Udayavni Special

ಬಾಟಲಿ ಒಳಗಿನ ರೋಗಾಣುಗಳನ್ನು ನಾಶಪಡಿಸಲಿದೆ, ಸೆಲ್ಫ್ ಕ್ಲೀನಿಂಗ್ ವಾಟರ್ ಬಾಟಲ್ಸ್!

ಸೆಲ್ಫ್ ಕ್ಲೀನಿಂಗ್ ವಾಟರ್ ಬಾಟಲ್ಸ್ ಬಗ್ಗೆ ನಿಮಗೆ ಗೊತ್ತಿದೆಯೇ..?! ಹುಬ್ಬೇರಿಸಬೇಡಿ, ಈ ಲೇಖನ ಓದಿ

ಶ್ರೀರಾಜ್ ವಕ್ವಾಡಿ, Jun 8, 2021, 5:12 PM IST

A self-cleaning water bottle that’ll help you reach your hydration goal

ಬಳಸುವ ನೀರಿನ ಬಾಟಲಿಯನ್ನು ಪ್ರತಿನಿತ್ಯ ತೊಳೆದು ಇಡುವುದು ಹಲವರಿಗೆ ಕಷ್ಟದ ಕೆಲಸ. ಖಾಲಿ ಬಾಟಲಿಯಲ್ಲಿ ನೀರು ತುಂಬಿಸಿಡೋದು, ಅದರಲ್ಲೇನು ಕೊಳಕಾಗುತ್ತೆ ಎಂದು ಅಸಡ್ಡೆ ತೋರಿ ತಿಂಗಳಾನುಗಟ್ಟಲೆ, ಅದೇ ಬಾಟಲಿಯನ್ನು ತೊಳೆಯದೇ ಬಳಸುವವರು ಹಲವರು. ಅಂತಹವರಿಗಾಗಿಯೇ ಸಿದ್ಧಗೊಂಡಿದೆ ಪೋರ್ಟೇಬಲ್, ಸ್ವಯಂ ಶುಚಿಗೊಳಿಸಬಲ್ಲ ನೀರು ಶುದ್ಧೀಕರಿಸುವ ನೀರಿನ ಬಾಟಲಿ! ಇದು ನಿಮ್ಮ ಕೈಸೇರಿದರೆ, ಬಾಟಲಿ ಸ್ವಚ್ಛಗೊಳಿಸುವ ಬಗ್ಗೆ ನೀವು ಯೋಚಿಸುವ ಅಗತ್ಯವೇ ಇರುವುದಿಲ್ಲ. ನೀರಿನ ಮೂಲಕ ಯಾವುದೇ ರೋಗಾಣುಗಳು ಅಥವಾ ಬ್ಯಾಕ್ಟೀರಿಯಾಗಳು ನಿಮ್ಮ ಬಾಟಲಿ ಸೇರಿದರೆ ಹಾಗೂ ಆ ನೀರಿನಿಂದ ಬಾಟಲಿಯಲ್ಲಿ ಅದೃಶ್ಯವಾಗಿ ಯಾವುದೇ ರೋಗಾಣುಗಳು ಜೀವ ತಾಳಿದರೆ, ಈ ಬಾಟಲಿಗಳು ಅದನ್ನು ಬೆಳೆಯಲು ಬಿಡುವುದಿಲ್ಲ. ಇದರಿಂದ ಪ್ರತಿನಿತ್ಯ ಶುದ್ಧ, ಪರಿಮಳ ಭರಿತ ನೀರನ್ನು ಕುಡಿಯಬಹುದು!

ಇದನ್ನೂ ಓದಿ : ಐಎಎಸ್ ಅಧಿಕಾರಿಗಳ ವರ್ಗಾವಣೆಗೆ ಕಾರಣವಾದ ಭೂ ಹಗರಣ: ತನಿಖೆಗೆ ಸಿದ್ದರಾಮಯ್ಯ ಆಗ್ರಹ

