30 ಕೋಟಿ ಫಾಲೋವರ್ಸ್; ಕೈಲಿ ಜೆನ್ನರ್ ಇನ್ಸ್ಟಾ ದಾಖಲೆ!
Team Udayavani, Jan 13, 2022, 9:30 PM IST
ಕೈಲಿ ಕಾಸ್ಮೆಟಿಕ್ಸ್ ಸಂಸ್ಥೆಯ ಸ್ಥಾಪಕಿ ಕೈಲಿ ಜೆನ್ನರ್(24) ಹೊಸ ಇನ್ಸ್ಟಾ ದಾಖಲೆ ಮಾಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ 30 ಕೋಟಿ ಫಾಲೋವರ್ಗಳನ್ನು ಹೊಂದಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಈ ಹಿಂದೆ ಈ ದಾಖಲೆ ಪಾಪ್ ಸ್ಟಾರ್ ಅರಿಯಾನಾ ಗ್ರಾಂಡ್ ಅವರ ಹೆಸರಲ್ಲಿತ್ತು. ಈಗ ಆ ದಾಖಲೆಯನ್ನು ಜೆನ್ನರ್ ಸರಿಗಟ್ಟಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಅತಿ ಹೆಚ್ಚು(38 ಕೋಟಿ) ಫಾಲೋವರ್ಗಳಿರುವ ವ್ಯಕ್ತಿ ಎಂಬ ಖ್ಯಾತಿ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅವರಿಗಿದೆ.