ಬೆಂಗಳೂರು: ಮರ್ಸಿಡಿಸ್ ಬೆಂಜ್ ನ ನೂತನ ‘ಎಎಂಜಿ ಜಿಎಲ್ಇ 53 4ಮ್ಯಾಟಿಕ್’ ಕಾರು ರಿಲೀಸ್


Team Udayavani, Sep 28, 2020, 10:44 AM IST

marcedes-ben-website

ಬೆಂಗಳೂರು: ದೇಶದ ಅತೀ ದೊಡ್ಡ ಐಷಾರಾಮಿ ಕಾರುಗಳಲ್ಲಿ ಒಂದೆನಿಸಿದ, ಮರ್ಸಿಡಿಸ್ ಬೆಂಜ್ ನ ಪ್ಯಾಸೆಂಜರ್ ಕಾರುಗಳ ಅಧಿಕೃತ ಮಾರಾಟಗಾರರಾದ ಟಿವಿಎಸ್ ಸುಂದರಂ ಮೋಟಾರ್ಸ್ ಸಂಸ್ಥೆಯೂ, ಇತ್ತೀಚೆಗೆ ಬೆಂಗಳೂರಿನ ಎಎಂಜಿ ಫರ್ಫಾರ್ಮೆನ್ಸ್ ಕೇಂದ್ರದಲ್ಲಿ  ನೂತನ Mercedes-AMG GLE 53 4MATIC ಹೆಸರಿನ ಕಾರನ್ನು ಬಿಡುಗಡೆಗೊಳಿಸಿದೆ.

ಮರ್ಸಿಡಿಸ್ ​ನ ಎಎಂಜಿ ಜಿಎಲ್​ಇ 53 4 ಮ್ಯಾಟಿಕ್​ ದರ 1.2 ಕೋಟಿ ರೂ. (ಎಕ್ಸ್​ ಶೋರೂಮ್-ಭಾರತ ​)ಗಳಾಗಿವೆ. ಇದು ಭಾರತದ ಎಎಂಜಿ ಜಿಎಲ್ ಇ 43ರ ಇತ್ತೀಚಿನ ವರ್ಷನ್ ಆಗಿದೆ.

ಇದೀಗ ಎಎಂಜಿ ಜಿಎಲ್ಇ 53ನೊಂದಿಗೆ ಹೊಸ ವಿನ್ಯಾಸದಲ್ಲಿ ಎಎಂಜಿ ಕಾರ್ಯಕ್ಷಮತೆ ಮತ್ತು ನೂತನ ತಂತ್ರಜ್ಞಾನವನ್ನು.ಈ ಕಾರು ಹೊಂದಿದ್ದು,   ಆರು-ಸಿಲಿಂಡರ್​ಗಳ ಕಾರ್ಯಕ್ಷಮತೆ ಮತ್ತು ಟ್ವಿನ್ ಸ್ಕ್ರಾಲ್ ಟರ್ಬೋಚಾರ್ಜಿಂಗ್, ಎಫ್ 1 ಪ್ರೇರಿತ  48 ವಿ ಇಕ್ಯೂ ಬೂಸ್ಟ್  ಮಾತ್ರವಲ್ಲದೆ ಎಂಎಂಜಿಯೂ 435 ಎಚ್ ಪಿ ಅಶ್ವಶಕ್ತಿಯ ಸಾಮರ್ಥ್ಯವನ್ನು ಹೊಂದಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ ಅಥವಾ ತಾತ್ಕಾಲಿಕವಾಗಿ 22 ಎಚ್ ಪಿ  ಅಶ್ವಶಕ್ತಿಗಳ ಸಾಮರ್ಥ್ಯ ಹೊಂದಿದ್ದು, 250 ಎನ್ ಎಂ ಹೆಚ್ಚುವರಿ ವಿದ್ಯುತ್ ಶಕ್ತಿ ಹೊಂದಿದೆ .( 0-100 ಕಿ.ಮೀ/ಗಂ, 5.3 ಸೆಕೆಂಡ್ ಗಳಲ್ಲಿ)