ಮಾರುಕಟ್ಟೆಯಲ್ಲಿ ವಿವಿಧ ಆಕಾರದ ನೀರಿನ ಬಾಟಲಿಗಳು ಸಿಗುತ್ತವೆ. ಕೆಲವೊಂದರ ಆಕಾರಗಳು ಹೇಗಿರುತ್ತವೆ ಅಂದರೆ, ಸಾಮಾನ್ಯವಾದ ಕಿಚನ್ ಸ್ಕ್ರಬ್ಬರ್‌ ನಿಂದ ಸ್ವಚ್ಛಗೊಳಿಸಲು ಕಷ್ಟಕರವಾದ ಆಕಾರಗಳಲ್ಲಿ ಇರುತ್ತವೆ. ಕೈಯನ್ನು ಒಳಗೆ ಹಾಕಿ ಅಥವಾ ಸ್ಪಂಜ್ ಹಾಕಿ ತೊಳೆಯಲೂ ಆಗದೇ, ಅದಕ್ಕಾಗಿ ವಿಶೇಷ ಬಾಟಲ್ ಬ್ರಶ್‌ಗಳನ್ನು ಖರೀದಿ ಮಾಡಬೇಕಾದ ಅನಿವಾರ್ಯತೆಯೂ ಬರುತ್ತದೆ. ಅದಕ್ಕೆಲ್ಲಾ ಪರಿಹಾರ ಎಂಬಂತೆ ವಿಕಿರಣ ಆಧಾರಿತ ಸ್ವಯಂ ಸ್ವಚ್ಛವಾಗಬಲ್ಲ, ನೀರು ಹಾಗೂ ಬಾಟಲಿಯಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಸಾಯಿಸುವ ಬಾಟಲಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಈ ನೀರಿನ ಬಾಟಲಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ?

ಸ್ವಯಂ-ಸ್ವಚ್ಛಗೊಳಿಸುವ ನೀರಿನ ಬಾಟಲಿಗಳು ಲಘು ವಿಕಿರಣದ ಬೆಳಕಿನ ಮೂಲಕ ಬ್ಯಾಕ್ಟೀರಿಯಾ, ವೈರಸ್‌ಗಳು, ಪ್ರೊಟೊಜೋವಾ ಮತ್ತು ಇತರ ಸೂಕ್ಷ್ಮ ಜೀವಿಗಳನ್ನು, ಅವುಗಳ ಡಿಎನ್‌ಎ ನಾಶಪಡಿಸುವ ಮೂಲಕ ಕೊಲ್ಲುತ್ತವೆ. ವಿಕಿರಣದ ಬೆಳಕು ಬಾಟಲಿಯಲ್ಲಿನ ನೀರಿನಿಂದ ಮತ್ತು ಬಾಟಲಿ ಒಳಗಿನ ಮೇಲ್ಮೈಯಿಂದ ಕ್ರಿಮಿನಾಶಗೊಳಿಸುತ್ತದೆ.

ಯಾವುದೇ ರಾಸಾಯನಿಕಗಳನ್ನು ಬಳಸದೇ ಅಥವಾ ಸಾಬೂನುಗಳ ಅಗತ್ಯವಿಲ್ಲದೆ, ಮರುಬಳಕೆ ಮಾಡಬಹುದಾದ ನೀರಿನ ಬಾಟಲಿಗಳನ್ನು ಸ್ವಚ್ಛವಾಗಿಡಲು ವಿಕಿರಣ ಬೆಳಕು ಅನುಕೂಲಕರ. ಸ್ವಯಂ-ಸ್ವಚ್ಛಗೊಳಿಸುವ ಬಾಟಲಿಗಳನ್ನು ತಯಾರಿಸುವ ಕೆಲವು ಪ್ರಮುಖ ಕಂಪನಿಗಳ ಪಟ್ಟಿ ಹಾಗೂ ಅದರ ವೈಶಿಷ್ಟ್ಯ ಈ ಕೆಳಗೆ ನೀಡಲಾಗಿದೆ.

ಕ್ರೇಜಿ ಕ್ಯಾಪ್

ಕ್ರೇಜಿಕ್ಯಾಪ್ ಬಾಟಲಿಯಲ್ಲಿ ನೀರು ಶುದ್ಧೀಕರಿಸುವ ಎರಡು ವಿಧಾನಗಳಿವೆ:

ನಾರ್ಮಲ್ ಮೋಡ್ (ನೀರಿನ ಕಾರಂಜಿಗಳು ಹಾಗೂ ನಲ್ಲಿಯಿಂದ ಬರುವ ನೀರನ್ನು ಶುದ್ಧೀಕರಿಸಬಲ್ಲ) ಹಾಗೂ ಕ್ರೇಜಿ ಮೋಡ್ (ನದಿ-ಸರೋವರಗಳ ನೀರುಗಳನ್ನು ಶುದ್ಧೀಕರಿಸುವ ಸಾಮರ್ಥ್ಯ ಉಳ್ಳವುಗಳು). ಕ್ರೇಜಿಕ್ಯಾಪ್ ಪ್ರಕಾರ, ನಾರ್ಮಲ್ ಮೋಡ್‌ನಲ್ಲಿ 60 ಸೆಕೆಂಡುಗಳಲ್ಲಿ ನೀರು ಹಾಗೂ ಬಾಟಲಿ ಸ್ವಚ್ಛಗೊಳ್ಳುತ್ತದೆ ಹಾಗೂ ಕ್ರೇಜಿ ಮೋಡ್‌ ನಲ್ಲಿ ಶುದ್ಧೀಕರಣ ಪ್ರಕ್ರಿಯೆಯು ಎರಡೂವರೆ ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಇದರ ಮತ್ತೊಂದು ವಿಶೇಷವೆಂದರೆ ನೀವು ಕೇವಲ ಕ್ಯಾಪ್ ಅನ್ನು ಖರೀದಿಸಿದರೂ ಸಾಕು. ಅದರ ಅಧಿಕೃತ ವೆಬ್‌ಸೈಟ್‌ನಲ್ಲಿ ಉಲ್ಲೇಖವಾಗಿರುವಂತೆ, ನಿಮ್ಮಲ್ಲಿ ಈಗ ಇರುವ ಬಾಟಲಿಗಳಿಗೆ ಅದರ ಮುಚ್ಚಳ (ಕ್ಯಾಪ್) ಹೊಂದಿಕೊಳ್ಳುತ್ತದೆ. ನೀವು ಅದನ್ನು ಆಟೋ ಕ್ಲೀನ್‌ನಲ್ಲೇ ಇಟ್ಟರೆ, ಒಂದು ಚಾರ್ಜ್ನಲ್ಲಿ ಸುಮಾರು ಎರಡು ತಿಂಗಳವರೆಗೆ ಇದು ಸಕ್ರಿಯವಾಗಿರುತ್ತದೆ.

ಲಾರ್ಕ್ ಬಾಟಲಿಗಳು

ಲಾರ್ಕ್ ಬಾಟಲಿಯಲ್ಲೂ ಎರಡು ಶುದ್ಧೀಕರಣ ವಿಧಾನಗಳಿವೆ: ನಾರ್ಮಲ್ ಮತ್ತು ಅಡ್ವೆಂಚರ್. ನಾರ್ಮಲ್ ಮೋಡ್‌ನಲ್ಲಿ 60 ಸೆಕೆಂಡುಗಳಲ್ಲಿ ಶೇ.99 ರೋಗಕಾರಕಗಳನ್ನು ಶುದ್ಧೀಕರಿಸಿದರೆ, ಅಡ್ವೆಂಚರ್ ಮೋಡ್‌ನಲ್ಲಿ ಇದು 3 ನಿಮಿಷ ತೆಗೆದುಕೊಳ್ಳುತ್ತದೆ. ಈ ಬಾಟಲಿಯಲ್ಲಿ ಮೇಲ್ಭಾಗದಲ್ಲಿರುವ ಬಟನ್‌ಅನ್ನು ಒತ್ತುವ ಮೂಲಕ ಬಯಸಿದಾಗಲೆಲ್ಲಾ ಲಘು ವಿಕಿರಣ ಶುದ್ಧೀಕರಣದ ಪ್ರಕ್ರಿಯೆಗೆ ಚಾಲನೆ ಸಿಗುತ್ತದೆ. ಅದೇ ರೀತಿ ಸ್ವಯಂಚಾಲಿತವಾಗಿ ಪ್ರತಿ 2 ಗಂಟೆಗಳಿಗೊಮ್ಮೆ, 10 ಸೆಕೆಂಡುಗಳ ಕಾಲ ಆ್ಯಕ್ಟಿವ್ ಇರುತ್ತದೆ.

