Threads vs Twitter;ಟ್ವಿಟರ್‌ ಪ್ರತಿಸ್ಪರ್ಧಿ ಥ್ರೆಡ್ಸ್ ಕಣಕ್ಕೆ

Team Udayavani, Jul 11, 2023, 8:15 AM IST

ಟ್ವಿಟರ್‌ ಪ್ರತಿಸ್ಪರ್ಧಿ ಥ್ರೆಡ್ಸ್ ಕಣಕ್ಕೆ

ಫೇಸ್‌ಬುಕ್‌ ಮಾಲಕ ಮಾರ್ಕ್‌ ಜುಕರ್‌ಬರ್ಗ್‌ ಮತ್ತು ಟ್ವಿಟರ್‌ ಮಾಲಕ ಎಲಾನ್‌ ಮಸ್ಕ್ ನಡುವೆ ನೇರಾನೇರ ಕದನ ಬಿರುಸು ಗೊಂಡಿದೆ. ಇತ್ತೀಚೆಗೆ ಇವರಿಬ್ಬರೂ ಕುಸ್ತಿಗಿಳಿಯುವ ಮಟ್ಟಿಗೆ ಹೇಳಿಕೆ, ಪ್ರತಿಹೇಳಿಕೆ ನೀಡಿದ್ದರು. ಈಗ ಟ್ವಿಟರ್‌ಗೆ ಪ್ರತಿಸ್ಪರ್ಧಿಯಾಗಿ ಥ್ರೆಡ್ಸ್ ಎಂಬ ಮೆಸೇಜಿಂಗ್‌ ಆ್ಯಪ್‌ ಕಣಕ್ಕಿಳಿದಿದೆ. ಥ್ರೆಡ್ಸ್ ನ ಈಗಿನ ಓಟ ನೋಡಿದರೆ, ಟ್ವಿಟರ್‌ಗೆ ಸಮಬಲದ ಸ್ಪರ್ಧೆ ನೀಡುವ ಎಲ್ಲ ಲಕ್ಷಣಗಳಿವೆ. ಈ ನಿಟ್ಟಿನಲ್ಲಿ ನೂತನ ಥ್ರೆಡ್ಸ್ ಹೇಗಿದೆ ಎಂದು ನೋಡೋಣ…

10 ಕೋಟಿ ಬಳಕೆದಾರರು ಸೇರ್ಪಡೆ
ಥ್ರೆಡ್ಸ್ ಅನ್ನು ಜುಕರ್‌ಬರ್ಗ್‌ ಬಿಡುಗಡೆ ಮಾಡಿದ್ದೇ ತಡ ಸರಸರನೆ ಡೌನ್‌ಲೋಡ್‌ ಆಗಿದೆ.ಬಿಡುಗಡೆ ಮಾಡಿದ ದಿನ ಕೇವಲ 7 ಗಂಟೆಗಳಲ್ಲಿ 1 ಕೋಟಿ ಬಳಕೆದಾರರು ಸೇರ್ಪಡೆಗೊಂಡಿದ್ದರು. ಈಗ ಐದು ದಿನದಲ್ಲಿ 10 ಕೋಟಿ ಬಳಕೆದಾರರು ಸೇರ್ಪಡೆಯಾಗಿದ್ದಾರೆ. ಇದಕ್ಕೆ ವಿಶೇಷ ಕಾರಣವೆಂದರೆ ಇನ್‌ಸ್ಟಾಗ್ರಾಂ ಬಳಕೆದಾರರು ನೇರವಾಗಿ ಥ್ರೆಡ್ಸ್ ಸೇರಿಕೊಳ್ಳಲು ಅವಕಾಶವಿರುವುದು. ಥ್ರೆಡ್ಸ್ ನಲ್ಲಿ ಖಾತೆ ಸೃಷ್ಟಿಸುವಾಗ ಇನ್‌ಸ್ಟಾದ ಅಷ್ಟೂ ಮಾಹಿತಿಗಳನ್ನು ಸಹಜವಾಗಿ ಎಳೆದುಕೊಳ್ಳಬಹುದು.

ಟ್ವಿಟರ್‌ಗೂ ಥ್ರೆಡ್ಸ್ ಗೂ ಹೋಲಿಕೆ, ವ್ಯತ್ಯಾಸ
-ಟ್ವಿಟರ್‌ನಲ್ಲಿ ಒಮ್ಮೆಗೆ 280 ಅಕ್ಷರಗಳನ್ನು ಬರೆಯಬಹುದು. ಥ್ರೆಡ್ಸ್ ನಲ್ಲಿ 500 ಅಕ್ಷರಗಳಿಗೆ ಅವಕಾಶವಿದೆ.
-ಇನ್‌ಸ್ಟಾದಲ್ಲಿ ನಿಮಗೆ ಅಧಿಕೃತ ಖಾತೆಯಿದ್ದರೆ, ಆ ಅಧಿಕೃತ ಬ್ಲೂಟಿಕ್‌ ಅನ್ನು ಥ್ರೆಡ್ಸ್ ಗೂ ಬಳಸಬಹುದು. ಆದರೆ ಟ್ವಿಟರ್‌ನಲ್ಲಿ ಅಧಿಕೃತತೆಗೆ ತಿಂಗಳಿಗೆ 8 ಡಾಲರ್‌ ನೀಡಬೇಕು! ಹಣ ಕೊಟ್ಟವರು ಒಮ್ಮೆಗೆ 25,000 ಅಕ್ಷರ ಬರೆಯಲು ಟ್ವಿಟರ್‌ ಅವಕಾಶ ನೀಡಿದೆ.
-ಥ್ರೆಡ್ಸ್ ನಲ್ಲಿ ಖಾತೆ ಬೇಕೆಂದರೆ ಇನ್‌ಸ್ಟಾಗ್ರಾಂನಲ್ಲೂ ಒಂದು ಖಾತೆಯಿರಬೇಕಾಗುತ್ತದೆ.

ಇನ್‌ಸ್ಟಾದಿಂದ ಬಳಕೆದಾರರು, ಪ್ರೊಫೈಲ್‌ ವಿವರಗಳನ್ನು ನೇರ ಎಳೆದುಕೊಳ್ಳಬಹುದು.
-ಥ್ರೆಡ್ಸ್ ನಲ್ಲಿ 5 ನಿಮಿಷಗಳ ವೀಡಿಯೋ ಪೋಸ್ಟ್‌ ಮಾಡಬಹುದು. ಬ್ಲೂಟಿಕ್‌ ಇಲ್ಲದ ಟ್ವಿಟರ್‌ ಬಳಕೆದಾರರು 2 ನಿಮಿಷ 20 ಸೆಕೆಂಡ್‌ಗಳ ವೀಡಿಯೋ ಮಾತ್ರ ಪೋಸ್ಟ್‌ ಮಾಡಲು ಸಾಧ್ಯ.
-ಥ್ರೆಡ್ಸ್ ನಲ್ಲಿ ಪೋಸ್ಟ್‌ ಅನ್ನು ಕರಡು ರೂಪದಲ್ಲಿ (ಡ್ರಾಫ್ಟ್) ಮಾಡಿಟ್ಟುಕೊಳ್ಳಲು ಅವಕಾಶವಿಲ್ಲ. ಟ್ವಿಟರ್‌ನಲ್ಲಿ ಆ ಅವಕಾಶವಿದೆ.
-ಇತರ ಖಾತೆಗಳನ್ನು ಬ್ಲಾಕ್‌ ಮಾಡಲು, ಮ್ಯೂಟ್‌ ಮಾಡಲು ಇನ್‌ಸ್ಟಾದಲ್ಲಿ ಇರುವ ನಿಯಮಗಳೇ ಇಲ್ಲೂ ಅನ್ವಯವಾಗುತ್ತವೆ.
-ಸದ್ಯ ಆ್ಯಪ್‌ ಸ್ಟೋರ್‌, ಪ್ಲೇಸ್ಟೋರ್‌ನಲ್ಲಿ ಮಾತ್ರ ಥ್ರೆಡ್ಸ್ ಲಭ್ಯವಿದೆ. ವೆಬ್‌ ಮಾದರಿಯಲ್ಲಿ ಈಗ ಲಭ್ಯವಿಲ್ಲ.
-ಥ್ರೆಡ್ಸ್ ಖಾತೆಯನ್ನು ಅಳಿಸಲು ಸಾಧ್ಯವಿಲ್ಲ, ಬೇಕಿದ್ದರೆ ನಿಷ್ಕ್ರಿಯ ಮಾಡಬಹುದು. ಒಂದು ವೇಳೆ ಥ್ರೆಡ್ಸ್ ಪ್ರೊಫೈಲನ್ನು ಅಳಿಸಬೇಕಿದ್ದರೆ, ಇನ್‌ಸ್ಟಾ ಖಾತೆಯನ್ನೇ ಅಳಿಸಬೇಕಾಗುತ್ತದೆ.

ಜುಕರ್‌ಬರ್ಗ್‌ ಮೊದಲ ಟ್ವೀಟ್‌!
ವಿಚಿತ್ರವೆಂದರೆ ಕಳೆದ ಒಂದು ದಶಕದಲ್ಲೇ ಮೊದಲ ಬಾರಿಗೆ ಜುಕರ್‌ಬರ್ಗ್‌ ಟ್ವೀಟ್‌ ಮಾಡಿದ್ದರು. ಅವರು ಒಂದೇ ರೀತಿಯ ಇಬ್ಬರು ಸ್ಪೈಡರ್‌ಮ್ಯಾನ್‌ಗಳು ಪರಸ್ಪರ ಕುಸ್ತಿಗೆ ಸಜ್ಜಾಗಿರುವ ಚಿತ್ರ ಹಾಕಿದ್ದರು.

ಎಲಾನ್‌ ಮಸ್ಕ್ ಲೇವಡಿ
ಟ್ವಿಟರ್‌ ಅನ್ನುಥ್ರೆಡ್ಸ್ ನಕಲು ಮಾಡಿದೆ, ಕೇವಲ ಕಾಪಿ, ಪೇಸ್ಟ್‌ ಕೆಲಸ ಎಂದು ಟ್ವಿಟರ್‌ ಮಾಲಕ ಎಲಾನ್‌ ಮಸ್ಕ್ ಲೇವಡಿ ಮಾಡಿದ್ದಾರೆ.

ಟಾಪ್ ನ್ಯೂಸ್

Kodagu, ಸುಳ್ಯ ಭಾಗದಲ್ಲಿ ಉತ್ತಮ ಮಳೆ ; ಪಯಸ್ವಿನಿ ನದಿಯಲ್ಲಿ ಹರಿವು ಅಲ್ಪ ಹೆಚ್ಚಳ

Kodagu, ಸುಳ್ಯ ಭಾಗದಲ್ಲಿ ಉತ್ತಮ ಮಳೆ ; ಪಯಸ್ವಿನಿ ನದಿಯಲ್ಲಿ ಹರಿವು ಅಲ್ಪ ಹೆಚ್ಚಳ

Bantwal ಮಳೆಗೆ ಕಲ್ಲಡ್ಕ ಹೆದ್ದಾರಿ ಕೆಸರುಮಯ; ಟ್ರಾಫಿಕ್‌ ಜಾಮ್‌

Bantwal ಮಳೆಗೆ ಕಲ್ಲಡ್ಕ ಹೆದ್ದಾರಿ ಕೆಸರುಮಯ; ಟ್ರಾಫಿಕ್‌ ಜಾಮ್‌

1-sadsaasd

Gurdwara: ಪ್ರಸಾದ ತಯಾರಿಸಿ, ಭಕ್ತರಿಗೆ ಬಡಿಸಿದ ಪಿಎಂ ಮೋದಿ

Puttur ಸಭೆ ನಡೆಸುತ್ತಿದ್ದ ಶಾಸಕರ ಕಚೇರಿಗೆ ದಾಳಿ, ಬೀಗ

Puttur ಸಭೆ ನಡೆಸುತ್ತಿದ್ದ ಶಾಸಕರ ಕಚೇರಿಗೆ ದಾಳಿ, ಬೀಗ

Siddapura ವಾರಾಹಿಯಲ್ಲಿ ನೀರಿನ ಕೊರತೆ

Siddapura ವಾರಾಹಿಯಲ್ಲಿ ನೀರಿನ ಕೊರತೆ

Natural Disaster ಮುಂಜಾಗ್ರತ ಸಭೆ; ವಿವಿಧೆಡೆ ಎಸಿ ಭೇಟಿ, ಪರಿಶೀಲನೆ

Natural Disaster ಮುಂಜಾಗ್ರತ ಸಭೆ; ವಿವಿಧೆಡೆ ಎಸಿ ಭೇಟಿ, ಪರಿಶೀಲನೆ

Kota Srinivas Poojary ರಾಜ್ಯ ಕಾಂಗ್ರೆಸ್‌ ಸರಕಾರ ದಿವಾಳಿ

Kota Srinivas Poojary ರಾಜ್ಯ ಕಾಂಗ್ರೆಸ್‌ ಸರಕಾರ ದಿವಾಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತದಲ್ಲಿ Audi Q3 Bold Editon ಮಾರುಕಟ್ಟೆಗೆ ಬಿಡುಗಡೆ; ಹೊಸ ಡಿಸೈನ್‌, ಫೀಚರ್ಸ್

ಭಾರತದಲ್ಲಿ Audi Q3 Bold Editon ಮಾರುಕಟ್ಟೆಗೆ ಬಿಡುಗಡೆ; ಹೊಸ ಡಿಸೈನ್‌, ಫೀಚರ್ಸ್

BOULT BassBox X120

Smart Home Audio; ಸೌಂಡ್ ಬಾರ್ ಕ್ಷೇತ್ರಕ್ಕೆ ಕಾಲಿಟ್ಟ BOULT: ಎರಡು ಸೌಂಡ್ ಬಾರ್ ಬಿಡುಗಡೆ

jio

Jio fiber,ಏರ್ ಫೈಬರ್ ಗ್ರಾಹಕರಿಗೆ 15 ಒಟಿಟಿ ಅಪ್ಲಿಕೇಷನ್‌

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

ಶ್ರದ್ಧಾ ಕೇಂದ್ರಗಳು ಸಹಿಷ್ಣುತೆಯ ಪಾಠ ಶಾಲೆಯಾಗಲಿ

ಶ್ರದ್ಧಾ ಕೇಂದ್ರಗಳು ಸಹಿಷ್ಣುತೆಯ ಪಾಠ ಶಾಲೆಯಾಗಲಿ

Kodagu, ಸುಳ್ಯ ಭಾಗದಲ್ಲಿ ಉತ್ತಮ ಮಳೆ ; ಪಯಸ್ವಿನಿ ನದಿಯಲ್ಲಿ ಹರಿವು ಅಲ್ಪ ಹೆಚ್ಚಳ

Kodagu, ಸುಳ್ಯ ಭಾಗದಲ್ಲಿ ಉತ್ತಮ ಮಳೆ ; ಪಯಸ್ವಿನಿ ನದಿಯಲ್ಲಿ ಹರಿವು ಅಲ್ಪ ಹೆಚ್ಚಳ

Bantwal ಮಳೆಗೆ ಕಲ್ಲಡ್ಕ ಹೆದ್ದಾರಿ ಕೆಸರುಮಯ; ಟ್ರಾಫಿಕ್‌ ಜಾಮ್‌

Bantwal ಮಳೆಗೆ ಕಲ್ಲಡ್ಕ ಹೆದ್ದಾರಿ ಕೆಸರುಮಯ; ಟ್ರಾಫಿಕ್‌ ಜಾಮ್‌

1-sadsaasd

Gurdwara: ಪ್ರಸಾದ ತಯಾರಿಸಿ, ಭಕ್ತರಿಗೆ ಬಡಿಸಿದ ಪಿಎಂ ಮೋದಿ

Puttur ಸಭೆ ನಡೆಸುತ್ತಿದ್ದ ಶಾಸಕರ ಕಚೇರಿಗೆ ದಾಳಿ, ಬೀಗ

Puttur ಸಭೆ ನಡೆಸುತ್ತಿದ್ದ ಶಾಸಕರ ಕಚೇರಿಗೆ ದಾಳಿ, ಬೀಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.