ಎಎಂಜಿ ನೂತನ ಸರಣಿಯಲ್ಲಿ ಸ್ಲಿಪರಿ, ಕಂಫರ್ಟ್, ಸ್ಪೋರ್ಟ್, ಸ್ಪೋರ್ಟ್+, ವೈಯಕ್ತಿಕ (ಇಂಡಿವಿಜುವಲ್), ಟ್ರಯಲ್ ಮತ್ತು ಸ್ಯಾಂಡ್​ ಎಂಬ ಏಳು ಡ್ರೈವ್ ಪ್ರೋಗ್ರಾಂ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಉತ್ತಮ ಆಫ್-ರೋಡ್ ಸಾಮರ್ಥ್ಯಗಳು, ನವೀನ ಮತ್ತು ನೂತನ ತಂತ್ರಜ್ಞಾನಗಳು ಹಾಗೂ ಇಂಟಿಲಿಜೆಂಟ್​ ಡ್ರೈವಿಂಗ್​ ನೆರವು ವ್ಯವಸ್ಥೆಗಳೊಂದಿಗೆ ಸ್ಪೋರ್ಟಿ ಸೊಬಗು ಮತ್ತು ಶಕ್ತಿಯುತ ಕಾರ್ಯಕ್ಷಮತೆಯನ್ನು ಎಎಂಜಿ ನೂತನ ಸರಣಿ ಹೊಂದಿದೆ ಎಂದು ಕಂಪನಿ ತಿಳಿಸಿದೆ.

ಹೊಸ ಜಿಎಲ್ಇ ಈಗ 300ಡಿ, 400ಡಿ, 450 ಮತ್ತು ಎಎಂಜಿ ಜಿಎಲ್ಇ 53 ಕೂಪೆ ಶ್ರೇಣಿಗಳಲ್ಲಿ ಲಭ್ಯವಿದೆ. ಎರಡು ವರ್ಷಗಳವರೆಗೆ ಅನಿಮಿಯತ ಕಿ.ಮೀ.ವರೆಗೆ 92 ಸಾವಿರ ರೂ.​ದಿಂದ ಆರಂಭವಾಗುವ ಮರ್ಸಿಡಿಸ್​ನ ಎಎಂಜಿ ಜಿಎಲ್​ಇ 53 4 ಮ್ಯಾಟಿಕ್​ ಸ್ಟಾರ್​ ಈಜ್​ ಸರ್ವೀಸ್​ ಪ್ಯಾಕೇಜ್ ಲಭ್ಯವಿದೆ.

ಈ ಅತ್ಯಾಕರ್ಷಕ ಹೈಟೆಕ್ ಕಾರ್ ನ ಇತರೆ ಫೀಚರ್ ಗಳು:

  • ಐಷಾರಾಮಿ ಮರ್ಸಿಡಿಸ್ ಕಾರು ಹಲವು ಸುಧಾರಿತ ಫೀಚರ್ ಗಳನ್ನು ಹೊಂದಿದ್ದು ಪ್ರಮುಖವಾಗಿ, ರಿಮೋಟ್ ಇಂಜಿನ್ ಸ್ಟಾರ್ಟ್, ರಿಮೋಟ್ ಲಾಕ್ ಮತ್ತು ಅನ್ ಲಾಕ್, ಕಾರ್ ಲೊಕೇಟರ್, ಸ್ಪೀಟ್ ಮಾನಿಟರ್, ಬಳಕೆದಾರರ ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ ಗೆ ಕನೆಕ್ಟ್ ಅಗಿರುವಂತೆ ರೂಪಿಸಲಾಗಿರುವ ತುರ್ತು ಇ-ಕಾಲ್ ವ್ಯವಸ್ಥೆಯೂ ಲಭ್ಯವಿದೆ.
  • ಹೊಸ ಮರ್ಸಿಡೀಸ್ ನಲ್ಲಿ ಟೆಲಿಮ್ಯಾಟಿಕ್ಸ್, ಗ್ರಾಹಕ ಸ್ನೇಹಿ ಎನ್ ಟಿಜಿ 6.0, ಓವರ್ ದ ಏರ್ ಸಾಮರ್ಥ್ಯವಿರುವ ಅಪ್ ಡೆಟ್ ಗಳನ್ನು ಹೊಂದಿದೆ.
  • ಐಷಾರಾಮಿ ಕಾರು ವಿಭಾಗದಲ್ಲಿ ಎಐ ಮತ್ತು ಎಂಎಲ್ ಆಧಾರಿತ ಇನ್-ಕಾರ್ ವರ್ಚುವಲ್ ಅಸಿಸ್ಟೆಂಟ್ ಮತ್ತು ಎಂಬಿಯುಎಕ್ಸ್ ಇನ್ಫೋಟೇನ್ ಮೆಂಟ್ ಸಿಸ್ಟಂ ಅನ್ನು ಹೊಂದಿದೆ; ‘Always On’ ಫೀಚರ್ ಕಾರಿನ ಅನುಭವವನ್ನು ಸಂಪೂರ್ಣ ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಎಎಂಜಿ ಜಿಎಲ್ಇ 53 ಕೂಪೆ ಭಾರತದಲ್ಲಿ ಎಂಬಿಯುಎಕ್ಸ್ ಸಿಸ್ಟಂ ಹೊಂದಿರುವ ಮೊದಲ ಎಎಂಜಿ ಆಗಿದೆ.

