
ಆರ್ಥಿಕ ಹಿಂಜರಿತದ ಭೀತಿ: ಗೂಗಲ್, ಅಮೆಜಾನ್ ಬಳಿಕ ಐಬಿಎಂನಿಂದ 3,900 ಉದ್ಯೋಗಿಗಳ ವಜಾ
ಐಬಿಎಂ ಮುಖ್ಯ ಹಣಕಾಸು ಅಧಿಕಾರಿ ಜೇಮ್ಸ್ ಕವಾನೌಫ್ ರಾಯಿಟರ್ಸ್ ಗೆ ತಿಳಿಸಿದ್ದಾರೆ.
Team Udayavani, Jan 26, 2023, 12:41 PM IST

ನ್ಯೂಯಾರ್ಕ್:ಆರ್ಥಿಕ ಹಿಂಜರಿತದ ಭೀತಿಯ ನಡುವೆಯೇ ಗೂಗಲ್, ಅಮೆಜಾನ್ ತನ್ನ ಕಂಪನಿಯ ಉದ್ಯೋಗಿಗಳನ್ನು ವಜಾಗೊಳಿಸಿದ್ದ ಬೆನ್ನಲ್ಲೇ ಇದೀಗ ಪ್ರತಿಷ್ಠಿತ ಐಬಿಎಂ ಸಂಸ್ಥೆ ಕೂಡಾ ನೌಕರರ ವಜಾಕ್ಕೆ ಕ್ರಮ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಎರಡು ವರ್ಷ ನಿಷೇಧದ ಬಳಿಕ ಫೇಸ್‌ಬುಕ್,ಇನ್ಸ್ಟಾಗ್ರಾಮ್ ಗೆ ಬರಲಿದ್ದಾರೆ ಡೊನಾಲ್ಡ್ ಟ್ರಂಪ್
ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿ ನಿರೀಕ್ಷಿತ ಆದಾಯ ಗಳಿಸದೇ ನಿರಾಸೆ ಕಂಡಿದ್ದು, ಇದರ ಪರಿಣಾಮ ಸುಮಾರು 3,900 ಉದ್ಯೋಗಿಗಳನ್ನು ವಜಾಗೊಳಿಸಿರುವುದಾಗಿ ಐಬಿಎಂ ಘೋಷಿಸಿದೆ ಎಂದು ವರದಿ ವಿವರಿಸಿದೆ.
ಉದ್ಯೋಗಿಗಳನ್ನು ವಜಾಗೊಳಿಸಿದರೂ ಕೂಡಾ ಕ್ಲೈಯಂಟ್ ಫೇಸಿಂಗ್ ರಿಸರ್ಚ್ ಮತ್ತು ಡೆವಲಪ್ ಮೆಂಟ್ ಗೆ ನೌಕರರನ್ನು ನೇಮಕ ಮಾಡಲು ಕಂಪನಿ ಬದ್ಧವಾಗಿದೆ ಎಂದು ಐಬಿಎಂ ಮುಖ್ಯ ಹಣಕಾಸು ಅಧಿಕಾರಿ ಜೇಮ್ಸ್ ಕವಾನೌಫ್ ರಾಯಿಟರ್ಸ್ ಗೆ ತಿಳಿಸಿದ್ದಾರೆ.
ಐಬಿಎಂ 3,900 ಉದ್ಯೋಗಿಗಳನ್ನು ವಜಾಗೊಳಿಸಿದ ಬೆನ್ನಲ್ಲೇ ಜಾಗತಿಕ ಷೇರುಮಾರುಕಟ್ಟೆಯಲ್ಲಿ ಐಬಿಎಂ ಕಂಪನಿಯ ಶೇರುಗಳ ಮೌಲ್ಯ ಶೇ.2ರಷ್ಟು ಕುಸಿತ ಕಾಣುವ ಮೂಲಕ ಹೂಡಿಕೆದಾರರು ನಷ್ಟ ಅನುಭವಿಸುವಂತಾಗಿತ್ತು.
ಟಾಪ್ ನ್ಯೂಸ್
