ಸಿಂಗ is King

ಮಾಸ್‌-ಕ್ಲಾಸ್‌... ಸೂಪರ್‌ ಬಾಸ್‌

Team Udayavani, Jul 19, 2019, 5:23 AM IST

“ನಾನು ಹೆಮ್ಮೆಯಿಂದ ಹೇಳ್ತೀನಿ ಇದು ಹಬ್ಬದೂಟ ಇದ್ದಂತೆ … ‘
– ಹೀಗೆ ಹೇಳಿದ್ದು, ನಟ ಚಿರಂಜೀವಿ ಸರ್ಜಾ. ಅವರು ಹಾಗೆ ಹೇಳಿಕೊಂಡಿದ್ದು, ಇಂದು ತೆರೆಗೆ ಬರುತ್ತಿರುವ “ಸಿಂಗ’ ಚಿತ್ರ ಕುರಿತು. ಹೌದು, ಚಿರಂಜೀವಿ ಸರ್ಜಾ ಹೇಳುವಂತೆ, “ಸಿಂಗ’ ಅವರ ವೃತ್ತಿಜೀವನದಲ್ಲಿ ಬಹು ಮುಖ್ಯವಾದ ಚಿತ್ರ. ಅದರಲ್ಲಿ ಎಲ್ಲವೂ ಇದೆ. ಒಂದು ರೀತಿ ಹಬ್ಬದೂಟ ಸವಿದಷ್ಟೇ, ಚಿತ್ರದೊಳಗಿನ ಎಲ್ಲಾ ಅಂಶಗಳೂ ರುಚಿಸಲಿವೆ ಎಂಬುದು ಅವರ ವಿಶ್ವಾಸದ ಮಾತು.

ಸೂಕ್ಷ್ಮವಾಗಿ ಗಮನಿಸಿದರೆ ಚಿರಂಜೀವಿ ಸರ್ಜಾ, ಸೈಲೆಂಟ್‌ ಆಗಿಯೇ ಒಂದರ ಮೇಲೊಂದು ಚಿತ್ರಗಳನ್ನು ಒಪ್ಪಿಕೊಂಡು ಕೆಲಸ ಮಾಡುತ್ತಲೇ ಇದ್ದಾರೆ. ಇದುವರೆಗೆ ಎಲ್ಲಾ ಬಗೆಯ ಚಿತ್ರಗಳಲ್ಲೂ ಕಾಣಿಸಿಕೊಂಡಿರುವ ಚಿರುಗೆ “ಸಿಂಗ’, ಅತೀ ನಂಬಿಕೆ ಹುಟ್ಟಿಸಿರುವ ಚಿತ್ರ. ಅ ಕುರಿತು ಹೇಳಿಕೊಳ್ಳುವ ಚಿರು, “ನನ್ನ ಸಿನಿಮಾ ವೃತ್ತಿ ಬದುಕಿನಲ್ಲಿ “ಸಿಂಗ’ ಮೇಕ್‌ ಎ ಬ್ರೇಕ್‌ ಅನ್ನುವುದಕ್ಕಿಂತ ಅದೊಂದು ಬಹುಮುಖ್ಯವಾದ ಚಿತ್ರ. ಪಕ್ಕಾ ಮಾಸ್‌ ಅಂಶಗಳು ಇಲ್ಲಿ ಹೈಲೈಟ್‌. ಇದೇ ಮೊದಲ ಸಲ ನಾನು ಉದಯ್‌ಮೆಹ್ತಾ ಅವರ ಬ್ಯಾನರ್‌ನಲ್ಲಿ ಕೆಲಸ ಮಾಡಿದ್ದೇನೆ. ತುಂಬಾ ಒಳ್ಳೆಯ ವ್ಯಕ್ತಿ ಅವರು. ಸಿನಿಮಾ ಪ್ರೀತಿಸುವ ನಿರ್ಮಾಪಕರಲ್ಲಿ ಅವರೂ ಒಬ್ಬರು. ನಾವು ಏನು ಹೇಳ್ತೀವಿ ಅನ್ನುವುದಕ್ಕಿಂತ, ಸಿನಿಮಾ ಏನು ಕೇಳುತ್ತೆ ಅದನ್ನು ಅರ್ಥ ಮಾಡಿಕೊಂಡು ಎಲ್ಲವನ್ನೂ ಪೂರೈಸಿದ್ದಾರೆ. ಸಿನಿಮಾದಲ್ಲಿ ಫೈಟ್‌ ಇರಬೇಕು ಅಂದುಕೊಂಡಿದ್ದೆವು. ಆದರೆ, ಆ ಫೈಟ್‌ಗೆ 1000 ಫ್ರೆàಮ್ಸ್‌ ಕ್ಯಾಮೆರಾ ಬೇಕು ಅಂದಾಗ, ಹಿಂದೆ ಮುಂದೆ ನೋಡದೆ ಕಲ್ಪಿಸಿಕೊಡುವುದಿದೆಯಲ್ಲ, ಅದು ನಿರ್ಮಾಪಕರ ಬದ್ಧತೆ. ದಿನವೊಂದಕ್ಕೆ ಒಂದು ಮುಕ್ಕಾಲು ಲಕ್ಷ ಕ್ಯಾಮೆರಾ ಬಾಡಿಗೆ ಇದ್ದರೂ, ಅದನ್ನು ವ್ಯವಸ್ಥೆಗೊಳಿಸಿ, ಚಿತ್ರ ಅದ್ಧೂರಿಯಾಗಿ ಮೂಡಿಬರಲು ಕಾರಣರಾಗಿದ್ದಾರೆ’ ಎಂದು ನಿರ್ಮಾಪಕರ ಸಿನಿಮಾ ಪ್ರೀತಿ ಕುರಿತು ಮಾತಾಡುತ್ತಾರೆ ಚಿರು.

