ಒಲೆಕ್ಟ್ರಾದಿಂದ ಅತ್ಯಾಧುನಿಕ ಹೈಡ್ರೋಜನ್ ಬಸ್ ನಿರ್ಮಾಣ; ಮಾಲಿನ್ಯ ಮುಕ್ತ ಸಾರಿಗೆಯತ್ತ ಹೆಜ್ಜೆ

Team Udayavani, Feb 23, 2023, 4:04 PM IST

ಒಲೆಕ್ಟ್ರಾದಿಂದ ಅತ್ಯಾಧುನಿಕ ಹೈಡ್ರೋಜನ್ ಬಸ್ ನಿರ್ಮಾಣ; ಮಾಲಿನ್ಯ ಮುಕ್ತ ಸಾರಿಗೆಯತ್ತ ಹೆಜ್ಜೆ

ಬೆಂಗಳೂರು: ದೇಶದ ಪ್ರಮುಖ ಮೂಲ ಸೌಕರ್ಯ ಸಂಸ್ಥೆಗಳಲ್ಲಿ ಒಂದಾಗಿರುವ ಮೇಘಾ ಎಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಂಇಐಎಲ್) ನ ಅಂಗ ಸಂಸ್ಥೆಯಾದ ಒಲೆಕ್ಟ್ರಾ ಗ್ರೀನ್‍ ಟೆಕ್ ಲಿಮಿಟೆಡ್ (ಒಜಿಎಲ್) ಮುಂದಿನ ಪೀಳಿಗೆಯ ಮಾಲಿನ್ಯಮುಕ್ತ ಸಾರಿಗೆ ವ್ಯವಸ್ಥೆಯನ್ನು ಭಾರತದ ಮಾರುಕಟ್ಟೆಗೆ  ಪರಿಚಯಿಸಲು ಮುಂದಡಿ ಇರಿಸಿದೆ. ರಿಲಯನ್ಸ್ ನೊಂದಿಗೆ ತಾಂತ್ರಿಕ ಸಹಭಾಗಿತ್ವದಲ್ಲಿ ಒಲೆಕ್ಟ್ರಾ ಹೈಡ್ರೋಜನ್ ಬಸ್ ಗಳನ್ನು ರಸ್ತೆಗಿಳಿಸಲಿವೆ.

ಹೈಡ್ರೋಜನ್ ಬಸ್ ಸಾಂಪ್ರದಾಯಿಕ ಸಾರ್ವಜನಿಕ ಸಾರಿಗೆಗೆ ಸಂಪೂರ್ಣವಾಗಿ ಇಂಗಾಲ- ಮುಕ್ತ ಪರ್ಯಾಯವಾಗಿದೆ. ನೈಸರ್ಗಿಕ ಸಂಪನ್ಮೂಲಗಳ ಸವಕಳಿ ಮತ್ತು ವಾಯುಮಾಲಿನ್ಯ ಮತ್ತು ಹೊರಸೂಸುವಿಕೆಯ ನಕಾರಾತ್ಮಕ ಪರಿಣಾಮಗಳ ಹಿನ್ನೆಲೆಯಲ್ಲಿ, ಓಲೆಕ್ಟ್ರಾ ಹೈಡ್ರೋಜನ್ ಚಾಲಿತ ಬಸ್ಸುಗಳ ಅಭಿವೃದ್ಧಿಯನ್ನು ತ್ವರಿತಗೊಳಿಸವತ್ತ ಮಹತ್ವದ ಹೆಜ್ಜೆ ಇರಿಸಿದೆ. ಇದರಿಂದ ದೇಶದ ಇಂಗಾಲ ಮುಕ್ತ ಹೈಡ್ರೋಜನ್ ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ಅನುವು ಮಾಡಿಕೊಡಲಿದೆ. ಒಲೆಕ್ಟ್ರಾ ತನ್ನ ಹೈಡ್ರೋಜನ್ ಬಸ್ಸುಗಳ ಮೂಲಕ ರಾಷ್ಟ್ರದ ಪರಿಸರ ಸುಸ್ಥಿರ ಇಂಧನ ಭದ್ರತೆಗೆ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ.

