ತಾಯಿ ಹುಡುಕಿ ಹೊರಟ ಹುಡುಗರು

ಎಮೋಶನಲ್‌ ಜರ್ನಿಗೆ ಯಶ್‌ ಸಾಥ್‌

Team Udayavani, May 3, 2019, 6:10 AM IST

Suchi-Yash

“ಜಾತ್ರೆ’ ಸಿನಿಮಾ ನಿರ್ದೇಶಿಸಿದ್ದ ರವಿತೇಜ ಸದ್ದಿಲ್ಲದೆ ಮತ್ತೂಂದು ಚಿತ್ರಕ್ಕೆ ಕೈ ಹಾಕಿದ್ದ ವಿಷಯ ಗೊತ್ತೇ ಇದೆ. ಅದು “ಸಾಗುತ ದೂರ ದೂರ’. ಈಗ ಬಿಡುಗಡೆಗೂ ಸಜ್ಜಾಗಿದೆ. ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿರುವ ಯಶ್‌, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. “ಸಾಗುತ ದೂರ ದೂರ’ ಚಿತ್ರದ ಟ್ರೇಲರ್‌ ಬಿಡುಗಡೆಗೆ ಆಗಮಿಸಿದ್ದ ಯಶ್‌, “ರವಿತೇಜ ನನ್ನ ಗೆಳೆಯ. “ರಾಜಧಾನಿ’ ಚಿತ್ರದಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡಿದ್ದೆವು. ಒಳ್ಳೆಯ ಪ್ರತಿಭಾವಂತ. ಅವನ ಪ್ರತಿಭೆ ಆಗಲೇ ತಿಳಿದಿತ್ತು. ಒಳ್ಳೆಯ ಕೆಲಸಗಾರ. ಅವನು ಕರೆದಾಗ ಇಲ್ಲ ಅನ್ನದೆ ಬಂದಿದ್ದೇನೆ. ಇನ್ನು, ಉಷಾ ಭಂಡಾರಿ ಅವರು ಸಹ ಒಳ್ಳೆಯ ಕಲಾವಿದರು. ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಶುಭಕೋರಿದರು ಯಶ್‌.

ಇದೊಂದು ಎಮೋಷನಲ್‌ ಜರ್ನಿ ಇರುವ ಕಥೆ. ಇಬ್ಬರು ಹುಡುಗರು ತನ್ನ ತಾಯಿ ಹುಡುಕಿ ಹೊರಡುವ ಕಥೆ ಇಲ್ಲಿದೆ. ಕ್ಲೈಮ್ಯಾಕ್ಸ್‌ನಲ್ಲಿ ಅವರ ತಾಯಿ ಸಿಗುತ್ತಾಳಾ ಇಲ್ಲವಾ ಅನ್ನೋದೇ ಕಥೆ. ಅದೊಂದು ಎಮೋಷನಲ್‌ ಕಥೆ ಆಗಿದ್ದು, ಪ್ರತಿಯೊಬ್ಬರಿಗೂ ಇದು ನಾಟುವ ಚಿತ್ರವಾಗಲಿದೆ ಎಂಬುದು ಚಿತ್ರತಂಡದ ಹೇಳಿಕೆ. ಇಲ್ಲಿ ಅಪೇಕ್ಷಾ ಅವರಿಗೆ ಎರಡು ಶೇಡ್‌ ಇರುವ ಪಾತ್ರವಿದೆಯಂತೆ.

