iPhone 15 Pro review: ಶಕ್ತಿಶಾಲಿ ಕಾರ್ಯಾಚರಣೆ, ಅತ್ಯುತ್ತಮ ಕ್ಯಾಮರಾ, ಕೈಗೆ ಹಗುರ


Team Udayavani, Oct 17, 2023, 9:10 AM IST

4-i-phone

ಐಫೋನ್ 15 ಸರಣಿಯ ಫೋನ್‌ಗಳ ಪೈಕಿ 15 Pro ಮಾದರಿ ದೈನಂದಿನ ಬಳಕೆಯಲ್ಲಿ ಯಾವ ರೀತಿ ಇದೆ? ಇದರ ವಿಶೇಷಗಳೇನು? ಇದರ ಅನುಭವ ಹೇಗಿದೆ ಎಂಬ ಸವಿವರ ಇಲ್ಲಿದೆ. ಆದರೆ ಇದಕ್ಕೂ ಮೊದಲು ಐಫೋನ್ 15, 15 ಪ್ಲಸ್, 15 ಪ್ರೊ ಮತ್ತು 15 ಪ್ರೊ ಮ್ಯಾಕ್ಸ್ ಈ ನಾಲ್ಕು ಮಾದರಿಗಳ ವ್ಯತ್ಯಾಸಗಳೇನು ಎಂಬುದನ್ನು ಸಂಕ್ಷಿಪ್ತವಾಗಿ ಇಲ್ಲಿ ನೀಡಲಾಗಿದೆ.

ಐಫೋನ್ 15 ಮಾದರಿ 6.1 ಇಂಚಿನ ಪರದೆಯನ್ನೂ 15 ಪ್ಲಸ್ ಮಾದರಿ 6.7 ಇಂಚಿನ ಪರದೆಯನ್ನೂ ಹೊಂದಿವೆ. ಪರದೆ ರಿಫ್ರೆಶ್ ರೇಟ್ ಎರಡರಲ್ಲೂ 60 ಹರ್ಟ್ಜ್ ಇದೆ. ಮಿಕ್ಕಂತೆ ಎರಡರಲ್ಲೂ ಒಂದೇ ಸ್ಪೆಸಿಫಿಕೇಷನ್ ಗಳಿವೆ. ಈ ಎರಡರಲ್ಲೂ ಎ16 ಬಯೋನಿಕ್ ಚಿಪ್ ಸೆಟ್ ಇದೆ. ಅಲ್ಯೂಮಿನಿಯಂ ಫ್ರೇಂ ಮತ್ತು ಗ್ಲಾಸ್ ಬ್ಯಾಕ್ ಹೊಂದಿವೆ. 48 ಮೆ.ಪಿ. ಮತ್ತು 12 ಮೆ.ಪಿ. ಎರಡು ಕ್ಯಾಮರಾ ಇವೆ. 15 ಮಾದರಿ 171 ಗ್ರಾಂ ತೂಕ ಇದ್ದರೆ 15 ಪ್ಲಸ್ ಮಾದರಿ 201 ಗ್ರಾಂ ತೂಕ ಹೊಂದಿದೆ. 15 ದರ 79,900 ರೂ.ಗಳಿಂದ ಆರಂಭವಾಗುತ್ತದೆ. 15 ಪ್ಲಸ್ ದರ 89,900 ರೂ.ಗಳಿಂದ ಪ್ರಾರಂಭ.