12 ಮೀಟರ್ ಲೋ ಫ್ಲೋರ್ ಬಸ್ ಪ್ರಯಾಣಿಕರಿಗೆ 32 ರಿಂದ 49 ಆಸನಗಳು + ಆಯ್ಕೆಗೆ ತಕ್ಕಂತೆ ಬದಲಿಸಬಹುದಾದ ಒಂದು ಡ್ರೈವರ್ ಆಸನ ಸಾಮರ್ಥ್ಯವನ್ನು ಹೊಂದಿದೆ.

ಒಂದೇ ಹೈಡ್ರೋಜನ್ ಭರ್ತಿಯು ಬಸ್ ಗೆ 400 ಕಿ.ಮೀ ವರೆಗೆ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಈ ಶ್ರೇಣಿಯ ವ್ಯಾಪ್ತಿಯಲ್ಲಿ ಹೈಡ್ರೋಜನ್ ತುಂಬಲು ಕೇವಲ 15 ನಿಮಿಷ ತೆಗೆದುಕೊಳ್ಳಲಿದೆ.

ಹೊರ ಸೂಸುವಿಕೆಯ ವಿಷಯಕ್ಕೆ ಬಂದಾಗ, ಈ ಬಸ್ಸುಗಳು ಬಾಲದ (ಟೇಲ್) ಪೈಪ್ ಮೂಲಕ ನೀರನ್ನು ಮಾತ್ರ ಹೊರಹಾಕಲಿದೆ. ಹಳೆಯ ಡೀಸೆಲ್ ಮತ್ತು ಪೆಟ್ರೋಲ್ ವ್ಯವಸ್ಥೆಗಳನ್ನು ಹಂತ ಹಂತವಾಗಿ ಮುಕ್ತಗೊಳಿಸಲು ಮತ್ತು ಅವುಗಳನ್ನು ಈ ಹಸಿರು ಬಸ್ಸುಗಳೊಂದಿಗೆ ಬದಲಾಯಿಸಲು ಇದು ಸಕಾಲವಾಗಿದೆ.

ಸಿಸ್ಟಮ್ ವಿಷಯಕ್ಕೆ ಬಂದಾಗ, ಟೈಪ್ -4 ಹೈಡ್ರೋಜನ್ ಸಿಲಿಂಡರ್ ಗಳನ್ನು ಬಸ್ ನ ಮೇಲ್ಭಾಗದಲ್ಲಿ ಸ್ಥಾಪಿಸಲಾಗಿದೆ. ಇದಲ್ಲದೆ, ಸಿಲಿಂಡರ್ ಗಳು -20 ರಿಂದ +85 ಡಿಗ್ರಿ ಸೆಲ್ಸಿಯಸ್ ನಡುವಿನ ತಾಪಮಾನವನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಒಲೆಕ್ಟ್ರಾ ಮುಂದಿನ ಒಂದು ವರ್ಷದೊಳಗೆ ಈ ಬಸ್ಸುಗಳನ್ನು ವಾಣಿಜ್ಯ ವಹಿವಾಟಿಗೆ ಲಭ್ಯವಾಗಿಸುವ ಗುರಿಯನ್ನು ಹೊಂದಿದೆ.

ಒಲೆಕ್ಟ್ರಾ ಗ್ರೀನ್ ಟೆಕ್: 2000 ರಲ್ಲಿ ಸ್ಥಾಪನೆಯಾದ ಒಲೆಕ್ಟ್ರಾ ಗ್ರೀನ್‍ ಟೆಕ್ ಲಿಮಿಟೆಡ್ (ಸಾರ್ವಜನಿಕವಾಗಿ ಪಟ್ಟಿ ಮಾಡಲಾದ ಕಂಪನಿ) – ಎಂಇಐಎಲ್ ಗ್ರೂಪ್‍ ನ ಭಾಗವಾಗಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಬಸ್‍ ಗಳನ್ನು ತಯಾರಿಸುವಲ್ಲಿ ಪ್ರವರ್ತಕವಾಗಿದೆ. ಇದು ವಿದ್ಯುತ್ ಪ್ರಸರಣ ಮತ್ತು ವಿತರಣಾ ಜಾಲಗಳಿಗಾಗಿ ಭಾರತದ ಅತಿದೊಡ್ಡ ಸಿಲಿಕೋನ್ ರಬ್ಬರ್ / ಕಾಂಪೋಸಿಟ್ ಇನ್ಸುಲೇಟರ್ ತಯಾರಿಕೆಯ ದೇಶಿಯ ಕಂಪನಿಯಾಗಿದೆ.

ಟಾಪ್ ನ್ಯೂಸ್

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.