮೂಲಕ ಮೋಡಿ ಮಾಡುವ ಸಾಧ್ಯತೆ ಇದೆ.

ಉಳಿದಂತೆ “ಭೈರಾದೇವಿ’, “ದಮಯಂತಿ’, “ವಜ್ರಮುಖೀ’ ಚಿತ್ರಗಳು ಹಾರರ್‌-ಥ್ರಿಲ್ಲರ್‌ ಜಾನರ್‌ಗೆ ಸೇರಿವೆ. ಕಳೆದ ವರ್ಷ “ಸೆಕೆಂಡ್‌ ಹಾಫ್’ ಎಂಬ ನಾಯಕಿ ಪ್ರಧಾನ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ಪ್ರಿಯಾಂಕಾ ಉಪೇಂದ್ರ ಈ ವರ್ಷ “ದೇವಕಿ’ಯಾಗಿ ತೆರೆಮೇಲೆ ಬರಲು ಅಣಿಯಾಗಿದ್ದಾರೆ.

ಇತ್ತ ಕಡೆ ನಟಿ ಹರಿಪ್ರಿಯಾ ಅವರ “ಸೂಜಿದಾರ’ ಹಾಗೂ “ಡಾಟರ್‌ ಆಫ್ ಪಾರ್ವತಮ್ಮ’ ಚಿತ್ರಗಳು ಒಂದರ ಹಿಂದೊಂದರಂತೆ ತೆರೆಕಾಣಲು ಅಣಿಯಾಗಿವೆ. ಚಿತ್ರರಂಗಕ್ಕೆ ಬರುತ್ತಿರುವ ಹೊಸ ನಿರ್ದೇಶಕರು ನಾಯಕಿ ಪ್ರಧಾನ ಚಿತ್ರಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಅದಕ್ಕೆ ಕಾರಣ ಕಂಟೆಂಟ್‌ ಸಿನಿಮಾ. ಇವತ್ತು ಕಮರ್ಷಿಯಲ್‌ ಸಿನಿಮಾಗಳಿಗೆ ಪರ್ಯಾಯವಾಗಿ ಕಂಟೆಂಟ್‌ ಸಿನಿಮಾಗಳು ಬೆಳೆಯುತ್ತಿವೆ.

ಆ ತರಹದ ಕಂಟೆಂಟ್‌ ಸಿನಿಮಾಗಳನ್ನು ಮಾಡುವ ಹೊಸಬರಿಗೆ ನಾಯಕಿ ಪ್ರಧಾನ ಚಿತ್ರಗಳು ಸೂಕ್ತ ವೇದಿಕೆಯಾಗುತ್ತಿರುವುದು ಸುಳ್ಳಲ್ಲ. ಒಂದು ನಾಯಕಿ ಪ್ರಧಾನ ಚಿತ್ರ ಗೆದ್ದರೆ, ಅದು ಮತ್ತೂಂದಿಷ್ಟು ಮಂದಿಗೆ ದಾರಿ ಮಾಡಿಕೊಡುತ್ತದೆ, ಇನ್ನೊಂದಿಷ್ಟು ಹೊಸ ಸಿನಿಮಾಗಳ ಹುಟ್ಟಿಗೆ ಕಾರಣವಾಗುತ್ತವೆ. ಈ ವರ್ಷ ಬಿಡುಗಡೆಯ ಸಾಲಿನಲ್ಲಿರುವ ಸಿನಿಮಾಗಳಲ್ಲಿ ಯಾವ ಸಿನಿಮಾವನ್ನು ಪ್ರೇಕ್ಷಕ ಕೈ ಹಿಡಿಯುತ್ತಾನೆ, ಯಾವ ಸಿನಿಮಾ ಯಾರಿಗೆ ಸ್ಫೂರ್ತಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕು.