ಒರಟನಾದರೂ ಒಳ್ಳೆಯವ
ಈ ಹಿಂದೆ ಚಿರು ಜೊತೆ “ರಾಮ್‌ಲೀಲ’ ಚಿತ್ರ ಮಾಡಿದ್ದ ನಿರ್ದೇಶಕ ವಿಜಯ್‌ ಕಿರಣ್‌ ಜೊತೆ ಚಿರು ಪುನಃ “ಸಿಂಗ’ ಮಾಡಿದ್ದಾರೆ. ಆ ಬಗ್ಗೆ ಹೇಳುವ ಚಿರು, “ಹಿಂದೆ ಮಾಡಿದ್ದ “ರಾಮ್‌ಲೀಲಾ’ ಚಿತ್ರಕ್ಕಿಂತಲೂ ಒಂದು ಮಟ್ಟಕ್ಕೆ ಜಾಸ್ತೀನೆ ಮನರಂಜನೆಯಲ್ಲಿ ಚಿತ್ರ ಮೂಡಿಬಂದಿದೆ. ಕಥೆ ಬಗ್ಗೆ ಹೇಳುವುದಾದರೆ, ಇಲ್ಲಿ ನಾಯಕನ ಹೆಸರು ಸಿಂಗ. ಅವನೊಬ್ಬ ಎಥಿಕ್ಸ್‌ ಇರುವಂತಹ ವ್ಯಕ್ತಿ. ಲೈಫ‌ಲ್ಲಿ ಅವನದೇ ಆದಂತಹ ಸಿದ್ಧಾಂತ ಇಟ್ಟುಕೊಂಡವನು. ನೇರ ಮಾತುಗಾರ. ಅವನನ್ನು ನೋಡಿದವರು, ಅವನೊಬ್ಬ ಒರಟ, ಕೆಟ್ಟವನು ಎಂಬ ಭಾವನೆ.

ಅವನು ಎಲ್ಲರಿಗೂ ಕೆಟ್ಟವನಾದರೂ ಮಾಡುವುದೆಲ್ಲ ಒಳ್ಳೆಯ ಕೆಲಸ. ರಗಡ್‌ ಲುಕ್‌ನಲ್ಲಿದ್ದರೂ, ಸಿಂಹದ ರೀತಿಯ ವರ್ತನೆ ಮಾಡಿದರೂ, ಅವನಲ್ಲೂ ಒಳ್ಳೆಯ ಗುಣಗಳಿರುತ್ತವೆ. ಯಾಕೆ ರೇಗುತ್ತಾನೆ, ಯಾರ ಮೇಲೆ ಎಗರಿಬೀಳುತ್ತಾನೆ ಎಂಬುದಕ್ಕೆ “ಸಿಂಗ’ ನೋಡಬೇಕು’ ಎನ್ನುತ್ತಾರೆ ಚಿರು.