ಇನ್ನು15 ಪ್ರೊ ಮತ್ತು 15 ಪ್ರೊ ಮ್ಯಾಕ್ಸ್ ಎರಡರಲ್ಲೂ ಬಯೋನಿಕ್ ಎ 17 ಪ್ರೊ ಚಿಪ್ಸೆಟ್ ಇದೆ. 15 ಪ್ರೊ 6.1 ಇಂಚು ಹಾಗೂ ಪ್ರೊ ಮ್ಯಾಕ್ಸ್ 6.7 ಇಂಚಿನ ಪರದೆ ಹೊಂದಿದೆ. ಎರಡರಲ್ಲೂ ಪರದೆಯ ರಿಫ್ರೆಶ್ ರೇಟ್ 120 ಹರ್ಟ್ಜ್ ಇದೆ.  ಇವೆರಡೂ ಫೋನ್ ಗಳಲ್ಲಿ ಟೈಟಾನಿಯಂ ಫ್ರೇಂ ಮತ್ತು ಗ್ಲಾಸ್ ಬ್ಯಾಕ್ ಇದೆ. 48 ಮೆ.ಪಿ.+ 12. ಮೆ.ಪಿ.+ 12 ಮೆ.ಪಿ. ಮೂರು ಕ್ಯಾಮರಾ ಇವೆ. ಪ್ರೊ ಮತ್ತು ಪ್ರೊ ಮ್ಯಾಕ್ಸ್ ನಡುವೆ ಪರದೆಯ ಅಳತೆ ಕ್ಯಾಮರಾದ zoom (15x vs 25x ) ಮತ್ತು  ಬ್ಯಾಟರಿ ಬಾಳಿಕೆಯಲ್ಲಿ ಸ್ವಲ್ಪ ವ್ಯತ್ಯಾಸ ಇದೆ. ಇವಿಷ್ಟನ್ನು ಬಿಟ್ಟರೆ ಇನ್ನುಳಿದ ಅಂಶಗಳು ಎರಡರಲ್ಲೂ ಒಂದೇ. 15 ಪ್ರೊ ದರ 1,34,900 ರೂ.ಗಳಿಂದ ಆರಂಭ. 15 ಪ್ರೊ ಮ್ಯಾಕ್ಸ್ ದರ 1,59,900 ರೂ.ಗಳಿಂದ ಆರಂಭ.

ಒಂದು ಮುಖ್ಯ ಬದಲಾವಣೆ ಎಂದರೆ ನಾಲ್ಕರಲ್ಲೂ ಯುಎಸ್ ಬಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಇದೆ. ಮುಂಚೆ ಐಫೋನ್ ಗಾಗೇ ಪ್ರತ್ಯೇಕ ಚಾರ್ಜರ್ ಕೊಳ್ಳಬೇಕಾಗಿತ್ತು. ಈಗ ಆಂಡ್ರಾಯ್ಡ್ ಫೋನ್ ಗಳಲ್ಲಿ ಬಳಸುವ ಟೈಪ್ ಸಿ ಚಾರ್ಜರ್ ನಲ್ಲೇ ಐಫೋನ್ ಚಾರ್ಜ್ ಮಾಡಬಹುದು.

ಈ ನಾಲ್ಕೂ ಮಾದರಿಗಳ ಪೈಕಿ ಐಫೋನ್ 15 ಪ್ರೊ ಮಾದರಿಯ ಬಳಕೆಯ ಅನುಭವವನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

ವಿನ್ಯಾಸ:

15 ಪ್ರೊ ದೇಹಕ್ಕೆ ಸ್ಟೀಲ್ ಬದಲು ಬಹಳ ಕಠಿಣ ಲೋಹವಾದ ಟೈಟಾನಿಯಂ ಅನ್ನು ಬಳಸಲಾಗಿದೆ.  ರಫ್ ಅಂಡ್ ಟಫ್ ಮಾತ್ರವಲ್ಲ ಫೋನಿನ ತೂಕವನ್ನೂ ಕಡಿಮೆ ಮಾಡಿದೆ. ಫೋನಿನ ಅಂಚುಗಳನ್ನು ಮೊದಲಾವುಗಳಿಗಿಂತ ಹೆಚ್ಚು ರೌಂಡ್ ಮಾಡಲಾಗಿದೆ. ಇದು ಫೋನನ್ನು ಹಿಡಿದುಕೊಳ್ಳಲು ಮೊದಲಿಗಿಂತ ಹೆಚ್ಚು ಕಂಫರ್ಟ್ ನೀಡುತ್ತದೆ.

