ಬ್ರೆಕ್ಸಿಟ್‌ ಯುಕೆಯ ಮೀನುಗಾರರ ತಲ್ಲಣ


Team Udayavani, Sep 10, 2017, 7:30 AM IST

fisherman-758896.jpg

ಯುನೈಟೆಡ್‌ ಕಿಂಗ್‌ಡಮ್‌ (ಯುಕೆ) ಯೂರೋಪಿನ ಒಕ್ಕೂಟದ ಒಳಗೋ ಹೊರಗೋ ಆಗುವ ಪ್ರಕ್ರಿಯೆಗೆ ಚಾಲನೆ ನೀಡಿದ ಬ್ರೆಕ್ಸಿಟ್ (Brexit) ಮತದಾನ ಆಗಿ ಹದಿನಾಲ್ಕು ತಿಂಗಳು ಕಳೆದಿದೆ. ಮತದಾನಕ್ಕಿಂತ ಮೊದಲು ಪರ ಮತ್ತು ವಿರೋಧ ಪ್ರಚಾರ ಮಾಡುವ ಎರಡೂ ಕಡೆಯವರು ಸುಳ್ಳು ಹೇಳುವಲ್ಲಿ, ಜನರಲ್ಲಿ ಭಯ ಹುಟ್ಟಿಸುವಲ್ಲಿ, ದಿಕ್ಕು ತಪ್ಪಿಸುವಲ್ಲಿ ಯಾವ ದೇಶದ ರಾಜಕಾರಣಿಗಳಿಗೂ ತಾವು ಕಡಿಮೆ ಇಲ್ಲ ಎಂದೂ ತೋರಿಸಿಕೊಟ್ಟೂ ಅಷ್ಟೇ ಸಮಯ ಕಳೆದಿದೆ ! ಬ್ರಿಟನ್‌ನ ಜನರು ತಮ್ಮ ತಮ್ಮ ಅನುಭವಕ್ಕೆ ತಕ್ಕಂತೆ ಹೀಗಾದರೆ ಹೀಗಾಗುತ್ತದೆ ಎನ್ನುವ ಅಂದಾಜಿನಲ್ಲಿ ಅಥವಾ ಹೀಗಾಗಬೇಕು ಎಂಬ ಆಶಯದಲ್ಲಿ ಮತ ಹಾಕಿದರು. ಯೂರೋಪಿನ ನೆರೆಯ ದೇಶಗಳಿಂದ ಜನರು ಮುಕ್ತವಾಗಿ ದೇಶದ ಗಡಿಯೊಳಗೆ ವಲಸೆ ಬರುವುದು, ಇಲ್ಲಿ ನೆಲೆ ನಿಲ್ಲುವುದು ಮಾಮೂಲಿ ! ಎಷ್ಟು ಜನ ಬಂದರು ಹೋದರು ಎನ್ನುವ ಲೆಕ್ಕ ಬ್ರಿಟನ್‌ ಸರಕಾರಕ್ಕೆ ಇಲ್ಲದಿರುವುದರಿಂದ ಬೇಸತ್ತ ಇಲ್ಲಿನ ಅಜ್ಜ-ಅಜ್ಜಿಯಂದಿರು ಇನ್ನು ಯೂರೋಪಿನ ಜೊತೆ ಬಂಧನ ಸಾಕು ಎಂದು ಯುರೋಪ್‌ ಕೂಟದಿಂದ ವಿಚ್ಛೇದನ ಪಡೆಯುವ ಕಡೆ ಮತ ಹಾಕಿದರು. ಆಧುನಿಕ ಬ್ರಿಟನ್‌ನ ಎಳೆಯರು ಅಥವಾ ಆ ಅಜ್ಜ-ಅಜ್ಜಿಯಂದಿರ ಮೊಮ್ಮಕ್ಕಳು, “ಜಾಗತಿಕ ಮಾರುಕಟ್ಟೆಯ ಜೊತೆ ಅಂದರೆ ಯೂರೋಪಿನ ಜೊತೆಗೆ ಇರುವ’ ಎಂದರು. ಇನ್ನು ಈ ಎರಡು ತಲೆಮಾರುಗಳ ನಡುವಿನ ನಿಲುವುಗಳಲ್ಲಿ  ಕೆಲವರದು ಬ್ರಿಟನ್‌ನ  ಸಾರ್ವಭೌಮತೆಯ ಕಡೆಯಾದರೆ, ಮತ್ತೆ ಕೆಲವರದು ಜಾಗತಿಕ ಕೊಡು-ಕೊಳ್ಳುವ ವ್ಯಾಪಾರದ  ಯೂರೋಪಿಯನ್‌ ಒಕ್ಕೂಟದ ಕಡೆಗೆ. ಯುರೋಪ್‌ ಒಕ್ಕೂಟದ ಬಗ್ಗೆ ಇಲ್ಲಿನ ಜನರು ತಮ್ಮ ತಮ್ಮ ಸ್ಥಳೀಯ ಜೀವನಕ್ಕೆ  ಯಾವುದು ಪೂರಕ, ಯಾವುದು ಮಾರಕ ಎನ್ನುವುದರ ಮೇಲೆ ತೀರ್ಮಾನ ತೆಗೆದುಕೊಂಡರು. ಇಂತಹ ಮಾನಸಿಕ ಚರ್ಚೆಗಳ ಬ್ರೆಕ್ಸಿಟ್‌ ಮತದಾನದಲ್ಲಿ ಬ್ರಿಟನ್‌ ಯೂರೋಪಿನಿಂದ ಎಕ್ಸಿಟ್‌  ಆಗಬೇಕು ಎನ್ನುವ  ಫ‌ಲಿತಾಂಶ  ಬಂದದ್ದು ಈಗ ಇತಿಹಾಸ. 

