ರಸ್ತೆ-ಸೇತುವೆ ಕಾಮಗಾರಿಗೆ 155.90 ಕೋಟಿ ಮಂಜೂರು


Team Udayavani, May 12, 2020, 9:40 AM IST

ರಸ್ತೆ-ಸೇತುವೆ ಕಾಮಗಾರಿಗೆ 155.90 ಕೋಟಿ ಮಂಜೂರು

ಹುಬ್ಬಳ್ಳಿ: ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆ-3 ಯೋಜನೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 200 ಕಿ.ಮೀ ರಸ್ತೆ ಅಭಿವೃದ್ಧಿ ಹಾಗೂ ಏಳು ಸೇತುವೆ ನಿರ್ಮಾಣಕ್ಕೆ 155.90 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಯೋಜನೆಗಳನ್ನು ಮೂರು ಹಂತದಲ್ಲಿ ಕೈಗೊಳ್ಳಲಾಗುವುದು. ಮೊದಲನೇ ಹಂತದ ಕಾಮಗಾರಿಗಳಿಗೆ ಈಗಾಗಲೇ ಟೆಂಡರ್‌ ಕರೆಯಲಾಗಿದೆ. ಎರಡನೇ ಹಂತದ ಕಾಮಗಾರಿಗಳಿಗೆ ಟೆಂಡರ್‌ ಕರೆಯುವ ಪ್ರಕ್ರಿಯೆ ಪ್ರಾರಂಭವಾಗಿದೆ. 3ನೇ ಹಂತದ ಕಾಮಗಾರಿಗಳ ಅಂದಾಜು ಪತ್ರಿಕೆ ತಯಾರಿಸಿದ್ದು, ತಾಂತ್ರಿಕ ಹಾಗೂ ಆಡಳಿತಾತ್ಮಕ ಅನುಮೋದನೆ ಹಂತದಲ್ಲಿವೆ.

