ಹೀರೋ ಇಲ್ಲ ಕಥೆಯೇ ಎಲ್ಲಾ… 

Team Udayavani, Nov 2, 2018, 6:00 AM IST

s-26.jpg

ನೀವೇನಾದರೂ ಆಹಾರಪ್ರಿಯರಾಗಿದ್ದರೆ “ಕುಷ್ಕ’ ಎಂಬ ಪದವನ್ನು ಕೇಳಿರುತ್ತೀರಿ. ಈಗ ಯಾಕೆ ಈ “ಕುಷ್ಕ’ದ ಬಗ್ಗೆ ಮಾತು ಅಂತೀರಾ? ಅದಕ್ಕೂ ಒಂದು ಕಾರಣವಿದೆ. ಕನ್ನಡದಲ್ಲಿ “ಕುಷ್ಕ’ ಎಂಬ ಹೆಸರಿನ ಚಿತ್ರವೊಂದು ತಯಾರಾಗುತ್ತಿದೆ. ಇತ್ತೀಚೆಗೆ ಈ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ನೀಡಲು ಪತ್ರಕರ್ತರ ಮುಂದೆ ಬಂದಿದ್ದ ಚಿತ್ರತಂಡ, “ಕುಷ್ಕ’ದ ಹಿಂದಿನ ವಿಶೇಷತೆಗಳ ಬಗ್ಗೆ ಮಾತನಾಡಿತು. 

“ಕುಷ್ಕ’ ಪಕ್ಕಾ ಮನೋರಂಜನಾತ್ಮಕ ಚಿತ್ರ. ಮನರಂಜನೆಯ ಒಂದಷ್ಟು ಎಳೆಯನ್ನು ಇಟ್ಟುಕೊಂಡು ಅದನ್ನು ನವಿರಾದ ಹಾಸ್ಯದ ಜೊತೆಗೆ ತೆರೆ ಮೇಲೆ ಹೇಳುತ್ತಿದ್ದೇವೆ ಎನ್ನುತ್ತದೆ “ಕುಷ್ಕ’ ಚಿತ್ರತಂಡ. ಯಾವುದೇ ಪಾತ್ರದ ವೈಭವೀಕರಣವಿಲ್ಲದೆ ನಮ್ಮ ನಡುವೆಯೇ ನಡೆಯಬಹುದಾದ ಒಂದಷ್ಟು ಘಟನೆಗಳನ್ನು ಆಧರಿಸಿ ಚಿತ್ರವನ್ನು ತೆರೆಮೇಲೆ ತೆರೆದಿಡಲಿದೆಯಂತೆ. ಇನ್ನು ಈ ಚಿತ್ರದಲ್ಲಿ ಯಾವುದೋ ಒಂದು ಪಾತ್ರ ಹೀರೋ ಅಂತ ಇಲ್ಲವಂತೆ. ಕಥೆಗೆ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಪ್ರತಿಯೊಂದು ಪಾತ್ರಗಳು ತಮ್ಮದೇ ಆದ ಮಹತ್ವನ್ನು ಪಡೆದುಕೊಳ್ಳಲಿವೆಯಂತೆ. ಆದರೆ ಇನ್ನೊಂದು ವಿಶೇಷವೆಂದರೆ, ಚಿತ್ರದಲ್ಲಿ ಖಳನಾಯಕನ ಪಾತ್ರವೊಂದು ಇರಲಿದ್ದು ಅದನ್ನು ಮಠ ಗುರು ಪ್ರಸಾದ್‌ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಕನ್ನಡದಲ್ಲಿ ಒಂದಷ್ಟು ವೆಬ್‌ ಸೀರಿಸ್‌ಗಳನ್ನು ನಿರ್ದೇಶಿಸುವ ಮೂಲಕ ಸೋಷಿಯಲ್‌ ಮೀಡಿಯಾಗಳಲ್ಲಿ ಪರಿಚಿತರಾಗಿರುವ ನವ ಪ್ರತಿಭೆ ವಿಕ್ರಮ್‌ ಯೋಗಾನಂದ್‌ “ಕುಷ್ಕ’ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.  “ಸ್ಮಾರ್ಟ್‌ ಸ್ಕ್ರೀನ್‌ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ ಪ್ರತಾಪ್‌ ರೆಡ್ಡಿ, ಮಧು ಗೌಡ, ಕೈಲಾಶ್‌ ಪಾಲ್‌ ಮತ್ತು ವಿಕ್ರಮ್‌ ಯೋಗಾನಂದ್‌ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 