ಪತ್ನಿಯ ಪರ್ಪೆಕ್ಟ್ ವಾಯ್ಸ
ಈ ಚಿತ್ರದಲ್ಲೊಂದು ವಿಶೇಷತೆ ಇದೆ. ಅದು ಚಿರು ಪತ್ನಿ ಮೇಘನಾರಾಜ್‌ ಇದೇ ಮೊದಲ ಬಾರಿಗೆ ಪತಿ ಸಿನಿಮಾದ ಹಾಡಿಗೆ ಧ್ವನಿಯಾಗಿದ್ದಾರೆ. ಆ ಬಗ್ಗೆ ಚಿರು ಹೇಳುವುದೇನು ಗೊತ್ತಾ? “ಚಿತ್ರದಲ್ಲಿ “ವಾಟ್‌ ಎ ಬ್ಯೂಟಿಫ‌ುಲ್‌ ಶಿವ ಶಿವ’ ಹಾಡು ಕೇಳಿದಾಗ, ಅದೊಂಥರಾ ಮಜವಾಗಿತ್ತು. ತುಂಬಾನೇ ಚೆನ್ನಾಗಿದೆ ಅಲ್ವಾ ಅಂದುಕೊಂಡೇ ಕಾರು ಡ್ರೈವ್‌ ಮಾಡಿಕೊಂಡು ಮನೆಗೆ ಬರುವಾಗ, ಈ ಹಾಡನ್ನು ಮೇಘನಾ ಹಾಡಿದರೆ ಹೇಗಿರುತ್ತೆ ಅಂತ ಪ್ರಶ್ನೆ ಮಾಡಿಕೊಂಡೆ. ಮನೆಗೆ ಬಂದವನೇ, ನೋಡಮ್ಮಾ, ಚಿತ್ರದಲ್ಲೊಂದು ಹಾಡು ಇದೆ. ನೀನು ಹಾಡ್ತೀಯಾ ಅಂದೆ. ಅದಕ್ಕೆ ಮೇಘನಾ, “ನಾನೇನೋ ಹಾಡ್ತೀನಿ. ಆದರೆ, ಟೀಮ್‌ ಒಪ್ಪಿಕೊಳ್ಳಬೇಕಲ್ವಾ ‘ ಅಂದರು. ಮರುದಿನ ನಾನು ನಿರ್ಮಾಪಕ ಉದಯ್‌ ಮೆಹ್ತಾ ಬಳಿ ಕೇಳಿದಾಗ, ಅವರೂ “ಒಂದ್ಸಲ ಹಾಡಿಸಿ ನೋಡೋಣ. ಆದರೂ ಅಂತಿಮವಾಗಿ ಸಂಗೀತ ನಿರ್ದೇಶಕರಿಗೆ ಬಿಟ್ಟಿದ್ದು’ ಅಂದರು. ನನಗೂ ಅದು ಸರಿ ಎನಿಸಿತು. ಯಾಕೆಂದರೆ, ಸಂಗೀತ ನಿರ್ದೇಶಕರಿಗೊಂದು ಫೀಲ್‌ ಇರುತ್ತೆ. ಅದನ್ನು ಯಾರೂ ಡಿಸ್ಟರ್ಬ್ ಮಾಡಬಾರದು. ಆಗ, ಮೇಘನಾಗೂ ಹೇಳಿದ್ದೆ, ನೋಡಮ್ಮ, ಅಪ್ರೋಚ್‌ ಮಾಡ್ತೀವಷ್ಟೇ. ನಿನ್ನ ಧ್ವನಿ ಇಷ್ಟವಾದರೆ, ಇರುತ್ತೆ, ಇಲ್ಲವಾದರೆ ಇಲ್ಲ. ಆಮೇಲೆ ಬೇಜಾರು ಆಗಬಾರದು ಅಂದಿದ್ದೆ. ಮೇಘನಾ ಆ ಸಂದರ್ಭವನ್ನು ಚೆನ್ನಾಗಿ ಅರ್ಥ ಮಾಡಿಕೊಂಡರು. ಕೊನೆಗೆ ಹಾಡಿದರು, ಅವರ ವಾಯ್ಸ ಎಲ್ಲರಿಗೂ ಪಫೆìಕ್ಟ್ ಎನಿಸಿತು. ಅದನ್ನೇ ಇಟ್ಟುಕೊಳ್ಳೋಣ ಅಂತ ಸಂಗೀತ ನಿರ್ದೇಶಕರೂ ಹೇಳಿದರು. ಆ ಹಾಡು ಹಿಟ್‌ ಕೂಡ ಆಗೋಯ್ತು’ ಅಂತ ಮೇಘನಾ ಹಾಡಿನ ಬಗ್ಗೆ ಹೇಳಿಕೊಂಡರು ಚಿರು.

