ಇನ್ ಸ್ಟಾಗ್ರಾಂ ಯೂಟ್ಯೂಬ್, ಟಿಕ್ ಟಾಕ್ ನ 235 ಮಿಲಿಯನ್ ಬಳಕೆದಾರರ ಡೇಟಾ ಸೋರಿಕೆ: ವರದಿ

Team Udayavani, Aug 21, 2020, 3:45 PM IST

data

ನ್ಯೂಯಾರ್ಕ್: ಫೇಸ್ ಬುಕ್ ಒಡೆತನದ ಇನ್ ಸ್ಟಾಗ್ರಾಂ. ಚೀನಾ ಮೂಲದ ಟಿಕ್ ಟಾಕ್  ಹಾಗೂ ಗೂಗಲ್ ಒಡೆತನದ ಯೂಟ್ಯೂಬ್ ನ ಸುಮಾರು 235 ಮಿಲಿಯನ್ ಬಳಕೆದಾರರ ಡೇಟಾವನ್ನು ಡಾರ್ಕ್ ವೆಬ್ ನಲ್ಲಿ ಸೋರಿಕೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ಮಾತ್ರವಲ್ಲದೆ ಖಾಸಗಿ ಪ್ರೊಫೈಲ್ ಗಳನ್ನು ಕೂಡ ಸೋರಿಕೆ ಮಾಡಲಾಗಿದೆ. ಭದ್ರತಾ ಸಂಶೋಧಕರ ಪ್ರಕಾರ ಈ ಡೇಟಾ ಸೋರಿಕೆಯ ಹಿಂದೆ ಅಸುರಕ್ಷಿತ ಡೇಟಾಬೇಸ್ ಇದೆ ಎಂದು ಹೇಳಲಾಗಿದೆ.

ಸಾಮಾಜಿಕ ಮಾಧ್ಯಮ ಬಳಕೆದಾರರ ದತ್ತಾಂಶವನ್ನು ಕಾನೂನುಬದ್ಧವಾದ ಮಾರಾಟ ಮಾಡುವ ಕಂಪೆನಿ  ಸೋಶಿಯಲ್ ಡೇಟಾವು, ದತ್ತಾಂಶ ಬಳಸಲು ಪಾಸ್ ವರ್ಡ್ ಮತ್ತು ದೃಢಿಕರಣ ಪ್ರಕ್ರಿಯೆಯನ್ನೂ ಹೊಂದಿಲ್ಲದೆ ಇರುವುದು ಹ್ಯಾಕರ್ ಗಳಿಗೆ ದತ್ತಾಂಶ ಸುಲಭವಾಗಿ ದೊರೆಯುವಂತೆ ಮತ್ತು ಡಾರ್ಕ್ ವೆಬ್ ಸೈಟ್ ಗಳಲ್ಲಿ ಸಂಗ್ರಹಿಸಿಡುವಂತೆ ಮಾಡಿದೆ.

ಬಳಕೆದಾರರ ವ್ಯೆಯಕ್ತಿಕ ಮಾಹಿತಿ, ಯೂಸರ್ ನೇಮ್, ಅಧಿಕೃತವಾಗಿ ನೋಂದಣಿ ಮಾಡಿರುವ ಹೆಸರು, ಅಕೌಂಟ್ ಡಿಸ್ಕ್ರಿಪ್ಷನ್, ಅಕೌಂಟ್ ಉದ್ಯಮ ಅಥವಾ ಜಾಹೀರಾತು ವಿಭಾಗಕ್ಕೆ ಸೇರಿದೆಯೇ ಎಂಬ ಮಾಹಿತಿ, ಫಾಲೋವರ್ ಎಂಗೇಜ್ ಮೆಂಟ್ ಅಂಕಿಅಂಶ,  ಬಳಕೆದಾರರ ವಯಸ್ಸು, ಲೈಕ್ ಗಳು, ಲೊಕೇಶನ್, ಇ ಮೇಲ್, ಕೊನೆಯ ಪೋಸ್ಟ್ ಮಾಡಿದ ಸಮಯ, ಮೊಬೈಲ್ ಫೋನ್ ಸಂಖ್ಯೆ ಸೇರಿದಂತೆ ಹಲವಾರು ಮಾಹಿತಿಗಳು ಸೋರಿಕೆಯಾಗಿವೆ.

ಬಾಬ್ ಡಯಾಚೆಂಕೊ ಎಂಬ ಸೈಬರ್ ಭದ್ರತಾ ತಂಡ ದತ್ತಾಂಶ ಸೋರಿಕೆಯಾಗಿರುವುದನ್ನು ಪತ್ತೆಹಚ್ಚಿದೆ. ಇನ್ ಸ್ಟಾಗ್ರಾಂ ನ 19,23,92,954, ಟಿಕ್ ಟಾಕ್ ನ, 4,21,29,799 ಹಾಗೂ ಯೂಟ್ಯೂಬ್ ನ 39,55,892 ದತ್ತಾಂಶಗಳು ಮೂರು ಪ್ರತ್ಯೇಕ ಐಪಿವಿ6 ಅಡ್ರೆಸ್ ಗಳಲ್ಲಿ ಹೋಸ್ಟ್ ಮಾಡಲಾದ ಬಹಿರಂಗಪಡಿಸದ ವೆಬ್ ಸೈಟ್ ಗಳಲ್ಲಿ ದಾಖಲಾಗಿವೆ ಎಂದು ಪತ್ತೆಮಾಡಲಾಗಿದೆ.