“ಮಠ’ ಗುರು ಪ್ರಸಾದ್‌, ಕೈಲಾಶ್‌ ಪಾಲ್‌, ಚಂದನ್‌ ಗೌಡ, ಶೋಭರಾಜ್‌, ಅರುಣ್‌ ಕುಮಾರ್‌, ಟೋನಿ ವೇವ್‌, ರಾಕ್‌ಲೈನ್‌ ಸುಧಾಕರ್‌, ಜೀವನ್‌ ಲೈಫಿ, ಅರುಣ್‌, ಕಿರಣ್‌ ಆದಿತ್ಯ ಚಿತ್ರದ ಇತರೆ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಮಾಧುರಿ ಬ್ರಗಾಂಜ, ಸಂಜನಾ ಡಿ.ಎ ಎಂಬ ಇಬ್ಬರು ಅಚ್ಚ ಕನ್ನಡದ ಹುಡುಗಿಯರು ಈ ಚಿತ್ರದ ಮೂಲಕ ನಾಯಕ ನಟಿಯರಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಚಿತ್ರಕ್ಕೆ ಬಾಲರಾಜ್‌ ಚಿತ್ರಕಥೆ ಬರೆದಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಅಭಿಲಾಶ್‌ ಗುಪ್ತ ಸಂಗೀತ ಸಂಯೋಜನೆಯ ಹಾಡುಗಳಿಗೆ ರಾಮಕೃಷ್ಣ ರಣಗಟ್ಟಿ ಸಾಹಿತ್ಯವಿದೆ. ಇನ್ನು ಚಿತ್ರಕ್ಕೆ ಸ್ವತಃ ನಿರ್ದೇಶಕ ವಿಕ್ರಮ್‌ ಯೋಗಾನಂದ್‌ ಅವರೇ ಛಾಯಾಗ್ರಹಣ ಮತ್ತು ಸಂಕಲನವನ್ನು ಮಾಡಿದ್ದಾರೆ. ಸದ್ಯ “ಕುಷ್ಕ’ ಚಿತ್ರದ ಕೆಲಸಗಳು ಆರಂಭವಾಗಿದ್ದು, ಚಿತ್ರತಂಡದ ಯೋಜನೆಯ ಪ್ರಕಾರ ಮುಂದಿನ ಮಾರ್ಚ್‌ ಅಥವಾ ಏಪ್ರಿಲ್‌ ವೇಳೆಗೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

ಟಾಪ್ ನ್ಯೂಸ್

kumaraswamy

Chennapattana: ಅಭಿವೃದ್ಧಿ ಒಂದೂವರೆ ವರ್ಷದಿಂದ ಡಿಕೆಶಿಗೆ ನೆನಪಿಲ್ಲವೇಕೆ?: ಎಚ್‌ಡಿಕೆ

Stock Market: ಷೇರುಪೇಟೆ ಸೆನ್ಸೆಕ್ಸ್‌, ನಿಫ್ಟಿ ಇಳಿಕೆಯೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯ

Stock Market: ಷೇರುಪೇಟೆ ಸೆನ್ಸೆಕ್ಸ್‌, ನಿಫ್ಟಿ ಇಳಿಕೆಯೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯ

1-aaaewa

Hajj; 98 ಭಾರತೀಯ ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ: ವಿದೇಶಾಂಗ ಇಲಾಖೆ

Babaleshwara; ಕೋಕಾಕೋಲಾ ಕಂಪನಿಯಿಂದ ಮಮದಾಪುರ ಕೆರೆ ಪುನಶ್ಚೇತನ: ಎಂ‌.ಬಿ.ಪಾಟೀಲ

Babaleshwara; ಕೋಕಾಕೋಲಾ ಕಂಪನಿಯಿಂದ ಮಮದಾಪುರ ಕೆರೆ ಪುನಶ್ಚೇತನ: ಎಂ‌.ಬಿ.ಪಾಟೀಲ

Hunger Strike: ನೀರಿಗಾಗಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಸಚಿವೆ ಅತಿಶಿ

Hunger Strike: ನೀರಿಗಾಗಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಸಚಿವೆ ಅತಿಶಿ

Team India; ರಾಹುಲ್ ಬಳಿಕ ಕೋಚಿಂಗ್ ಜವಾಬ್ದಾರಿ ವಿವಿಎಸ್ ಲಕ್ಷ್ಮಣ್ ಗೆ; ಏನಿದು ಟ್ವಿಸ್ಟ್

Team India; ರಾಹುಲ್ ಬಳಿಕ ಕೋಚಿಂಗ್ ಜವಾಬ್ದಾರಿ ವಿವಿಎಸ್ ಲಕ್ಷ್ಮಣ್ ಗೆ; ಏನಿದು ಟ್ವಿಸ್ಟ್

Naidu

Andhra Pradesh: ಕೊನೆಗೂ 31 ತಿಂಗಳ ಬಳಿಕ ಸಿಎಂ “ಶಪಥ” ಪೂರೈಸಿದ ಚಂದ್ರಬಾಬು ನಾಯ್ದು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sambhavami Yuge Yuge movie