ಧಾರವಾಡ ಲೋಕಸಭೆ ವ್ಯಾಪ್ತಿಯಲ್ಲಿನ ಮನಗುಂಡಿಯಿಂದ ನಿಗದಿ ಬೆನಕನಕಟ್ಟಿ ಮೂಲಕ ಹಾಯ್ದು ಹೋಗುವ ರಸ್ತೆ ಅಭಿವೃದ್ಧಿಗೆ 488.90 ಲಕ್ಷ ರೂ., ತಡಕೋಡದಿಂದ ಗರಗದಿಂದ ಬೇಲೂರು-ಕೊಟೂರು ಮಾರ್ಗದ ಸಿಂಗನ ಹಳ್ಳಿ-ಬೊಗಾರ-ದುಬ್ಬನಮರಡಿ ರಸ್ತೆ ಕಾಮಗಾರಿಗೆ 940.97 ಲಕ್ಷ ರೂ., ಕೊಟೂರದಿಂದ ಬಿದರಗಡ್ಡಿ ತಾಲೂಕು ಗಡಿ ವರೆಗಿನ (ವಾಯಾ ಗರಗ-ಹಂಗರಕಿ ತಡಕೋಡ) ರಸ್ತೆ ಕಾಮಗಾರಿಗೆ 624.06 ಲಕ್ಷ ರೂ., ಅದರಗುಂಚಿಯಿಂದ ಕುಂದಗೋಳ ತಾಲೂಕು ಗಡಿ ವರೆಗೆ (ವಾಯಾ ನೂಲ್ವಿ) ಕಾಮಗಾರಿಗೆ 346.88 ಲಕ್ಷ ರೂ., ವರೂರದಿಂದ ರಾಷ್ಟ್ರೀಯ ಹೆದ್ದಾರಿ 4ರ ಸಂಪರ್ಕ ಕಲ್ಪಿಸುವ ರಸ್ತೆಯಿಂದ ಅಗಡಿ ವರೆಗೆ (ವಾಯಾ ಅರಳಿಕಟ್ಟಿ) 628.63 ಲಕ್ಷ ರೂ., ಬ್ಯಾಹಟ್ಟಯಿಂದ ತಾಲೂಕು ಗಡಿ (ವಾಯಾ ಸುಳ್ಳ) 683.68 ಲಕ್ಷ ರೂ., ಸುಳ್ಳದಿಂದ ಕುಸಗಲ್ಲ 699.84 ಲಕ್ಷ ರೂ., ಕುರುವಿನ ಕೊಪ್ಪದಿಂದ ಮಿಶ್ರಿಕೋಟಿ ಬಳಿಯ ಜಿಲ್ಲಾ ಮುಖ್ಯ ರಸ್ತೆ ವರೆಗೆ 357.03 ಲಕ್ಷ ರೂ., ಶಿವಪುರದಿಂದ ನಲ್ಲಿಹರವಿ ವಯಾ ಮುಕ್ಕಲ, ಸೋಮನಕೊಪ್ಪ, ಅರಳಿಹೊಂಡ ರಸ್ತೆ ಕಾಮಗಾರಿ 695.06 ಲಕ್ಷ ರೂ., ಧೂಳಿಕೊಪ್ಪದಿಂದ ಹುಲ್ಲಂಬಿ-ಹೆಸರಂಬಿ ಜಿಲ್ಲಾ ಮುಖ್ಯ ರಸ್ತೆ ವರೆಗೆ 344.55 ಲಕ್ಷ ರೂ., ಕಂದಲಿಯಿಂದ ಸಚ್ಚಿದಾನಂದ ನಗರ (ವಾಯಾ ಸುಲಿಕಟ್ಟಿ ಮತ್ತು ಮಸಳಿಕಟ್ಟಿ) 298.77 ಲಕ್ಷ ರೂ., ಸಂಶಿಯಂದ ಕಮಡೊಳ್ಳಿ ರಸ್ತೆ 354.67 ಲಕ್ಷ ರೂ., ಯಲಿವಾಳದಿಂದ ಕಮಡೊಳ್ಳಿ ಹಂಚಿನಾಳ ಸಂಪರ್ಕಿಸುವ ರಸ್ತೆ (ವಾಯಾ ಕುಬಿಹಾಳ) 538.22 ಲಕ್ಷ ರೂ., ತರ್ಲಘಟ್ಟದಿಂದ ಕಮಡೊಳ್ಳಿ ರಸ್ತೆ ಕಾಮಗಾರಿ 483.36 ಲಕ್ಷ ರೂ., ಹಿರೆನರ್ತಿಯಿಂದ ಸಂಶಿ (ವಾಯಾ ಬಸಾಪುರ) 610 ಲಕ್ಷ ರೂ., ಕಳಸದಿಂದ ಪಶುಪತಿಹಾಳ ರಸ್ತೆ ಕಾಮಗಾರಿ 748.65 ಲಕ್ಷ ರೂ., ಅಣ್ಣಗೇರಿಯಿಂದ ನಾಗರಹಳ್ಳಿ ವಾಯಾ ಹಳ್ಳಿಕೇರಿ, ಬಸಾಪುರ 1539.30 ಲಕ್ಷ ರೂ., ಅಣ್ಣಿಗೇರಿಯಿಂದ ಭದ್ರಾಪುರ ರಸ್ತೆ 634.68 ಲಕ್ಷ ರೂ., ಮೊರಬದಿಂದ ತಾಲೂಕು ಗಡಿ (ವಾಯಾ ಶಿರೂರ ಆಯಟ್ಟಿ ) ವರೆಗೆ 590.92 ಲಕ್ಷ ರೂ., ಶೆಲವಡಿಯಿಂದ ರಾಷ್ಟ್ರೀಯ ಹೆದ್ದಾರಿ ವರೆಗೆ (ವಾಯಾ ಬೋಗಾನೂರ), ಕಡದಹಳ್ಳಿ, ಅಮರಗೋಳ ವರೆಗಿನ ರಸ್ತೆ 521.62 ಲಕ್ಷ ರೂ., ಸವಣೂರು ತಾಲೂಕು ಶಿರಬಡಗಿ ಕ್ರಾಸ್‌ದಿಂದ ಚಿಲ್ಲೂರ-ಬಡ್ನಿ ವಯಾ ಅಲ್ಲಿಪುರ 590.67 ಲಕ್ಷ ರೂ., ಶಿಗ್ಗಾವಿ ತಾಲೂಕು ಕ್ಯಾಲಕೊಂಡದಿಂದಮಡ್ಲಿ (ವಾಯಾ ಬೆಳಗಲಿ)ವರೆಗೆ, ಹುಲಸೋಗಿ, ಚಿಕ್ಕಬೆಂಡಿಗೇರಿ 731.81 ಲಕ್ಷ ರೂ., ಅರಟಾಳದಿಂದ ಕಾಮನಹಳ್ಳಿ ಕ್ರಾಸ್‌ (ವಾಯಾ ಯತ್ನಳ್ಳಿ) ವರೆಗೆ , ಮಾಕಾಪುರ 496.53 ಲಕ್ಷ ರೂ., ಮುನವಳ್ಳಿಯಿಂದ ಶಾಹಿಪುರ (ವಾಯಾ ಹೊಟ್ಟೂರು), ಕುರಸಾಪುರ 955.65 ಲಕ್ಷ ರೂ. ಸೇರಿದಂತೆ ಒಟ್ಟು 24 ರಸ್ತೆ ಕಾಮಗಾರಿಗಳು ನಡೆಯಲಿವೆ.

