
ಬುಹ್ಲ್ ನಿಂದ ಭಾರತದ ದಿನಸಿ ವ್ಯಾಪಾರಿಗಳಿಗಾಗಿ ಇಂಪ್ರೆಝ್ ಪಿಓಎಸ್ ಆ್ಯಪ್
ಜರ್ಮನ್ ಕಂಪೆನಿಯಿಂದ ಭಾರತದಲ್ಲಿ 5 ಮಿಲಿಯನ್ ಯೂರೋ ಹೂಡಿಕೆ
Team Udayavani, Oct 11, 2021, 3:16 PM IST

ಬೆಂಗಳೂರು: ಜರ್ಮನಿ ಮೂಲದ ಬುಹ್ಲ್ ಗ್ರೂಪ್ ಭಾರತದಾದ್ಯಂತ ಇರುವ ಚಿಲ್ಲರೆ-ದಿನಸಿ ವ್ಯಾಪಾರಿಗಳಿಗೋಸ್ಕರ ಮೊಬೈಲ್ ಆಪ್ ಇಂಪ್ರೆಝ್ – ಪಾಯಿಂಟ್ ಆಫ್ ಸೇಲ್ (PoS) ನ್ನು ಇದೇ ಮೊದಲ ಬಾರಿಗೆ ಬೆಂಗಳೂರಿನ ಮೂಲಕ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.
ಸ್ಥಳೀಯತೆಗೆ ಆದ್ಯತೆ ನೀಡಿರುವ ಕಂಪೆನಿ, ಬ್ಯುಸಿನೆಸ್ ಮಾಡಿ, ‘ಇಂಪ್ರೆಝ್’ ಆಗಿ ಎಂದು ಕನ್ನಡದಲ್ಲೇ ಧ್ಯೇಯವಾಕ್ಯ ರೂಪಿಸಿದೆ.
ಬೆಂಗಳೂರಿನ ಚಿಲ್ಲರೆ ಅಂಗಡಿಗಳು ಈಗ ಯಾವುದೇ ಅಡಚಣೆಯಿಲ್ಲದೇ ಸ್ಕ್ಯಾನ್ ಮಾಡುವುದರ ಮೂಲಕ ವ್ಯಾಪಾರದಲ್ಲಿ ಪಾರದರ್ಶಕತೆ, ಬಿಲ್ಲಿಂಗ್, ದಾಸ್ತಾನು ಮತ್ತು ಗ್ರಾಹಕರ ಪ್ರೊಫೈಲ್ ಗಳನ್ನು ನಿರ್ವಹಿಸಬಹುದು.
ಬುಹ್ಲ್ ಗ್ರೂಪ್ ಭಾರತದಲ್ಲಿ 5 ಮಿಲಿಯನ್ ಯುರೋಗಳನ್ನು ಹೂಡಿಕೆ ಮಾಡುತ್ತಿದೆ. ದಿನಸಿ ಚಿಲ್ಲರೆ ಸ್ಟೋರ್ ಗಳನ್ನು ಗುರಿಯಾಗಿಸಿಕೊಂಡು ಆಂಡ್ರಾಯ್ಡ್ ಅಪ್ಲಿಕೇಶನ್ ನಲ್ಲಿ ತನ್ನ Point of Sale (PoS) ವೈಶಿಷ್ಟ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಗೃಹೋಪಯೋಗಿ ಬ್ರಾಂಡ್ ಗಳು ಮತ್ತು ಉತ್ಪನ್ನಗಳನ್ನು ಪಟ್ಟಿ ಮಾಡಿದೆ.
ಇದನ್ನೂ ಓದಿ:ಅಮೆಜಾನ್ ಪೇ ಮೂಲಕ ಅಮೆಜಾನ್ ಗ್ರಾಹಕರಿಗೆ ವಿವಿಧ ಆಫರ್ ಗಳು
ಜರ್ಮನ್ ಮೂಲದ ಬುಹ್ಲ್ ಗ್ರೂಪ್ ಅತೀದೊಡ್ಡ ಹಣಕಾಸು ಮತ್ತು ತೆರಿಗೆ ಸಾಫ್ಟ್ ವೇರ್ ಮಾರುಕಟ್ಟೆಯ ಅಗ್ರಗಣ್ಯ ಸಂಸ್ಥೆಯಾಗಿದೆ. ಯುರೋಪ್ ಮತ್ತು ಏಷ್ಯಾದಾದ್ಯಂತ 13 ಕಚೇರಿಗಳು ಮತ್ತು 50 ಸಾಫ್ಟ್ ವೇರ್ ಉತ್ಪನ್ನಗಳೊಂದಿಗೆ ವಾರ್ಷಿಕ 150 ಮಿಲಿಯನ್ ಯೂರೋ ವಹಿವಾಟು ಹೊಂದಿದೆ. Imprezz