ಐಫೋನಿನ ಫ್ರೇಂ ವಿನ್ಯಾಸ ಅದರದೇ ಆದ ವೈಶಿಷ್ಟ್ಯತೆಯನ್ನು ಹೊಂದಿದ್ದು, ಅದರ ಚಪ್ಪಟೆ ವಿನ್ಯಾಸ ಬೇರೆ ಫೋನ್ ಗಳಿಗಿಂತ ವಿಭಿನ್ನವಾದ ವಿನ್ಯಾಸ ನೀಡಿದೆ. ಫೋನಿನ ಮೇಲ್ಭಾಗದಲ್ಲಿ ಯಾವುದೇ ಪೋರ್ಟ್, ಕಿಂಡಿ ಇಲ್ಲ. ತಳಭಾಗದ ಮಧ್ಯದಲ್ಲಿ ಸಿ ಟೈಪ್ ಪೋರ್ಟ್ ಇದೆ. ಅದರ ಎಡ ಬಲದಲ್ಲಿ ಮೈಕ್ ಮತ್ತು ಸ್ಪೀಕರ್ ಗಳ ಕಿಂಡಿಗಳಿವೆ. ಫೋನಿನ ಬಲಭಾಗದಲ್ಲಿ ಆನ್ ಆಫ್ ಬಟನ್ ಮಾತ್ರ ಇದೆ. ಎಡಭಾಗದಲ್ಲಿ ಧ್ವನಿ ಹೆಚ್ಚು ಕಡಿಮೆ ಮಾಡುವ ಎರಡು ಪ್ರತ್ಯೇಕ ಬಟನ್ ಗಳನ್ನು ನೀಡಿದ್ದು, ಅದರ ಮೇಲ್ಭಾಗದಲ್ಲಿ ಆಕ್ಷನ್ ಬಟನ್ ನೀಡಲಾಗಿದೆ. ಇದನ್ನು ಒತ್ತಿ ಹಿಡಿದಾಗ ಫೋನ್ ಸೈಲೆಂಟ್ ಅಥವಾ ರಿಂಗ್ ಮೋಡ್ ಗೆ ನಿಲ್ಲಿಸಿಕೊಳ್ಳಬಹುದು. ಮತ್ತು ಈ ಬಟನ್ ಅನ್ನು ನೊಟಿಫಿಕೇಷನ್ ಸೈಲೆಂಟ್ ಮಾಡಲು, ಕ್ಯಾಮರಾ, ಟಾರ್ಚ್, ವಾಯ್ಸ್ ರೆಕಾರ್ಡ್, ಮ್ಯಾಗ್ನಿಫೈರ್ ಸೇರಿ ವಿವಿಧ ಆಪ್ ನ ಕಾರ್ಯಾಚರಣೆಯ ಬಟನ್ ಆಗಿ ಬಳಸಬಹುದು. ಇವುಗಳಲ್ಲಿ ಸೈಲೆಂಟ್ ಮತ್ತು ರಿಂಗ್ ಬಟನ್ ಗಾಗಿ ಬಳಸುವುದು ಹೆಚ್ಚು ಪ್ರಯೋಜನಕರ.

ಫೋನಿನ ಫ್ರೇಂ ಟೈಟಾನಿಯಂದಾದರೆ, ಅದರ ಹಿಂಬದಿ ಪ್ಯಾನೆಲ್ ಕಠಿಣ ಗಾಜಿನದ್ದಾಗಿದೆ. ಇದು ಫೋನಿಗೆ ಪ್ರೀಮಿಯಂ ಲುಕ್ ನೀಡುತ್ತದೆ. ಹಿಂಬದಿಯ ಎಡಮೂಲೆಯಲ್ಲಿ ಮೂರು ಕ್ಯಾಮರಾ ಲೆನ್ಸ್ ಗಳಿವೆ. ಇದು ಐಫೋನ್ ನ ಟಿಪಿಕಲ್ ಸ್ಟೈಲ್ ವಿನ್ಯಾಸದಲ್ಲಿದೆ. ಹಿಂಬದಿಯ ಮಧ್ಯದಲ್ಲಿ ಆಪಲ್ ಲೋಗೋ ಇದೆ. ಐಫೋನ್ 15 ಪ್ರೊ 6.1 ಇಂಚಿನ ಪರದೆ ಹೊಂದಿರುವುದರಿಂದ ಕೈಯಲ್ಲಿ ಹಿಡಿದುಕೊಳ್ಳಲು ಸಾಕಷ್ಟು ಅನುಕೂಲಕರವಾಗಿದೆ. ಹಗುರವಾಗಿಯೂ ಇದೆ.

ಪರದೆ:

ಮೊದಲೇ ತಿಳಿಸಿದಂತೆ ಇದು 6.1 ಇಂಚಿನ ಓಎಲ್ಇಡಿ ಪರದೆ ಹೊಂದಿದೆ. ಪರದೆಯ ರಿಫ್ರೆಶ್ ರೇಟ್ 120 ಇದ್ದು, ಬಹಳ ಸರಾಗವಾಗಿ, ಒಂದಿನಿತೂ ಅಡೆತಡೆಯಿಲ್ಲದೇ ಪರದೆಯನ್ನು ಮೇಲೆ ಕೆಳಗೆ ಓಡಿಸಬಹುದು.  ಪರದೆ ಫ್ರೇಮಿನವರೆಗೂ ಇದ್ದು, ಸಣ್ಣ ದಾರದ ಎಳೆಯಂಥ ಬೆಜೆಲ್ ಇದೆ.  ಓಎಲ್ಇಡಿ ರೆಟಿನಾ ಡಿಸ್ ಪ್ಲೇ ಪರದೆಗೆ ಅತ್ಯುತ್ತಮ ಗುಣಮಟ್ಟ ನೀಡಿದ್ದು, ಪರದೆ ಹೆಚ್ಚುಸಮಯ ನೋಡಿದಾಗಲೂ ಕಣ್ಣಿಗೆ ಆಯಾಸವಾಗದಂಥ ಮೆದುವಾದ ಬೆಳಕನ್ನು ನೀಡುತ್ತದೆ.

