Nothing ಫೋನ್ (2ಎ), ನಥಿಂಗ್ಸ್ ಬಡ್ಸ್ ಮತ್ತು ನೆಕ್‌ಬ್ಯಾಂಡ್ ಪ್ರೋ ಬಿಡುಗಡೆ

ಫ್ಲಿಪ್‌ಕಾರ್ಟ್‌ನಲ್ಲಿ ಹೆಚ್ಚುವರಿ 2000 ರೂ. ಬಂಪ್ ಅಪ್ ಇದೆ

Team Udayavani, Mar 15, 2024, 10:01 PM IST

1-wewe

ಬೆಂಗಳೂರು: ತನ್ನದೇ ವಿಶೇಷ ವಿನ್ಯಾಸಗಳಿಂದ ಗಮನ ಸೆಳೆದ ನಥಿಂಗ್‌ ಕಂಪೆನಿ ತನ್ನ ಅತ್ಯಂತ ನಿರೀಕ್ಷಿತ ಹೊಸ ಸ್ಮಾರ್ಟ್‌ಫೋನ್‌ ಫೋನ್(2ಎ) ಅನ್ನು ಬಿಡುಗಡೆ ಮಾಡಿದೆ.

ನಥಿಂಗ್ ತನ್ನ ಪರಿಣಿತಿ, ಇಂಜಿನಿಯರಿಂಗ್ ಜೊತೆಗೆ ಹೊಸ ಅನ್ವೇಷಣೆಗಳು ಮತ್ತು ವಿನ್ಯಾಸಗಳನ್ನು ತನ್ನ ಫೋನುಗಳಲ್ಲಿ ಮೂಡಿಸಿದೆ. ಅತ್ಯಂತ ಶಕ್ತಿಯುತ ಪ್ರೊಸೆಸರ್, 50 ಎಂಪಿ ಡ್ಯೂಯೆಲ್ ರಿಯರ್ ಕ್ಯಾಮೆರಾ, ಎಕ್ಸ್‌ಟ್ರಾ ಬ್ರೈಟ್ ಆಗಿರುವ ಫ್ಲೆಕ್ಸಿಬಲ್ ಅಮೊಲೆಡ್ ಡಿಸ್‌ಪ್ಲೇ ಮತ್ತು ಆಕರ್ಷಕ ಒಎಸ್ ಅನ್ನು ಇದು ಹೊಂದಿದೆ.

ಮೀಡಿಯಾಟೆಕ್‌ ಡಿಮೆನ್ಸಿಟಿ 7200 ಪ್ರೋ ಪ್ರೊಸೆಸರ್ ಅನ್ನು ಹೊಂದಿರುವ ಫೋನ್ (2ಎ), ಪವರ್ ದಕ್ಷತೆ ಮತ್ತು ವೇಗವನ್ನು ಹೊಂದಿದೆ. ಇದಕ್ಕೆ 20 GB (12GB + 8GB) ರ್ಯಾಮ್‍ ಇದ್ದು, ರ್ಯಾಮ್‍ ಬೂಸ್ಟರ್ ಟೆಕ್ನಾಲಜಿ ಕೂಡಾ ಇದೆ. 5,000 ಎಂಎಎಚ್ ಬ್ಯಾಟರಿ ಇದ್ದು, ತ್ವರಿತವಾಗಿ ಚಾರ್ಜ್ ಆಗುವುದಕ್ಕೆಂದು 45 ವ್ಯಾಟ್ಸ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಿದೆ. ಡ್ಯೂಯೆಲ್ 50 ಎಂಪಿ ರಿಯರ್ ಕ್ಯಾಮೆರಾವನ್ನು ಹೊಂದಿರುವ ಇದರಲ್ಲಿ ಟ್ರ್ಯೂಲೆನ್ಸ್ ಇಂಜಿನ್ ಇದೆ ಮತ್ತು ಮುಂಭಾಗದಲ್ಲಿ 32 ಎಂಪಿ ಕ್ಯಾಮೆರಾ ಇದೆ. ಇದರ 6.7″ ಫ್ಲೆಕ್ಸಿಬಲ್ ಅಮೊಲೆಡ್ ಡಿಸ್‌ಪ್ಲೇ 1300 ನಿಟ್ಸ್‌ ಬ್ರೈಟ್‌ನೆಸ್ ಮತ್ತು 120 ಹರ್ಟ್ಸ್ ರಿಫ್ರೆಶ್ ರೇಟ್ ಹೊಂದಿದೆ. ಫೋನ್ (2ಎ) ಯಲ್ಲಿ ನಥಿಂಗ್‌ನ ವಿಶಿಷ್ಟ ವಿನ್ಯಾಸವಿದೆ. ಉದ್ಯಮದಲ್ಲೇ ಪ್ರಥಮ 90 ಡಿಗ್ರಿ ಕೋನದ ಯೂನಿಬಾಡಿ ಕವರ್ ಇದಕ್ಕಿದೆ ಮತ್ತು ಹೊಸ ವಿನ್ಯಾಸದಲ್ಲಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಆಂಡ್ರಾಯ್ಡ್‌ 14 ಜೊತೆಗೆ ನಥಿಂಗ್ ಒಎಸ್‌ 2.5 ಇದೆ.

