ಏಪ್ರಿಲ್‌ ಫೂಲ್ !


Team Udayavani, Apr 1, 2018, 7:30 AM IST

5.jpg

ಇಂಟರ್‌ಕಾಮ್‌ ಟ್ರಿಣ್‌ಗುಟ್ಟಿತು. 
“”ತಕ್ಷಣ ಬಾ… ಅರ್ಜೆಂಟು” ಸುಬ್ಬು ಗುಡುಗಿದ. 
“”ಎಂ.ಡಿ ವಕ್ಕರಿಸ್ತಾ ಇದ್ದಾರೆ. ಮೀಟಿಂಗಿಗೆ ಮೆಟೀರಿಯಲ್‌ ರೆಡಿ ಮಾಡ್ತಿದ್ದೀನಿ. ಬರೋಕಾಗೊಲ್ಲ” ಪರಿಸ್ಥಿತಿ ವಿವರಿಸಿದೆ.
“”ನಾನೇ ನಿನ್ನ ಎಂ.ಡಿ. ! ಎದ್ದು ಬರ್ತಿಯೋ ಇಲ್ಲ ನಿನ್ನ ಹತ್ತ್ ಸಾವಿರ ಕೈಸಾಲ ಪೆಂಡಿಂಗ್‌ ಇಡಲೋ?” ಧ‌ಮಕಿ ಹಾಕಿದ ಸುಬ್ಬು , ಥೇಟ್‌ ನಕ್ಷತ್ರಿಕನಂತೆ ಕಂಡ!
“”ಸರಿಯಪ್ಪ, ಬಂದೆ” ನಿಟ್ಟುಸಿರುಬಿಟ್ಟು ನಕ್ಷತ್ರಿಕನ ಆಫೀಸಿಗೆ ಧಾವಿಸಿದೆ.
“”ಏನು ತಲೆ ಹೋಗೋ ಅಂತಾದ್ದು? ಎಂ.ಡಿಗೆ ನಿನ್ನ ಡಿಪಾರ್ಟ್‌ ಮೆಂಟಿನ ಪ್ರೊಗ್ರೇಸ್‌ ಪ್ರಸೆಂಟೇಶನ್‌ ರೆಡಿ ಮಾಡೋಲ್ಲವೆ?” 
“”ಪಳನಿಗೆ ಹೇಳಿದ್ದೀನಿ” ಸುಬ್ಬು ಉದಾಸೀನತೆಯಿಂದ ಹೇಳಿದ.

“”ಅಲ್ವೋ ಆ ಪಳನಿ ಎಡಬಿಡಂಗಿ! ಏನಾದ್ರೂ ಹೆಚ್ಚುಕಮ್ಮಿ ಮಾಡಿದ್ರೆ ನೀನು ಉಗಿಸ್ಕೋತೀಯ” ಎಚ್ಚರಿಸಿದೆ.
“”ನಾನು ಬಿಡ್ತೀನಾ? ಪಳನಿಗೆ ಉಗೀತೀನಿ” ಸುಬ್ಬು ಮಾತಿಗೆ ಅಳಬೇಕೋ ನಗಬೇಕೋ ತಿಳಿಯಲಿಲ್ಲ.
“”ನಿನ್ನ ಗುಂಡಿಗೆ ಗಟ್ಟಿ. ಅದ್ಸರಿ, ಅದೇನು ತಲೆ ಹೋಗೋ ಅಂತಾದ್ದು?” ಕೇಳಿದೆ.
“”ಡೈನಾಸಾರ್‌ಗಳು ಇನ್ನೂ ಬದ್ಕಿದಾವಾ?”
“”ಅವು ನಶಿಸಿ ಸಾವಿರಾರು ವರ್ಷಗಳಾಗಿವೆ” ಎಂದೆ. ಸುಬ್ಬು ಪ್ರಶ್ನೆ ಹುಚ್ಚುಚ್ಚಾಗಿತ್ತು!
“”ಇಲ್ಲಾ ಬದ್ಕಿದ್ದಾವೆ!”
“”ನಿನ್ನ ತಲೆ. ಏನೇನೋ ಅಸಂಬದ್ಧ ಮಾತಾಡ್ತಿದ್ದೀಯ” ಬೈದೆ.
“”ಶಾಲಿನಿ ಅಪ್ಪ-ಅಮ್ಮ, ತಮ್ಮ-ತಂಗಿ ಮತ್ತೆ ಅವರ ಕುಕ್ಕೂ ಬೆಳಿಗ್ಗೆ ಬಂದಿಳಿದರು” ಸುಬ್ಬು ಚಿಂತಾಕ್ರಾಂತನಾಗಿ ನುಡಿದ. ಶಾಲಿನಿ, ಸುಬ್ಬುವಿನ ಅರ್ಧಾಂಗಿ. 