ಐಫೋನ್ ನ ವಿಶೇಷತೆಗಳಲ್ಲೊಂದಾದ ಡೈನಾಮಿಕ್ ಐಲ್ಯಾಂಡ್ ಎಂಬ ಹೆಸರಿನ ಉದ್ದವಾದ ಕಿಂಡಿಯನ್ನು ಪರದೆಯ ಮೇಲ್ಭಾಗ ನೀಡಲಾಗಿದೆ. ಇದು ಫೋನ್ ಯಾವ ಕಾರ್ಯಾಚರಣೆಯಲ್ಲಿರುತ್ತದೋ ಆ ಸೆಟಿಂಗ್ ಅನ್ನು ತೋರಿಸುತ್ತದೆ. ಫೋನ್ ನ ಹಾಟ್ ಸ್ಪಾಟ್ ಆನ್ ಮಾಡಿದ್ದರೆ ಅಥವಾ ಕರೆಯಲ್ಲಿದ್ದರೆ ಆ ಸಿಂಬಲ್ ಪ್ರದರ್ಶಿಸುತ್ತದೆ. ಉದಾ:ಗೆ ಫೋನ್ ಕರೆಯಲ್ಲಿ ನಿರತರಾಗಿದ್ದಾಗ ಬೇರೆ ಯಾವುದೇ ಆಪ್ ಗಳು ಓಪನ್ ಆಗಿದ್ದರೂ, ಡೈನಾಮಿಕ್ ಐಲ್ಯಾಂಡ್ ಮೇಲೆ ಟಚ್ ಮಾಡಿದರೆ, ಫೋನ್ ಡಯಲರ್  ಓಪನ್ ಆಗುತ್ತದೆ.

ಆಲ್ವೇಸ್ ಆನ್ ಡಿಸ್ಪ್ಲೇ ಫೀಚರ್ ಆನ್ ಮಾಡಿಕೊಂಡರೆ, ಫೋನ್ ಆಫ್ ನಲ್ಲಿದ್ದರೂ ಬ್ಯಾಟರಿ ಸ್ಟೇಟಸ್, ನೊಟಿಫಿಕೇಷನ್, ಟೈಮ್ ಎಲ್ಲವನ್ನೂ ಪರದೆಯ ಮೇಲೆ ನೋಡಬಹುದು. ಇದರ ಪರದೆ 1,600 ನಿಟ್ಸ್ ಗಳಷ್ಟು ಹೆಚ್ಚಿನ ಬ್ರೈಟ್ನೆಸ್ ಹೊಂದಿದ್ದು ಬಿಸಿಲಿನಲ್ಲಿ 2000 ನಿಟ್ಸ್ ಗಳಷ್ಟು ತೀವ್ರ ಪ್ರಕಾಶತೆ ಹೊಂದಿದೆ. ಹೀಗಾಗಿ ಎಂಥದೇ ಬಿಸಿಲಿನಲ್ಲೂ ಫೋನಿನ ಪರದೆಯನ್ನು ಸ್ಪಷ್ಟವಾಗಿ ನೋಡಬಹುದು, ಮೆಸೇಜ್ ಗಳನ್ನು ಓದಬಹುದು, ಫೋಟೋ ನೋಡಬಹುದು.