ಸಿಂಗನ ಸಂಗ ಅನನ್ಯ
ಯಾವುದೇ ನಟ ಇರಲಿ, ಒಂದೊಂದು ಚಿತ್ರ ಒಂದು ರೀತಿಯ ಅನುಭವ ಕಟ್ಟಿಕೊಡುತ್ತೆ. ಈ “ಸಿಂಗ’ ಕೂಡ ಚಿರುಗೆ ಅನನ್ಯ ಅನುಭವ ಕಟ್ಟಿಕೊಟ್ಟಿದೆಯಂತೆ. ಆ ಬಗ್ಗೆ ಮಾತನಾಡುವ ಚಿರು, “ಈ ಚಿತ್ರದಲ್ಲಿ ಸಾಕಷ್ಟು ಅನುಭವ ಆಗಿದೆ. ಮೊದಲಿಗೆ ಒಳ್ಳೆಯ ಕಥೆಯಲ್ಲಿ ಕೆಲಸ ಮಾಡಿದ್ದು, ಫ್ರೆಂಡ್ಲಿ ಎನಿಸುವ ತಂಡದ ಜೊತೆ ತೊಡಗಿಕೊಂಡಿದ್ದು, ಯಾವುದಕ್ಕೂ ಕೊರತೆ ಬಾರದಂತೆ ನೋಡಿಕೊಂಡ ನಿರ್ಮಾಪಕರ ಸರಳತನ ಎಲ್ಲವೂ ಹೊಸ ಅನುಭವ ಕೊಟ್ಟಿದ್ದಂತೂ ನಿಜ. ಇನ್ನು, ಇಲ್ಲಿ ಆ್ಯಕ್ಷನ್‌ ಪ್ಯಾಕ್‌ ಜಾಸ್ತೀನೇ ಇದೆ. ಯಾವುದೇ ಚಿತ್ರವಿರಲಿ, ಆ್ಯಕ್ಷನ್‌ ಅಂದಮೇಲೆ ರಿಸ್ಕ್ ಇದ್ದೇ ಇರುತ್ತೆ. ಸಣ್ಣ ಫೈಟ್‌ ಆಗಿರಲಿ, ದೊಡ್ಡ ಫೈಟ್‌ ಇರಲಿ, ರಿಸ್ಕ್ ಇಲ್ಲದೆ ಕೆಲಸ ಇರೋದಿಲ್ಲ. ಇಲ್ಲೂ ಭರ್ಜರಿ ಫೈಟ್‌ ಇದ್ದರೂ, ಅದನ್ನು ತೆರೆಯ ಮೇಲೆ ರಿಯಲ್‌ನಂತೆಯೇ ತೋರಿಸಬೇಕಿತ್ತು. ಹಾಗಂತ, ಸೇಫ್ಟಿ ಇಲ್ಲದೆ ಏನನ್ನೂ ಮಾಡಿಲ್ಲ. ಮುಂಜಾಗ್ರತೆ ವಹಿಸಿ, ರಿಸ್ಕ್ನಲ್ಲೇ ಕೆಲಸ ಮಾಡಿದ್ದರಿಂದ ಚಿತ್ರದ ಫೈಟ್‌ ಹೈಲೈಟ್‌ಗಳಲ್ಲೊಂದಾಗಿದೆ. ಇನ್ನು, ಸಾಂಗ್‌ಗೂ ಕೂಡಾ ವಿದೇಶಕ್ಕೆ ಹೋಗುವ ಐಡಿಯಾ ಇರಲಿಲ್ಲ. ಸಾಂಗ್‌ ಕೇಳಿದ ನಂತರ ನಿರ್ಮಾಪಕರೇ, ಅದಕ್ಕೆ ನ್ಯಾಯ ಒದಗಿಸಿದರು. ಇಲ್ಲಿ ಕಥೆ, ಸಂದರ್ಭ ಏನೆಲ್ಲಾ ಡಿಮ್ಯಾಂಡ್‌ ಮಾಡಿತೋ, ಅದೆಲ್ಲವನ್ನೂ ಒದಗಿಸಿ ಕೊಟ್ಟ ಪ್ರೊಡಕ್ಷನ್‌ ಸಂಸ್ಥೆಯ ಕೆಲಸ ಹೊಸ ಅನುಭವ ನೀಡಿತು’ ಎಂಬುದು ಚಿರು ಹೇಳಿಕೆ.