“”ಶಾಲಿನಿಯ ಅಪ್ಪ-ಅಮ್ಮ, ತಮ್ಮ-ತಂಗಿ ಎಲ್ಲಾ ಸರಿ. ಅವರ ಕುಕ್‌ ಯಾಕೆ?”
“”ಇನ್ಯಾಕೆ? ನನ್ನ ಕುಕ್ಕೋದಕ್ಕೆ! ಮಗಳಿಗೆ ಕಷ್ಟ ಆಗುತ್ತೇಂತ!” ಸುಬ್ಬು ವಿವರಿಸಿದ. 
“”ನಾಲ್ಕು ದಿನ ಇದ್ದು ಹೋಗ್ತಾರೆ. ಅದು ಹೇಗೋ ತಲೆ ಹೋಗೋ ವಿಷಯವಾಗುತ್ತೆ?” ಅಸಹನೆಯಿಂದ ಕೇಳಿದೆ.
“”ಅಷ್ಟೇ ಆಗಿದ್ರೆ ನಾನ್ಯಾಕೆ ಯೋಚೆ° ಮಾಡ್ಲಿ? ಒಂದು ತಿಂಗಳು ಇಲ್ಲಿ ಟೆಂಟ್‌ ಹಾಕೋ ಪ್ಲ್ರಾನ್‌ ಮಾಡ್ಕೊಂಡು ಬಂದಿದ್ದಾರೆ”
“”ಇರಲಿ ಬಿಡೋ… ಹೇಗೋ ಅನುಸರಿಸಿಕೊಂಡು ಹೋದ್ರಾಯಿತು!”
“”ನನ್ನ ಇನ್‌-ಲಾಗಳ ಬಗೆಗೆ ನಿನಗೆ ಗೊತ್ತಿಲ್ಲ. ಅತ್ತೆಗೆ ಅಸ್ತಮಾ, ಮಾವಂಗೆ ಡಯಾಬಿಟೀಸು. ಮಾವಂಗೆ ಬದನೆ, ಬೆಂಡೆ, ತೊಂಡೆ-ಇಷ್ಟ. ಅತ್ತೆಗೆ ಕಷ್ಟ. ಬಾಮೈದ ಬಾಡಿ ಬಿಲ್ಡರ್‌. ಎಷ್ಟು ತಿಂದರೂ ಸಾಕಾಗೊಲ್ಲ. ನಾದಿನಿ ಮಿಸ್‌ ಯೂನಿವರ್ಸ್‌ ಕಂಟೆಸ್ಟೆಂಟು. ಇವರು ಇರೋ ಮನೆ ಆಹಾರದ ಗೋಡೌನ್‌, ಫ್ಯಾಕ್ಟರಿಯಾಗುತ್ತೆ. ಅದಕ್ಕೇ ಕುಕ್ಕನ್ನೂ ಕರ್ಕೊಂಡು ಬಂದಿರೋದು”
ಸುಬ್ಬು ಸ್ಥಿತಿ ಕಂಡು ಅಯ್ಯೋ ಎನಿಸಿತು.
“”ಸರಿ, ಈಗೇನ್ಮಾಡಬೇಕು ಅಂತಿದ್ದೀಯಾ?”

