ಇನಾಫಿ, ಫ‌ನೇಕ್‌, ಫೊಟ್ಲೋಯ್‌

ಮಣಿಪುರದ ಮಹಿಳೆಯರ ಸಾಂಪ್ರದಾಯಿಕ ಉಡುಗೆ

Team Udayavani, Sep 20, 2019, 4:48 AM IST

ಮಣಿಪುರದ ಮಹಿಳೆಯರ ಸಾಂಪ್ರದಾಯಿಕ ಉಡುಗೆಯ ವೈಶಿಷ್ಟéವೆಂದರೆ ಹಲವು ಗಾಢರಂಗಿನ ವೈವಿಧ್ಯಮಯ ಹಲವು ಬುಡಕಟ್ಟು ಪಂಗಡಗಳ ಉಡುಗೆಗಳ ಆಗರ!
ಈ ಕೆಳಗೆ ಹಲವು ಬಗೆಯ ಮಣಿಪುರದ ಮಹಿಳೆಯರ ಉಡುಗೆ-ತೊಡುಗೆಗಳ ಚಿತ್ರಣ ನೀಡಲಾಗಿದೆ.

ಇನಾಫಿ
ಇದು ಮಣಿಪುರದ ಮಹಿಳೆಯರು ಶಾಲ್‌ನಂತೆ ಸುತ್ತಿ ಧರಿಸುವ ಮೇಲ್‌ವಸ್ತ್ರ. ಹೇಗೆ ಕಾಶ್ಮೀರಿ ಶಾಲ್‌ಗ‌ಳು ತಮ್ಮ ವಿಶಿಷ್ಟತೆಗಾಗಿ ಹೆಸರು ಪಡೆದಿವೆಯೋ, ಅದೇ ರೀತಿಯಲ್ಲಿ ಮಣಿಪುರೀ “ಇನಾಫಿ’ ಬಗೆಯ ಮೇಲ್‌ವಸ್ತ್ರದ ಶಾಲ್‌ಗ‌ಳು ತಮ್ಮದೇ ವಿಶಿಷ್ಟತೆ ಪಡೆದಿವೆ.

ಅರೆ ಪಾರದರ್ಶಕವಾಗಿ ರುವ ಈ ಶಾಲ್‌ಗ‌ಳು, ಕೈಮಗ್ಗದ ವಿಶಿಷ್ಟ ಕಲಾಕಾರರಿಂದ ಜತನದಿಂದ ವಿನ್ಯಾಸ ಪಡೆಯುತ್ತಿದ್ದು, ಇಂದು ಆಧುನಿಕ ವಿನ್ಯಾಸಗಳೊಂದಿಗೆ ಸಾಂಪ್ರದಾಯಿಕ ವೈಭವವನ್ನೂ ಉಳಿಸಿಕೊಂಡಿದೆ.

ಫ‌ನೇಕ್‌
ಇದು ಸ್ಕರ್ಟ್‌ ನಂತೆ ಸುತ್ತಿಕೊಳ್ಳುವ ತೊಡುಗೆಯಾಗಿದ್ದು ಹತ್ತಿ, ರೇಶಿಮೆ ನೂಲುಗಳಿಂದ ಅರೆಪಾರದರ್ಶಕವಾಗಿ ತಯಾರಿಸಲಾಗುತ್ತದೆ. ಫ‌ನೇಕ್‌ನ ವೈಶಿಷ್ಟವೆಂದರೆ ಇದರಲ್ಲಿ ಎಲ್ಲೂ ಹೂವಿನ ಬಗೆಯ ವಿನ್ಯಾಸಗಳು ಕಾಣಸಿಗುವುದಿಲ್ಲ. ಉದ್ದುದ್ದದ ಅಡ್ಡ ಗೆರೆಗಳ ಅಥವಾ ಚೌಕಗಳ ಚಿತ್ತಾರವೇ ಈ ತೊಡುಗೆಯ ವಿಶೇಷತೆ. ಫ‌ನೇಕ್‌ ತೊಡುಗೆಗೆ ಮೇಲ್‌ವಸ್ತ್ರವಾಗಿ ಕುಪ್ಪಸದಂತಹ ತೊಡುಗೆಯನ್ನು ಧರಿಸಲಾಗುತ್ತದೆ. ಇದನ್ನು ಸರಳವಾಗಿ ವಿವರಿಸುವುದೆಂದರೆ ಉತ್ತರ ಭಾರತೀಯ ಸೀರೆಗಳ ರೀತಿ ತೊಡಲಾಗುತ್ತಿದೆ! ಇದನ್ನು ಬೇಸಿಗೆಯ ಕಾಲದಲ್ಲಿ ಅಧಿಕವಾಗಿ ಎಲ್ಲೆಡೆಯೂ ಬಳಸಲಾಗುತ್ತದೆ.