ಇರುಸು-ಮುರುಸಿಲ್ಲ
ನೋಡ ನೋಡುತ್ತಿದ್ದಂತೆಯೇ “ಸಿಂಗ’ ಶುರುವಾಗಿ, ಚಿತ್ರೀಕರಣಗೊಂಡು, ಬಿಡುಗಡೆಗೂ ಬಂದಾಗಿದೆ. ಇದಕ್ಕೆಲ್ಲಾ ಪೂರ್ವ ತಯಾರಿ ಇರಲೇಬೇಕು. ಅದನ್ನು ಚಿರು ಹೇಳುವುದು ಹೀಗೆ. “ನಿಜ, “ಸಿಂಗ’ ಬೇಗ ಮುಗಿದ ಚಿತ್ರ. ಇದಕ್ಕೆ ಸಿನಿಮಾ ಶುರುವಿಗೆ ಮೂರು ತಿಂಗಳು ಮುನ್ನವೇ ಪಕ್ಕಾ ತಯಾರಿ ಮಾಡಿಕೊಳ್ಳಲಾಗಿತ್ತು. ಇಂತಹ ದಿನ ಇಂತಹ ಸೀನ್‌ ಇರಬೇಕು, ಇಂತಹ ಕಲಾವಿದರು ಬೇಕು, ಇಂಥದ್ದೇ ಲೊಕೇಷನ್‌ನಲ್ಲಿ ಚಿತ್ರೀಕರಣ ಆಗಬೇಕು’ ಎಂಬ ಬಗ್ಗೆ ಪಕ್ವತೆ ಇತ್ತು. ಹಾಗಾಗಿಯೇ, “ಸಿಂಗ’ ಬೇಗ ಮುಗಿದು ಪ್ರೇಕ್ಷಕರ ಮುಂದೆ ಬರಲು ಸಾಧ್ಯವಾಯ್ತು. ಇದು ನನ್ನೊಬ್ಬನ ಬಿಟ್ಟು, ಇಡೀ ಟೀಮ್‌ನಿಂದ ಆಗಿರುವ ಕೆಲಸ. ಒಂದು ದಿನವೂ ಇರುಸು-ಮುರುಸು ಆಗಿಲ್ಲ. ಯಾವುದೇ ತರಲೆ, ಒತ್ತಡ ಏನೂ ಇರಲಿಲ್ಲ. ಹಾಗೆ ನೋಡಿದರೆ, ನಾನು ಮನೆ ಬಿಟ್ಟು ಹೆಚ್ಚೆಂದರೆ ಹತ್ತು-ಹನ್ನೆರೆಡು ದಿನ ಮಾತ್ರ ಇರಬಲ್ಲೆ. ಆದರೆ, ಈ ಚಿತ್ರಕ್ಕಾಗಿ 30 ದಿನ ಔಟ್‌ಡೋರ್‌ನಲ್ಲಿದ್ದೆ. ಒಂದು ದಿನವೂ ನನಗೆ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಬಹುತೇಕ ಮೈಸೂರು ಸುತ್ತಮುತ್ತ ಚಿತ್ರೀಕರಣವಾಗಿದೆ ಎನ್ನುವ ಚಿರು, “ಸಿಂಗ’ ಆರು ವರ್ಷದ ಮಕ್ಕಳಿಂದ ಹಿಡಿದು ಅರವತ್ತು ವರ್ಷ ಯಜಮಾನರವರೆಗೂ ನೋಡುವಂತಹ ಚಿತ್ರ. ನನಗಷ್ಟೇ ಅಲ್ಲ, ಪ್ರತಿಯೊಬ್ಬರಿಗೂ ಇಡೀ ಸಿನಿಮಾವೇ ಇಷ್ಟವಾಗುತ್ತೆ ಎಂಬ ಗ್ಯಾರಂಟಿ ಕೊಡ್ತೀನಿ’ ಎಂದು ಹೇಳುವ ಮೂಲಕ ಮಾತು ಮುಗಿಸುತ್ತಾರೆ ಚಿರು.