“”ಮಾವಂಗೆ ಗೆಟ್‌ಔಟ್‌ ಅಂತ ಹೇಳದೇನೆ ಆಚೆ ಅಟ್ಟಬೇಕು- ಅಂಥಾ ಐಡಿಯಾ ಕೊಡು. ನೀನು ಬರೆದದ್ದು-ಕೊರೆದದ್ದು, ಕನ್ನಡ ಉದ್ಧಾರ ಮಾಡ್ತೀನೀಂತ ಉದ್ದುದ್ದ ಎಳೆದದ್ದು ಸಾಕು, ಈ ಸಿಚುಯೇಶನ್ನಿಗೆ ಸ್ಕೆಚ್‌ ಹಾಕು. ಆಗ ಭೇಷ್‌ ಅನ್ತೀನಿ” ಕೋಪ, ವ್ಯಂಗ್ಯ, ತಿರಸ್ಕಾರ, ಅಸಹನೆಗಳನ್ನು ಒಟ್ಟಿಗೇ ಕಾರಿದ ಸುಬ್ಬು.
“”ಯೋಚೆ° ಮಾಡ್ತೀನಿ” ಎನ್ನುತ್ತ ಕುರ್ಚಿಯಿಂದ ಎದ್ದೆ.
“”ಈ ಪ್ಲಾನು ಶಾಲಿನಿಗಾಗ್ಲೀ, ನಿನ್ನ ಶ್ರೀಮತಿಗಾಗ್ಲೀ ಗೊತ್ತಾಗಲೇಬಾರ್ದು. ಶಾಲಿನಿಗೆ ಗೊತ್ತಾದ್ರೆ ನನ್ನ ಗತಿ ದೇವ್ರೇ ಗತಿ. ಏನ್ಮಾಡ್ತೀಯೋ? ಹೇಗ್ಮಾಡ್ತೀಯೋ? ನನಗೆ ಗೊತ್ತಿಲ್ಲ.”
ಎಂ.ಡಿ. ಗತ್ತಿನಲ್ಲಿ ಮಾತಾಡಿದ ಸುಬ್ಬು. ಅವನ ತಲೆನೋವನ್ನು ನನಗೆ ವರ್ಗಾಯಿಸಿ ನೆಮ್ಮದಿಯ ನಗೆ ನಕ್ಕ.
ಸುಬ್ಬು ಉಪಟಳ ನೆನ್ನೆ ಮೊನ್ನೆಯದಲ್ಲ. ಚಿಕ್ಕಂದಿನಿಂದಲೂ ಅವನ ಖಾಸಗಿ ತರಲೆ-ತಾಪತ್ರಯಗಳಿಗೆ ನನ್ನನ್ನು ಸಿಕ್ಕಿಸಿ ಹಣ್ಣುಗಾಯಿ ನೀರುಗಾಯಿ ಮಾಡುತ್ತಿದ್ದ. 
ನಾನು ವಾಪಸು ಚೆೇಂಬರಿಗೆ ಬಂದೆ, ಕಂಪ್ಯೂಟರ್‌ ಮುಂದೆ ಕೂತೆ, ಸುಬ್ಬು ಮರೆತೆ.

ಎಂ.ಡಿ.ಯ ಪ್ರೊಗ್ರೇಸ್‌ ರಿವ್ಯೂ ಮೀಟಿಂಗಿನಲ್ಲಿ ಗುಡುಗು-ಸಿಡಿಲು, ಬೈಗುಳಗಳ ಮಳೆ-ಎಲ್ಲಾ ಆಗಿದ್ದವು. ಪೂಜೆಯ ನಂತರ ಎಚ್ಚರಿಕೆ, ಡೆಡ್‌ಲೈನುಗಳ ಚರುಪೂ ಸಿಕ್ಕಿತ್ತು. ಸುಬ್ಬು ವಿಚಲಿತನಾಗಿರಲಿಲ್ಲ. ತಣ್ಣಗಿದ್ದ. ಅವನ ತಲೆಯಲ್ಲಿದ್ದುದು ಬಹುಶಃ ಒಂದೇ- ತನ್ನ ಅತ್ತೆ-ಮಾವರನ್ನು ಎತ್ತಂಗಡಿ ಮಾಡಿಸುವುದು.
ಪ್ರೊಗ್ರೇಸ್‌ ರಿವ್ಯೂ ಎನ್ನುವ ತಿಂಗಳ ಹಾರರ್‌ ಷೋ ಮುಗಿದಿತ್ತು. ಇನ್ನೊಂದು ತಿಂಗಳವರೆಗೆ ಸುಧಾರಿಸಿಕೊಳ್ಳಲು ಸಮಯ ಸಿಕ್ಕಿತ್ತು. 

