Udayavni Special

ಪ್ರಪಂಚವನ್ನೇ ತಲ್ಲಣಗೊಳಿಸುತ್ತಿರುವ ಪೆಗಾಸಸ್ ಸ್ಪೈವೇರ್ ಕುರಿತು ನಿಮಗೆಷ್ಟು ತಿಳಿದಿದೆ..?


Team Udayavani, Aug 1, 2021, 6:11 PM IST

Pegasus is a spyware developed by NSO Group, an Israeli surveillance firm, that helps spies hack into phones.

ಆಧುನಿಕ ಜಗತ್ತು ಎಷ್ಟರಮಟ್ಟಿಗೆ ತಂತ್ರಜ್ಞಾನಕ್ಕೆ ಒಗ್ಗಿಕೊಂಡಿದೆ ಎಂದರೆ ತಂತ್ರಜ್ಞಾನವಿಲ್ಲದೇ ಬದುಕಲು ಸಾಧ್ಯವೇ ಇಲ್ಲವೆನೋ ಎನ್ನುವಷ್ಟರ ಮಟ್ಟಿಗೆ. ಮನುಷ್ಯ ತನ್ನ ದಿನನಿತ್ಯದ ಕೆಲಸವನ್ನು ಮೊಬೈಲ್, ಲಾಪ್‌ ಟಾಪ್ ಮುಂತಾದ ಸಾಧನಗಳಿಂದಲೇ ಪ್ರಾಂರಭಿಸಿ, ಅದರಿಂದಲೇ ದಿನ ಮುಗಿಸುವಲ್ಲಿಯವರೆಗೂ ತಂತ್ರಜ್ಞಾನ ಮನುಷ್ಯನ ಜೀವನವನ್ನು ಆವರಿಸಿಕೊಂಡಿದೆ.  ದಿನಕಳೆದಂತೆ ತಂತ್ರಜ್ಞಾನ ಮನುಷ್ಯನ ಮೇಲೆ  ಹಿಡಿತ ಸಾಧಿಸುತ್ತಾ ಇದೆ ಎನ್ನುವುದನ್ನು ಒಪ್ಪಿಕೊಳ್ಳಲು ಅಸಾಧ್ಯವಾದರೂ ಅದು ಕಟು ಸತ್ಯ. ತಂತ್ರಜ್ಞಾನಕ್ಕೆ ನಾವೇ ಪರವಶರಾಗಿದ್ದೇವೆಯೋ ಅಥವಾ ತಂತ್ರಜ್ಞಾನವೇ ನಮ್ಮನ್ನು ಪರವಶ ಮಾಡಿಕೊಂಡಿದೆಯೋ ಎಂದು ತಿಳಿಯುವುದು ಕಷ್ಟ. ಆದರೆ ತಂತ್ರಜ್ಞಾನ ಬೆಳೆದಂತೆ  ಅದರಿಂದ ಆಗುವ ದುಷ್ಪರಿಣಾಮಗಳು ಕೂಡ ಹೆಚ್ಚು.  ಜನಸಾಮನ್ಯರ ಗೌಪ್ಯತೆಗೆ ಕನ್ನ ಹಾಕುವಂತ ಗೂಡಾಚಾರಿಕಾ ತಂತ್ರಜ್ಞಾನ ದಿನೇದಿನೇ ಹೆಚ್ಚುತ್ತಿದ್ದು, ಪ್ರತೀದಿನ ಒಂದಲ್ಲ ಒಂದು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತದೆ. ಅದರಲ್ಲಿ ಇತ್ತೀಚೆಗೆ ಪ್ರಪಂಚದಾದ್ಯಂತ ತಲ್ಲಣ ಹುಟ್ಟಿಸಿರುವ ಪೆಗಾಸಸ್ ಸ್ಪೈವೇರ್ ಕೂಡ ಒಂದು.

ಏನಿದು ಪೆಗಾಸಸ್ ?

ಪೆಗಾಸಸ್ ಕಂಪ್ಯೂಟರ್ ಮತ್ತು ಮೊಬೈಲ್ ಸಾಧನವನ್ನು ಪ್ರವೇಶಿಸಲು ವಿನ್ಯಾಸಗೊಳಿಸಿದ ಒಂದು ಹ್ಯಾಕಿಂಗ್ ಸಾಫ್ಟ್ವೇರ್.  ಇದನ್ನು ಇಸ್ರೇಲ್ ಕಂಪನಿಯ ಎನ್‌ ಎಸ್‌ ಓ ಗುಂಪು ಅಭಿವೃದ್ಧಿಪಡಿಸಿದ್ದು, ಈ ಸಾಫ್ಟ್ವೇರ್ ನಿಮಗೆ ತಿಳಿಯದ ಹಾಗೆ ನಿಮ್ಮ ಮೊಬೈಲ್‌ ನ್ನು ಪ್ರವೇಶಿಸಿ ಅದರಲ್ಲಿರುವ ಎಲ್ಲಾ ಡೇಟಾವನ್ನು ಸಂಗ್ರಹಿಸಿ, ಮೂರನೇ ವ್ಯಕ್ತಿಗೆ ರವಾನಿಸುವ ಕೆಲಸ ಮಾಡುತ್ತದೆ. ಅಷ್ಟೇಅಲ್ಲದೇ ಈ ಸ್ಪೈವೇರ್ ನಿಮ್ಮ ಮೊಬೈಲ್ ಕ್ಯಾಮರವನ್ನು ಉಪಯೋಗಿಸಿಕೊಂಡು  ನಿಮಗೆ ತಿಳಿಯದ ಹಾಗೇ ವಿಡಿಯೋ ರೆರ್ಕಾಡ್ ಮಾಡುವ ಸಾಮರ್ಥ್ಯವನ್ನು  ಕೂಡ ಹೊಂದಿದೆ. ಅಲ್ಲದೆ ಕಂಪ್ಯೂಟರ್ ಮತ್ತು ಮೊಬೈಲ್ ಡಿವೈಸ್‌ನಲ್ಲಿರುವ  ಮೆಸ್ಸೇಜ್‌ ಗಳನ್ನು ನಕಲು ಮಾಡಿ ಬೇರೊಬ್ಬರಿಗೆ ಕಳುಹಿಸುವುದೇ ಈ ಸ್ಪೈವೇರ್‌ ನ ಕೆಲಸ. ಆ್ಯಪಲ್ ಮತ್ತು ಆಂಡ್ರಾಯ್ಡ್ ಮೊಬೈಲ್‌ ಗಳನ್ನು ಗುರಿಯಾಗಿಸಿಕೊಂಡಿರುವ ಪಿಗಾಸಿಸ್, ಇತ್ತೀಚಿನ ಐಓಎಸ್ ವರ್ಷನ್ 14.6(ಆವೃತಿ)ನ್ನು ಘಾಸಿಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ.

ಪೆಗಾಸಸ್ ಸಪೈವೇರ್  ಏನು ಮಾಡಲು ಸಾಧ್ಯ?

ಪೆಗಾಸಸ್ ಸ್ಪೈವೇರ್ ಗಳು ನಿಮ್ಮ ಫೋನ್‌ ನಲ್ಲಿ ಸೇರಿಕೊಂಡು ಎಸ್‌ ಎಮ್‌ ಎಸ್, ಕರೆ, ಇಮೇಲ್‌ ಗಳನ್ನು  ಮತ್ತು  ಬ್ರೌಸಿಂಗ್ ಮಾಹಿತಿಯಗಳನ್ನು ಸಂಗ್ರಹಿಸುತ್ತದೆ. ಮೈಕ್ರೋ ಫೋನ್ ಬಳಸಿಕೊಳ್ಳುವ ಮೂಲಕ ನಿಮ್ಮ ಕರೆಗಳನ್ನು ಮತ್ತು ಇತರ ಸಂಭಾಷಣೆಗಳನ್ನು ನಿಮಗೆ ತಿಳಿಯಂತೆ ಕದ್ದಾಲಿಸುವ ಸಾಧ್ಯತೆಯಿದ್ದು, ಜಿಪಿಎಸ್ ಮೂಲಕ ನಿಮ್ಮ ಚಲನವಲನಗಳನ್ನು ರಹಸ್ಯವಾಗಿ ತಿಳಿದುಕೊಳ್ಳುವ ಸಾಧ್ಯತೆ ಇದೆ.

ಪೆಗಾಸಸ್ ನಿಮ್ಮ ಮೊಬೈಲ್‌ ನ್ನು ಹೇಗೆ ಹಾನಿಗೊಳಿಸುತ್ತದೆ?

ಈ ಸ್ಪೈವೇರ್ ಪ್ರಮುಖವಾಗಿ ಆಂಡ್ರಾಯ್ಡ್ ಮತ್ತು ಐಫೋನ್‌ ನಲ್ಲಿ ಡೌನ್‌ ಲೋಡ್ ಆಗುವ ಅಪ್ಲೀಕೇಶನಗಳನ್ನು ಹಾನಿಗೊಳಿಸುತ್ತದೆ. ಫೋಟೋ , ಮ್ಯೂಸಿಕ್, ಮೆಸ್ಸೇಜ್ ಮುಂತಾದ ಅಪ್ಲೀಕೇಶನ್‌ ಗಳಿಗೆ ಹಾನಿಮಾಡುವ ಮೂಲಕ ನಿಮ್ಮ ಫೋನ್ ನಿಮ್ಮ ಮೊಬೈಲ್‌ ನ ಕಾರ್ಯಕ್ಷಮತೆ ಕುಂಟಿತವಾಗುವಂತೆ ಮಾಡುತ್ತದೆ. ಮೊಬೈಲ್ ಹ್ಯಾಂಗ್ ಆಗುವುದು ಇದ್ದಕ್ಕಿದ್ದಂತೆ ಆಫ್ ಆಗುವ ಎಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಮೊಬೈಲ್ ಬ್ಯಾಟರಿಗಳ ಜೀವಿತಾವಧಿ ಕಡಿಮೆಯಾಗುವಂತೆ ಮಾಡುವುದು ಕೂಡ ಪೆಗಾಸಿಸ್ ಸ್ಪೈವೇರ್‌ ನ ಒಂದು ಲಕ್ಷಣ.

ಪೆಗಾಸಸ್ ಅಭಿವೃದ್ಧಿ ಪಡಿಸಿದವರು ಯಾರು?

ಇಸ್ರೇಲ್‌ ನ ಎನ್‌ಎಸ್‌ಒ ಗುಂಪು ಈ ಸ್ಪೈವೇರ್ ನನ್ನು ಅಭಿವೃದ್ಧಿ ಪಡಿಸಿದ್ದು ಈ ಕಂಪನಿಯನ್ನು ಕ್ಯೂ ಸೈಬರ್ ತಂತ್ರಜ್ಞಾನ ಎಂದು ಕೂಡ ಕರೆಯಾಲಾಗುತ್ತದೆ. ಭಯೋತ್ಪಾದನಾ ಸಂಘಟಣೆಗಳ ಚಟುವಟಿಕೆಗಳನ್ನು  ಮತ್ತು ಅಪರಾಧಿಗಳನ್ನು ಪತ್ತೆ ಹಚ್ಚುವ ಸಲುವಾಗಿ  ಈ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಸಂಸ್ಥೆ ಸಮರ್ಥನೆ ನೀಡಿದೆ. ಆದರೆ ಇದೀಗ ಸರ್ವಾಧಿಕಾರ ಆಡಳಿತ ದೇಶಗಳು ಈ ಸ್ಪೈವೇರ್ ನನ್ನು ಹೆಚ್ಚು ಉಪಯೋಗಿಸುತ್ತಿದ್ದು, ತಮ್ಮ ಎದುರಾಳಿ ಮತ್ತು ಪತ್ರಕರ್ತರ ಮೇಲೆ ನಿಗಾ ಇಡುವ ಸಲುವಾಗಿ ಈ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.

ಆದರೆ ಇತ್ತೀಚೆಗೆ ಮಾನವ ಹಕ್ಕುಗಳ ಗುಂಪು ಅಮ್ನೆಸ್ಟಿ ಇಂಟರ್ ನ್ಯಾಷನಲ್ ಬೇರೆ ಬೇರೆ ದೇಶಗಳ  ರಾಜಕೀಯ ವಿರೋಧಿಗಳು, ಮಾನವ ಹಕ್ಕು ಹೋರಾಟಗರರು ಮತ್ತು ಪತ್ರಕರ್ತರ ಮೇಲೆ ಹಿಡಿತ ಸಾಧಿಸುವ ಸಲುವಾಗಿ ಪೆಗಾಸಸ್ ಸ್ಪೈವೇರ್‌ ನನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು  ವರದಿ ಮಾಡಿದೆ.

ಆದರೆ ಪಿಗಾಸಿಸ್ ಮತ್ತು ಅದೇ ರೀತಿಯಾದ ಅನೇಕ ತಂತ್ರಜ್ಞಾನದಿಂದ ಪ್ರಪಂಚದಾದ್ಯಂತ ನಡೆಯುವ ಭಯೋತ್ಪಾದನೆ ಮತ್ತು ಅಪರಾಧಗಳನ್ನು ತಡೆಯಲು ಮತ್ತು ತನಿಕೆ ಮಾಡಲು ವಿಶ್ವದಾದ್ಯಂತ ಗುಪ್ತಚರ ಸಂಸ್ಥೆ ಮತ್ತು ಕಾನೂನು ಜಾರಿ ಮಾಡುವ ಸಂಸ್ಥೆಗಳಿಗೆ ಸಹಾಯ ಮಾಡುತ್ತದೆ ಎಂದು ಎನ್‌ ಎಸ್‌ ಓ ವಕ್ತಾರ ಸಮಜಾಯಿಶಿ ನೀಡಿದ್ದಾರೆ.

ಪೆಗಾಸಸ್ ಸ್ಪೈವೇರ್ ನನ್ನು ಪತ್ತೆಹಚ್ಚಲು ಸಾಧ್ಯವೇ?

ಮೊಬೈಲ್ ವೇರಿಫಿಕೇಶನ್ ಟೂಲ್‌ ಕಿಟ್ (ಎಮ್‌ವಿಟಿ) ಮೂಲಕ ಪಿಗಾಸಿಸ್ ಸ್ಪೈವೇರ್ ನನ್ನು ಪತ್ತೆ ಹಚ್ಚಲು ಸಾಧ್ಯ. ಎಮ್‌ ವಿ ಟಿ ನಿಮಗೆ ತಿಳಿಯದೆ ನಿಮ್ಮ ಮೊಬೈಲ್‌ ನಲ್ಲಿ ಪೆಗಾಸಸ್ ಇನ್‌ ಸ್ಟಾಲ್ ಆಗಿದೆಯಾ ಎಂದು ಪತ್ತೆಹಚ್ಚುತ್ತದೆ. ಈ ಟೂಲ್ ಕಿಟ್‌ ನನ್ನು  ಕೇವಲ ಕಂಪ್ಯೂಟರ್ ಸಾಧನಗಳಲ್ಲಿ  ಮಾತ್ರವಲ್ಲದೇ  ಐಓಎಸ್ ಮತ್ತು ಆಂಡ್ರಾಯ್ಡ್ ನಲ್ಲೂ ಉಪಯೋಗಿಸಲು ಸಾಧ್ಯವಾಗುವುದರಿಂದ  ಪಿಗಾಸಿಸ್ ಸ್ಪೈವೇರ್ ನನ್ನು ಪತ್ತೆ ಹಚ್ಚಲು ಅನುಕೂಲವಾಗಿದೆ.

ದಿನನಿತ್ಯ ನಾವು ಉಪಯೋಗಿಸುವಂತಹ ಅದೆಷ್ಟೋ ತಂತ್ರಜ್ಞಾನಗಳು ನಮ್ಮ ಮಾಹಿತಿಗಳನ್ನು ನಮಗೆ ತಿಳಿಯದಂತೆ ಪಡೆದುಕೊಳ್ಳುತ್ತದೆ. ಆದರೆ ಪೆಗಾಸಸ್‌ ನ ಅನುಕೂಲ ಮತ್ತು ಅನಾನುಕೂಲದ ಕುರಿತ ಹಲವಾರು ಸಂಗತಿಗಳು ಇನ್ನೂ ಅಗೋಚರವಾಗಿದೆ. ಈ ಸ್ಪೈವೇರ್‌ ನ ಜತೆಗೆ ನಮ್ಮ ದೇಶದ ಹೆಸರು ಕೇಳಿಬರುತ್ತಿರುವುದು ಇನ್ನು ಯಾವ ಬದಲಾವಣೆಗೆ ಕಾರಣವಾಗುತ್ತದೆ ಎನ್ನುವುದನ್ನು ಉಹಿಸಲು ಅಸಾಧ್ಯ.