ಕ್ಯಾಮರಾ:

ಐಫೋನ್ ತನ್ನ ಉತ್ತಮ ಕ್ಯಾಮರಾ ಗುಣಮಟ್ಟಕ್ಕೆ ಇತರ ಯಾವುದೇ ಫೊನ್ ಗಳಿಗಿಂತಲೂ ಪ್ರಸಿದ್ಧವಾಗಿದೆ. ಅದನ್ನು 15 ಪ್ರೊ ಸಹ ಸಾಬೀತುಪಡಿಸುತ್ತದೆ. ಹೊರಾಂಗಣವಿರಲಿ, ಒಳಾಂಗಣವಿರಲಿ ಇದರಲ್ಲಿ ಉತ್ತಮ ಫೋಟೋಗಳು ಮೂಡಿ ಬರುತ್ತವೆ. ಸಭಾಂಗಣದಂಥ ಒಳಾಂಗಣದಲ್ಲಿ ವೇದಿಕೆಯ ಮೇಲಿನ ರಾತ್ರಿ ಸಮಯದ ಫೋಟೋಗಳು ಸಹ ಉತ್ತಮವಾಗಿ ಬರುತ್ತವೆ. ಮಂದ ಬೆಳಕಿನಲ್ಲೂ ವಸ್ತುವಿನ ಡೀಟೇಲ್ಡ್  ಫೋಟೋ ಮೂಡಿ ಬರುತ್ತದೆ. ಸಾಮಾನ್ಯ ದರ್ಜೆಯ ಮೊಬೈಲ್ ಫೋನ್ ಗಳು ಇಂಥ ಫೋಟೋಗಳಲ್ಲಿ ಸೋಲುತ್ತವೆ. ಮೊಬೈಲ್ ಫೋನ್ ಗಳಲ್ಲಿ ಎಷ್ಟು ಮೆಗಾಪಿಕ್ಸಲ್ ಎಂಬ ಮೇಲೆ ಹಲವರು ಕ್ಯಾಮರಾ ಗುಣಮಟ್ಟ ಲೆಕ್ಕಹಾಕುತ್ತಾರೆ. ಇದರಲ್ಲಿ 48 ಮೆ.ಪಿ. ಮುಖ್ಯ ಕ್ಯಾಮರಾ ಇದೆ. 100, 200 ಮೆ.ಪಿ. ಕ್ಯಾಮರಾದ ಮೊಬೈಲ್ ಫೋನ್ ಗಳಲ್ಲಿ ಈ ಗುಣಮಟ್ಟದ ಫೋಟೋ ಬರಲು ಸಾಧ್ಯವಿಲ್ಲ!

ಸೆಲ್ಪೀ ಕ್ಯಾಮರಾ 12 ಮೆಪಿ ಲೆನ್ಸ್ ಹೊಂದಿದ್ದು, ಅದರ ಗುಣಮಟ್ಟವೂ ಅತ್ಯುತ್ತಮವಾಗಿದೆ. ಹಿಂಬದಿ ಕ್ಯಾಮರಾದಲ್ಲಿ 15x zoom  ನೀಡಲಾಗಿದ್ದು, ಇದು ಇನ್ನಷ್ಟು ಹೆಚ್ಚಿರಬೇಕಿತ್ತು ಎನಿಸದಿರದು. (15 ಪ್ರೊ ಮ್ಯಾಕ್ಸ್ ನಲ್ಲಿ 25x zoom ಇದೆ). ಅಲ್ಟ್ರಾ ವೈಡ್ ಮತ್ತು ಮ್ಯಾಕ್ರೋ ಲೆನ್ಸ್ ಗಳು ಅಚ್ಚುಕಟ್ಟಾಗಿ ತಮ್ಮ ಕಾರ್ಯನಿರ್ವಹಿಸಿವೆ. ಒಟ್ಟಾರೆ ಸಹಜವಾದ ಬಣ್ಣಗಳ, ಗುಣಮಟ್ಟದ ಫೋಟೋಗಳನ್ನು ಈ ಕ್ಯಾಮರಾ ನೀಡುತ್ತದೆ.

ವಿಡಿಯೋ ಗುಣಮಟ್ಟ ಕ್ಯಾಮರಾಗಳ ಗುಣಮಟ್ಟಕ್ಕೆ ಸಮನಾಗಿದೆ. 4k ವಿಡಿಯೋಗಳನ್ನೂ ಚಿತ್ರೀಕರಿಸಬಹುದು.

ಕಾರ್ಯಾಚರಣೆ:

ಇದರಲ್ಲಿ ಹೊಚ್ಚ ಹೊಸದಾದ ಬಯೋನಿಕ್ ಎ 17 ಪ್ರೊ ಪ್ರೊಸೆಸರ್ ಬಳಲಾಗಿದೆ. ಇದು ವಿಶ್ವದ ಮೊದಲ 3nm ಚಿಪ್. ಸಾಧಾರಣ ಬಳಕೆಯಲ್ಲಾಗಲೀ, ಹೆವಿ ಗೇಮ್ ಗಳಿರಲಿ ಯಾವ ಹಂತದಲ್ಲೂ ಫೋನ್ ತಡವರಿಸುವುದಿಲ್ಲ. ಫೋನ್ ಅತ್ಯಂತ ವೇಗವಾಗಿ  ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಐಓಎಸ್ 17 ಇದ್ದು ಇನ್ನಷ್ಟು ಮೃದುವಾಗಿ ಕಾರ್ಯಾಚರಿಸುತ್ತದೆ.