ಸಂಜೆ ಆರು ಗಂಟೆ ಸಮಯ. ಡಿಪಾರ್ಟ್‌ಮೆಂಟಿನಲ್ಲಿ ಒಬ್ಬನೇ ಚಿಂತೆಸಂತೆಯಲ್ಲಿ ವ್ಯಾಪಾರ ನಡೆಸಿದ್ದೆ. ಸುಬ್ಬು ಬಂದು ನಿಂತು, ಬೆರಳಿನಲ್ಲಿ ಕಾರಿನ ಬೀಗದ ಗೊಂಚಲನ್ನು ಶ್ರೀಕೃಷ್ಣ ಸುದರ್ಶನ ಚಕ್ರ ತಿರುಗಿಸುವಂತೆ ತಿರುಗಿಸುತ್ತಿದ್ದ.
“”ತಗೋ ನಿನ್ನ ಹತ್ತು ಸಾವಿರ. ಅಂದ ಹಾಗೆ ಎಲ್ಲೀ ತನಕ ಬಂತು ನನ್ನ ಇನ್‌-ಲಾಗಳನ್ನ ಔಟ್‌-ಲಾ ಮಾಡೋ ವಿಷಯ?” ಹಣ ಕೈಗಿಡುತ್ತ ಕೇಳಿದ.

“”ಪುಣ್ಯಾತ್ಮಾ… ಎಂ.ಡಿ. ಕಾರಿನ್ನೂ ಫ್ಯಾಕ್ಟರಿ ಕಂಪೌಂಡಿಂದ ಆಚೆ ಹೋಗಿಲ್ಲ. ಸ್ವಲ್ಪ ಟೈಮ್‌ ಕೊಡಯ್ನಾ!” ಬೇಡಿದೆ.
“”ಆಯ್ತು ಇನ್ನು ಎರಡು ದಿನದಲ್ಲಿ” ಎನ್ನುತ್ತ ಸುಬ್ಬು ಹೊರಟ. ನಾನು ಕಂಗಾಲಾಗಿದ್ದೆ.
 ಮರುದಿನ ಕಾರ್ಖಾನೆಯನ್ನು ಪ್ರವೇಶಿಸಿ, ನನ್ನ ಡಿಪಾರ್ಟ್‌ ಮೆಂಟ್‌ ತಲುಪಿ, ಸ್ವಸ್ಥಾನದಲ್ಲಿ ಪ್ರತಿಷ್ಠಾಪಿತನಾಗುತ್ತಿದ್ದಂತೆ ಸುಬ್ಬು ಪ್ರಕಟವಾದ. ಚಂದಮಾಮದ ಬೇತಾಳನಂತೆ ಬೆನ್ನು ಬಿದ್ದಿದ್ದ.
“”ಸ್ಕೆಚ್ಚು ರೆಡಿಯಾಯ್ತಾ?”
“”ಇನ್ನೂ ಇಲ್ಲ” ಚುಟುಕು ಉತ್ತರ ನೀಡಿದೆ.
“”ಇನ್ನು ಇಪ್ಪತ್ನಾಲ್ಕು ಗಂಟೆ ಮಾತ್ರ ಬಾಕಿ ಇದೆ” ಎಚ್ಚರಿಸಿ ಸುಬ್ಬು ಮಾಯವಾದ.
ಮಧ್ಯಾಹ್ನದ ಊಟದ ಸಮಯದಲ್ಲಿ ಕ್ಯಾಂಟೀನಿನಲ್ಲೂ ಸುಬ್ಬು ಒಕ್ಕರಿಸಿ, ಪಕ್ಕದಲ್ಲೇ ಕುಕ್ಕರಿಸಿ, ನನ್ನತ್ತ ಕೆಕ್ಕರಿಸಿ, ಅವನ ಮನೆಯಲ್ಲಿ ಇನ್‌-ಲಾಗಳ ವೈವಿಧ್ಯಮಯ ಚಟುವಟಿಕೆಗಳನ್ನು ಬಿತ್ತರಿಸಿದ.
ಸುಬ್ಬು ಸಮಸ್ಯೆಗೆ ಏನಾದರೂ ದಾರಿ ಕಂಡೀತೆಂದು ಸಂಜೆಯವರೆಗೂ ತಿಣುಕಿದೆ. 
ಸಂಜೆ ಫ್ಯಾಕ್ಟ್ರಿ ಬಿಡುವ ಸಮಯಕ್ಕೆ ಆರ್ಕಿಮಿಡೀಸನಿಗೆ ಹೊಳೆದಂತೆ ಒಂದು ಪ್ಲಾನ್‌ ಹೊಳೆಯಿತು! ಸುಬ್ಬೂಗೆ ಫೋನಾಯಿಸಿದೆ. ಹತ್ತೇ ನಿಮಿಷದಲ್ಲಿ ಸುಬ್ಬು ಪ್ರತ್ಯಕ್ಷನಾಗಿದ್ದ.
“”ನಿನ್ನ ದುಬೈ ಹಾಲಿಡೇಯಿಂಗ್‌ ಎಲ್ಲೀ ತನಕ ಬಂತು?” ಕೇಳಿದೆ.
“”ಏಜೆಂಟು ಈ ತಿಂಗಳು ಆಗೋಲ್ಲ ಅಂದಿದ್ದಾನೆೆ, ಈಗ ಶಾಲಿನಿ ಫ್ಯಾಮಿಲಿ ಬೇರೆ ಇಲ್ಲೇ ಟೆಂಟ್‌ ಹಾಕಿದ್ದಾರೆ” ಎಂದ ಸುಬ್ಬು.
“”ನಾಡಿದ್ದೇ ಹೊರಡೋದೂಂತ ಹೇಳಿ, ಶಾಲಿನಿ-ಮಕ್ಕಳನ್ನೂ ಹೊರಡಿಸು”
“”ಯಾಕೆ?” ಸುಬ್ಬು ಅಚ್ಚರಿ ವ್ಯಕ್ತಪಡಿಸಿದ.
“”ಎಂತಾ ಪದ್ದು ಪ್ರಶ್ನೆàನೋ? ನೀನು ಸಂಸಾರಸಮೇತ ದುಬೈಗೆ. ಮನೆ ಖಾಲಿಯಾಗುತ್ತೆ. ನಿಮ್ಮ ಅತ್ತೆ-ಮಾವಾನೂ ಎತ್ತಂಗಡಿಯಾಗ್ತಾರೆ. ಮಗಳು-ಅಳಿಯ, ಮೊಮ್ಮಕ್ಕಳು ಇಲ್ಲದ ಮನೇಲಿ ಅವರು ಹೇಗಿರ್ತಾರೆ?”
ಸುಬ್ಬು ತುಸು ಯೋಚಿಸಿದ.

