Udayavni Special

ಅಮೆರಿಕದ ಆ ಮಹಾನಗರ 


Team Udayavani, Dec 9, 2018, 6:00 AM IST

new-york-skyline.jpg

ಊರಿಗೆ ಬಂದವರೆಲ್ಲ ನೀರಿಗೆ ಬರದೇ ಹೋಗಬಹುದು, ಆದರೆ ಅಮೆರಿಕಕ್ಕೆ ಹೋಗುವವರು ನ್ಯೂಯಾರ್ಕ್‌ ನೋಡಲು ಹೋಗದೇ ಇರಲಾರರು. ನಾಲ್ಕು ದಿನ ನಮ್ಮ ದೇಶದ ಮುಂಬೈಯನ್ನು ಹೋಲುವ ಅಮೆರಿಕದ ನ್ಯೂಯಾರ್ಕ್‌ ನಗರವನ್ನು ಸುತ್ತಿ ಬರೋಣ ಎಂದು ನಾದಿನಿ ಸುಪ್ರೀತಾ ಆಹ್ವಾನಿಸಿದಾಗ ಕುಟುಂಬ ಸಮೇತ ನವಾರ್ಕ್‌ ವಿಮಾನ ನಿಲ್ದಾಣದಲ್ಲಿ ಇಳಿದಾಗ ಆಗಲೇ ಅಕ್ಟೋಬರ್‌ ತಿಂಗಳ ಚಳಿ ಮೈ ರಾಚುತ್ತಿತ್ತು. 

ಜಗತ್ತಿನ “ಗ್ಲೋಬಲ್‌ ಸಿಟಿ’ಗಳಲ್ಲಿ ಇದು ಅಗ್ರಗಣ್ಯ ನಗರ. ಅಮೇರಿಕ ದೇಶದ ನ್ಯೂಯಾರ್ಕ್‌ ರಾಜ್ಯದ ಪ್ರಮುಖ ನಗರವಾದ ಇದರಲ್ಲಿ ಬ್ರೂಕ್‌ ಲಿನ್‌,  ಮ್ಯಾನ್‌ಹಟನ್‌,  ಕ್ವೀನ್ಸ್‌,  ಬ್ರಾಂಕ್ಸ್‌ ಮತ್ತು  ಸ್ಟೇಟನ್‌ ಐಲ್ಯಾಂಡ್‌ ಎಂಬ ಐದು ಉಪನಗರಗಳಿವೆ. ಅಮೆರಿಕದ ಅತ್ಯಂತ ಜನನಿಬಿಡ ನಗರ ಈ ನ್ಯೂಯಾರ್ಕ್‌. ಜಗತ್ತಿನ ಸಾಂಸ್ಕೃತಿಕ ಮತ್ತು ಆರ್ಥಿಕ ರಾಜಧಾನಿಯಾದ ಈ ನಗರ  ವಿಶ್ವ ವ್ಯಾಪಾರ, ಹಣಕಾಸು, ಕಲೆ, ಶಿಕ್ಷಣ ಹಾಗೂ ಮನರಂಜನೆ ‌ ಕ್ಷೇತ್ರಗಳಲ್ಲಿ ಜಗತ್ತಿಗೇ ಕಳಸಪ್ರಾಯವಾಗಿದೆ. 