ಮಯೇಕ್‌ ನೈಬಿ
ಇದು ಫ‌ನೇಕ್‌ನಂತಹ ತೊಡುಗೆ. ಆದರೆ, ವಿಶೇಷ ಸಮಾರಂಭಗಳಲ್ಲಿ ತೊಡುವಂತೆ ವೈಭವಯುತವಾಗಿ ಆಕರ್ಷಕವಾಗಿ ತಯಾರಿಸಲಾಗುತ್ತದೆ.
ಇದನ್ನು ಅಂದದ ತುಂಬ ಕಸೂತಿ ಕಲೆಯ ಸಿಂಗಾರದಿಂದ ವಿವಿಧ ಬಗೆಯ ಹರಳು, ಮಣಿಗಳಿಂದಲೂ ತಯಾರಿಸಲಾಗುತ್ತದೆ.

ಲೈಫೀ ಹಾಗೂ ಬೆನ್‌ಫೀ
ಇದು ಫ‌ನೇಕ್‌ ತೊಡುಗೆಯಂತೆಯೇ. ಆದರೆ, ಮದುವೆ, ಸಭೆ, ಸಮಾರಂಭಗಳಲ್ಲಿ ಉಡುವಂತೆ ವಿಶೇಷ ರೀತಿಯಲ್ಲಿ ತಯಾರಿಸಲಾದ ಉಡುಗೆಯಿದು. ಲೈಫೀಯು ಬಿಳಿಯ ಬಣ್ಣದ ವಸ್ತ್ರಕ್ಕೆ ಹಳದಿ ರಂಗಿನ ಅಂಚನ್ನು ಹೊಂದಿರುತ್ತದೆ.
ಬೆನ್‌ಫೀ ಎಂದರೆ ಅಂದದ ಕಸೂತಿಯಿಂದ ಸಿಂಗರಿಸಲಾದ ಕುಪ್ಪಸದಂತಹ ತೊಡುಗೆ. ಇದನ್ನು ತೊಡುವಾಗ ಇದರ ವಿನ್ಯಾಸಕ್ಕೆ ಹೊಂದುವಂತೆ ಫ‌ನೇಕ್‌ ತೊಡುಗೆಯನ್ನೂ ಆಯ್ಕೆ ಮಾಡಲಾಗುತ್ತದೆ. ಹೀಗೆ ಅಂದದ ಫ‌ನೇಕ್‌ ಹಾಗೂ ಬೆನ್‌ಫೀ ತೊಡುಗೆ ಸಾಂಪ್ರದಾಯಿಕ ಪ್ರಾಚೀನ ತೊಡುಗೆಯಾಗಿದ್ದರೂ, ಅದರ ಪ್ರಾದೇಶಿಕ ವಿಶೇಷತೆಯಿಂದ ಹಾಗೂ ಅಂದದಿಂದಾಗಿ ಆಧುನಿಕ ಕಾಲದಲ್ಲೂ ಜನಪ್ರಿಯ ಮಣಿಪುರೀ ಉಡುಗೆಯಾಗಿದೆ.