ನಿಮ್ಮ ಹೆಸರಿನಲ್ಲೇ ಸಿನಿಮಾ ಗುರುತಿಸಿಕೊಳ್ಳುತ್ತದೆ ಎಂಬುದು ನಾಯಕಿ ಪ್ರಧಾನ ಚಿತ್ರದ ಒಂದು ಪ್ಲಸ್‌ ಆದರೆ, ನಾಯಕಿಗೆ ಅಷ್ಟೇ ಜವಾಬ್ದಾರಿ ಕೂಡಾ ಇರುತ್ತದೆ. ಹೀರೋಗಳ ಸಿನಿಮಾವಾದರೆ ಎಲ್ಲಾ ಜವಾಬ್ದಾರಿ ಅವರ ಮೇಲೆ ಇರುತ್ತದೆ. ಆದರೆ, ಇಲ್ಲಿ ನಾಯಕಿ ಎಲ್ಲಾ ವಿಷಯದಲ್ಲೂ ಗಮನಹರಿಸ­ಬೇಕು. ಅದು ತಾರಾಬಳಗದ ಆಯ್ಕೆಯಿಂದ ಹಿಡಿದು ಸಿನಿಮಾದ ಪ್ರಮೋಶನ್‌ವರೆಗೂ. ನಾನಂತೂ ನಾಯಕಿ ಪ್ರಧಾನ ಚಿತ್ರಗಳನ್ನು ಖುಷಿಯಿಂದ ಮಾಡುತ್ತಿದ್ದೇನೆ…
ಹರಿಪ್ರಿಯಾ, ನಟಿ

— ರವಿಪ್ರಕಾಶ್‌ ರೈ


ಈ ವಿಭಾಗದಿಂದ ಇನ್ನಷ್ಟು

  • "ನಾನು ಏನು ಅಂದುಕೊಂಡಿದ್ದೆನೋ ಹಾಗೇ ಆಗಿದೆ...' - ಹೀಗೆ ಹೇಳಿ ಹಾಗೊಂದು ಸ್ಮೈಲ್‌ ಕೊಟ್ಟರು ನಿರ್ಮಾಪಕ ಶ್ರೀನಿವಾಸ್‌. ಅವರು ಹೀಗೆ ಹೇಳಿದ್ದು ತಮ್ಮ ನಿರ್ಮಾಣದ...

  • "ಈ ಸಿನಿಮಾದ ನಿಜವಾದ ಹೀರೋ ನಿರ್ಮಾಪಕ ಮುನಿರತ್ನ' - ಹೀಗೆ ಹೇಳಿ ಪಕ್ಕದಲ್ಲಿ ಕುಳಿತಿದ್ದ ನಿರ್ಮಾಪಕ ಮುನಿರತ್ನ ಅವರತ್ತ ನೋಡಿದರು ನಿರ್ದೇಶಕ ನಾಗಣ್ಣ. ಅವರು ಹೀಗೆ...

  • ಈಗಾಗಲೇ ಶೀರ್ಷಿಕೆ, ಫ‌ಸ್ಟ್‌ಲುಕ್‌ ಹಾಗೂ ಟೀಸರ್‌ ಮೂಲಕ ಸಾಕಷ್ಟು ಕುತೂಹಲ ಮೂಡಿಸಿರುವ "ಕಮರೊಟ್ಟು ಚೆಕ್‌ಪೋಸ್ಟ್‌' ಇದೀಗ ರಿಲೀಸ್‌ಗೆ ರೆಡಿಯಾಗಿದೆ. ಚಿತ್ರದಲ್ಲಿ...

  • ಮುಹೂರ್ತದ ಬಳಿಕ ಎಲ್ಲಿಯೂ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿರದ "ಅಮರ್‌' ಚಿತ್ರತಂಡ, ಚಿತ್ರದ ಬಿಡುಗಡೆಗೂ ಮುನ್ನ ಪತ್ರಿಕಾಗೋಷ್ಟಿಯನ್ನು ನಡೆಸಿ "ಅಮರ್‌' ಸಿನಿ...

  • ಶಾದಿ ಕೆ ಆಫ್ಟರ್‌ ಎಫೆಕ್ಟ್...! - ಇದು ಬಾಲಿವುಡ್‌ನ‌ಲ್ಲಿ ಬಂದ ಸಿನಿಮಾದ ಹೆಸರು. ಈಗ ಇಲ್ಲೇಕೆ ಈ ಹೆಸರಿನ ಪ್ರಸ್ತಾಪ ಎಂಬ ಸಣ್ಣದ್ದೊಂದು ಪ್ರಶ್ನೆ ಕಾಡಬಹುದು. ಹಾಗಂತ,...

ಹೊಸ ಸೇರ್ಪಡೆ