ಅಮೆರಿಕದ ಬಹುತೇಕ ನಗರಗಳಂತೆಯೇ ನ್ಯೂಯಾರ್ಕ್‌ ಕೂಡ ಈಸ್ಟ್‌ ರಿವರ್‌ನ ದಂಡೆಯ ಮೇಲಿದೆ. ಇದು ಅಟ್ಲಾಂಟಿಕ್‌ ಸಾಗರದ ಅಳಿವೆಯಾದ್ದರಿಂದ ಉಪ್ಪುನೀರಿನ ಸರೋವರವಾಗಿ ನ್ಯೂಯಾರ್ಕ್‌ ಸಮೀಪ ಕಾಣುತ್ತದೆ. ಈ ಅಳಿವೆಯ ಮೂಲಕವಾಗಿಯೇ ಅಮೆರಿಕಕ್ಕೆ ವಿವಿಧ ದೇಶಗಳ ನಿವಾಸಿಗಳು ವಲಸೆ ಬಂದು ಸ್ಥಳವನ್ನು ಆಕ್ರಮಿಸಿದರು. ಮುಂಬಯಿ ಭಾರತದ ವಾಣಿಜ್ಯ ರಾಜಧಾನಿಯಾಗಿರುವಂತೆ ನ್ಯೂಯಾರ್ಕ್‌ ಅಮೆರಿಕದ ವಾಣಿಜ್ಯ ರಾಜಧಾನಿ. ಮುಂಬಯಿ ವಲಸೆಗಾರರ ಸ್ವರ್ಗ. ಶ್ರಮಪಟ್ಟು ಜೀವಿಸಲು ಬಯಸುವ ಎಲ್ಲರಿಗೂ ಅಲ್ಲಿ ಅವಕಾಶಗಳಿವೆ. ದಿನವಿಡೀ ಗಿಜಿಗುಡುತ್ತಿರುತ್ತದೆ, ರಾತ್ರಿಯಿಡೀ ನಿದ್ರಿಸದು. ಈ ಎಲ್ಲ ಲಕ್ಷಣಗಳೂ ನ್ಯೂಯಾರ್ಕ್‌ ಗೆ ಅನ್ವಯಿಸುತ್ತದೆ. ತಮ್ಮ ಪ್ರಧಾನ ಕಚೇರಿಯನ್ನು ಹೊಂದಿರುವ ಅನೇಕ ಚಿಕ್ಕ-ದೊಡ್ಡ ವಾಣಿಜ್ಯ ಕಂಪೆನಿಗಳು, ಭಾರತೀಯರು ಮತ್ತು ಚೀನೀಯರು ಇಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ.

ವಿಶ್ವಸಂಸ್ಥೆಯ ಕೇಂದ್ರ ಸ್ಥಾನವೂ ಇದೇ ನಗರ. ಹಡ್ಸನ್‌ ಮತ್ತು ಈಸ್ಟ್‌ ನದಿಗಳು ಅಟ್ಲಾಂಟಿಕ್‌ ಸಾಗರವನ್ನು ಸೇರುವ ಮುಖಜ ಭೂಮಿಯಲ್ಲಿ ಹರಡಿಕೊಂಡಿರುವ ಈ ನಗರ ಜಗತ್ತಿನ ಅತಿ ದೊಡ್ಡ ನೈಸರ್ಗಿಕ ಬಂದರು ಕೂಡ ಹೌದು. ವಿಶ್ವದ ನಾನಾ ಭಾಗಗಳ ಜನರು ನೆಲೆಸಿರುವ  ಈ ನಗರದಲ್ಲಿ ಸರಿಸುಮಾರು 800 ಭಾಷೆಗಳನ್ನು ಮಾತನಾಡುವ ಜನರು ಇದ್ದಾರಂತೆ!  ಕ್ರಿ. ಶ. 1624ರಲ್ಲಿ  ಸ್ಥಾಪಿತವಾದ ಈ ನಗರ ಯೂರೋಪಿನ ವ್ಯಾಪಾರಿಗಳ/ ವಲಸೆಗಾರರ ಪ್ರಥಮ ಆಕರ್ಷಣೆಯಾಗಿತ್ತು. ಈ ಸಿಟಿ ಜಗತ್ತಿನಾದ್ಯಂತ ಎಂತಹ ಮಾಯಾಜಾಲ ಹರಡಿದೆಯೆಂದರೆ- ಇದರ ಹಲವಾರು ಕಟ್ಟಡಗಳ ಮತ್ತು ಸ್ಮಾರಕಗಳ ಹೆಸರುಗಳು ಜನರಿಗೆ ಗೊತ್ತಿಲ್ಲೋ ಗೊತ್ತಿಲ್ಲದೆಯೋ ವಿಶ್ವಾದ್ಯಂತ ವ್ಯಾಪಕವಾಗಿ ಬಳಕೆಯಾಗುತ್ತಿವೆ. ನ್ಯೂಯಾರ್ಕ್‌ ನಗರದ ಸಬ್‌ವೇಗಳಂತೂ ಜಗತ್ತಿನಲ್ಲೇ ಅತ್ಯಂತ ವಿಸ್ತಾರವಾದ ಜಾಲ ಹೊಂದಿದ “ಮೆಟ್ರೋ ಸಿಸ್ಟಮ್‌’ ಆಗಿದೆ.