ಟಿವಿಎಸ್ ಸುಂದರಂ ಮೋಟಾರ್ಸ್ ಪರಿಚಯ:

ಸುಂದರಂ ಮೋಟಾರ್ಸ್, ಟಿ. ವಿ. ಸುಂದರಂ ಅಯ್ಯಂಗಾರ್ ಮತ್ತು ಸನ್ಸ್ ಪ್ರೈವೇಟ್ ಲಿಮಿಟೆಡ್‌ನ ಭಾಗವಾಗಿದೆ. ಕರ್ನಾಟಕ ಮತ್ತು ತಮಿಳುನಾಡಿನ ಮರ್ಸಿಡಿಸ್​ ಬೆಂಜ್​ ಪ್ಯಾಸೆಂಜರ್​ ಕಾರುಗಳ ಅಧಿಕೃತ ಡೀಲರ್​ ಆಗಿದ್ದು, 60ಕ್ಕೂ ಹೆಚ್ಚು ವರ್ಷಗಳಿಂದ ಟಿವಿಎಸ್​ ಸುಂದರಂ ಮೋಟರ್ಸ್​ ಆಟೋ ಮೊಬೈಲ್​ ಇಂಡಸ್ಟ್ರಿಯಲ್ಲಿ ತೊಡಗಿಕೊಂಡಿದೆ. 2001ರಲ್ಲಿ ಕರ್ನಾಟಕ ಮತ್ತು 2003ರಲ್ಲಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ಸುಂದರಂ ಮೋಟಾರ್ಸ್, ಮರ್ಸಿಡಿಸ್​ ಬೆಂಜ್​ ಡೀಲರ್ ​ಶಿಪ್​ ಆರಂಭಿಸಿತು. ವಿಶ್ವಾಸ, ಮೌಲ್ಯ ಮತ್ತು ಉತ್ತಮ ಸೇವೆಯಿಂದಾಗಿ ಸುಂದರಂ ಮೋಟರ್ಸ್​ ಜಗತ್ತಿನಾದ್ಯಂತ ಮೆಚ್ಚುಗೆ ಪಡೆದಿದ್ದು, ನಾಡಿನಾದ್ಯಂತ ಇದರ ಹೆಸರು ಪ್ರಚಲಿತದಲ್ಲಿದೆ. ಗ್ರಾಹಕರ ಸಂತೃಪ್ತಿಯಲ್ಲಿ ಸುಂದರಂ ಮೋಟರ್ಸ್​ ವಿಶ್ವಾಸವಿಟ್ಟಿದ್ದು, ಉತ್ಕೃಷ್ಠತೆಯನ್ನು  ಸಾಧಿಸಲು ಗುಣಮಟ್ಟದ ಮಾನದಂಡಗಳನ್ನು ಸುಧಾರಿಸಲು ನಿರಂತರ ಪ್ರಯತ್ನ ಮಾಡುತ್ತಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.

ಸುಂದರಂ ಮೋಟಾರ್ಸ್: +91-9148155175.

Email: [email protected]

ಟಾಪ್ ನ್ಯೂಸ್

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.