ಬ್ರಿಡ್ಜ್ ನಿರ್ಮಾಣ ಕಾಮಗಾರಿ ವಿವರ: ತಡಕೋಡು-ಗರಗ ರಸ್ತೆ ಬೊಗೂರು ಗ್ರಾಮದ ಬಳಿಯ ತುಪರಿ ಹಳ್ಳ- 141.70 ಲಕ್ಷ ರೂ., ಕಳಸ- ಪಶುಪತಿಹಾಳ ಮುಖ್ಯ ರಸ್ತೆಯಲ್ಲಿ ಪಶುಪತಿಹಾಳ ಬಳಿ ತುಪ್ಪರಿ ಹಳ್ಳ- 68.39 ಲಕ್ಷ ರೂ., ಯಲಿವಾಳ-ಕುಬಿಹಾಳ ಸೇತುವೆ-111.97 ಲಕ್ಷ ರೂ., ತರ್ಲಘಟ್ಟ-ಕಮಡೊಳ್ಳಿ ಮಧ್ಯ-59.89 ಲಕ್ಷ ರೂ., ಕುಬಿಹಾಳ-ಕಮಡೊಳ್ಳಿ ಹಂಚಿನಾಳ ಸಂಪರ್ಕ ರಸ್ತೆ-116.72 ಲಕ್ಷ ರೂ., ಅಣ್ಣಗೇರಿಯಿಂದ ಭದ್ರಾಪುರ-174.31 ಲಕ್ಷ ರೂ., ಅಣ್ಣಗೇರಿ- ಭದ್ರಾಪುರ-81.83 ಲಕ್ಷ ರೂ. ಸೇರಿದಂತೆ ಒಟ್ಟು 7 ಸೇತುವೆ ಕಾಮಗಾರಿ ನಡೆಯಲಿವೆ.

ಈ ಎಲ್ಲ ಯೋಜನೆಗಳಿಂದ ಕ್ಷೇತ್ರದ ಗ್ರಾಮೀಣ ಭಾಗದ ಜನರಿಗೆ ಅದರಲ್ಲೂ ಮುಖ್ಯವಾಗಿ ರೈತ ಸಮುದಾಯಕ್ಕೆ ತಮ್ಮ ಕೃಷಿ ಚಟುವಟಿಕೆ ಕೇಂದ್ರಗಳಿಂದ ಕೃಷಿ ಉತ್ಪನ್ನಗಳ ಸಾಗಾಟಕ್ಕೆ  ಹಾಗೂ ಬೀಜ ಗೊಬ್ಬರಗಳ ಸರಬರಾಜಿಗೆ ಅನುಕೂಲವಾಗಲಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಸಚಿವ ನರೇಂದ್ರ ಸಿಂಗ್‌ ತೋಮರ್‌ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡಿದ್ದು, ಅವರಿಗೆ ಕ್ಷೇತ್ರದ ಜನರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.