- Friday 13 Dec 2019
ಇಂದಿನಿಂದ ಅನುಷ್ಕಾ ಆರ್ಭಟ
ಒಂದು ಕಥೆ ಮೂರು ಟ್ರ್ಯಾಕ್
Team Udayavani, May 10, 2019, 6:25 AM IST
“ಅನುಷ್ಕಾ’ ಎಂಬ ಸಿನಿಮಾ ಬರುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಈ ವಾರ (ಮೇ 10) ತೆರೆಕಾಣುತ್ತಿದೆ. ಈ ಹಿಂದೆ “ಡೇಂಜರ್ ಝೋನ್’ ಹಾಗೂ “ನಿಶ್ಯಬ್ಧ-2′ ಚಿತ್ರಗಳನ್ನು ನಿರ್ದೇಶಿಸಿರುವ ದೇವರಾಜ್ ಕುಮಾರ್ ಈ ಚಿತ್ರದ ನಿರ್ದೇಶಕರು. ಕನ್ನಡದ ಜೊತೆಗೆ ತಮಿಳು ಹಾಗೂ ತೆಲುಗಿನಲ್ಲೂ ಈ ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಅಮೃತಾ ನಾಯಕಿಯಾದರೆ, ರೂಪೇಶ್ ನಾಯಕ.
ನಿರ್ದೇಶಕ ದೇವರಾಜ್ ಕುಮಾರ್ ಹೇಳುವಂತೆ ಚಿತ್ರದ ಕಥೆ ಮೂರು ಟ್ರ್ಯಾಕ್‌ಗಳಲ್ಲಿ ಸಾಗುತ್ತದೆಯಂತೆ. ಅಂತಿಮವಾಗಿ ಮೂರು ಟ್ರ್ಯಾಕ್‌ಗಳಿಗೂ ಲಿಂಕ್ ಸಿಗಲಿದೆ. ತನ್ನ ಸಾಮ್ರಾಜ್ಯ, ಅಲ್ಲಿನ ಜನರನ್ನು ರಕ್ಷಿಸುವ ರಾಣಿಯ ಕಥೆ, ಮಧುಚಂದ್ರಕ್ಕೆ ಬಂದ ನವದಂಪತಿ ಹಾಗೂ ಸಮಾಜದಲ್ಲಿ ನಡೆದಂತಹ ನೈಜ ಘಟನೆ… ಹೀಗೆ ಮೂರು ಟ್ರ್ಯಾಕ್‌ಗಳು ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆಯಂತೆ. ಮೂರು ಟ್ರ್ಯಾಕ್‌ಗಳಲ್ಲೂ ಅಮೃತಾ ನಟಿಸುತ್ತಿದ್ದು, ಇದು ನಾಯಕಿ ಪ್ರಧಾನ ಚಿತ್ರ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸುಮಾರು ಮೂರು ಕೋಟಿ ರೂಪಾಯಿ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆಯಂತೆ.
ದೇವರಾಜ್ ಕುಮಾರ್ ಅವರ ಈ ಹಿಂದಿನ ಎರಡು ಸಿನಿಮಾಗಳಲ್ಲಿ ನಾಯಕರಾಗಿದ್ದ ರೂಪೇಶ್ ಶೆಟ್ಟಿಗೆ ಈ ಸಿನಿಮಾದಲ್ಲೂ ಅವಕಾಶ ಕೊಟ್ಟಿದ್ದಾರೆ. ಈ ಬಾರಿ ಹಾಡೊಂದಕ್ಕಾಗಿ ವಿದೇಶಕ್ಕೂ ಚಿತ್ರತಂಡ ಹೋಗಿದೆ. ಈ ಖುಷಿ ರೂಪೇಶ್ ಮುಖದಲ್ಲಿ ಎದ್ದು ಕಾಣುತ್ತಿತ್ತು. “ನನ್ನ ಕೆರಿಯರ್‌ನಲ್ಲಿ ಇದು ಹೊಸ ಬಗೆಯ ಚಿತ್ರ. ದೇವರಾಜ್ ಈ ಹಿಂದಿನ ಎರಡು ಸಿನಿಮಾದಲ್ಲಿ ವಿಭಿನ್ನ ಪಾತ್ರ ನೀಡಿದ್ದರು.
ಈಗ ಮೂರನೇ ಸಿನಿಮಾದಲ್ಲೂ ನನಗೆ ಒಳ್ಳೆಯ ಪಾತ್ರ ಕೊಟ್ಟಿದ್ದಾರೆ’ ಎಂದು ಹೇಳಿಕೊಂಡರು ರೂಪೇಶ್. ನಾಯಕಿ ಅಮೃತಾ ಚಿತ್ರ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿಗೆ ಗೈರಾಗಿದ್ದರು. ಉಳಿದಂತೆ ಚಿತ್ರದಲ್ಲಿ “ಕಡ್ಡಿಪುಡಿ’ ಕಾಂತರಾಜು ಹಾಗೂ ಬಲರಾಜು ವಾಡಿ ನಟಿಸಿದ್ದಾರೆ. ಚಿತ್ರವನ್ನು ಎಸ್.ಕೆ.ಗಂಗಾಧರ್ ನಿರ್ಮಿಸಿದ್ದು, ವೀನಸ್ ಮೂರ್ತಿ ಛಾಯಾಗ್ರಹಣವಿದೆ.
