ಅಲೆಮಾರಿಗಳ ಸುತ್ತ…


Team Udayavani, Aug 17, 2018, 6:00 AM IST

c-34.jpg

“ಮೂರು ಜನಕ್ಕೆ ಟೈಟಲ್‌ ಕೊಟ್ಟಿಲ್ಲ, ಹಾಗಾಗಿ ನಿಮಗೂ ಕೊಡೋದಿಲ್ಲ ಅಂತಾರೆ. ಇದೂ ಒಂದು ಕಾರಣಾನಾ?’ 
ನಗುತ್ತಾ ಕೇಳಿದರು ಮೋಹನ್‌. ಅವರ ಪ್ರಶ್ನೆ ಇದ್ದಿದ್ದು, ಹೊಸ ಚಿತ್ರದ ಟೈಟಲ್‌ ಬಗ್ಗೆ. ಹಿರಿಯ ನಿರ್ಮಾಪಕ ಬಿ.ಎನ್‌. ಗಂಗಾಧರ್‌ ನಿರ್ಮಾಣದ 26ನೇ ಚಿತ್ರವೊಂದನ್ನು ಮೋಹನ್‌ ನಿರ್ದೇಶಿಸುತ್ತಿದ್ದಾರೆ. ಏಳು ಅಲೆಮಾರಿಗಳ ಸುತ್ತ ಆ ಕಥೆ ಸುತ್ತುವುದರಿಂದ ಚಿತ್ರಕ್ಕೆ “ಲೋಫ‌ರ್’ ಅಂತ ಹೆಸರಿಟ್ಟಿದ್ದಾರೆ ಅವರು. ಆದರೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಒಪ್ಪಿಲ್ಲ. “ಲೋಫ‌ರ್’ ಸಾಧ್ಯವಿಲ್ಲ, ಬೇಕಾದರೆ “ಲೋಫ‌ರ್‌’ ಅಂತ ಇಟ್ಟುಕೊಳ್ಳಿ ಎಂಬ ಉತ್ತರ ಬಂದಿದೆ. ಯಾಕೆ ಅಂತ ಪ್ರಶ್ನಿಸಿದ್ದಾರೆ ಮೋಹನ್‌. “ಈ ಹಿಂದೆ ಮೂವರು ನಿರ್ಮಾಪಕರು ಈ ಟೈಟಲ್‌ ಕೇಳಿದ್ದಾರೆ. ಮೂರೂ ಜನಕ್ಕೆ ಕೊಟ್ಟಿಲ್ಲ, ನಿಮಗೂ ಕೊಡೋದಿಲ್ಲ’ ಎಂಬ ಇನ್ನೊಂದು ಉತ್ತರ ಬಂದಿದೆ. ಹೆಸರು ರಿಜೆಕ್ಟ್ ಮಾಡಿದರೆ, ಅದಕ್ಕೊಂದು ಸೂಕ್ತ ಉತ್ತರ ಕೊಡಿ, ಏನೇನೋ ಕಾರಣ ಒಪ್ಪುವುದಿಲ್ಲ ಎಂಬುದು ಮೋಹನ್‌ ವಾದ. ಮೋಹನ್‌ ಪ್ರಶ್ನೆಗೆ ಯಾವಾಗ ಉತ್ತರ ಸಿಗುತ್ತದೋ ಗೊತ್ತಿಲ್ಲ. ಅವರಂತೂ ಚಿತ್ರ ಶುರು ಮಾಡಿದ್ದಾರೆ.

ಮೊನ್ನೆ ಸೋಮವಾರ ಗಿರಿನಗರದ ವಿವೇಕಾನಂದ ಪಾರ್ಕ್‌ನಲ್ಲಿ ಚಿತ್ರ ಪ್ರಾರಂಭವಾಯಿತು. ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೋಹನ್‌, “ಇದೊಂದು ಥ್ರಿಲ್ಲರ್‌ ಚಿತ್ರ. ಯೌವ್ವನದ ದಿನಗಳಲ್ಲಿ ಏನೇನು ಮಾಡಬಾರದು ಮತ್ತು ಎಲ್ಲದಕ್ಕೂ ಲಿಮಿಟ್‌ ಇರಬೇಕು ಅಂತ ಹೇಳುವುದಕ್ಕೆ ಹೊರಟಿದ್ದೇವೆ. ಕುಡಿತ ಮತ್ತು ಡ್ರಗ್ಸ್‌ಗೆ ನೋ ಹೇಳಿ ಎಂಬ ಕಥೆ ಇರುವ ಈ ಚಿತ್ರ ಏಳು ಅಲೆಮಾರಿಗಳ ಸುತ್ತ ಸುತ್ತುತ್ತದೆ. ಅದೇ ಕಾರಣಕ್ಕೆ ಚಿತ್ರಕ್ಕೆ “ಲೋಫ‌ರ್’ ಅಂತ ಹೆಸರಿಟ್ಟಿದ್ದೆವು. ಆದರೆ, ಮಂಡಳಿಯಲ್ಲಿ ಈ ಹೆಸರಿಗೆ ಅನುಮತಿ ಸಿಕ್ಕಿಲ್ಲ. ದೊಡ್ಡ ಮನಸ್ಸು ಮಾಡಿಕೊಡುತ್ತಾರೆ ಎಂಬ ನಂಬಿಕೆ. ನಮ್ಮ ಟ್ರ್ಯಾಕ್‌ ರೆಕಾರ್ಡ್‌ ಸಹ ಚೆನ್ನಾಗಿದೆ. ಆ ಹೆಸರು ಸಿಗುತ್ತದೆ ಎಂಬ ನಂಬಿಕೆ ಯಾವ ಪಾಟಿ ಇದೆ ಎಂದರೆ, ಪರ್ಯಾಯ ಹೆಸರನ್ನೂ ಯೋಚಿಸಿಲ್ಲ’ ಎಂದರು ಮೋಹನ್‌.