1973ರಲ್ಲಿ ಒಪ್ಪಂದಗಳಿಗೆ ಸಹಿ ಹಾಕಿ ಯುರೋಪಿಯನ್‌ ಒಕ್ಕೂಟದ ಒಳಗೆ ಸೇರಿದ್ದ  ಯುಕೆ ಈಗ ಹೊರಬರಲು ಏನೇನು ಶ‌ರತ್ತುಗಳನ್ನು ವಿಧಿಸಲಾಗಿದೆ ಎಂದು ಪ್ರತಿವಾರವೂ ತನ್ನ ಪ್ರತಿನಿಧಿಗಳನ್ನು ಯೂರೋಪಿಗೆ ಕಳುಹಿಸಿ ಚರ್ಚಿಸುತ್ತಿದೆ, ಬರೇ ಚರ್ಚಿಸುತ್ತಿದೆ! ಯೂರೋಪಿನಲ್ಲಿ ಎಲ್ಲ ಯುದ್ಧಗಳೂ ದುಡ್ಡಿಗೋಸ್ಕರ ಎನ್ನುವ ಒಂದು ಮಾತಿದೆ. ಯೂರೋಪಿಯನ್‌ ಒಕ್ಕೂಟ ಮತ್ತು ಯುಕೆಯ ಮಧ್ಯದ “ಬ್ರೆಕ್ಸಿಟ್‌ ಮಾತುಕತೆ’ಯೂ ಯುಕೆಯು ಯುರೋಪ್‌ಗೆ ಎಷ್ಟು ವಿಚ್ಛೇದನ ಶುಲ್ಕ ಕೊಡಬೇಕು ಎನ್ನುವುದರ ಸುತ್ತವೇ ನಡೆಯುತ್ತಿದೆ. ಯುರೋಪ್‌ ಒಕ್ಕೂಟದ ಹುಂಡಿಗೆ ವರ್ಷಕ್ಕೆ ಬಿಲಿಯನ್‌ಗಟ್ಟಲೆ ಯೂರೋ ಹಣಕೊಡುತ್ತಿದ್ದ ಯುಕೆಯು ಹೀಗೆ ಬಿಟ್ಟು ಹೋಗುತ್ತಿರುವುದು ಯುರೋಪಿಯನ್‌ ಒಕ್ಕೂಟಕ್ಕೆ ಆಘಾತವನ್ನು ಉಂಟುಮಾಡಿದೆ. ಮತ್ತೆ ಜರ್ಮನಿ ಮತ್ತು ಬ್ರಿಟನ್‌ ಮಧ್ಯದ ಹಳೆಯ ಮನಸ್ತಾಪಗಳನ್ನೂ ಮೆಲಕು ಹಾಕುವಂತೆ ಮಾಡಿದೆ. “ನೂರು ಬಿಲಿಯನ್‌ ಜುರ್ಮಾನ  ತುಂಬಿ ಎಲ್ಲಿ ಬೇಕಾದರೂ ಹೋಗು’ ಎಂದು ಮುನಿಸಿಕೊಂಡು ಯುರೋಪಿಯನ್‌ ಒಕ್ಕೂಟ ಬ್ರಿಟನ್‌ಗೆ  ಹೇಳಿದೆ. ಇದು ದಿನ ವಾರ ತಿಂಗಳೊಳಗೆ ಮುಗಿಯುವ ಸಂಧಾನದ ವಾದ ಅಲ್ಲ.