ಫ್ಲಿಪ್‌ಕಾರ್ಟ್‌, ಕ್ರೋಮಾ, ವಿಜಯ್ ಸೇಲ್ಸ್ ಮತ್ತು ಇತರ ಪ್ರಮುಖ ಔಟ್‌ಲೆಟ್‌ಗಳಲ್ಲಿ ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಫೋನ್ (2ಎ) ದೊರಕುತ್ತದೆ. ಇದು ಮೂರು ಮಾದರಿಗಳನ್ನು ಹೊಂದಿದೆ. 8GB/128GB (ರೂ. 23,999/-), 8GB/256GB (ರೂ. 25,999/-) ಮತ್ತು 12GB/256GB (ರೂ. 27,999/-). ವಿಶೇಷ ಆರಂಭಿಕ ಆಫರ್ ರೂಪದಲ್ಲಿ ಎಚ್‌ಡಿಎಫ್‌ಸಿ ಕಾರ್ಡ್‌ಗಳನ್ನು ಬಳಸುವ ಗ್ರಾಹಕರಿಗೆ 2 ಸಾವಿರ ರೂ.ರಿಯಾಯಿತಿ ಇದೆ.

ಫ್ಲಿಪ್‌ಕಾರ್ಟ್‌ನಲ್ಲಿ ಹೆಚ್ಚುವರಿ 2000 ರೂ. ಬಂಪ್ ಅಪ್ ಇದೆ. 8/128 GB ವೇರಿಯಂಟ್‌ 19,999/- ದರದಲ್ಲಿ ಲಭ್ಯವಿದೆ. ಅಷ್ಟೇ ಅಲ್ಲ, ಫೋನ್ (2ಎ) ಖರೀದಿ ಮಾಡುವವರು ಸಿಎಂಎಫ್‌ ಬಡ್ಸ್ (ಪ್ರೋ) ಅನ್ನು ರೂ. 1999 ದರದಲ್ಲಿ ಖರೀದಿ ಮಾಡಬಹುದು ಮತ್ತು ಸಿಎಂಎಫ್‌ ಜಿಎಎನ್ ಚಾರ್ಜರ್ ಅನ್ನು ರೂ. 1999 ದರದಲ್ಲಿ ಬಂಡಲ್ ಆಫರ್ ಆಗಿ ಖರೀದಿಸಬಹುದು.

ಸಿಎಂಎಫ್ ಬಡ್ಸ್ ಮತ್ತು ನೆಕ್ ಬ್ಯಾಂಡ್
ಸಿಎಂಎಫ್‌ ಬೈ ನಥಿಂಗ್‌ ಎಂಬ ಉಪ ಬ್ರಾಂಡ್ ಅಡಿಯಲ್ಲಿ ಬಡ್ಸ್ ಮತ್ತು ನೆಕ್‌ಬ್ಯಾಂಡ್ ಪ್ರೋ ಅನ್ನೂ ಕೂಡಾ ನಥಿಂಗ್ ಘೋಷಿಸಿದೆ. ನೆಕ್‌ಬ್ಯಾಂಡ್ ಪ್ರೋ ಮೊಟ್ಟ ಮೊದಲ 50 ಡಿಬಿ ಹೈಬ್ರಿಡ್ ಎಎನ್‌ಸಿ ಸಾಧನವಾಗಿದ್ದು, ಈ ಬೆಲೆ ಶ್ರೇಣಿಯಲ್ಲಿ ಬೆಸ್ಟ್ ಇನ್ ಕ್ಲಾಸ್ ಎಎನ್‌ಸಿ ಅನ್ನು ಒದಗಿಸುತ್ತದೆ. ಎರಡೂ ಉತ್ಪನ್ನಗಳು ಉತ್ತಮ ಧ್ವನಿ ಗುಣಮಟ್ಟ, ದಕ್ಷ ವಿನ್ಯಾಸ, ದೀರ್ಘ ಬ್ಯಾಟರಿ ಬಾಳಿಕೆಯನ್ನು ನೀಡುತ್ತದೆ.

ಸಿಎಂಎಫ್‌ ಬೈ ನಥಿಂಗ್ ಬಡ್ಸ್‌ ಬೆಲೆ ರೂ. 2499/- ರೂ ಇದ್ದು, ಆರಂಭಿಕ ಬೆಲೆಯಾಗಿ ರೂ. 2299 ರಲ್ಲಿ ಲಭ್ಯವಿದೆ. ನೆಕ್‌ಬ್ಯಾಂಡ್ ಪ್ರೋ ಬೆಲೆ ರೂ. 1999 ಆಗಿದ್ದು, ಆರಂಭಿಕ ದರ ರೂ. 1799 ರಲ್ಲಿ ಲಭ್ಯವಿರಲಿದೆ. ಈ ಎರಡೂ ಉತ್ಪನ್ನಗಳು ಫ್ಲಿಪ್‌ಕಾರ್ಟ್‌, ಮಿಂತ್ರಾ, ಕ್ರೋಮಾ ಮತ್ತು ವಿಜಯ್‌ ಸೇಲ್ಸ್‌ನಲ್ಲಿ ಲಭ್ಯ

ಟಾಪ್ ನ್ಯೂಸ್

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

7-uv-fusion

UV Fusion: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.