ನಾರ್ಮಲ್ ಮೋಡ್‌ ನಲ್ಲಿ ದಿನದಲ್ಲಿ 3-4 ಬಾರಿ ಶುಚಿಗೊಳಿಸಿದರೆ, ಫುಲ್ ಚಾರ್ಜ್ ಆಗಿರುವ ಲಾರ್ಕ್ ಬಾಟಲಿಯೂ ಎರಡು ತಿಂಗಳು ಪೂರ್ಣ ಸಕ್ರಿಯವಿರುತ್ತದೆ. ಅದೇ ರೀತಿ, ಅಡ್ವೆಂಚರ್ ಮೋಡ್‌ನಲ್ಲಿ ಬಳಸಿದರೆ, ಫುಲ್ ಚಾರ್ಜ್ 12 ದಿನಗಳ ಕಾಲ ಬಾಳಿಕೆ ಬರುತ್ತದೆ.

ಮಹಾಟನ್

ಮಹಾಟನ್ ಸ್ವಯಂ ಸ್ವಚ್ಛಗೊಳಿಸುವ ನೀರಿನ ಬಾಟಲಿಗಳು ಕೇವಲ ಒಂದೇ ಶುದ್ಧೀಕರಣದ ವಿಧಾನದಲ್ಲಿ ಲಭ್ಯವಿದೆ. ನೀರಿನಿಂದ 99.99% ರಷ್ಟು ರೋಗಕಾರಕಗಳನ್ನು ಇದು ತೆಗೆದುಹಾಕುತ್ತದೆ. ಕ್ರೇಜಿಕ್ಯಾಪ್ ಹಾಗೂ ಲಾರ್ಕ್ನಂತಲ್ಲದ ಮಹಾಟನ್‌ನಲ್ಲಿ ಪ್ರತ್ಯೇಕ ನೀರಿಗೆ ಪ್ರತ್ಯೇಕ ಸೆಟ್ಟಿಂಗ್‌ಗಳು ಇರುವುದಿಲ್ಲ. ಹಾಗಾಗಿ ಈ ಬಾಟಲಿಯಲ್ಲಿ ಹೊಳೆ, ಕೆರೆ, ನದಿಯ ನೀರನ್ನು ಜಾಸ್ತಿಯಾಗಿ ಬಳಕೆ ಮಾಡುವುದು ಸೂಕ್ತವಲ್ಲ.

ಮಹಾಟನ್ ಬಾಟಲಿಯು ಡಬಲ್ ವಾಲ್ ಸ್ಟೇನ್‌ಲೆಸ್ ಸ್ಟೀಲ್‌ನಿಂದ ಮಾಡಲಾಗುತ್ತದೆ. ಆದ್ದರಿಂದ ಇದು ಬಾಳಿಕೆ ಬರುವುದರ ಬಗ್ಗೆ ಯಾವುದೇ ಸಂಶಯವಿಲ್ಲ. ಆಕಾರವೂ ಸಣ್ಣದಾಗಿರುವುದರಿಂದ ಯಾವುದೇ ಚೀಲದೊಳಗೆ ಹಾಕಿಟ್ಟು ಕೊಂಡುಹೋಗಲು ಸಮಸ್ಯೆಯಾಗದು. ಆದರೆ ಒಂದು ಹಿನ್ನಡೆಯೆಂದರೆ, ಮಹಾಟನ್ ಬಾಟಲಿಯಲ್ಲಿ ಕೇವಲ 350 ಎಂಎಲ್ ನೀರು ಹಿಡಿಯುವುದು. ಹೆಚ್ಚಿನ ನೀರು ಕುಡಿಯುವವರು ಪ್ರತಿನಿತ್ಯ 8-10 ಬಾರಿ ನೀರು ತುಂಬಿಸಬೇಕಾಗುತ್ತದೆ!

ಚಾರ್ಜ್ ಬಗ್ಗೆ ಹೇಳುವುದಾದರೆ, ಒಮ್ಮೆ ಫುಲ್ ಚಾರ್ಜ್ ಆದ ಮಹಾಟನ್ ಬಾಟಲ್ ಗರಿಷ್ಠ ಮೂರು ವಾರಗಳವರೆಗೆ ಆ್ಯಕ್ಟಿವ್ ಇರುತ್ತದೆ. ದಿನದಲ್ಲಿ ಮೂರು-ನಾಲ್ಕು ಬಾರಿ ಸಕ್ರಿಯಗೊಳಿಸಿದರೂ, ಇದರ ಬಾಳಿಕೆಯು ಕ್ರೇಜಿಕ್ಯಾಪ್ ಮತ್ತು ಲಾರ್ಕ್ಗಿಂತ ಸ್ವಲ್ಪ ಕಡಿಮೆಯೇ ಎನ್ನಬಹುದು.