mobile app ವ್ಯವಹಾರ ಕಾರ್ಯಾಚರಣೆಗಳ ವಿಶಿಷ್ಟ ಸಾಫ್ಟ್ ವೇರ್ ಆಗಿದ್ದು, ಸೇವೆಗಳು, ಉತ್ಪಾದನೆ, ದಿನಸಿ ವಿವಿಧ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಲೆಕ್ಕಪತ್ರ, ಜಿಎಸ್ಟಿ ಸ್ಕಾನ್ ಮಾಡುವುದರ ಮೂಲಕ ಬಿಲ್ಲಿಂಗ್, ಇನ್ ವೆಂಟರಿ, ಗ್ರಾಹಕರ ಡೇಟಾ, ಆರ್ಡರ್ ಪ್ರೊಸೆಸಿಂಗ್ ಇತ್ಯಾದಿಗಳನ್ನು ನಿರ್ವಹಿಸುತ್ತದೆ.
ಬೆಂಗಳೂರಿನ ಚಿಲ್ಲರೆ ದಿನಸಿ ವ್ಯಾಪಾರಿಗಳು ವಿಶಿಷ್ಟವಾಗಿ ವಿನ್ಯಾಸ ಗೊಳಿಸಿರುವ ಬುಲ್ ಮೊಬೈಲ್ ಅಪ್ಲಿಕೇಶನ್ ನಿಂದಾಗಿ ವ್ಯಾಪಾರಸ್ಥರು ತಮ್ಮ ಅಂಗಡಿಯ ವ್ಯಾಪಾರದಲ್ಲಿ ಯಾವುದೇ ಹೆಚ್ಚುವರಿ ಹಾರ್ಡ್ ವೇರ್ ಹೂಡಿಕೆಯಿಲ್ಲದ, ಮೊಬೈಲ್ ಫೋನ್ ಮೂಲಕ, ವೆಬ್ ಅಪ್ಲಿಕೇಶನ್ ನಲ್ಲಿರುವ ಎಲ್ಲಾ ವೈಶಿಷ್ಟ್ಯಗಳ ಜೊತೆಗೆ, ಇಂಪ್ರಜ್ ನ ಪಾಯಿಂಟ್ ಆಫ್ ಸೇಲ್ (ಪಿಒಎಸ್) ವ್ಯವಸ್ಥೆಯಿಂದಾಗಿ, ಸಂಪೂರ್ಣ ಬಿಲ್ಲಿಂಗ್ ಪ್ರಕ್ರಿಯೆಯನ್ನು ಮಾಡಬಹುದು. ಇದು ನಗದು ರಿಜಿಸ್ಟರ್ ಮಾಡ್ಯೂಲ್ ಗೆ ಸಮಾನವಾಗಿದೆ. ಈ ವಿಶಿಷ್ಟ ಅಪ್ಲಿಕೇಶನ್ ನಿಂದಾಗಿ ವ್ಯಾಪಾರಿಗಳು ತಮ್ಮ ವ್ಯವಹಾರವನ್ನು ಹೆಚ್ಚು ಹೆಚ್ಚು ಬೆಳೆಸಲು, ಪರಿಣಾಮಕಾರಿ ನಿರ್ಧಾರ ತೆಗೆದುಕೊಳ್ಳಲು, ವ್ಯಾಪಾರ-ವಹಿವಾಟಿನ ವಿವರವಾದ ದತ್ತಾಂಶ ಮತ್ತು ಹೂಡಿಕೆ-ವೆಚ್ಚ ಇತರ ಅಂಕಿಅಂಶಗಳನ್ನು ಸಹ ಪಡೆಯಬಹುದಾಗಿದೆ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Dr. TMA Pai Convention Centre; 3 ದಿನಗಳ “ಬಿಗ್ ಬ್ರ್ಯಾಂಡ್ಸ್ ಎಕ್ಸ್‌ಪೋಗೆ’ ಚಾಲನೆ

Health: ಸೋಶಿಯಲ್ ಆ್ಯಂಕ್ಸೈಟಿ ಡಿಸಾರ್ಡರ್

Karachi; ಗುಂಡಿನ ದಾಳಿಯಲ್ಲಿ ಲಷ್ಕರ್-ಎ-ತೈಬಾ ಸ್ಥಾಪಕ ಸದಸ್ಯ ಖೈಸರ್ ಫಾರೂಕಿ ಹತ್ಯೆ

GHOST: ಶಿವಣ್ಣನ ಘೋಸ್ಟ್ ಅವತಾರಕ್ಕೆ ಫ್ಯಾನ್ಸ್ ಫಿದಾ; ಟ್ರೇಲರ್ ನೋಡಿ

Bengaluru; ನಟ ನಾಗಭೂಷಣ ಕಾರು ಅಪಘಾತ; ಮಹಿಳೆ ಸ್ಥಳದಲ್ಲೇ ಸಾವು