ಜನಪ್ರಿಯತೆ ಪಡೆಯುತ್ತಿದೆ ಇ-ಬೈಸಿಕಲ್ !


Team Udayavani, Jul 18, 2021, 5:57 PM IST

WHAT IS AN E-CYCLE? … Wow right! Now imagine driving a normal cycle without pedaling, well that’s your E-cycle. Powered by a Lithium Ion IP67 Battery

ಪ್ರಾತಿನಿಧಿಕ ಚಿತ್ರ

ಯಾರಾದರೂ ಇಲೆಕ್ಟ್ರಿಕ್ ಬೈಸಿಕಲ್ ಅಥವಾ ಇ-ಬೈಕ್ ಎಂದು ಹೇಳಿದಾಗ, ಸಾಮಾನ್ಯವಾಗಿ ನಮ್ಮ ತಲೆಗೆ ಸ್ಕೂಟರ್ ಅಥವಾ ಇಲೆಕ್ಟ್ರಿಕ್ ಮೋಟರ್‌ಸೈಕಲ್ ಚಿತ್ರ ಬರುತ್ತದೆ. ಆದರೆ, ಇಲೆಕ್ಟ್ರಿಕ್ ಬೈಸಿಕಲ್‌ಗಳು ಸ್ಕೂಟರ್‌ಗಳಿಗಿಂತ ಭಿನ್ನವಾಗಿದೆ. ಒಂದು ಸಾಮಾನ್ಯ ಬೈಸಿಕಲ್‌ಗೆ ಮೋಟಾರ್, ಬ್ಯಾಟರಿ ಯಂತಹ ಇನ್ನಿತರ ಇಲೆಕ್ಟ್ರಿಕ್ ಘಟಕಗಳನ್ನು ಸೇರಿಸಿ ವಿನ್ಯಾಸವನ್ನು ಮಾಡಿದಾಗ, ಅದು ಇಲೆಕ್ಟ್ರಿಕ್ ಬೈಸಿಕಲ್‌ನ ರೂಪ ತಾಳುತ್ತದೆ.

ಇ-ಬೈಕ್‌ಗಳಲ್ಲಿ ಸಾಮಾನ್ಯ ಬೈಸಿಕಲ್‌ಗಳಂತೆ, ಪೆಡಲ್ ಮತ್ತು ಹ್ಯಾಂಡಲ್ ಇರುತ್ತದೆ.  ಇ-ಬೈಕ್ ಸಹ ಅದೇ ಭಾಗಗಳನ್ನು ಬಳಸುತ್ತದೆ. ಸಾಮಾನ್ಯ ಸೈಕಲ್‌ಗಳನ್ನು ಸಂಪೂರ್ಣವಾಗಿ ಬದಲಾಯಿಸದಿದ್ದರೂ, ವಿದ್ಯುತ್ ಭಾಗಗಳು ಮಾನವ ಶಕ್ತಿಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ. ಸಾಮಾನ್ಯವಾಗಿ, ಇದು ಬೆಟ್ಟ-ಗುಡ್ಡಗಳು, ಎತ್ತರದ ಪ್ರದೇಶಗಳಲ್ಲಿ ಹಾಗೂ ಅಡೆತಡೆಗಳು ಇರುವ ಪ್ರದೇಶಗಳಲ್ಲಿ ಆಯಾಸಗೊಳ್ಳದೆ ಸೈಕಲ್ ಸವಾರಿ ಮಾಡಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ : ಶರದ್ ಪವಾರ್ ಬಿಜೆಪಿಯೊಂದಿಗೆ ಸೇರಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಬೇಕು: ಅಠಾವಳೆ

