ಬೆಂಗಳೂರಲ್ಲಿ ತಲೆ ಎತ್ತಲಿದೆ ಓಲಾ ‘ಇ-ಸ್ಕೂಟರ್’ ಉತ್ಪಾದನೆ ಘಟಕ
Team Udayavani, Mar 8, 2021, 6:09 PM IST
ಬೆಂಗಳೂರು : ಓಲಾ ಸಂಸ್ಥೆಯ ಸಂಸ್ಥಾಪಕ ಭವಿಶ್ ಅಗರ್ವಾಲ್ ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕೆ ಕೇಂದ್ರ ಸ್ಥಾಪನೆಗೆ ಮುಂದಾಗಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನ ಹೊರವಲಯದ 500 ಎಕರೆ ಪ್ರದೇಶದಲ್ಲಿ ಒಲಾ ಎಲೆಕ್ಟ್ರಿಕ್ ಬೈಕ್ ಉತ್ಪಾದನ ಘಟಕ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದಾರೆ. ಈಗಾಗಲೇ ಕಟ್ಟಡದ ನಿರ್ಮಾಣ ಕಾಮಗಾರಿ ಶುರುವಾಗಿದ್ದು, ಈ ವರ್ಷದ ಕೊನೆಯಲ್ಲಿ ಬೃಹತ್ ಇ-ಬೈಕ್ ಉತ್ಪಾದನಾ ಘಟಕ ತಲೆ ಎತ್ತಿ ನಿಲ್ಲಲಿದೆ.
2022ರ ವೇಳೆಗೆ 1 ಕೋಟಿ ಇ-ಬೈಕ್ ಉತ್ಪಾದನೆ ಗುರಿ ಹೊಂದಿರುವ ಓಲಾ, ಪ್ರತಿ ಸೆಕೆಂಡ್‍ಗೆ 2 ಬೈಕ್‍ಗಳು ಸಿದ್ಧಪಡಿಸಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಡಿ ದೇಶಾದ್ಯಂತ ಎಲೆಕ್ಟ್ರಿಕ್ ಕಾರು ಪರಿಚಯಿಸುವ ಗುರಿ ಹೊಂದಿರುವ ಅಗರ್ವಾಲ್, ಇದರ ಮೊದಲ ಹೆಜ್ಜೆಯಾಗಿ ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣಕ್ಕೆ ಅಡಿಯಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಕಾರುಗಳನ್ನೂ ಸಹ ಉತ್ಪಾದಿಸುವ ಯೋಜನೆ ಹಾಕಿಕೊಂಡಿದ್ದಾರೆ.
ತಮ್ಮ ಈ ಮಹತ್ವಾಕಾಂಕ್ಷೆಯ ಯೋಜನೆ ಬಗ್ಗೆ ಮಾತಾಡಿರುವ ಅಗರ್ವಾಲ್, ಭಾರತದಲ್ಲಿ ಸಿದ್ಧವಾಗಲಿರುವ ಇ-ವಾಹನಗಳು ವಿಶ್ವದ ಮಾರುಕಟ್ಟೆಯಲ್ಲಿ ಪಾರಮ್ಯ ಮೆರೆಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಈಗಾಗಲೇ ಮಾರುಕಟ್ಟೆಯಲ್ಲಿ ಚೀನಾ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಗಳು ಲಗ್ಗೆ ಇಟ್ಟಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶೀಫ್ರದಲ್ಲೇ ಬಿಡುಗಡೆಗೊಳ್ಳಲಿದೆ 7 ಆಸನಗಳುಳ್ಳ ಮಹಿಂದ್ರಾ ಎಕ್ಸ್ಯುವಿ 700
ಇಂದಿನಿಂದ ಒನ್ ಪ್ಲಸ್ 9 ಮತ್ತು ಒನ್ ಪ್ಲಸ್ 9 ಆರ್ ಭಾರತದಲ್ಲಿ ಲಭ್ಯ..!
ಸಂಸ್ಕೃತ ಕಲಿಯಬೇಕೆ..? ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ ಈ ಆ್ಯಪ್..!
ಮಾಸಾಂತ್ಯಕ್ಕೆ ಮಹೀಂದ್ರಾ XUV 700 ಮಾರುಕಟ್ಟೆಗೆ : ಕಾರಲ್ಲಿರಲಿದೆ ಹೊಚ್ಚ ಹೊಸ ಫೀಚರ್ಗಳು
ಗೇಮಿಂಗ್ ಉತ್ಸಾಹಿಗಳಿಗಾಗಿ ಒನ್ ಪ್ಲಸ್ ನಿಂದ 9 ಆರ್ 5ಜಿ ಮಾರುಕಟ್ಟೆಗೆ