ಈ ಚಿತ್ರದಲ್ಲಿರುವ ಏಳು ಪಾತ್ರಗಳು ಸಹ ನೆಗೆಟಿವ್‌ ಪಾತ್ರಗಳು ಎನ್ನುವ ಮೋಹನ್‌, “ಇಲ್ಲಿರುವ ಏಳೂ ಪಾತ್ರಗಳು ನೆಗೆಟಿವ್‌ ಪಾತ್ರಗಳು. ಯಾರಿಗೂ ಮನೆ ಇರುವುದಿಲ್ಲ. ಹೇಳಿಕೊಳ್ಳುವುದಕ್ಕೆ ಸ್ವಂತದವರು ಇರುವುದಿಲ್ಲ. ಆ ಬಗ್ಗೆ ಎಲ್ಲರಿಗೂ ಬೇಸರವಿರುತ್ತದೆ. ಎಲ್ಲರೂ ಗೆಸ್ಟ್‌ ಹೌಸ್‌ನಲ್ಲಿ ಇರುತ್ತಾರೆ’ ಅಂತ ಹೇಳುತ್ತಾ ಹೋದರು ಮೋಹನ್‌. ಈ ಚಿತ್ರದಲ್ಲಿ ನಾಲ್ವರು ಹೀರೋಗಳು ಮತ್ತು ಮೂವರು ಹೀರೋಯಿನ್‌ಗಳಿದ್ದಾರೆ. ಚೇತನ್‌, ಅರ್ಜುನ್‌ ಆರ್ಯ, ಮನು, ಕೆಂಪೇಗೌಡ, ಶ್ರಾವ್ಯ, ಸುಷ್ಮಾ ಮತ್ತು ಸಾಕ್ಷಿ ನಟಿಸುತ್ತಿದ್ದಾರೆ.

ನಿರ್ಮಾಪಕ ಬಿ.ಎನ್‌. ಗಂಗಾಧರ್‌ ಮಾತಾಡುವ ಮೂಡ್‌ನ‌ಲ್ಲಿ ಇರಲಿಲ್ಲ. “ಈ ಹೆಸರು ಸಿಗದಿದ್ದರೆ “ಖದೀಮ ಕಳ್ಳರು’ ಮತ್ತು “ಪ್ರಳಯಾಂತಕರು’ ಎಂಬ ಟೈಟಲ್‌ ಯೋಚನೆ ಮಾಡಿದ್ದೇನೆ. ಅದು ಬೇರೆಯವರ ಹತ್ತಿರ ಇದೆ. ಅವರ ಜೊತೆಗೆ ಮಾತಾಡುತ್ತಿದ್ದೀನಿ. ನೋಡೋಣ’ ಎಂದರು. ಚೇತನ್‌, ಅರ್ಜುನ್‌ ಆರ್ಯ, ಮನು, ಕೆಂಪೇಗೌಡ, ಶ್ರಾವ್ಯ, ಸುಷ್ಮಾ ಮತ್ತು ಸಾಕ್ಷಿ ಎಲ್ಲರೂ ಮೋಹನ್‌ ನಿರ್ದೇಶನದಲ್ಲಿ, ಗಂಗಾಧರ್‌ ನಿರ್ಮಾಣದಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಖುಷಿಪಟ್ಟರು.

ಟಾಪ್ ನ್ಯೂಸ್

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತಸಂದಣಿ

ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತಸಂದಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sambhavami Yuge Yuge movie

Sambhavami Yuge Yuge: ಹಳ್ಳಿಯ ಸುತ್ತ ಸಂಭವಾಮಿ…

Dhananjaya as Nadaprabhu Kempegowda

Dhananjaya; ನಾಡಪ್ರಭು ಕೆಂಪೇಗೌಡ ಪಾತ್ರದಲ್ಲಿ ಡಾಲಿ

Movies; ಇಲ್ಲಿವರೆಗೆ ಒಂದ್‌ ಲೆಕ್ಕ ಇನ್ಮುಂದೆ ಬೇರೆ ಲೆಕ್ಕ: ಸ್ಟಾರ್‌ ಸಿನಿಮಾಗಳು ಮುಂದಕ್ಕೆ

Movies; ಇಲ್ಲಿವರೆಗೆ ಒಂದ್‌ ಲೆಕ್ಕ ಇನ್ಮುಂದೆ ಬೇರೆ ಲೆಕ್ಕ: ಸ್ಟಾರ್‌ ಸಿನಿಮಾಗಳು ಮುಂದಕ್ಕೆ

Kannada Cinema; ಭ್ರಮೆ ಬಿಟ್ಟು ಬದುಕಿದರು.. ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ ಡಾ.ರಾಜ್‌

Sandalwood: ಭ್ರಮೆ ಬಿಟ್ಟು ಬದುಕಿದರು.. ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ ಡಾ.ರಾಜ್‌

love li kannada movie

Love Li; ತೆರೆಗೆ ಬಂತು ವಸಿಷ್ಠ ನಟನೆಯ ‘ಲವ್ ಲೀ’

MUST WATCH

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

ಹೊಸ ಸೇರ್ಪಡೆ

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.