ಬ್ರೆಕ್ಸಿಟ್‌ನಿಂದ  ಬ್ರಿಟನ್‌ಗೆ ಲಾಭ ಆದೀತೋ ಅಲ್ಲ  ಯುರೋಪ್‌ಗೊà ಅಥವಾ ಇಬ್ಬರಿಗೂ ಇಲ್ಲವೋ ಅಥವಾ, ಭಾರತಕ್ಕೆ ಇದರಲ್ಲಿ ಹೊಸ ಅವಕಾಶ  ಇದೆಯೋ ಮತ್ತು ಜಗತ್ತಿನ ವ್ಯಾಪಾರದ ಮೇಲೆ ಬ್ರೆಕ್ಸಿಟ್‌ನ  ಪರಿಣಾಮ ಏನಿರಬಹುದು ಇವೆಲ್ಲವನ್ನೂ ಸರಿಯಾಗಿ ತಿಳಿದವರು ಒಬ್ಬರೂ ಇಲ್ಲ, ಮಾತುಕತೆ ಮುಗಿಯುವುದು ಯಾವಾಗ, ವಿಚ್ಛೇದನ ಹೇಗೆ ಕಾರ್ಯರೂಪಕ್ಕೆ ಬಂದೀತು, ವಿಯೋಗದ ನಂತರ ಸುಯೋಗ ಬರಬಹುದಾ ಎನ್ನುವುದೆಲ್ಲ ಅಜ್ಞಾತ ವಿಷಯಗಳೇ! 

