ಟಾಟಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ: ಇದು ಮಾರ್ಚ್ ಮೆಗಾ ಆಫರ್
Team Udayavani, Mar 19, 2021, 10:00 AM IST
ನೀವು ಕಾರು ಖರೀದಿಸುವ ಪ್ಲ್ಯಾನ್ ಮಾಡಿದ್ದೀರಾ? ರಿಯಾಯಿತಿ ದರದ ಆಫರ್ ಗಳಿಗಾಗಿ ಕಾಯುತ್ತಿದ್ದೀರಾ ? ಹಾಗಾದರೆ ನಿಮಗೆ ಇಲ್ಲಿದೆ ಒಂದು ಗುಡ್ ನ್ಯೂಸ್.
ಹೌದು, ಟಾಟಾ ಮೊಟರ್ಸ್ ಗ್ರಾಹಕರನ್ನು ಆಕರ್ಷಿಸಲು ವಿವಿಧ ಮಾದರಿಗಳ ಕಾರುಗಳಿಗೆ ಭಾರಿ ರಿಯಾಯಿತಿ ಘೋಷಿಸಿದೆ. ಗರಿಷ್ಠ 65,000 ರೂ. ತನಕ ಈ ರಿಯಾಯಿತಿಗಳು ಮಾರ್ಚ್ 31ರವರೆಗೆ ಲಭ್ಯವಿದೆ.
ಯಾವ ಕಾರುಗಳಿಗೆ ಅನ್ವಯ ?
ಟಾಟಾ ಮೊಟರ್ಸ್ ನ ಈ ಭರ್ಜರಿ ಆಫರ್ ಟಿಯಾಗೊ, ಟೈಗರ್, ನೆಕ್ಸಾನ್ ಮತ್ತು ಹ್ಯಾರಿಯರ್ಗೆ (5 ಆಸನ ಮಾಡಲ್) ಅನ್ವಯಿಸುತ್ತವೆ.
ಟಿಯಾಗೊ ಮಾದರಿಯಲ್ಲಿ ಟಾಟಾ 25 ಸಾವಿರ ರೂ. ರಿಯಾಯಿತಿ ಇದೆ. ಈ ಪೈಕಿ ಗ್ರಾಹಕ ಯೋಜನೆ 15 ಸಾವಿರ ರೂ. ಮತ್ತು ವಿನಿಮಯ ಕೊಡುಗೆ 10,000 ರೂಪಾಯಿಯಷ್ಟಿದೆ. ಟೈಗರ್ ಸೆಡಾನ್ ಮೇಲೆ ಗ್ರಾಹಕ ಯೋಜನೆಯಲ್ಲಿ ರೂ. 15 ಸಾವಿರ, ವಿನಿಮಯ ಪ್ರಸ್ತಾಪದ ರಿಯಾಯಿತಿ ರೂಪದಲ್ಲಿ 15 ಸಾವಿರ ರೂ. ಕೊಡುಗೆಯಿದೆ.
ನೆಕ್ಸಾನ್ ಸಬ್ ಕಾಂಪ್ಯಾಕ್ಟ್ ಎಸ್ಯುವಿ ಮೇಲೆ 15 ಸಾವಿರ ರೂ.ಯಷ್ಟು ಆಫರ್ ನೀಡುತ್ತಿದೆ. ಇದು ಡೀಸೆಲ್ ಆವೃತ್ತಿಯ ವಿನಿಮಯದಲ್ಲಿ ಮಾತ್ರ ಲಭ್ಯವಿದೆ. ಹ್ಯಾರಿಯರ್ 5 ಆಸನಗಳ ಮಾದರಿ, ಕ್ಯಾಮೊ ರೂಪಾಂತರವು 40,000 ರೂ., ಸಾಮಾನ್ಯ ಹ್ಯಾರಿಯರ್ನಲ್ಲಿ 65,000 ರೂ.ಗಳವರೆಗೆ ರಿಯಾಯಿತಿ ಇದೆ.
ನೀವು ಕಾರು ಕೊಂಡುಕೊಳ್ಳಲು ಉತ್ಸುಕರಾಗಿದ್ದರೆ, ಇದು ನಿಮಗೆ ಒಳ್ಳೆಯ ಆಫರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