ತಾಯಿ ಸೆಂಟಿಮೆಂಟ್‌ ಇಲ್ಲಿ ಹೆಚ್ಚಾಗಿದ್ದು, ಎಲ್ಲರಿಗೂ ಇಷ್ಟವಾಗುವುದರ ಜೊತೆಗೆ ಒಂದು ಮನಸ್ಸಿಗೆ ಹಿಡಿಸುವ ಸಂದೇಶ ಇಲ್ಲಿದೆ. ನನ್ನ ಹಾಗು ಇನ್ನೊಬ್ಬ ಚಿಕ್ಕ ಹುಡುಗನ ನಡುವಿನ ಕಥೆ ಇಲ್ಲಿ ಮುಖ್ಯವಾಗಿದ್ದು, ಜರ್ನಿಯಲ್ಲಿ ತಾಯಿ ಹುಡುಕಿ ಹೋಗುವ ಪಾತ್ರ ಎಲ್ಲರ ಮನಕಲಕುತ್ತದೆ. ಬಹುತೇಕ ಕುಂದಾಪುರ ಶೈಲಿಯ ಚಿತ್ರವಿದು, ಕುಂದಾಪುರ ಶೈಲಿಯ ಸಂಭಾಷಣೆಯೂ ಇಲ್ಲಿದೆ. ಹೊಸ ಪ್ರಯೋಗ ಇಲ್ಲಿ ಕಾಣಬಹುದು ಎನ್ನುತ್ತಾರೆ ಅಪೇಕ್ಷಾ.

ಚಿತ್ರದಲ್ಲಿ ಮಹೇಶ್‌, ಜಾಹ್ನವಿ, ಉಷಾ ಭಂಡಾರಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಇಲ್ಲಿ ಲವ್‌ ಇಲ್ಲ. ಮರಸುತ್ತುವ ಗೋಜಿಲ್ಲ. ಆದರೆ, ಅಮ್ಮನ ಸೆಂಟಿಮೆಂಟ್‌ ಕಥೆಯೇ ಜೀವಾಳ ಎನ್ನುವ ಚಿತ್ರತಂಡ, ಚಿತ್ರವನ್ನು ಆದಷ್ಟು ಬೇಗ ತೆರೆಗೆ ತರಲು ತಯಾರಿ ಮಾಡಿಕೊಳ್ಳುತ್ತಿದೆ.
ಚಿತ್ರಕ್ಕೆ ಮಣಿಕಾಂತ್‌ ಕದ್ರಿ ಮೂರು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಚಿತ್ರದ ಇನ್ನೊಂದು ವಿಶೇಷವೆಂದರೆ, ನೂರಾರು ಊರುಗಳಲ್ಲಿ ಚಿತ್ರೀಕರಣ ನಡೆಸಿರುವುದು. ಮುಖ್ಯವಾಗಿ ಚಿಕ್ಕಮಗಳೂರು, ಸಕಲೇಶಪುರ, ಮೂಡಿಗೆರೆ, ಮಂಗಳೂರು, ಬೆಂಗಳೂರು ಹಾಗೂ ಕುಂದಾಪುರ ಸುತ್ತಮುತ್ತ ಚಿತ್ರೀಕರಣವಾಗಿದೆ.

ಟಾಪ್ ನ್ಯೂಸ್

rwytju11111111111

ಭಾನುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಮಾತು-ಕೃತಿ ಮುಖಾಮುಖಿಯಾದಾಗ…

ಮಾತು-ಕೃತಿ ಮುಖಾಮುಖಿಯಾದಾಗ…

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ನಾಡಗೀತೆ ರಾಗ ವಿವಾದಕ್ಕೆ ಅಂತ್ಯ ಹಾಡಿ

ನಾಡಗೀತೆ ರಾಗ ವಿವಾದಕ್ಕೆ ಅಂತ್ಯ ಹಾಡಿ

ಗಡಿ ರೇಖೆಯ ಬಳಿ ಕಠಿಣ ಸೇನಾ ತರಬೇತಿ

ಗಡಿ ರೇಖೆಯ ಬಳಿ ಕಠಿಣ ಸೇನಾ ತರಬೇತಿ

ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ: ಅಮಿತ್‌ ಶಾ ಭರವಸೆ

ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ: ಅಮಿತ್‌ ಶಾ ಭರವಸೆ

ವರ್ಗಾವರ್ಗಿ ನಿರಾತಂಕ; ಅಕ್ಟೋಬರ್‌ 25ರಿಂದ ಶಿಕ್ಷಕರ ವರ್ಗಕ್ಕೆ ಪರಿಷ್ಕೃತ ವೇಳಾಪಟ್ಟಿ

ವರ್ಗಾವರ್ಗಿ ನಿರಾತಂಕ; ಅಕ್ಟೋಬರ್‌ 25ರಿಂದ ಶಿಕ್ಷಕರ ವರ್ಗಕ್ಕೆ ಪರಿಷ್ಕೃತ ವೇಳಾಪಟ್ಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿನಿಮಾದ ‘ಸರ್‌ಪ್ರೈಸ್‌’ ಟೈಟಲ್‌