ಈ ದತ್ತಾಂಶಗಳು ಸೈಬರ್ ಅಪರಾಧಿಗಳಿಗೆ ವರದಾನವಾಗಿದ್ದು  ಮಾಹಿತಿಗಳನ್ನು ಕಲೆಹಾಕಿ ಹಣದ ಬೇಡಿಕೆ ಇಡಲು ನೆರವಾಗುತ್ತದೆ ಎಂದು ಟೆಕ್ ತಂತ್ರಜ್ಞ ಪೌಲ್ ಬಿಶಾಫ್ ಎಚ್ಚರಿಸಿದ್ದಾರೆ.

ಸಂಶೋಧಕರ ಪ್ರಕಾರ, ಫೇಸ್ ಬುಕ್ ಹಾಗೂ ಇನ್ ಸ್ಟಾಗ್ರಾಂ ನಿಂದ 2018ರಲ್ಲಿ ನಿಷೇಧಕ್ಕೊಳಗಾಗಿದ್ದ ಡೀಪ್ ಸೋಶಿಯಲ್ ಎಂಬ ಸಂಸ್ಥೆ ಈ ರೀತಿ ದತ್ತಾಂಶ ಸೋರಿಕೆ ಮಾಡಿದೆ ಎಂದಿದ್ದಾರೆ.

ಟಾಪ್ ನ್ಯೂಸ್

ಏಕದಿನ ಶ್ರೇಯಾಂಕ: 2, 3ನೇ ಸ್ಥಾನದಲ್ಲಿ ಕೊಹ್ಲಿ, ರೋಹಿತ್‌

ಏಕದಿನ ಶ್ರೇಯಾಂಕ: 2, 3ನೇ ಸ್ಥಾನದಲ್ಲಿ ಕೊಹ್ಲಿ, ರೋಹಿತ್‌

ಮುಂಬೈನಲ್ಲಿ ಯುವಕನಿಂದ 1 ಸಾವಿರ ಕೋಟಿ ಜಿಎಸ್‌ಟಿ ವಂಚನೆ

ಮುಂಬೈನಲ್ಲಿ ಯುವಕನಿಂದ 1 ಸಾವಿರ ಕೋಟಿ ಜಿಎಸ್‌ಟಿ ವಂಚನೆ

ದಕ್ಷಿಣ ಆಫ್ರಿಕಾ ತಂಡದಲ್ಲಿ 32 ವರ್ಷದ ಸ್ಪಿನ್‌ ಬೌಲರ್‌ : ಆರೂವರೆ ವರ್ಷಗಳ ಬಳಿಕ ಪುನರಾಗಮನ

ದಕ್ಷಿಣ ಆಫ್ರಿಕಾ ತಂಡದಲ್ಲಿ 32 ವರ್ಷದ ಸ್ಪಿನ್‌ ಬೌಲರ್‌ : ಆರೂವರೆ ವರ್ಷಗಳ ಬಳಿಕ ಪುನರಾಗಮನ

ಜಮ್ಮು-ಕಾಶ್ಮೀರ: ಲಾಲ್‌ಚೌಕ್‌ನಲ್ಲಿ ಹಾರಿದ ತ್ರಿವರ್ಣ

ಜಮ್ಮು-ಕಾಶ್ಮೀರ: ಲಾಲ್‌ಚೌಕ್‌ನಲ್ಲಿ ಹಾರಿದ ತ್ರಿವರ್ಣ

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ಚಿನ್ನ ಪಡೆದು ದುಡ್ಡು ಕೊಡುವ ನೆಪದಲ್ಲಿ ವ್ಯಕ್ತಿಯನ್ನೇ ಕೊಂದು ಕೆರೆಗೆ ಎಸೆದರು

ಚಿನ್ನ ಕೊಟ್ಟು ದುಡ್ಡು ಪಡೆಯುವ ನೆಪದಲ್ಲಿ ವ್ಯಕ್ತಿಯನ್ನೇ ಕೊಂದು ಕೆರೆಗೆ ಎಸೆದರು

ರಾಜ್ಯದಲ್ಲಿ ಇಂದು 48,905 ಹೊಸ ಕೋವಿಡ್ ಪ್ರಕರಣಗಳು ಪತ್ತೆ : 39 ಮಂದಿ ಬಲಿ

ರಾಜ್ಯದಲ್ಲಿ ಇಂದು 48,905 ಹೊಸ ಕೋವಿಡ್ ಪ್ರಕರಣಗಳು ಪತ್ತೆ : 39 ಮಂದಿ ಬಲಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಂಬೈನಲ್ಲಿ ಯುವಕನಿಂದ 1 ಸಾವಿರ ಕೋಟಿ ಜಿಎಸ್‌ಟಿ ವಂಚನೆ

