
ವಿವೋ ವೈ20 ಭಾರತದ ಮಾರುಕಟ್ಟೆಗೆ ಬಿಡುಗಡೆ
ಕಪ್ಪು ಮತ್ತು ನೀಲಿ ಬಣ್ಣದ ಆಯ್ಕೆಯಲ್ಲಿರುವ ಫೋನು ಆನ್ ಲೈನ್ ಮತ್ತು ಆಫ್ ಲೈನ್ ಮಾರುಕಟ್ಟೆಯಲ್ಲಿ ಲಭ್ಯ
Team Udayavani, Oct 12, 2021, 2:55 PM IST

ನವದೆಹಲಿ:ವಿವೋ ಸಂಸ್ಥೆಯು ವೈ ಸಿರೀಸ್ ನ ವೈ20 ಸ್ಮಾರ್ಟ್ ಫೋನ್ ಅನ್ನು ಸೋಮವಾರ ಬಿಡುಗಡೆ ಮಾಡಿದೆ. ಈ ಫೋನ್ ನಲ್ಲಿ 6ಜಿಬಿ ರ್ಯಾಮ್ ಮತ್ತು 64ಜಿಬಿ ಇಂಟರ್ನಲ್ ಸ್ಟೋರೇಜ್ ಇದೆ. ಇಂಟರ್ನಲ್ ಸ್ಟೋರೇಜ್‌ನ್ನು ಮೆಮೋರಿ ಕಾರ್ಡ್ ಮೂಲಕ 1ಟಿಬಿವರೆಗೂ ವಿಸ್ತರಿಸಬಹು ದಾಗಿದೆ.
ಈ ತ್ರಿಬಲ್ ಕೆಮರಾ ಫೋನ್ ನಲ್ಲಿ 13ಎಂಪಿ ಬ್ಯಾಕ್ ಕೆಮರಾ ಮತ್ತು 8ಎಂಪಿ ಸೆಲ್ಫಿ ಕೆಮರಾ ವಿದೆ. 5000ಎಂಎ ಎಚ್ ಬ್ಯಾಟರಿ ಸಾಮರ್ಥ್ಯವಿದೆ. ಈ ಫೋನಿನ ಬೆಲೆ 15,490 ರೂಪಾಯಿ. ಕಪ್ಪು ಮತ್ತು ನೀಲಿ ಬಣ್ಣದ ಆಯ್ಕೆಯಲ್ಲಿರುವ ಫೋನು ಆನ್ ಲೈನ್ ಮತ್ತು ಆಫ್ ಲೈನ್ ಮಾರುಕಟ್ಟೆಯಲ್ಲಿ ಲಭ್ಯ.
ದುಡ್ಡಿಲ್ಲದಿದ್ದರೆ ಬೀಗ ಯಾಕೆ?
ಸರಕಾರಿ ಅಧಿಕಾರಿಯೊಬ್ಬರ ಮನೆಗೆ ಕಳ್ಳತನ ಮಾಡಲು ಬಂದ ಕಳ್ಳನಿಗೆ ಹೆಚ್ಚಿನ ಹಣ ಸಿಗದ ಕಾರಣ, ಅಧಿಕಾರಿಗೆ ಆತ ಸಂದೇಶವೊಂದನ್ನು ಬರೆದಿಟ್ಟಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ನಡೆದಿದೆ.
ಖಾತೆ ಗಾಂವ್ ನಗರದ ಹೆಚ್ಚುವರಿ ಜಿಲ್ಲಾಧಿಕಾರಿ ಆಗಿರುವ ತ್ರಿಲೋಚನ್ ಸಿಂಗ್ ಗೌರ್ ಅವರ ಮನೆಗೆ ಇತ್ತೀಚೆಗೆ ಕಳ್ಳ ನುಗ್ಗಿದ್ದಾನೆ. ಮನೆಯಲ್ಲಿ 30 ಸಾವಿರ ರೂ. ಮತ್ತು ಅಲ್ಪಸ್ವಲ್ಪ ಚಿನ್ನಾಭ ರಣ ಬಿಟ್ಟರೆ ಆತನಿಗೆ ಬೇರೇನೂ ಸಿಕ್ಕಿಲ್ಲ.
ಬೇಸರಗೊಂಡ ಕಳ್ಳ, “ದುಡ್ಡಿಲ್ಲ ಎಂದಾಗ ಲಾಕ್ ಮಾಡಬಾರದು, ಕಲೆಕ್ಟರ್’ ಎಂದು ಸಂದೇಶ ವೊಂದನ್ನು ಬರೆದಿಟ್ಟು ಹೋಗಿದ್ದಾನೆ. ಈ ಸಂದೇಶದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸರು ಕಳ್ಳನಿಗಾಗಿ ಹುಡುಕಾಡುತ್ತಿದ್ದಾರೆ.
ಟಾಪ್ ನ್ಯೂಸ್