ಬ್ರೆಕ್ಸಿಟ್‌ ಮತದಾನದಲ್ಲಿ  ಯುರೋಪಿಯನ್‌ ಒಕ್ಕೂಟದಿಂದ ಯುಕೆಯು “ಹೊರಬರಬೇಕು’ ಎಂಬ ನಿಲುವಿಗೆ ಪರವಾಗಿ ಬಿದ್ದ ಮತಗಳು 52%, ಯುಕೆಯು ಯುರೋಪಿಯನ್‌ ಯೂನಿಯನ್‌ನ “ಒಳಗೇ ಇರಬೇಕು’ ಎಂದು ಬಯಸಿದವರು 48% ಜನರು. ಬೇಕು ಮತ್ತು ಬೇಡಗಳ ನಡುವಿನ ವ್ಯತ್ಯಾಸ ಅತಿ ಸಣ್ಣದಾದರೂ  ಪ್ರಜಾಪ್ರಭುತ್ವದ ತತ್ವದ ನೆಲೆಯಲ್ಲಿ ನಿಂತು ನೋಡಿದರೆ ಬ್ರೆಕ್ಸಿಟ್‌ ಆಗಬೇಕಾದದ್ದು ಸರಿ. ಆದರೆ ಸೋಲು-ಗೆಲುವುಗಳ ನಡುವಿನ ಇಂತಹ ಕಿರುವ್ಯತ್ಯಾಸವು ಬ್ರೆಕ್ಸಿಟ್‌ ಪರ ಮತ್ತು ವಿರೋಧದವರು ಸುಮಾರು ಒಂದೇ ಸಂಖ್ಯೆಯಲ್ಲಿ ಇ¨ªಾರೆ ಎಂದು ಹೇಳುತ್ತಿದೆ. ಬ್ರಿಟನ್ನಿನ ಯಾವುದೇ ಸಾಮಾಜಿಕ, ಔದ್ಯೋಗಿಕ ಅಥವಾ ಆರ್ಥಿಕ ಮಜಲುಗಳ ಒಳ ಹೊಕ್ಕು ನೋಡಿದರೂ ಪರ-ವಿರೋಧದ ಅಭಿಪ್ರಾಯಗಳು ಸಮ ಸಮವಾಗಿ ಇವೆ ಎಂದು ತಿಳಿದು ಬಂದಿದೆ.  ಆದರೆ ಇÇÉೊಂದು ವರ್ಗ ಮಾತ್ರ  ಬ್ರೆಕ್ಸಿಟ್‌ ಆಗಲೇಬೇಕೆಂದು ನಿಷ್ಠುರವಾಗಿ ಹೇಳುತ್ತಲೇ ಇದೆ ! ಅವರೇ  ಬ್ರಿಟನ್‌ನ ಮೀನುಗಾರರು!

ಬ್ರೆಕ್ಸಿಟ್‌ ಆಗಲೇಬೇಕೆಂದು ಮತ ಹಾಕಿದ 52%  ವಿಭಾಗದೊಳಗೆ ಇವರು, ಯುಕೆಯು ಯುರೋಪಿನಿಂದ ಹೊರ ಬರಲೇಬೇಕೆಂದು ಉತ್ಕಟವಾಗಿ ಬಯಸಿದವರು. ಬ್ರಿಟನ್ನಿನ ಬರಿಯ ಮೀನುಗಾರ ವೃತ್ತಿಯ ಜನರನ್ನು ಮಾತ್ರ ಗಣನೆಗೆ ತೆಗೆದುಕೊಂಡರೆ,  92% ಮತಗಳು  ಬ್ರೆಕ್ಸಿಟ್‌ ಆಗಬೇಕೆನ್ನುವ ಎನ್ನುವ  ಕಡೆ ಇದ್ದವು. ಬ್ರಿಟನ್ನಿನ ಇತರ ಎಲ್ಲ ಜನರಿಗೆ ಸಂಕೀರ್ಣ ಎನಿಸಿದ, ಗೋಜಲು ಎಂದು ಕಂಡ ಒಂದು ಮಹತ್ವದ ನಿರ್ಣಯದ ಬಗ್ಗೆ,  ಇಲ್ಲಿನ ಮೀನುಗಾರರು ಮಾತ್ರ ಸ್ಪಷ್ಟವಾದ ಕಲ್ಪನೆಯಲ್ಲಿ ಒಮ್ಮತದಲ್ಲಿ  ಇದ್ದರು.   