“”ಶಾಲಿನಿ ಒಪ್ಲೋಲ್ಲ ! ಅಪ್ಪ-ಅಮ್ಮ ಇರೋವಾಗ ಹೇಗೆ ಹೋಗೋಕಾಗುತ್ತೆ? ಟ್ರಿಪ್‌ ಮುಂದಕ್ಕೆ ಹಾಕೋಣ ಅಂದ್ರೆ?” ಅನುಮಾನ ವ್ಯಕ್ತಪಡಿಸಿದ.
“”ಪೋಸ್ಟ್‌ಪೋನ್‌ ಮಾಡೋಕಾಗೊಲ್ಲ. ಹಾಗ್ಮಾಡಿದ್ರೆ ಐದು ಲಕ್ಷ ರೂಪಾಯಿ ತಿರುಪತಿ ಹುಂಡಿಗೆ ಹಾಕಿದಂತಾಗುತ್ತೇಂತ ಹೇಳು”
“”ಅಲ್ಲಾ ಆಮೇಲೆ ದುಬೈಗೆ ಹೊರಡದೇ ಇದ್ರೆ ಶಾಲಿನಿ ಸುಮ್ನಿರ್ತಾಳ?”
“”ಫ್ಲೈಟುಗಳೆಲ್ಲಾ ಕ್ಯಾನ್ಸಲ್‌ ಆಗಿದಾವೇಂತಲೋ, ಏಜೆಂಟು ಸಮಸ್ಯೆ ಅಂತಾನೋ, ಇನ್ನೇನೋ ಆ ಸಮಯಕ್ಕೆ ಹೇಳಿದ್ರಾಯಿತು”
ಮೀನಾ- ಮೇಷ ಎಣಿಸಿ ಸುಬ್ಬು ಕೊನೆಗೆ ಒಪ್ಪಿದ. ಸುಬ್ಬು ತರಲೆ ಮುಗಿದಿದ್ದಕ್ಕೆ ಮನಸ್ಸಿಗೆ ನಿರಾಳವಾಯಿತು.
.
ಫ್ಯಾಕ್ಟ್ರಿಗೆ ಬರುವ ಹೊತ್ತಿಗೆ ತಡವಾಗಿತ್ತು.
“”ಸುಬ್ಬು ಸಾರ್‌ ಅರ್ಧ ಗಂಟೆಯಲ್ಲಿ ಹತ್ತು ಸಲ ಫೋನ್‌ ಮಾಡಿದ್ದರು. ತುಂಬಾ ಅರ್ಜೆಂಟ್‌ ಇರಬಹುದು” ನನ್ನ ಪಿಎ ಹೇಳುವಷ್ಟರಲ್ಲಿ ಸುಬ್ಬು ಇನ್ನೊಮ್ಮೆ ಫೋನ್‌ ಮಾಡಿದ್ದ. ಏನು ಗ್ರಹಚಾರವೋ ಎಂದು ಫೋನ್‌ ಎತ್ತಿದೆ.
“”ಎಲ್ಲಿ ಹಾಳಾಗಿದ್ದೆ?” ಫೋನಿನಲ್ಲೇ ಗುರುಗುಟ್ಟಿದ.
“”ಏನಾಯೊ¤à…?” ಅರ್ಥವಾಗದೆ ಆರ್ತನಾದ ಮಾಡಿದೆ!
“”ಬಂದು ಹೇಳ್ತೀನಿ. ಅಲ್ಲೇ ಬಿದ್ದಿರು. ಜಾಗ ಖಾಲಿ ಮಾಡೀಯ.ಜೋಕೆ” ಮಾತು ಜೀವ ಬೆದರಿಕೆಯಂತಿತ್ತು. ಸಿನೆಮಾ ಹೀರೋಗಳ ತರಾ ಲಾಂಗು ಹಿಡಿದು ಸುಬ್ಬು ಬರುತ್ತಿರುವಂತೆ ಭಾಸವಾಯಿತು. ಹಣೆಯಲ್ಲಿ ಸಣ್ಣಗೆ ಬೆವರ ಹನಿಗಳು ಮೂಡಿದವು.