ಪೆಡಲಿಂಗ್‌ ನನ್ನು ಸುಲಭಗೊಳಿಸುವ ಇಲೆಕ್ಟ್ರಿಕ್ ಬೈಸಿಕಲ್

ಸಾಮಾನ್ಯವಾಗಿ ಹೇಳುವುದಾದರೆ, ಇ-ಬೈಸಿಕಲ್‌ಗಳು ಬ್ಯಾಟರಿ-ಚಾಲಿತ ಬೈಸಿಕಲ್‌ಗಳಾಗಿವೆ. ಅದು ಪೆಡಲಿಂಗ್ ಮೂಲಕ ಸವಾರರಿಗೆ ಇನ್ನಷ್ಟು ಉತ್ತೇಜನ ನೀಡುತ್ತದೆ. ಆದ್ದರಿಂದ ನೀವು ಬೆಟ್ಟಗಳನ್ನು ಹತ್ತುವಾಗ ಮತ್ತು ಕಠಿಣ ಭೂಪ್ರದೇಶದ ಮೇಲೆ ಸುಲಭವಾಗಿ ಸಂಚರಿಸಬಹುದು. ಪೆಡಲ್ ಅಸಿಸ್ಟ್ ವೈಶಿಷ್ಟ್ಯದ ಜೊತೆಗೆ ಕೆಲವು ಇಲೆಕ್ಟ್ರಿಕ್  ಬೈಸಿಕಲ್‌ಗಳು ಥ್ರೋಟಲ್‌ನೊಂದಿಗೆ ಬರುತ್ತದೆ. ಇದರಲ್ಲಿ ಒಂದು ಬಟನ್ ಒತ್ತುವ ಮೂಲಕ ಮೋಟಾರ್‌ಗೆ ಚಾಲನೆ ನೀಡಬಹುದು. ಇದು ಇನ್ನೊಂದು ವಿಧದ ಇ-ಬೈಸಿಕಲ್‌ ಗಳಾಗಿವೆ. ಇದರಲ್ಲಿ ನೈಜ, ಶುದ್ಧ ಸೈಕ್ಲಿಂಗ್ ಅನುಭವ ಸಿಗುವುದಿಲ್ಲ. “ಹಲವಾರು ಸೈಕ್ಲಿಸ್ಟ್ಗಳು ಈಗಾಗಲೇ ಥ್ರೋಟಲ್ ಬೈಸಿಕಲ್‌ಗಳತ್ತ ಆಕರ್ಷಿತರಾಗಿದ್ದಾರೆ. ಆದರೆ, ಅದನ್ನು ಬಳಸಿದ ಕೆಲವೇ ಸಮಯದಲ್ಲಿ, ಮರಳಿ ಪೆಡಲ್-ಅಸಿಸ್ಟ್ ಬೈಸಿಕಲ್‌ಗೆ ಮರಳಿದ್ದಾರೆ” ಎಂದು ಒಂದು ಇ-ಬೈಸಿಕಲ್ ಕಂಪನಿಯ ಸ್ಥಾಪಕ ಬೆಂಜಮಿನ್ ಹೇಳುತ್ತಾರೆ.

ನೀವು ವೇಗವಾಗಿ ಪೆಡಲ್ ಮಾಡಿ ಸಂಚಾರ ನಡೆಸುತ್ತೀರಿ. ಆದರೆ ಬಹುಕಾಲ ಆ ವೇಗವನ್ನು ಕಾಪಾಡಲು ನಿಮ್ಮಿಂದ ಕಷ್ಟ ಆಗಬಹುದು. ಆ ಸಮಯದಲ್ಲಿ ನಿಮ್ಮ ನೆರವಿಗೆ ಆ ಮೋಟರ್ ಬರುತ್ತದೆ. ಇದರಿಂದಾಗಿ ನೀವು ಸತತವಾಗಿ ಪೆಡಲಿಂಗ್ ನಡೆಸಿ, ಯಾವ ಕಾರಣಕ್ಕೂ ನಿಲ್ಲಿಸುವ ಅಗತ್ಯವಿರಲ್ಲ. ಇಲೆಕ್ಟ್ರಿಕ್  ಬೈಸಿಕಲ್ ಇದ್ದರೆ, ಕಾಲಿಗೆ ರೆಸ್ಟ್ ನೀಡಿಯೂ, ಸಂಚಾರ ಮುಂದುವರೆಸಬಹುದು.