ಬ್ರಿಟನ್‌ ಯೂರೋಪಿನ ಒಕ್ಕೂಟದೊಳಗೆ ಸೇರಿದ ಕಾಲದಿಂದ ಬ್ರಿಟನ್ನಿನ ತೀರದಿಂದ 200 ಮೈಲುವರೆಗಿನ ಸಮುದ್ರವನ್ನು    ಯೂರೋಪಿನ ದೇಶಗಳ ಮೀನುಗಾರರ ಜೊತೆಗೆ ಸಮಾನವಾಗಿ ಹಂಚಿಕೊಳ್ಳಬೇಕಾಯಿತು. ಸಹಜವಾಗಿ ಬ್ರಿಟಿಶ್‌ ಮೀನುಗಾರರಿಗೆ  ಸಿಗುವ ಮೀನುಗಳ ಪಾಲು ಕಡಿಮೆ ಆಯಿತು. ಶತಮಾನಗಳಿಂದ ಮೀನುಗಾರಿಕೆ ಮಾಡುತ್ತ ಬಂದ ಬಂದರುಗಳು ಬಂಜರಾಗಿ ಮುಚ್ಚಬೇಕಾಯಿತು. ತೀರದಿಂದ ಬರಿಯ 12 ಮೈಲು ವ್ಯಾಪ್ತಿಯೊಳಗೆ  ನಡೆಯುವ ಸಣ್ಣ  ಮೀನುಗಾರಿಕೆಯಲ್ಲೂ ಫ್ರಾನ್ಸ್‌, ಸ್ಪೆಯಿನ್‌ ದೇಶಗಳ  ಮೀನುಗಾರರ ಜೊತೆ ಸ್ಪರ್ಧಿಸುವ  ಪರಿಸ್ಥಿತಿ ಬಂತು. 

ಯುಕೆಯು ಯೂರೋಪಿನ ಕೂಟದ ಒಳಗೇ   ಇರಬೇಕೆಂದು  ವಾದಿಸುವವರು, ಬ್ರಿಟನ್ನಿನ ಕಾರ್ಮಿಕ ಕೆಲಸಗಳಿಗೆ ಯುರೋಪಿನಿಂದ ಸುಲಭವಾಗಿ ದೊರೆಯುವ ಜನಶಕ್ತಿ, ಯುರೋಪ್‌ ಮತ್ತು ಯುಕೆಯ ನಡುವೆ ಗಡಿಯಿಲ್ಲದ ತಡೆರಹಿತ   ವ್ಯಾಪಾರ ವ್ಯವಹಾರಗಳನ್ನೇ ಸಮರ್ಥನೆಯಾಗಿ ಬಳಸುತ್ತಾರೆ. ಇಂತಹ ಸಮರ್ಥನೆಗಳನ್ನು ಯುಕೆ ಮತ್ತು ಯುರೋಪ್‌ನ  ನಾಯಕರು ಒಪ್ಪಿದರೂ, ಮೀನುಗಾರರು ಮಾತ್ರ ಸಂಘಟಿತರಾಗಿ ಈ ಅಭಿಮತವನ್ನು ವಿರೋಧಿಸುತ್ತ ಬಂದಿ¨ªಾರೆ. 

ಬ್ರೆಕ್ಸಿಟ್‌ ಆಯ್ಕೆ ತಮ್ಮೆದುರು ಬರುವ ಬಹಳ ಮೊದಲೇ ಮೀನುಗಾರರ ನಿಯೋಗ ಯುಕೆಯ ಪರಿಸರ ಇಲಾಖೆಯ ಮಂತ್ರಿಗಳ ಬಳಿ ಹೋಗಿ ಬ್ರಿಟನ್‌ನ ಸುತ್ತಲಿನ ಸಮುದ್ರ ತೀರವನ್ನು ಪೂರ್ಣವಾಗಿ ತಮ್ಮ ದೇಶದ ಮೀನುಗಾರಿಕೆಗೆ ಮಾತ್ರ  ಸಲ್ಲಬೇಕು ಎಂದು  ಬೇಡಿಕೆ ಇಟ್ಟಿತ್ತು. ಮೀನುಗಾರಿಕೆ ಯುಕೆಯ ಬೊಕ್ಕಸಕ್ಕೆ  ಅಲಕ್ಷಿಸುವಷ್ಟು ಸಣ್ಣ ಆದಾಯವನ್ನು ತರುತ್ತದೆ; ಮೀನುಗಾರಿಕೆಗಿಂತ ಬಿಸ್ಕತ್‌ ತಯಾರಿಯ ಉತ್ಪಾದನೆಯಲ್ಲಿ ದೇಶದ  ಜಿಡಿಪಿಗೆ ಹೆಚ್ಚು ಕೊಡುಗೆ ಇದೆ ಎಂದು ಪರಿಸರ ಮಂತ್ರಿಗಳು ಅಂದು  ತಮಾಷೆ ಮಾಡಿದ್ದರಂತೆ ! ದಶಕಗಳ ತಮ್ಮ  ಹತಾಶೆಯನ್ನು ಕೊನೆಗೊಳಿಸುವ ಅವಕಾಶವನ್ನು ಬ್ರೆಕ್ಸಿಟ್‌ ಆಯ್ಕೆ ಒದಗಿಸಿದಾಗ ಮೀನುಗಾರರ ಉದ್ಯಮ ಒಟ್ಟಾಗಿ ಯುರೋಪ್‌ ಒಕ್ಕೂಟದಿಂದ ಹೊರನಡೆಯುವ ಕಡೆಗೆ ಮತ ಹಾಕಿದರು. “ನಮ್ಮ ನೀರನ್ನು ನಾವೇ ನಿಯಂತ್ರಿಸುವ’ ಎಂದರು. 