ಐದೇ ನಿಮಿಷದಲ್ಲಿ ಸುಬ್ಬು ಹಾಜರಾದ. ಪುಣ್ಯಕ್ಕೆ ಕೈಯಲ್ಲಿ ಲಾಂಗು ಇರಲಿಲ್ಲ. ಸದ್ಯ ಬದುಕಿದೆ ಎನ್ನಿಸಿತು. ಅವನ ಮುಖ ಉರಿಯುತ್ತಿತ್ತು. ಕೈಗಳು ಬಿಗಿ ಮುಷ್ಠಿಗಳಾಗಿದ್ದವು.
“”ಏನಾಯ್ತು?” ಅರ್ಧ ಹೆದರುತ್ತಲೇ ಕೇಳಿದೆ.
“”ನಿನ್ನ ದರಿದ್ರ ದುಬೈ ಐಡಿಯಾನ ಎಲ್ಲರ ಮುಂದೆ ಅನೌನ್ಸ್‌ ಮಾಡಿ, ನೀವೇನು ಮಾಡ್ತೀರಿ ಅಂತ ಡೈನಾಸಾರಸ್‌ ಮಾವನ್ನ ಕೇಳಿದೆ”  
“”ಏನು ಹೇಳಿದ್ರು?”
“”ನೀವು ನಿರಾಂತಕವಾಗಿ ಎಷ್ಟು ಕಾಲ ಬೇಕಾದ್ರೂ ಹೋಗ್ಬನ್ನಿ. ಹೇಗೂ ನಿಮ್ಮ ಮನೆ ಕೆಲಸದವಳಿದ್ದಾಳೆ. ನಮ್ಮ ಅಡಿಗೆಯವಳಿದ್ದಾಳೆ, ಏನೂ ಯೋಚೆ° ಮಾಡ್ಬೇಡಿ. ನಿಮ್ಮ ರೇಷನ್‌ ಅಂಗಡೀನೂ ಗೊತ್ತಾಯ್ತು. ಶಾಲಿನಿ ನಿಮ್ಮ ಕ್ರೆಡಿಟ್‌ ಕಾರ್ಡು ಕೂಡ ಕೊಟ್ಟಿದಾಳೆ. ನಿರಾತಂಕವಾಗಿ ಹೋಗಿ ಬನ್ನಿ ಅಂದ್ರು”
ಸುಬ್ಬು ಉರಿಯುತ್ತಲೇ ಮುಂದುವರಿಸಿದ:  “”ಮಾವ ಮೆಗಾ ಸೀರಿಯಲ್‌ ವಿಲನ್‌ನಂತೆ ನಕ್ಕರು. ಅವರ ಜೊತೆ ನಮ್ಮತ್ತೆ, ಶಾಲಿನಿ ಮತ್ತು ಮಕ್ಕಳೂ ಸೇರಿದ್ದರು. ನಿಮ್ಮ ಟ್ರಾವೆಲ್‌ ಏಜೆಂಟ್‌ಗೆ ಫೋನ್‌ ಮಾಡಿದ್ದೆ. ಈ ತಿಂಗಳಲ್ಲಿ ಯಾವ ಟೂರೂ ಇಲ್ಲಾಂತ ಹೇಳಿದರು. ಏನು ಅಳಿಯಂದ್ರೆ? ಇವತ್ತು ಏಪ್ರಿಲ್‌ ಒಂದು! ನಮ್ಮನ್ನ ಫ‚‌ೂಲ್‌ ಮಾಡಿಬಿಟ್ರಲ್ಲ? ನಿಮ್ಮ ಹಾಸ್ಯಪ್ರಜ್ಞೆ ನನಗೆ ಹಿಡಿಸಿತು. ವಾಟ್‌ ಎ ಬ್ರಿಲಿಯಂಟ್‌ ಐಡಿಯಾ-ಎನ್ನುತ್ತ ಮತ್ತೆ ಮತ್ತೆ ನಕ್ಕರು”
ಸುಬ್ಬು ಭುಸುಗುಡುತ್ತ ಎದ್ದು ಹೋದ. ಟೇಬಲ್‌ ಮೇಲಿದ್ದ ಹೂಜಿ ನೀರನ್ನು ಖಾಲಿ ಮಾಡಿ ಢರ್ರನೆ ತೇಗಿದೆ. ನನ್ನ ಐಡಿಯಾ ಯಾಕೆ ತೋಪಾಯ್ತು ಎಂದು  ಖನ್ನನಾದೆ!