ಇ-ಬೈಸಿಕಲ್‌ಗಳು ಕೇವಲ ಸಂಚಾರಕ್ಕೆ ಸೀಮಿತವಲ್ಲ. ಬದಲಿಗೆ ಇ-ಕಾರ್ಗೋ ಬೈಕ್‌ಗಳಾಗಿಯೂ ಬಳಸಬಹುದು. ಅದರಲ್ಲಿ ಸರಕುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಅನಾಯಾಸವಾಗಿ ಕೊಂಡೊಯ್ಯಬಹುದು. ಅಮೇರಿಕಾದಲ್ಲಿ ನಡೆದ ಒಂದು ಸಮೀಕ್ಷೆಯಲ್ಲಿ, ಸರಕು ಸಾಗಿಸಲು, ಮಕ್ಕಳನ್ನು ಕರೆದುಕೊಂಡು ಹೋಗಲು, ಪಾರ್ಕಿಂಗ್ ಹಾಗೂ ವಾಹನ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಹಾಗೂ ಪರಿಸರ ಕಾಳಜಿಯಿಂದ ಇ-ಬೈಸಿಕಲ್‌ಗಳನ್ನು ಜನರು ಬಳಸುತ್ತಿದ್ದಾರೆ ಎಂದು ತಿಳಿದ ಬಂದಿದೆ. ಮತ್ತೊಂದು ಪ್ರಯೋಜನ ಎಂದರೆ, ನೀವು ಸೈಕಲ್‌ನಲ್ಲಿ ದೂರ ಸಂಚಾರ ನಡೆಸಿದರೆ, ಸುಸ್ತಾಗುವುದು ಸಹಜ. ಹಾಗಾಗಿ, ಮನೆ ಅಥವಾ ನಿರ್ದಿಷ್ಟ ಸ್ಥಳವನ್ನು ತಲುಪಿದ ಬಳಿಕ ರಿಫ್ರೆಶ್ ಆಗಲು ಸ್ನಾನ, ಬಟ್ಟೆ ಬದಲಿಸುತ್ತೀರಿ. ಆದರೆ, ಇ-ಬೈಸಿಕಲ್ ಬಿಟ್ಟಾಗ ನಿಮಗೆ ಸುಸ್ತಾಗುವುದಿಲ್ಲ.

ಪುಣೆ ಮೂಲದ ಎಲೆಕ್ಟಿçಕ್ ವೆಹಿಕಲ್ ಸ್ಟಾರ್ಟ್ ಅಪ್ ಕಂಪನಿ ಫೆಲಿಡೆ ಇಲೆಕ್ಟ್ರಿಕ್, ಒಂದು ಹೊಸ ಮಾದರಿಯ ಇ-ಬೈಕ್‌ಗಳನ್ನು ಪರಿಚಯಿಸಿದೆ. ನಮ್ಮಲ್ಲಿ ಇರುವ ಸಾಮಾನ್ಯ ಬೈಸಿಕಲ್‌ಅನ್ನೇ ಇ-ಬೈಸಿಕಲ್ ಆಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ. ಈ ಇ-ಬೈಕ್ ಕಿಟ್ ೨೦,೦೦೦ ರೂಪಾಯಿಗೆ ಲಭ್ಯವಿದ್ದು, ಕೇವಲ ೨೦ ನಿಮಿಷಗಳಲ್ಲಿ ಯಾರ ಸಹಾಯವೂ ಇಲ್ಲದೆ ಸೈಕಲ್‌ಅನ್ನು ಇ-ಬೈಸಿಕಲ್ ಆಗಿ ಪರಿವರ್ತಿಸಬಹುದು.