ವೇಕ್‌ ಕಪ್

ವೇಕ್‌ ಕಪ್ ಅಲ್ಟ್ರಾ ವೈಲೆಟ್ ಲೈಟ್ ನೀರಿನ ಬಾಟಲಿಯು ಒಂದೇ ವಿಧಾನದಲ್ಲಿ ಲಭ್ಯವಿದೆ. ಮುಚ್ಚಳದಲ್ಲಿರುವ ಲಘು ವಿಕಿರಣ ತಂತ್ರಜ್ಞಾನವು ಬಾಟಲಿ ಒಳಗಿರುವ ಬ್ಯಾಕ್ಟೀರಿಯಾ, ವೈರಸ್‌ಗಳನ್ನು ತೆಗೆದುಹಾಕುವ ಮೂಲಕ ಮೇಲ್ಮೈಯನ್ನು ಸ್ವಚ್ಛಗೊಳಿಸುತ್ತದೆ. ಬಟನ್‌ಅನ್ನು ಕ್ಲಿಕ್ ಮಾಡುವುದರ ಮೂಲಕ ಆ್ಯಕ್ಟಿವ್ ಮಾಡಬಹುದು. ಮೂರು ನಿಮಿಷಗಳಲ್ಲಿ ಬಾಟಲಿಯು ಸ್ವಚ್ಛಗೊಳ್ಳುತ್ತದೆ.

ಮ್ಯಾಟ್ ಬ್ಲ್ಯಾಕ್ ಸ್ಟೇನ್‌ ಲೆಸ್ ಸ್ಟೀಲ್‌ ನಲ್ಲಿ ಬರುವ ಈ ಬಾಟಲಿಯಲ್ಲಿ 550 ಮಿಲಿಲೀಟರ್ ನೀರು ತುಂಬಿಸಬಹುದು. ಒಂದು ಬಾರಿ ಫುಲ್ ಚಾರ್ಜ್ ಆದರೆ ಒಂದು ತಿಂಗಳವರೆಗೆ ಸ್ವಯಂ ಶುದ್ಧೀಕರಣ ಪ್ರಕ್ರಿಯೆ ಮಾಡುತ್ತದೆ.

ಈ ಕೋವಿಡ್ ಕಾಲದಲ್ಲಿ ಸ್ವಚ್ಛತೆಗೆ ಸಿಕ್ಕ ಮಹತ್ವ ಅಷ್ಟಿಷ್ಟಲ್ಲ. ರೋಗಾಣುಗಳ ವಿರುದ್ಧ ಹೋರಾಡಲು ಮಾರುಕಟ್ಟೆಗೆ ಬರುವ ಯಾವುದೇ ಸಾಧನವನ್ನೂ ಕೊಳ್ಳಲು ಜನರು ಸಿದ್ಧರಿದ್ದಾರೆ. ಇದು ಹೇಗಾಗಿದೆ ಎಂದರೆ, ಬಹುತೇಕ ಎಲ್ಲಾ ಪ್ರಾಡಕ್ಟ್ಗಳೂ, ತಮ್ಮ ಜಾಹೀರಾತುಗಳಲ್ಲಿ, ವೈರಸ್ ವಿರುದ್ಧ ಹೋರಾಡುತ್ತದೆ ಎಂಬ ಸಂದೇಶ ಸಾರಲು ಪ್ರಾರಂಭಿಸಿತು. ಏನೇ ಆಗಲಿ, ವೈರಸ್ ವಿರುದ್ಧ ಒಗ್ಗಟ್ಟಿನಲ್ಲಿ ಹೋರಾಡೋಣ. ಈ ಲೇಖನದಲ್ಲಿ ಒಳಗೊಂಡಿರುವ ಎಲ್ಲಾ ವಿಷಯವು, ಮಾಹಿತಿ ಒದಗಿಸುವ ಉದ್ದೇಶಕ್ಕಾಗಿ ಮಾತ್ರ ಪ್ರಕಟಿಸಲಾಗಿದೆ. ಯಾವುದೇ, ವೈದ್ಯಕೀಯ ಸಲಹೆ ನೀಡುವ ಉದ್ದೇಶ ಇದರಲ್ಲಿಲ್ಲ.