ಸ್ವಾತಂತ್ರ್ಯದೇವತೆ (ಸ್ಟ್ಯಾಚ್ಯು ಆಫ್ ಲಿಬರ್ಟಿ)
ಸ್ಟ್ಯಾಚೂÂ ಆಫ್ ಲಿಬರ್ಟಿ ಪ್ರತಿಮೆಯು ಅಮೆರಿಕದ ಅಪರೂಪದ ಸ್ಮಾರಕ. ಇದನ್ನು ವಿಶ್ವದ ಜ್ಞಾನೋದಯದ ಸಂಕೇತವೆಂದೂ ಪರಿಗಣಿಸಲಾಗುತ್ತದೆ. ನ್ಯೂಯಾರ್ಕ್‌ ನ ಪ್ರಮುಖ ಆಕರ್ಷಣೆ ಸ್ಟಾಚ್ಯು ಆಫ್ ಲಿಬರ್ಟಿ ಅಥವಾ ಸ್ವಾತಂತ್ರ್ಯ ದೇವಿಯ ಪ್ರತಿಮೆ. ಇವಳನ್ನು ನೋಡಲು ಫೆರಿ (ಹಡಗು)ಯಲ್ಲಿ ಪಯಣ ಬೆಳೆಸಬೇಕು. ಸುತ್ತಲೂ ನೀರು ನಡುಗಡ್ಡೆಯಲ್ಲಿರುವ ಅವಳನ್ನು ನೋಡಲು ಪ್ರತಿದಿನವೂ ಸಾವಿರಾರು ಜನ ಜಮಾಯಿಸುತ್ತಾರೆ. ಅಮೆರಿಕ ಸಂಯುಕ್ತ ಸಂಸ್ಥಾನದ ಸ್ವಾತಂತ್ರ್ಯ ಘೋಷಣೆಯ ಶತಮಾನೋತ್ಸವದ ಅಂಗವಾಗಿ, 1886ರ ಅಕ್ಟೋಬರ್‌ 28ರಂದು ಈ ಪ್ರತಿಮೆ ಅನಾವರಣಗೊಂಡಿತು. 151 ಅಡಿಗಳಷ್ಟು ಎತ್ತರ ಇರುವ ಈ ಪ್ರತಿಮೆ ತಳಪಾಯ ಮತ್ತು ಪೀಠಗಳು ಸೇರಿ ಒಟ್ಟು ಎತ್ತರ 305 ಅಡಿಗಳಷ್ಟು ಎತ್ತರವಿದೆ.  ಫ್ರಾನ್ಸ್‌ ದೇಶದ ಜನರು ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಸ್ನೇಹಪೂರ್ವಕವಾಗಿ ಈ ಪ್ರತಿಮೆಯನ್ನು ನೀಡಿದ್ದರು. ಅಮೆರಿಕನ್‌ ಕ್ರಾಂತಿ ಸಂದರ್ಭದಲ್ಲಿ ಇವೆರಡೂ ದೇಶಗಳ ನಡುವೆ ಸ್ನೇಹವೇರ್ಪಟ್ಟಿತ್ತು. “ಸ್ಟೊಲಾ’ ಎಂಬ ಹೊಳಪಿನ ಕಿರೀಟ ಮತ್ತು ಪಾದರಕ್ಷೆ ಧರಿಸಿ, ಮುರಿದುಹೋದ ಸರಪಳಿಯನ್ನು ಮೆಟ್ಟಿ, ಬಲಗೈಯಲ್ಲಿ ಪಂಜು ಹಾಗೂ ಸ್ವಾತಂತ್ರ್ಯ 4 JULY 1776 ಎಂದು ಕೆತ್ತಲಾದ ಫ‌ಲಕವನ್ನು ಎಡಗೈಯಲ್ಲಿ ಹಿಡಿದು ನಿಂತ ಮಹಿಳೆಯೊಬ್ಬಳನ್ನು ಪ್ರತಿನಿಧಿಸುವ ಕೆತ್ತನೆ ಕಲಾಕೃತಿ ಇದಾಗಿದೆ.  ಫ್ರೆಡೆರಿಕ್‌ ಆಗಸ್ಟ್‌ ಬಾತೊìಲ್ಡಿ ಈ ಪ್ರತಿಮೆಯ ಶಿಲ್ಪಿ. ಮೌರಿಸ್‌ ಕೋಚಿÉನ್‌ ಎಂಬಾತ ಪ್ರತಿಮೆಯ ಆಂತರಿಕ ವಿನ್ಯಾಸಕಾರ. 