“ಯಾರೂ ಸಹ ನಮ್ಮ ಇ-ಕನ್ವರ್ಷನ್ ಕಿಟ್ ಬಳಸಿ, ಕೇವಲ ೨೦ ನಿಮಿಷಗಳಲ್ಲಿ ಸೈಕಲ್ ಅನ್ನು ಇ-ಬೈಸಿಕಲ್ ಗಳಾಗಿ ಪರಿವರ್ತಿಸಬಹುದು. ಯಾರ ಸಹಾಯವೂ ಬೇಕಾಗಿಲ್ಲ. ಕಿಟ್‌ನಲ್ಲಿ ಸಂಪೂರ್ಣ ಎಲೆಕ್ಟ್ರಿಕಲ್ ಡ್ರೈವ್ ಸಿಸ್ಟಮ್‌ಗೆ ಸಂಪರ್ಕ ಹೊಂದಿದೆ. ಉದಾಹರಣೆಗೆ, ಹಿಂದಿನ ಚಕ್ರ (ಬ್ಯಾಕ್ ವ್ಹೀಲ್) ಮತ್ತು ರಿಮ್ಸ್ನೊಂದಿಗೆ ಮೋಟಾರು ಬರುತ್ತದೆ. ಬಳಕೆದಾರರು ಏನು ಮಾಡಬೇಕೆಂದರೆ, ಸೈಕಲ್‌ನಲ್ಲಿರುವ ಹಿಂದಿನ ಚಕ್ರವನ್ನು, ನಮ್ಮ ವ್ಹೀಲ್ ಜೊತೆ ಬದಲಿಸಬೇಕು. ನಮ್ಮ ಕಿಟ್ ಜೊತೆಗೆ, ನಾವು ಗ್ರಾಹಕರಿಗೆ ಒಂದು ಕೈಪಿಡಿಯನ್ನು ಸಹ ನೀಡುತ್ತೇವೆ. ಅದರಲ್ಲಿ ಯಾವ ತಂತಿ(ವೈರ್) ಸಂಪರ್ಕ ಎಲ್ಲಿಂದ ಎಲ್ಲಿಗೆ ಹೋಗುತ್ತದೆ ಎಂಬುದನ್ನು ವಿವರಿಸುತ್ತದೆ. ಕಷ್ಟ ಎನಿಸುವುದಾದರೆ, ನೀವು ನಮ್ಮ ಬೆಂಬಲ ತಂಡವನ್ನೂ ಕರೆಯಬಹುದು. ಇದನ್ನೆಲ್ಲ ಸರಳ ರೀತಿಯಲ್ಲಿ ವಿವರಿಸುವ ವೀಡಿಯೊವನ್ನು ನಾವು ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇವೆ ” ಎಂದು ಫೆಲಿಡೆ ಎಲೆಕ್ಟ್ರಿಕ್‌ ನ ಹಿರಿಯ ಎಕ್ಸಿಕ್ಯೂಟಿವ್ ರಿಯಾನ್ ಮ್ಯಾಥ್ಯೂ ಹೇಳುತ್ತಾರೆ.

ತೈಲ್ ಬೆಲೆಯ ಸಮಸ್ಯೆ, ಪರಿಸರ ಕಾಳಜಿ ಇತ್ಯಾದಿ ಕಾರಣಗಳಿಂದ ಜನರು ಇದರತ್ತ ಆಕರ್ಷಿತರಾಗುತ್ತಿದ್ದಾರೆ. ಕಾರ್‌ಗಳನ್ನು ಬಳಸುವವರು, ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಪರ್ಯಾಯವಾಗಿ ಇದನ್ನು ಬಳಸಿದರೂ ಅಚ್ಚರಿಯಿಲ್ಲ. ಮುಂದಿನ ದಿನಗಳಲ್ಲಿ, ಇ-ಬೈಸಿಕಲ್‌ ಗಳೇ ರಸ್ತೆಯಲ್ಲಿ ಪ್ರಾಬಲ್ಯ ಸಾಧಿಸಬಹುದು.

– ಇಂದುಧರ ಹಳೆಯಂಗಡಿ

ಇದನ್ನೂ ಓದಿ : ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆ : ಮೈತ್ರಿ ಬಗ್ಗೆ ಪಕ್ಷ ಮುಕ್ತವಾಗಿದೆ : ಪ್ರಿಯಾಂಕ ಗಾಂಧಿ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.