ಈ ವಿಭಾಗದಿಂದ ಇನ್ನಷ್ಟು
-
ಅಂತೂ ಇಂತೂ ಇನ್ನು ಎರಡು ವಾರ ಕಳೆದರೆ 2019 ಪೂರ್ಣಗೊಳ್ಳಲಿದೆ. ಚಿತ್ರರಂಗ ಕೂಡ ಎಂದಿಗಿಂತ ಗರಿಗೆದರಿ ನಿಂತಿದೆ. ಈ ವರ್ಷ ಇಟ್ಟುಕೊಂಡ ಕೆಲವು ನಿರೀಕ್ಷೆ ಸುಳ್ಳಾದರೆ,...
-
"ನಾನು ಇಲ್ಲಿಯವರೆಗೆ ಹೀರೋ ಆಗಿ ಅನೇಕ ಸಿನಿಮಾಗಳಲ್ಲಿ ಆ್ಯಕ್ಟಿಂಗ್ ಮಾಡಿದ್ದೀನಿ. ಆದ್ರೆ, ಇಲ್ಲಿಯವರೆಗೂ ಯಾವ ಸಿನಿಮಾಗಳಲ್ಲೂ, ರಿಲೀಸ್ ಆದ ನಂತರ ಸಿನಿಮಾ ಸಕ್ಸಸ್...
-
ಕೆಂಪಾಗಿ ಕಂಗೊಳಿಸುತ್ತಿದ್ದ ಸೂರ್ಯ. ಜೋರಾಗಿ ಬೀಸುತ್ತಿದ್ದ ಗಾಳಿ. ಜೊತೆಗೆ ಒಂದಷ್ಟು ಚಳಿ. ಆಗಾಗ ಇಣುಕಿ ಮರೆಯಾಗುತ್ತಿದ್ದ ಬಿಸಿಲು, ಸುತ್ತಲ ಹಸಿರು .... ರಸ್ತೆ...
-
ಇತ್ತೀಚೆಗಷ್ಟೇ ದಿನೇಶ್ ಬಾಬು ನಿರ್ದೇಶನದ "ಹಗಲು ಕನಸು' ಬಿಡುಗಡೆಯಾಗಿದೆ. ಅದರ ಬೆನ್ನಲ್ಲೇ ತಮ್ಮ ನಿರ್ದೇಶನದ ಇನ್ನೊಂದು ಸಿನಿಮಾ ಮಾಡಿ ಪ್ರೇಕ್ಷಕರ ಮುಂದೆ ತರಲು...
-
ಸಾಮಾನ್ಯವಾಗಿ ನಮ್ಮಲ್ಲಿ ರಾಜಕಾರಣಿಯ ಮಕ್ಕಳು ರಾಜಕಾರಣಿ, ಕಲಾವಿದರ ಮಕ್ಕಳು ಕಲಾವಿದರು, ಉದ್ಯಮಿಗಳ ಮಕ್ಕಳು ಉದ್ಯಮಿಗಳಾಗುತ್ತಾರೆ. ತಂದೆಯ ಹೆಸರಿನಲ್ಲಿ, ತಮ್ಮ...
ಹೊಸ ಸೇರ್ಪಡೆ
-
ಹೊಸದಿಲ್ಲಿ: 'ಸಾಮಾಜಿಕ ಭದ್ರತೆ -2019' ಮಸೂದೆದಡಿ ಉದ್ಯೋಗಿಗಳ ಗ್ರಾಚ್ಯುಟಿ ಯೋಜನೆಗೆ ಅಗತ್ಯವಾಗಿರುವ ನಿರಂತರ ಸೇವಾವಧಿಯನ್ನು 5 ವರ್ಷಕ್ಕೆ ಇಳಿಸಿರುವ ಕೇಂದ್ರ ಸರಕಾರ,...
-
ಮಂಗಳೂರು: ಬಹಳ ವರ್ಷಗಳ ಅನಂತರ ರಾಜ್ಯದ ಬಹುತೇಕ ಕಡೆ ಹೆಚ್ಚಿನ ಸರಕಾರಿ ಉದ್ಯೋಗಿಗಳಿಗೆ ವೇತನವು ವಿಳಂಬವಾಗಿ ಪಾವತಿಯಾಗಿದೆ. ಅಲ್ಲದೆ ಕಾಲೇಜು ಉಪನ್ಯಾಸಕರು ಸೇರಿದಂತೆ...
-
ಬೆಂಗಳೂರು: ರಾಜ್ಯದ ಐತಿಹಾಸಿಕ ಪ್ರವಾಸೋದ್ಯಮ ತಾಣವಾಗಿರುವ ಪಟ್ಟದಕಲ್ಲನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸುವಂತೆ ಶಿಫಾರಸು ಮಾಡಲು ರಾಜ್ಯ ಸಚಿವ ಸಂಪುಟ...
-
ಅಂತೂ ಇಂತೂ ಇನ್ನು ಎರಡು ವಾರ ಕಳೆದರೆ 2019 ಪೂರ್ಣಗೊಳ್ಳಲಿದೆ. ಚಿತ್ರರಂಗ ಕೂಡ ಎಂದಿಗಿಂತ ಗರಿಗೆದರಿ ನಿಂತಿದೆ. ಈ ವರ್ಷ ಇಟ್ಟುಕೊಂಡ ಕೆಲವು ನಿರೀಕ್ಷೆ ಸುಳ್ಳಾದರೆ,...
-
ತಿದ್ದುಪಡಿ ಮಸೂದೆಯನ್ನು ಮಂಡಿಸುವ ವೇಳೆ ಕೇಂದ್ರದ ಕಾನೂನು ಸಚಿವ ರವಿಶಂಕರ್ಪ್ರಸಾದ್ ಪ್ರತಿಪಾದಿಸಿದ ಅಂಶವನ್ನು ಇಲ್ಲಿ ಅಗತ್ಯವಾಗಿ ಗಮನಿಸಬೇಕು. ಇಡೀ ದೇಶದಲ್ಲಿರುವ...