ಪೊಟ್ಲೋಯ್‌
ಮಣಿಪುರದ ಮದುವೆ ಸಮಾರಂಭಗಳಲ್ಲಿ ಅಧಿಕವಾಗಿ ಕಂಡುಬರುವ ದಿರಿಸು ಎಂದರೆ ಸಾಂಪ್ರದಾಯಿಕ ಸಿಲಿಂಡರ್‌ನಂತಹ ಸ್ಕರ್ಟ್‌. ಅದೇ ಪೊಟೊÉಯ್‌. ಇದು ವಧುವೂ ಸಹಿತ ತೊಡುವ ವಿಶೇಷ ಉಡುಗೆ. ಇದರ ಮೇಲೆ ಕುಪ್ಪಸವೂ ಜೊತೆಗೆ ಸೊಂಟಪಟ್ಟಿಯನ್ನೂ ಧರಿಸಲಾಗುತ್ತದೆ.

ಸಾಮಾನ್ಯವಾಗಿ ಹಸಿರು, ಗುಲಾಬಿ ಹಾಗೂ ಕೆಂಪು ರಂಗಿನ ಈ ಉಡುಗೆ ಹರಳು, ಮಣಿ ಹಾಗೂ ವೈಭವಯುತ ಕಸೂತಿ ವಿನ್ಯಾಸಗಳೊಂದಿಗೆ ಶ್ರೀಮಂತ ನೋಟ ಬೀರುವಂತೆ ತಯಾರಿಸಲಾಗುತ್ತದೆ.

ಹಬ್ಬದ ಸಮಯದ ವಿಶೇಷ ತೊಡುಗೆ
ಮಣಿಪುರವು ಹಲವು ವಿಶೇಷ ಹಬ್ಬ ಹಾಗೂ ನೃತ್ಯ ಶೈಲಿಗಳಿಂದ ಜನಪ್ರಿಯವಾಗಿದೆ. ಹಬ್ಬದ ಸಮಯದಲ್ಲಿ ಅದು ವಿಶೇಷವಾಗಿ “ರಾಸ್‌ಲೀಲಾ’ ಹಬ್ಬದ ಆಚರಣೆಯ ಸಮಯದಲ್ಲಿ ಪೊಟೊಯ್‌ನೊಂದಿಗೆ “ಕುಮಿನ್‌’ ಎಂಬ ದಿರಿಸು ಧರಿಸಲಾಗುತ್ತದೆ. ಇದನ್ನು ನೃತ್ಯಕ್ಕಾಗಿಯೇ ಆರಾಮದಾಯಕ ಹಾಗೂ ಆಕರ್ಷಕವಾಗಿ ವಿಶೇಷ ರೀತಿಯಲ್ಲಿ ತಯಾರಿಸಲಾಗಿರುತ್ತದೆ. ಮಣಿಪುರ ರಾಜ್ಯದಲ್ಲಿ ಇಂದಿಗೂ ಕೈಮಗ್ಗ ಹಾಗೂ ಯಾಂತ್ರಿಕ ಮಗ್ಗಗಳಿಂದ ವಸ್ತ್ರವಿನ್ಯಾಸ ಮಾಡುವುದು ದೊಡ್ಡ ಉದ್ಯಮವಾಗಿ ಬೆಳೆಯುತ್ತಲೇ ಇದೆ.