9/11ರ ಭಯೋತ್ಪಾದಕ ದಾಳಿಯ ನಂತರ ಅದರ ಮೇಲೆ ಹತ್ತುವುದನ್ನು ನಿರ್ಬಂಧಿಸಲಾಗಿತ್ತು. ಉಗ್ರರ ದಾಳಿಯ ಬಿಸಿ ಕಡಿಮೆಯಾದ ನಂತರ ಪ್ರತಿಮೆ ಹತ್ತುವುದಕ್ಕೆ ಅವಕಾಶ ನೀಡಲಾಗಿತ್ತು. ಈಗ ಹೊಸ ಏಣಿ ಮತ್ತು ಎಲಿವೇಟರ್‌ಗಳನ್ನು ಕೂಡ ಅಳವಡಿಸಲಾಗಿದೆ. 
ಅಲ್ಲಿಂದ ನಮ್ಮ ಪ್ರಯಾಣ ಟ್ರೈಮ್ಸ್‌ ಸ್ಕ್ವೇರ್‌ ಕಡೆಗೆ ಸಾಗಿತು.

– ಜಮುನಾರಾಣಿ ಎಚ್‌. ಎಸ್‌.

ಟಾಪ್ ನ್ಯೂಸ್

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

ಕಾರ್ಕಳದ ಹೆಬ್ಟಾಗಿಲಲ್ಲೇ ಅಭದ್ರತೆ; ಬೇಕಿದೆ ಪೊಲೀಸ್‌ ಹೊರ ಠಾಣೆ

ಕಾರ್ಕಳದ ಹೆಬ್ಟಾಗಿಲಲ್ಲೇ ಅಭದ್ರತೆ; ಬೇಕಿದೆ ಪೊಲೀಸ್‌ ಹೊರ ಠಾಣೆ

ಸ್ಕ್ಯಾನ್ ಆಗುತ್ತಿಲ್ಲ ತ್ಯಾಜ್ಯ ಸಂಗ್ರಹ ಕ್ಯೂಆರ್‌ ಕೋಡ್‌ !

ಸ್ಕ್ಯಾನ್ ಆಗುತ್ತಿಲ್ಲ ತ್ಯಾಜ್ಯ ಸಂಗ್ರಹ ಕ್ಯೂಆರ್‌ ಕೋಡ್‌ !