ಮುಂಬೈನಲ್ಲಿ ಯುವಕನಿಂದ 1 ಸಾವಿರ ಕೋಟಿ ಜಿಎಸ್‌ಟಿ ವಂಚನೆ

ಜಮ್ಮು-ಕಾಶ್ಮೀರ: ಲಾಲ್‌ಚೌಕ್‌ನಲ್ಲಿ ಹಾರಿದ ತ್ರಿವರ್ಣ

ಜಮ್ಮು-ಕಾಶ್ಮೀರ: ಲಾಲ್‌ಚೌಕ್‌ನಲ್ಲಿ ಹಾರಿದ ತ್ರಿವರ್ಣ

ಗೋವಾ ವಿಧಾನಸಭಾ ಚುನಾವಣೆ: ಬಿಜೆಪಿಯಿಂದ ಎರಡನೇ ಪಟ್ಟಿ ರಿಲೀಸ್

ಗೋವಾ ವಿಧಾನಸಭಾ ಚುನಾವಣೆ: ಬಿಜೆಪಿಯಿಂದ ಎರಡನೇ ಪಟ್ಟಿ ರಿಲೀಸ್

ನೂತನ ಶೈಲಿಯ ಜೀಪ್ ತಯಾರಿಸಿದ ವ್ಯಕ್ತಿಗೆ ಹೊಸ ವಾಹನ ಗಿಫ್ಟ್ ನೀಡಿದ ಆನಂದ್ ಮಹೀಂದ್ರಾ

ನೂತನ ಶೈಲಿಯ ಜೀಪ್ ತಯಾರಿಸಿದ ವ್ಯಕ್ತಿಗೆ ಹೊಸ ವಾಹನ ಗಿಫ್ಟ್ ನೀಡಿದ ಆನಂದ್ ಮಹೀಂದ್ರಾ

ಮತದಾನದ ಹಕ್ಕು ಪ್ರಜಾಪ್ರಭುತ್ವದ ಅಡಿಪಾಯ: ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ

ಮತದಾನದ ಹಕ್ಕು ಪ್ರಜಾಪ್ರಭುತ್ವದ ಅಡಿಪಾಯ: ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ

MUST WATCH

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

ಹೊಸ ಸೇರ್ಪಡೆ

ಏಕದಿನ ಶ್ರೇಯಾಂಕ: 2, 3ನೇ ಸ್ಥಾನದಲ್ಲಿ ಕೊಹ್ಲಿ, ರೋಹಿತ್‌

ಏಕದಿನ ಶ್ರೇಯಾಂಕ: 2, 3ನೇ ಸ್ಥಾನದಲ್ಲಿ ಕೊಹ್ಲಿ, ರೋಹಿತ್‌

ಮುಂಬೈನಲ್ಲಿ ಯುವಕನಿಂದ 1 ಸಾವಿರ ಕೋಟಿ ಜಿಎಸ್‌ಟಿ ವಂಚನೆ

ಮುಂಬೈನಲ್ಲಿ ಯುವಕನಿಂದ 1 ಸಾವಿರ ಕೋಟಿ ಜಿಎಸ್‌ಟಿ ವಂಚನೆ

ದಕ್ಷಿಣ ಆಫ್ರಿಕಾ ತಂಡದಲ್ಲಿ 32 ವರ್ಷದ ಸ್ಪಿನ್‌ ಬೌಲರ್‌ : ಆರೂವರೆ ವರ್ಷಗಳ ಬಳಿಕ ಪುನರಾಗಮನ

ದಕ್ಷಿಣ ಆಫ್ರಿಕಾ ತಂಡದಲ್ಲಿ 32 ವರ್ಷದ ಸ್ಪಿನ್‌ ಬೌಲರ್‌ : ಆರೂವರೆ ವರ್ಷಗಳ ಬಳಿಕ ಪುನರಾಗಮನ

ವದಸಬ್ಸಬ್ಸವದ

ಆರೋಗ್ಯ ಕಾಪಾಡಿಕೊಳ್ಳಲು ಸಲಹೆ

ಜಮ್ಮು-ಕಾಶ್ಮೀರ: ಲಾಲ್‌ಚೌಕ್‌ನಲ್ಲಿ ಹಾರಿದ ತ್ರಿವರ್ಣ

ಜಮ್ಮು-ಕಾಶ್ಮೀರ: ಲಾಲ್‌ಚೌಕ್‌ನಲ್ಲಿ ಹಾರಿದ ತ್ರಿವರ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.