ವಿಜಯ್‌ ಭರಮಸಾಗರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ನಟ ಕಂ ನಿರ್ದೇಶಕ ದಿ. ಶಂಕರನಾಗ್‌ ಅವರ ಮೇಲೆ ಅಪಾರ ಅಭಿಮಾನವನ್ನು ಹೊಂದಿರುವ ಯುವ ಟೆಕ್ಕಿಗಳ ಗುಂಪೊಂದು ವಾರಾಂತ್ಯದಲ್ಲಿ ಮತ್ತು ಬಿಡುವು ಸಿಕ್ಕಾಗ ಒಂದಷ್ಟು ಸಿನಿಮಾ...

  • ಶಿವರಾಜಕುಮಾರ್‌ ನೆಗೆಟಿವ್‌ ಪಾತ್ರ ಮಾಡಲು ಮುಂದಾಗಿದ್ದಾರೆ. ಯೋಗಿ ಜಿ ರಾಜ್‌ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಶಿವರಾಜಕುಮಾರ್‌ ನೆಗೆಟಿವ್‌ ಪಾತ್ರ ಮಾಡಲಿದ್ದಾರೆ....

  • ನಾನು ಸಾಕಷ್ಟು ಕಥೆ ಕೇಳಿದ್ದೇನೆ. ಆದರೆ, ಎಲ್ಲವನ್ನೂ ಒಪ್ಪಿಲ್ಲ. ಆದಷ್ಟು ಚ್ಯೂಸಿಯಾದೆ. ಬಂದ ಕಥೆಗಳಲ್ಲಿ ಅನೇಕ ಕಥೆಗಳು ರೆಗ್ಯುಲರ್‌ ಪ್ಯಾಟ್ರನ್‌ನಲ್ಲಿದ್ದವು....

  • ಮೋಹನ್‌ ಸದ್ದಿಲ್ಲದೆಯೇ ಮತ್ತೂಂದು ಚಿತ್ರ ಮಾಡಿ ಮುಗಿಸಿದ್ದಾರೆ. ಆ ಚಿತ್ರ ಇನ್ನೇನು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಆ ಚಿತ್ರದ ಹೆಸರು "ಜಿಗ್ರಿ ದೋಸ್ತ್'....

  • ಇದು ಕಾಮನ್‌ ಮ್ಯಾನ್‌ ಮತ್ತು ರಾಯಲ್‌ ಮ್ಯಾನ್‌ ಕುರಿತಾದ ಕಥೆ... - ಹೀಗೆ ಹೇಳಿ ಹಾಗೊಂದು ಸಣ್ಣ ನಗೆ ಬೀರಿದರು ನಿರ್ದೇಶಕ ನಾಗಚಂದ್ರ. ಅವರು ಹೇಳಿದ್ದು, "ಜನ್‌ಧನ್‌'...

ಹೊಸ ಸೇರ್ಪಡೆ