ಇಂದುಧರ ಹಳೆಯಂಗಡಿ

ಇದನ್ನೂ ಓದಿ : ಭಾಸ್ಕರ್ ಶೆಟ್ಟಿ, ರಾಜೇಶ್ವರಿ-ನಿರಂಜನ್ ಮತ್ತು ಹೋಮಕುಂಡ.. 5 ವರ್ಷಗಳ ಹಿಂದೆ ನಡೆದಿದ್ದೇನು?

ಟಾಪ್ ನ್ಯೂಸ್

ಗೋವಾಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಕೋವಿಡ್ ಲಸಿಕೆ, RT PCR ನೆಗೆಟಿವ್ ವರದಿ ಕಡ್ಡಾಯ

ಗೋವಾಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಕೋವಿಡ್ ಲಸಿಕೆ, RT PCR ನೆಗೆಟಿವ್ ವರದಿ ಕಡ್ಡಾಯ

023

ಅಂದು ‘ನೋ’ ಎಂದವಳು ಇಂದು ‘ಎಸ್’ ಅಂತಾಳಾ?  ಶಾರುಖ್ ಸಿನಿಮಾದಲ್ಲಿ ‘ಸೂಪರ್’ ಬೆಡಗಿ ?

ramesh-jarkiholi

ಮನನೊಂದು ರಾಜೀನಾಮೆ ನಿರ್ಧಾರ ಮಾಡಿದ್ದು ಹೌದು, ಆದರೆ..:ಸುತ್ತೂರು ಮಠದಲ್ಲಿ ರಮೇಶ್ ಜಾರಕಿಹೊಳಿ

rekha-kadiresh

ರೇಖಾ ಕದಿರೇಶ್ ಕೊಲೆ ಪ್ರಕರಣ: ಸಂಬಂಧಿಗಳಿಂದಲೇ ಕೊಲೆ! ಫೈರಿಂಗ್ ಮಾಡಿ ಇಬ್ಬರ ಬಂಧನ

ನಾರದ ಕೇಸ್ ಅಫಿಡವಿತ್: ಸುಪ್ರೀಂಕೋರ್ಟ್ ನಲ್ಲಿ ಮಮತಾ ಬ್ಯಾನರ್ಜಿಗೆ ರಿಲೀಫ್

ನಾರದ ಕೇಸ್ ಅಫಿಡವಿತ್: ಸುಪ್ರೀಂಕೋರ್ಟ್ ನಲ್ಲಿ ಮಮತಾ ಬ್ಯಾನರ್ಜಿಗೆ ರಿಲೀಫ್

dfghjkjhg

ಖುರ್ಚಿ ಉಳಿಸಿಕೊಳ್ಳಲು ಅಂದು ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದ್ರು : ಸಿಎಂ

ರಮೇಶ್ ಜಾರಕಿಹೊಳಿ

ರಾಜೀನಾಮೆ ವಿಚಾರ ಮುಂಬೈನಲ್ಲಿ ಹೇಳುತ್ತೇನೆ: ಬಂಡಾಯದ ಎಚ್ಚರಿಕೆ ನೀಡಿದ ರಮೇಶ್ ಜಾರಕಿಹೊಳಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೇಗಿದೆ ಸ್ಯಾಮ್‍ ಸಂಗ್‍ ಎಂ 42 ಎಂ ಸರಣಿಯ ಮೊದಲ 5ಜಿ ಫೋನ್‍?

ಸ್ಯಾಮ್‍ ಸಂಗ್‍ ಎಂ 42: ಹೇಗಿದೆ ಎಂ ಸರಣಿಯ ಮೊದಲ 5ಜಿ ಫೋನ್‍?

reliance-announces-jiophone-next-smartphone-in-partnership-with-google-available-from-september-10

ಸಪ್ಟೆಂಬರ್ ನಲ್ಲಿ ಜಿಯೋಫೋನ್ ನೆಕ್ಸ್ಟ್ ಮಾರುಕಟ್ಟೆಗೆ ಲಗ್ಗೆ..!?