ಹತ್ತು ನಿಮಿಷದಲ್ಲಿ ಇಂಟರ್ಕಾಮಿನಲ್ಲಿ ಸುಬ್ಬು ಬಂದ.
ಇನ್ನೇನು ಕಾದಿದೆಯೋ ಎಂದು ಹೆದರಿ ಕಿವಿಗಿಟ್ಟುಕೊಂಡೆ.
“”ಏಪ್ರಿಲ್‌ ಫೂಲ್  ಮಿತ್ರಾ! ನಮ್ಮ ಮಾವನ ಗ್ಯಾಂಗು ಬೆಳಿಗ್ಗೇನೇ ಜಾಗ ಖಾಲಿ ಮಾಡಿದ್ರು. ನಿನ್ನ ಐಡಿಯಾ ಸಖತ್ತಾಗಿ ವರ್ಕ್‌ ಆಯ್ತು. ಆದ್ರೆ ನೀನೇ ಫ‌ೂಲ್‌ ಆಗಿಬಿಟೆೆr. ನಾಳೆ ಕಿವಿ ಮೇಲೆ ದಾಸವಾಳದ ಹೂ ಇಟ್ಕೊಂಡು ಬಾ” ಸುಬ್ಬು ಗಹಗಹಿಸಿ ನಕ್ಕ. 

ಎಸ್‌. ಜಿ. ಶಿವಶಂಕರ್‌

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.