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಆಸ್ಟ್ರೇಲಿಯದ ಮೇಲೂ ಸವಾರಿ ಮಾಡಿದ ಭಾರತ

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

“ಉತ್ತರ’ದಲ್ಲಿ ಪ್ರವಾಹ ಪ್ರಯಾಸ  : ಇದುವರೆಗೆ 52 ಮಂದಿ ಸಾವು, ಐವರು ಕಣ್ಮರೆ

ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!

ಭಾರತದಲ್ಲಿ ಡ್ರೈವರ್‌ಲೆಸ್‌ ಬೈಕ್‌?!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagada-swasthya

ಮತ್ತೆ ಮರಳಲಿ ಜಗದ ಸ್ವಾಸ್ಥ್ಯ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ  ಸ್ಮತಿ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ ಸ್ಮತಿ

Suryana-neralu

ಸೂರ್ಯನ ನೆರಳು

ಚಿತ್ರೋತ್ಸವದಲ್ಲಿ ಮೌನದ ಮಾತು

ಚಿತ್ರೋತ್ಸವದಲ್ಲಿ ಮೌನದ ಮಾತು

ಕತೆ: ಸಹಯಾತ್ರಿ

ಕತೆ: ಸಹಯಾತ್ರಿ

MUST WATCH

udayavani youtube

ಗೂಟಿ ಕೃಷಿ ( air layering ) ಮಾಡುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ

udayavani youtube

ಭಾರತ – ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು

udayavani youtube

‘ಅಂಬಾರಿ’ಯಲ್ಲಿ ಕುಳಿತು ಅರಮನೆ ನಗರಿ ನೋಡಿ

udayavani youtube

ಹುಣಸೂರು : ಟಿಬೆಟ್ ಕ್ಯಾಂಪ್ ನೊಳಗೆ ನುಗ್ಗಿ ದಾಂದಲೆ ನಡೆಸಿದ ಒಂಟಿ ಸಲಗ

udayavani youtube

ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ 2500ರೂ : ದುಬಾರಿ ಬಾಡಿಗೆಗೆ ಬೇಸತ್ತ ರೈತರು

ಹೊಸ ಸೇರ್ಪಡೆ

ಎಸ್ಸಿ, ಎಸ್ಟಿ ಸಮುದಾಯದವರಿಗೆ ಭೂ ಒಡೆತನ

ಎಸ್ಸಿ, ಎಸ್ಟಿ ಸಮುದಾಯದವರಿಗೆ ಭೂ ಒಡೆತನ

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

ತಂಬಾಕು ಮುಕ್ತ ಹಳ್ಳಿಗೆ ಜಿಲ್ಲೆಯ 3 ಪ್ರದೇಶ ಗುರುತು

ಪಂಚಾಯತ್‌ನಲ್ಲೇ ಎಲ್ಲ 63 ಅರ್ಜಿ ನಮೂನೆಯ ಹೆಲ್ಪ್ ಡೆಸ್ಕ್

ಪಂಚಾಯತ್‌ನಲ್ಲೇ ಎಲ್ಲ 63 ಅರ್ಜಿ ನಮೂನೆಯ ಹೆಲ್ಪ್ ಡೆಸ್ಕ್

ಸಿಂದಗಿಯಲ್ಲಿ ಯಡಿಯೂರಪ್ಪ ಪ್ರಚಾರ ಆರಂಭ

ಸಿಂದಗಿಯಲ್ಲಿ ಯಡಿಯೂರಪ್ಪ ಪ್ರಚಾರ ಆರಂಭ

ಕಾರ್ಕಳದ ಹೆಬ್ಟಾಗಿಲಲ್ಲೇ ಅಭದ್ರತೆ; ಬೇಕಿದೆ ಪೊಲೀಸ್‌ ಹೊರ ಠಾಣೆ

ಕಾರ್ಕಳದ ಹೆಬ್ಟಾಗಿಲಲ್ಲೇ ಅಭದ್ರತೆ; ಬೇಕಿದೆ ಪೊಲೀಸ್‌ ಹೊರ ಠಾಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.