Sambhavami Yuge Yuge: ಹಳ್ಳಿಯ ಸುತ್ತ ಸಂಭವಾಮಿ…

Dhananjaya as Nadaprabhu Kempegowda

Dhananjaya; ನಾಡಪ್ರಭು ಕೆಂಪೇಗೌಡ ಪಾತ್ರದಲ್ಲಿ ಡಾಲಿ

Movies; ಇಲ್ಲಿವರೆಗೆ ಒಂದ್‌ ಲೆಕ್ಕ ಇನ್ಮುಂದೆ ಬೇರೆ ಲೆಕ್ಕ: ಸ್ಟಾರ್‌ ಸಿನಿಮಾಗಳು ಮುಂದಕ್ಕೆ

Movies; ಇಲ್ಲಿವರೆಗೆ ಒಂದ್‌ ಲೆಕ್ಕ ಇನ್ಮುಂದೆ ಬೇರೆ ಲೆಕ್ಕ: ಸ್ಟಾರ್‌ ಸಿನಿಮಾಗಳು ಮುಂದಕ್ಕೆ

Kannada Cinema; ಭ್ರಮೆ ಬಿಟ್ಟು ಬದುಕಿದರು.. ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ ಡಾ.ರಾಜ್‌

Sandalwood: ಭ್ರಮೆ ಬಿಟ್ಟು ಬದುಕಿದರು.. ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ ಡಾ.ರಾಜ್‌

love li kannada movie

Love Li; ತೆರೆಗೆ ಬಂತು ವಸಿಷ್ಠ ನಟನೆಯ ‘ಲವ್ ಲೀ’

MUST WATCH

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

udayavani youtube

ತರಂಗ ಯುಗಾದಿ ಧಮಾಕ-2024 | ಅದೃಷ್ಟಶಾಲಿಗಳ ಆಯ್ಕೆ

udayavani youtube

ಹಾಸ್ಟೆಲ್ ಗಳ ಸಮಸ್ಯೆ ಬಗೆಹರಿಸಿ: ಶಾಸಕ ಗುರುರಾಜ್ ಗಂಟಿಹೊಳೆ ಸೂಚನೆ

udayavani youtube

ಇದು ಭವ್ಯ ಭಾರತದ ಹೆಗ್ಗುರುತು | ನಳಂದ ವಿಶ್ವವಿದ್ಯಾಲಯ

udayavani youtube

ಕಲಬುರಗಿ ಜಿಮ್ಸ್ ಮತ್ತು ಜಯದೇವ ಆಸ್ಪತ್ರೆಗಳಿಗೆ ಆರ್.ಅಶೋಕ ಭೇಟಿ

ಹೊಸ ಸೇರ್ಪಡೆ

Petrol, Diesel ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆPetrol, Diesel ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

Petrol, Diesel ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ

kumaraswamy

Chennapattana: ಅಭಿವೃದ್ಧಿ ಒಂದೂವರೆ ವರ್ಷದಿಂದ ಡಿಕೆಶಿಗೆ ನೆನಪಿಲ್ಲವೇಕೆ?: ಎಚ್‌ಡಿಕೆ

ಬಾಗಲಕೋಟೆ: ಏಳು ದಿನಗಳಿಂದ “ಸರ್ವರ್‌ ಸಮಸ್ಯೆ’ ಸಂಕಟ

ಬಾಗಲಕೋಟೆ: ಏಳು ದಿನಗಳಿಂದ “ಸರ್ವರ್‌ ಸಮಸ್ಯೆ’ ಸಂಕಟ

Karnataka-Maharashtra Border; ವಿಜೃಂಭಣೆಯಿಂದ ನಡೆದ ‘ವಟ ಸಾವಿತ್ರಿ ವ್ರತ’ ಆಚರಣೆ

Karnataka-Maharashtra Border; ವಿಜೃಂಭಣೆಯಿಂದ ನಡೆದ ‘ವಟ ಸಾವಿತ್ರಿ ವ್ರತ’ ಆಚರಣೆ

Stock Market: ಷೇರುಪೇಟೆ ಸೆನ್ಸೆಕ್ಸ್‌, ನಿಫ್ಟಿ ಇಳಿಕೆಯೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯ

Stock Market: ಷೇರುಪೇಟೆ ಸೆನ್ಸೆಕ್ಸ್‌, ನಿಫ್ಟಿ ಇಳಿಕೆಯೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.