ಕೀರ್ತನಾ ವಿ. ಭಟ್

ಕೇಳ, ಕಾಶಿಪಟ್ನ

ಇದನ್ನೂ ಓದಿ : ಜುಲೈ ಜಿಎಸ್‌ಟಿ ಸಂಗ್ರಹ 1.16 ಲಕ್ಷ ಕೋಟಿ : ಕಳೆದ ವರ್ಷಕ್ಕಿಂತ ಶೇ.33ರಷ್ಟು ಹೆಚ್ಚು

ಟಾಪ್ ನ್ಯೂಸ್

ಕಮಲಾ ಹ್ಯಾರಿಸ್ ಗೆ ಅಜ್ಜ ಬಳಸಿದ ವಸ್ತುಗಳ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ

ಅಮೆರಿಕ ;ಕಮಲಾ ಹ್ಯಾರಿಸ್ ಗೆ ಅಜ್ಜ ಬಳಸಿದ ವಸ್ತುಗಳ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ

ಐಸಿಐಸಿಐ ಹೋಮ್‍ ಫೈನಾನ್ಸ್ ನಿಂದ 600 ಉದ್ಯೋಗಿಗಳ ನೇಮಕಾತಿಗೆ ಆಹ್ವಾನ

ಐಸಿಐಸಿಐ ಹೋಮ್‍ ಫೈನಾನ್ಸ್ ನಿಂದ 600 ಉದ್ಯೋಗಿಗಳ ನೇಮಕಾತಿಗೆ ಆಹ್ವಾನ

ಉಳ್ಳಾಲ: ಕ್ರೈಸ್ತ ಧರ್ಮ ಪ್ರಚೋದಿಸುವ ಪತ್ರಗಳು ಪತ್ತೆ, ಮತಾಂತರ ಕುಮ್ಮಕ್ಕು ಆರೋಪ

ಉಳ್ಳಾಲ: ಕ್ರೈಸ್ತ ಧರ್ಮ ಪ್ರಚೋದಿಸುವ ಪತ್ರಗಳು ಪತ್ತೆ, ಮತಾಂತರ ಕುಮ್ಮಕ್ಕು ಆರೋಪ

ಬಾಂಬೆ ಷೇರುಪೇಟೆ ಇತಿಹಾಸದಲ್ಲೇ ಪ್ರಥಮ ಬಾರಿಗೆ 60,000 ಗಡಿ ದಾಟಿದ ಸೆನ್ಸೆಕ್ಸ್

ಬಾಂಬೆ ಷೇರುಪೇಟೆ ಇತಿಹಾಸದಲ್ಲೇ ಪ್ರಥಮ ಬಾರಿಗೆ 60,000 ಗಡಿ ದಾಟಿದ ಸೆನ್ಸೆಕ್ಸ್

23-dvg-22

ಶಾಲಾ ಶಿಕ್ಷಕಿಯ ಶಪಥ: ಅಂತೂ ರಾಂಪುರಕ್ಕೆ ಬಂತು ಸರ್ಕಾರಿ ಬಸ್‌!

ರೆಡ್‍ ಮಿ 10 ಪ್ರೈಮ್‍: ಬಜೆಟ್‍ ದರದಲ್ಲಿ ಉತ್ತಮ ಸ್ಪೆಸಿಫಿಕೇಷನ್‍

ರೆಡ್‍ ಮಿ 10 ಪ್ರೈಮ್‍: ಬಜೆಟ್‍ ದರದಲ್ಲಿ ಉತ್ತಮ ಸ್ಪೆಸಿಫಿಕೇಷನ್‍

vbgfxgdf

ನಿತ್ಯ ಸ್ನಾನ ಮಾಡದ ಹೆಂಡತಿಗೆ ತಲಾಖ್ ನೀಡಲು ಮುಂದಾದ ಪತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೆಡ್‍ ಮಿ 10 ಪ್ರೈಮ್‍: ಬಜೆಟ್‍ ದರದಲ್ಲಿ ಉತ್ತಮ ಸ್ಪೆಸಿಫಿಕೇಷನ್‍