ಯುನೈಟೆಡ್‌ ಕಿಂಗ್‌ಡಮ್‌ನ ಮೀನುಗಾರರನ್ನು ಖುಷಿಪಡಿಸಬಲ್ಲ , ಆದರೆ ಇಲ್ಲಿನ ಅದೆಷ್ಟೋ ವ್ಯಾಪಾರಿಗಳನ್ನು, ಉದ್ಯಮಿಗಳನ್ನು ಚಿಂತೆಗೆ ಗುರಿಮಾಡಬಲ್ಲ ಬ್ರೆಕ್ಸಿಟ್‌ ಸದ್ಯಕ್ಕೆ ವಿಚ್ಛೇದನದ ಕರಾರುಗಳ ತೂಗುಯ್ನಾಲೆಯಲ್ಲಿ ಇದೆ. ವಿಚ್ಛೇದನದ ಶರತ್ತುಗಳು ಇನ್ನೆರಡು ವರ್ಷಗಳಲ್ಲಿ  ತೀರ್ಮಾನವಾಗಿ ಹೊಸ ವ್ಯಾವಹಾರಿಕ ಸಂಬಂಧದ ರೀತಿ-ನೀತಿಗಳು ಬರೆಯಲ್ಪಡಬೇಕು ಎನ್ನುವ ಆಶಯ ಇದ್ದರೂ, ಅತ್ಯಂತ ಸಂಕೀರ್ಣವಾದ ಯುರೋಪಿ ಯನ್‌ ಒಕ್ಕೂಟ ವ್ಯವಸ್ಥೆಯ ಒಳಗೆ ಇದು ಕಾರ್ಯರೂಪಕ್ಕೆ ಬರುವ ಭರವಸೆ ಕಾಣಿಸುವುದಿಲ್ಲ. ದುಡ್ಡಿಗಾಗಿಯೇ ನಡೆಯುವ ವ್ಯವಹಾರಗಳ ಆಧಾರದÇÉೇ ಬೆಸೆಯುವ ಮತ್ತು ಮುರಿಯುವ ಸಂಬಂಧಗಳ ಈ ಯುಗದಲ್ಲಿ  ಯುಕೆಯ ಮೀನುಗಾರರ ಭರವಸೆ  ಕ್ಷೀಣವಾಗಿದೆ, ಆದರೆ ಹಾರೈಕೆ ಮಾತ್ರ ದೃಢವಾಗಿದೆ.

– ಯೋಗೀಂದ್ರ ಮರವಂತೆ ಬ್ರಿಸ್ಟಲ್‌, ಇಂಗ್ಲೆಂಡ್‌

ಟಾಪ್ ನ್ಯೂಸ್

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.