ಕನ್ನಡಕ್ಕೆ ಲಿಪ್ಯಂತರ *ಕೀಬೋರ್ಡ್:

ಈ ಹೊಸ ಐಓಎಸ್ 17 ನಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಿಗೆ ಲಿಪ್ಯಂತರ ಕೀಬೋರ್ಡ್ ಪರಿಚಯಿಸಲಾಗಿದೆ. ಐಫೋನ್ನಲ್ಲಿ ಕನ್ನಡ ಟೈಪ್ ಮಾಡಲು ಸ್ವಂತ ಕೀಬೋರ್ಡ್ ಇರಲಿಲ್ಲ. ಈಗ ಲಿಪ್ಯಂತರ (Transliteration) ಕೀಬೋರ್ಡ್ ಮೂಲಕ ಇಂಗ್ಲಿಷ್ನಲ್ಲಿ ಟೈಪ್ ಮಾಡಿ ಕನ್ನಡ ಮೂಡಿಸುವ ಆಯ್ಕೆ ನೀಡಲಾಗಿದೆ. ಇದರಿಂದ ವಾಟ್ಸಪ್, ಫೇಸ್ ಬುಕ್ನಲ್ಲಿ ಕನ್ನಡದಲ್ಲಿ ಟೈಪ್ ಮಾಡಲು ಸುಲಭವಾಗಿದೆ.

ದ್ವಿಭಾಷಾ ಸಿರಿ ಸೌಲಭ್ಯ ಇದ್ದು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸಂವಹನ ಮಾಡಿದರೂ ಸಿರಿ ಸ್ಪಂದಿಸುತ್ತಾಳೆ! ಅಲಾರಾಂ ಅಥವಾ ಟೈಮರ್ ಅನ್ನು ಹೊಂದಿಸಲು,ಮುಖ್ಯವಾಗಿ ಕರೆ ಮಾಡಲು ಸಂಗೀತವನ್ನು ಪ್ಲೇ ಮಾಡಲು, ಹವಾಮಾನವನ್ನು ಪರಿಶೀಲಿಸಲು ಮತ್ತು ದಿಕ್ಕುಗಳನ್ನು ಹುಡುಕಲು ಸಹಾಯಕ್ಕಾಗಿ ಸಿರಿಗೆ ಕನ್ನಡದಲ್ಲೇ ಸೂಚನೆ ನೀಡಬಹುದಾಗಿದೆ.

ಬ್ಯಾಟರಿ: ಎಷ್ಟು ಎಂಎಎಚ್ ಬ್ಯಾಟರಿ ಇದರಲ್ಲಿದೆ ಎಂಬುದನ್ನು ಸ್ಪೆಸಿಫಿಕೇಷನ್  ನಲ್ಲಿ ತಿಳಿಸಿಲ್ಲ. ಆದರೆ ಬ್ಯಾಟರಿ ಬಾಳಿಕೆ ಚೆನ್ನಾಗಿದೆ. ಶೇ. 100ರಷ್ಟು ಚಾರ್ಜ್ ಮಾಡಿದರೆ, ಸಾಮಾನ್ಯ ಬಳಕೆಗೆ ಒಂದರಿಂದ ಒಂದೂವರೆ ದಿನ ಬಾಳಕೆ ಬರುತ್ತದೆ.

ಒಟ್ಟಾರೆಯಾಗಿ ಐಫೋನ್ 15 ಪ್ರೊ ಅತ್ಯುತ್ತಮ ಕಾರ್ಯಾಚರಣೆಯ, ಎಲ್ಲದರಲ್ಲೂ ನಿಖರತೆ, ಗುಣಮಟ್ಟ ಬಯಸುವ, ಐಷಾರಾಮಿ ಫೋನ್ ಗಳನ್ನು ಇಷ್ಟ ಪಡುವ ವರ್ಗದವರಿಗೆ perfect phone ಆಗಿದೆ.

-ಕೆ.ಎಸ್. ಬನಶಂಕರ  ಆರಾಧ್ಯ

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.