Available in China from from 16 August, the snappily named Xiaomi Mi TV LUX OLED Transparent Edition

ಟಿವಿ ಇತಿಹಾಸದ ಹೊಸ ಅಧ್ಯಾಯ “ಟ್ರಾನ್ಸ್‌ ಪರೆಂಟ್ ಟಿವಿ”

64657

ವರ್ಕ್ ಫ್ರಂ ಹೋಮ್ ಮಾಡುವವರಿಗೆ ಈ ವಸ್ತುಗಳು ಸಹಕಾರಿ

ಮೇಡ್ ಇನ್ ಇಂಡಿಯಾ ನಿಸ್ಸಾನ್ ಎಸ್ ಯುವಿ ಮ್ಯಾಗ್ನೈಟ್ ಭಾರತದಿಂದ ಮೂರು ದೇಶಕ್ಕೆ ರಫ್ತು

ಮೇಡ್ ಇನ್ ಇಂಡಿಯಾ ನಿಸ್ಸಾನ್ ಎಸ್ ಯುವಿ ಮ್ಯಾಗ್ನೈಟ್ ಭಾರತದಿಂದ ಮೂರು ದೇಶಕ್ಕೆ ರಫ್ತು

MUST WATCH

udayavani youtube

4G ಜಮಾನದಲ್ಲೂ ನೆಟ್ವರ್ಕ್ ಇಲ್ಲದೇ ಮಡಾಮಕ್ಕಿ ಮಕ್ಕಳ ಪರದಾಟ!

udayavani youtube

ಕೊಮೆ : ಮೀನುಗಾರರಿಂದ ಸಮುದ್ರ ಪೂಜೆ

udayavani youtube

ನಾನು ಸೋತು ಹೋಗಿದ್ದೇನೆ ಸ್ವಾಮಿ; ಜವಳಿ ವ್ಯಾಪಾರಿಯ ನೋವಿನ ಮಾತು

udayavani youtube

ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

udayavani youtube

ನೇಗಿಲು ಹಿಡಿದು ಉಳುಮೆ ಮಾಡಿದ ಶಾಸಕ ರೇಣುಕಾಚಾರ್ಯ

ಹೊಸ ಸೇರ್ಪಡೆ

ಕೊಡವೂರು ಕಲ್ಮತ್ ಮಸೀದಿಗೆ ಮಂಜೂರು ಮಾಡಿದ ಸರ್ಕಾರಿ ಜಾಗ ಮರಳಿ ಸರ್ಕಾರದ ವಶಕ್ಕೆ

ಕೊಡವೂರು ಕಲ್ಮತ್ ಮಸೀದಿಗೆ ಮಂಜೂರು ಮಾಡಿದ ಸರ್ಕಾರಿ ಜಾಗ ಮರಳಿ ಸರ್ಕಾರದ ವಶಕ್ಕೆ

ಗೋವಾಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಕೋವಿಡ್ ಲಸಿಕೆ, RT PCR ನೆಗೆಟಿವ್ ವರದಿ ಕಡ್ಡಾಯ

ಗೋವಾಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಕೋವಿಡ್ ಲಸಿಕೆ, RT PCR ನೆಗೆಟಿವ್ ವರದಿ ಕಡ್ಡಾಯ

023

ಅಂದು ‘ನೋ’ ಎಂದವಳು ಇಂದು ‘ಎಸ್’ ಅಂತಾಳಾ?  ಶಾರುಖ್ ಸಿನಿಮಾದಲ್ಲಿ ‘ಸೂಪರ್’ ಬೆಡಗಿ ?

ramesh-jarkiholi

ಮನನೊಂದು ರಾಜೀನಾಮೆ ನಿರ್ಧಾರ ಮಾಡಿದ್ದು ಹೌದು, ಆದರೆ..:ಸುತ್ತೂರು ಮಠದಲ್ಲಿ ರಮೇಶ್ ಜಾರಕಿಹೊಳಿ

sdfghjhgfdsa

ಅಧಿವೇಶನದ ಬಗ್ಗೆ ಕುಮಾರಸ್ವಾಮಿ ಪತ್ರ : ಆಡಳಿತದಲ್ಲಿ ಯಾರ ಹಸ್ತಕ್ಷೇಪವು ಇಲ್ಲ ಎಂದ ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.