ರೆಡ್‍ ಮಿ 10 ಪ್ರೈಮ್‍: ಬಜೆಟ್‍ ದರದಲ್ಲಿ ಉತ್ತಮ ಸ್ಪೆಸಿಫಿಕೇಷನ್‍

ಫೋಕ್ಸ್‌ವ್ಯಾಗನ್‌ ಟೈಗುನ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

ಫೋಕ್ಸ್‌ವ್ಯಾಗನ್‌ ಟೈಗುನ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

cgdfgdr

ಇನ್ಮುಂದೆ ಆ್ಯಪಲ್ ಸೇರಿ ಎಲ್ಲಾ ಮೊಬೈಲ್‍ಗಳಿಗೆ ‘ಟೈಪ್ ಸಿ’ ಚಾರ್ಜರ್  

ವೈಜೆಡ್‌ಎಫ್-ಆರ್‌15 ವಿ4.0 ಯಮಹಾ ಬೈಕುಗಳ ಬಿಡುಗಡೆ

ವೈಜೆಡ್‌ಎಫ್-ಆರ್‌15 ವಿ4.0 ಯಮಹಾ ಬೈಕುಗಳ ಬಿಡುಗಡೆ

ಡುಕಾಟಿ ಮಾನ್‌ಸ್ಟರ್‌ ಬೈಕ್‌ ಗಳ ಬುಕಿಂಗ್‌ ಶುರು : ಬೆಲೆ ಎಷ್ಟು ಗೊತ್ತಾ ?

ಡುಕಾಟಿ ಮಾನ್‌ಸ್ಟರ್‌ ಬೈಕ್‌ ಗಳ ಬುಕಿಂಗ್‌ ಶುರು : ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ಆಧುನಿಕ ಭರಾಟೆಗೆ ಸಿಲುಕಿ ನಲುಗಿದ ಕುಲುಮೆ ಕೆಲಸಗಾರರ ಬದುಕು

udayavani youtube

ರಾತ್ರೋರಾತ್ರಿ ಕೋಟ್ಯಧಿಪತಿಯಾದ ಆಟೋ ಚಾಲಕ

udayavani youtube

ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ವಿಧಾನ ಪರಿಷತ್ ಸದಸ್ಯ ಘೋಟ್ನೇಕರ್ ಆಗ್ರಹ

udayavani youtube

ಕೇಂದ್ರ ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿ ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

udayavani youtube

ಗದ್ದಲದ ಗೂಡಾದ ಉದ್ಯಾವರ ಗ್ರಾಮ ಸಭೆ

ಹೊಸ ಸೇರ್ಪಡೆ

ಕಮಲಾ ಹ್ಯಾರಿಸ್ ಗೆ ಅಜ್ಜ ಬಳಸಿದ ವಸ್ತುಗಳ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ

ಅಮೆರಿಕ ;ಕಮಲಾ ಹ್ಯಾರಿಸ್ ಗೆ ಅಜ್ಜ ಬಳಸಿದ ವಸ್ತುಗಳ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ

23-dvg-16

27ರಂದು ಕರ್ನಾಟಕ ಬಂದ್‌ಗೆ ನಿರ್ಧಾರ

ghfghtfyt

ದಸರಾ ಬಳಿಕ “ಸಿಹಿ’ ಸುದ್ದಿ: ಸೋಮಶೇಖರ್‌

23-dvg-17-copy

30 ರಂದು ಡಾ| ಮಹಾಂತ ಸ್ವಾಮೀಜಿ ಜಯಂತ್ಯುತ್ಸವ 

ಐಸಿಐಸಿಐ ಹೋಮ್‍ ಫೈನಾನ್ಸ್ ನಿಂದ 600 ಉದ್ಯೋಗಿಗಳ ನೇಮಕಾತಿಗೆ ಆಹ್ವಾನ

ಐಸಿಐಸಿಐ ಹೋಮ್‍ ಫೈನಾನ್ಸ್ ನಿಂದ 600 ಉದ್ಯೋಗಿಗಳ ನೇಮಕಾತಿಗೆ ಆಹ್ವಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.