ಮಲ್‌ಬರಿ ರೇಶಿಮೆಯ “ಕಬ್ರಂಗ್‌’ ವಸ್ತ್ರಗಳ ಮೇಲಿನ ವಿನ್ಯಾಸಗಳು ಎಲ್ಲೆಡೆ ಜನಪ್ರಿಯವಾಗಿವೆ. ಟಿನ್‌ಡೋಗಿ ಎಂಬ ರೇಶಿಮೆಯ ವಿನ್ಯಾಸ ಅದರಲ್ಲೂ ಸರ್ಪದ ಕಸೂತಿ ವಿನ್ಯಾಸ (ಅಕೊಯ್‌ಬಿ) ಅತೀ ಆಕರ್ಷಕವಾಗಿದೆ. ಈ ವಿನ್ಯಾಸವನ್ನು ಮಣಿಪುರದ ದಿರಿಸುಗಳಲ್ಲಿ ಮಾತ್ರ ಕಾಣುವಂತಹದಾಗಿದೆ! ಇದರೊಂದಿಗೆ ಆಭರಣಗಳನ್ನೂ ವಿಶೇಷ ರೀತಿಯಲ್ಲಿ ಧರಿಸಲಾಗುತ್ತದೆ. ಮಣಿಪುರದ ಸಾಂಪ್ರದಾಯಿಕ ಆಭರಣಗಳೆಂದರೆ ಕಿಯಾಮ್‌ ಹಾಗೂ ಲಿಪಂಗ್‌, ಇವು ಸಾಂಪ್ರದಾಯಿಕ ತೊಡುಗೆಗೆ ವಿಶೇಷ ಮೆರುಗನ್ನು ನೀಡುತ್ತದೆ.

ಅನುರಾಧಾ ಕಾಮತ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ವ್ಯಕ್ತಿಯೊಬ್ಬನ ಶಕ್ತಿ ಅಡಗಿರುವುದು ತೋಳಿನಲ್ಲಿ ಅಂತ ನಂಬಿಕೆ. ಅದಕ್ಕೇ ತೋಳ್ಬಲ, ಭುಜಬಲ ಅಂತೆಲ್ಲಾ ಹೇಳುವುದು. ಹಾಗೆಯೇ, ವಸ್ತ್ರದ ಸೌಂದರ್ಯ ಕೂಡಾ ತೋಳಿನಲ್ಲಿ...

  • ಒಂದೆಡೆ ಪಟಾಕಿ ಹಬ್ಬದ ಹವಾ ಮುಗಿದಿದೆ. ಅದೇ ಸಂದರ್ಭದಲ್ಲಿ ಫ್ಯಾಷನ್‌ ರಂಗದಲ್ಲಿ ಪಟಾಕಾದ ಹವಾ ಜೋರಾಗಿದೆ. ಪಟಾಕಿಗಳ ಆಕಾರದ ಒಡವೆಗಳು ಮಾರುಕಟ್ಟೆಗೆ ಲಗ್ಗೆಯಿಟ್ಟು,...

  • ಫ್ಯಾಷನ್‌ ಜಗತ್ತು, ದಿನದಿನಕ್ಕೂ ಬದಲಾಗುತ್ತಿರುತ್ತದೆ. ಇವತ್ತಿನ ಟ್ರೆಂಡ್‌ ನಾಳೆ ಹಳೆಯದಾಗಿ, ನಾಡಿದ್ದು ಮಾಯವೇ ಆಗಿಬಿಡಬಹುದು. ಹಾಗಾಗಿ, ಟ್ರೆಂಡ್‌ಗೆ ತಕ್ಕಂತೆ...

  • ಹೆಣ್ಣು ಮತ್ತು ಹೂವು ಇವೆರಡೂ ಜೋಡಿ ಪದಗಳು. ಚೆಲುವು ಹೂವಿನಧ್ದೋ, ಹೂವು ಮುಡಿದ ಹೆಣ್ಣಿನಧ್ದೋ ಎಂಬುದು ಕವಿಗಳ ಜಿಜ್ಞಾಸೆ. ಹೀಗೆ ಹೆಣ್ಣಿನೊಂದಿಗೆ ನಡೆದು ಬಂದ...

  • ನಾಗಾಲ್ಯಾಂಡ್‌ನ‌ಲ್ಲಿ ಮಹಿಳೆಯರು ತೊಡುವ ಸಾಂಪ್ರದಾಯಿಕ ದಿರಿಸು ಭಾರತದ ಇತರ ರಾಜ್ಯಗಳ ದಿರಿಸಿಗಿಂತ ಭಿನ್ನವಾಗಿದೆ. ನಾಗಾಲ್ಯಾಂಡ್‌ ಜನತೆ ತಮ್ಮ ಸಾಂಪ್ರದಾಯಿಕತೆ...

ಹೊಸ ಸೇರ್ಪಡೆ