ಸಿನಿಮಾದ ‘ಸರ್‌ಪ್ರೈಸ್‌’ ಟೈಟಲ್‌

ಟಾಮ್‌ ಅಂಡ್‌ ಜೆರ್ರಿ ಗೇಮ್‌ಗೆ ರೆಡಿ: ಡೈರೆಕ್ಟರ್‌ ಕ್ಯಾಪ್‌ ತೊಟ್ಟ “KGF’ ಡೈಲಾಗ್‌ ರೈಟರ್‌

ಟಾಮ್‌ ಅಂಡ್‌ ಜೆರ್ರಿ ಗೇಮ್‌ಗೆ ರೆಡಿ: ಡೈರೆಕ್ಟರ್‌ ಕ್ಯಾಪ್‌ ತೊಟ್ಟ “KGF’ ಡೈಲಾಗ್‌ ರೈಟರ್‌

kannada actress prema

ವಕಾಲತ್ತು ವಹಿಸಿ ಬಂದರು ಪ್ರೇಮಾ

ಸಕೂಚಿ

ಹೊರಬಂತು ಹೊಸಬರ ಹಾರರ್‌-ಥ್ರಿಲ್ಲರ್‌ “ಸಕೂಚಿ’ ಟ್ರೇಲರ್‌

sakath movie

ಅ. 24ಕ್ಕೆ ಗಣಿ-ಸುನಿ ಕಾಂಬಿನೇಶನ್‌ “ಸಖತ್‌’ ಟೀಸರ್‌

MUST WATCH

udayavani youtube

ರಾಜ್ಯದ ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ : ಸಚಿವ ಡಾ. ಅಶ್ವತ್ಥನಾರಾಯಣ

udayavani youtube

11 ಮಂದಿ ಚಾರಣಿಗರು ಸಾವು, 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

udayavani youtube

ಮುಂದುವರೆದ ಒಂಟಿ ಸಲಗದ ದಾಂಧಲೆ ಕಾಂಪೌಂಡ್, ಮನೆಯ ಮೇಲ್ಚಾವಣಿ ಪುಡಿಪುಡಿ

udayavani youtube

ಕೃಷಿಕರ ಬದುಕಿಗೆ ಆಶಾಕಿರಣವಾಗಿರುವ MO4 ಭತ್ತದ ತಳಿಯನ್ನು ಯಾಕೆ ಬೆಳೆಯಬೇಕು?

udayavani youtube

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಕಾರು, ಮಹಿಳೆ ಸಾವು

ಹೊಸ ಸೇರ್ಪಡೆ

rwytju11111111111

ಭಾನುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಮಾತು-ಕೃತಿ ಮುಖಾಮುಖಿಯಾದಾಗ…

ಮಾತು-ಕೃತಿ ಮುಖಾಮುಖಿಯಾದಾಗ…

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ಕೋವಿಡ್‌ ಪರಿಣಾಮ: ಜೀವಿತಾವಧಿ ಇಳಿಕೆ

ಕೋವಿಡ್‌ ಪರಿಣಾಮ: ಜೀವಿತಾವಧಿ ಇಳಿಕೆ

ದೇಗುಲ ಹಣ ಹಿಂದೂ ಸಮಾಜೋದ್ಧಾರಕ್ಕಿರಲಿ

ದೇಗುಲ ಹಣ ಹಿಂದೂ ಸಮಾಜೋದ್ಧಾರಕ್ಕಿರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.